ಈ ಆ್ಯಪ್‌ನಲ್ಲಿ ಮಾಹಿತಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಲಭ್ಯವಿದ್ದು, ಡೌನ್‌ಲೋಡ್ ಮಾಡಿದ ಬಳಿಕ ಬಳಸಲು ಇಂಟರ್‌ನೆಟ್‌ನ ಅಗತ್ಯವಿಲ್ಲ. ಹೀಗಾಗಿ ಸದಾ ಇಂಟರ್‌ನೆಟ್ ಸೌಲಭ್ಯವಿಲ್ಲದ ಗ್ರಾಮೀಣ ಭಾಗಗಳಲ್ಲೂ ಈ ಆ್ಯಪ್ ಉಪಯೋಗಿಸಬಹುದಾಗಿದೆ.
ನವದೆಹಲಿ[ಫೆ.28]: ದೇಶದ ಶಾಲಾ-ಕಾಲೇಜು ಮಕ್ಕಳಲ್ಲಿ ಕ್ರೀಡೆ ಹಾಗೂ ಫಿಟ್ನೆಸ್ ಕುರಿತು ಜಾಗೃತಿ ಮೂಡಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅಭಿವೃದ್ಧಿ ಪಡಿಸಿರುವ ‘ಖೇಲೋ ಇಂಡಿಯಾ’ ಮೊಬೈಲ್ ಆ್ಯಪ್ ಅನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.
ಮಧ್ಯಂತರ ಬಜೆಟ್: ಕ್ರೀಡೆಗೆ 2216 ಕೋಟಿ ರುಪಾಯಿ ಮೀಸಲು
ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದ ಯೋಜನೆಯಡಿ ಸಿದ್ಧಪಡಿಸಿರುವ ಆ್ಯಪ್ ಮೂಲಕ ದೇಶದ ಯಾವುದೇ ಮೂಲೆಯಲ್ಲಿರುವ ಕ್ರೀಡಾ ಸಕ್ತರು ತಮ್ಮಲ್ಲಿರುವ ಪ್ರತಿಭೆ ಯನ್ನು ಅನಾವರಣ ಗೊಳಿಸಲು ಅಗತ್ಯ ಮಾಹಿತಿ, ತರಬೇತಿ ವಿವರಗಳನ್ನು ಪಡೆಯಬಹುದಾಗಿದೆ. ಈ ಆ್ಯಪ್‌ನಲ್ಲಿ ಮಾಹಿತಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಲಭ್ಯವಿದ್ದು, ಡೌನ್‌ಲೋಡ್ ಮಾಡಿದ ಬಳಿಕ ಬಳಸಲು ಇಂಟರ್‌ನೆಟ್‌ನ ಅಗತ್ಯ ವಿಲ್ಲ. ಹೀಗಾಗಿ ಸದಾ ಇಂಟರ್‌ನೆಟ್ ಸೌಲಭ್ಯ ವಿಲ್ಲದ ಗ್ರಾಮೀಣ ಭಾಗಗಳಲ್ಲೂ ಈ ಆ್ಯಪ್ ಉಪಯೋಗಿ ಸಬಹುದಾಗಿದೆ.
ಖೇಲೋ ಇಂಡಿಯಾ: ಈ ಸಲವೂ ಕರ್ನಾಟಕಕ್ಕೆ 4ನೇ ಸ್ಥಾನ
ಆ್ಯಪ್‌ನಲ್ಲಿ ಏನೇನಿದೆ? ಆ್ಯಪ್‌ನಲ್ಲಿ 3 ವಿಭಾಗಗಳನ್ನು ರಚಿಸಲಾಗಿದೆ. ಮೊದಲ ವಿಭಾಗದಲ್ಲಿ 18 ಕ್ರೀಡೆಗಳ ಮೂಲಭೂತ ನಿಯಮಗಳು, ಕ್ರೀಡೆಯ ವಿವರ, ಆಡಲು ಬೇಕಿರುವ ಉಪಕರಣಗಳು, ಅಂಕ ಗಳಿಕೆ ಹೇಗೆ ಎನ್ನುವ ಮಾಹಿತಿ ಇದೆ. 2ನೇ ವಿಭಾಗದಲ್ಲಿ ಸಾಯ್‌ನಲ್ಲಿ ದೊರೆಯುವ ಸೌಲಭ್ಯಗಳು, ಸಾಯ್ ಬೆಂಬಲಿತ ಖಾಸಗಿ ಕ್ರೀಡಾ ಸಂಸ್ಥೆಗಳ ವಿವರಗಳಿವೆ. ಇದರಲ್ಲಿ ಕ್ರೀಡಾ ಸಂಸ್ಥೆಗಳ ವಿಳಾಸ, ದೂರವಾಣಿ ಸಂಖ್ಯೆಗಳು, ತಲುಪುವುದು ಹೇಗೆ ಹಾಗೂ ಯಾವ ಕ್ರೀಡಾ ಸೌಲಭ್ಯಗಳಿವೆ ಎನ್ನುವ ವಿವರ ಸಿಗಲಿದೆ. 3ನೇ ವಿಭಾಗದಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಬೇಕಿರುವ ಫಿಟ್ನೆಸ್ ವಿವರ ಸಿಗಲಿದೆ. ಫಿಟ್ನೆಸ್‌ನಲ್ಲಿ 8 ರೀತಿಯ ಪರೀಕ್ಷೆಗಳಿದೆ. ಮಕ್ಕಳ ಫಿಟ್ನೆಸ್ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸಿ, ಯಾವ ಕ್ರೀಡೆ ಆಯ್ಕೆ ಮಾಡಿಕೊಂಡರೆ ಸೂಕ್ತ ಎನ್ನುವುದನ್ನು ಗುರುತಿಸಲು ಸಹ ನೆರವಾಗಲಿದೆ.
