ಕನ್ನಡಿಗ ಎಸ್.ವಿ ಸುನಿಲ್ ಭಾರತ ಹಾಕಿ ತಂಡದ ಉಪನಾಯಕರಾಗಿ ನೇಮಕವಾಗಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್‌ ಕ್ವಾಲಿಫೈಯರ್‌ ಪಂದ್ಯಗಳಿಗೆ ಭಾರತ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದು, ಮನ್’ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ.

ನವದೆಹಲಿ[ಅ.19]: ಭಾರತ ಪುರುಷರ ಹಾಕಿ ತಂಡಕ್ಕೆ ಕರ್ನಾಟಕದ ಎಸ್‌.ವಿ ಸುನಿಲ್‌ ಉಪನಾಯಕರಾಗಿ ನೇಮಕಗೊಂಡಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್‌ ಕ್ವಾಲಿಫೈಯರ್‌ ಪಂದ್ಯಗಳಿಗೆ 18 ಸದಸ್ಯರ ಭಾರತ ತಂಡವನ್ನು ಶುಕ್ರವಾರ ಹಾಕಿ ಇಂಡಿಯಾ ಘೋಷಿಸಿದೆ. 

ಪ್ರೊ ಕಬಡ್ಡಿ ಫೈನ​ಲ್‌: ಹೊಸ ಚಾಂಪಿಯನ್ ಉದಯಕ್ಕೆ ಕ್ಷಣಗಣನೆ

ಪುರುಷರ ತಂಡಕ್ಕೆ ಮನ್‌ಪ್ರೀತ್‌ ಸಿಂಗ್‌, ವನಿತೆಯರ ತಂಡಕ್ಕೆ ರಾಣಿ ರಾಂಪಾಲ್‌ ನೇತೃತ್ವ ವಹಿಸಲಿದ್ದಾರೆ. ವನಿತೆಯರ ತಂಡಕ್ಕೆ ಅನುಭವಿ ಗೋಲ್‌ಕೀಪರ್‌ ಸವಿತಾ ಉಪನಾಯಕಿ ಆಗಿದ್ದಾರೆ. ಡಿಫೆಂಡರ್‌ ರೂಪಿಂದರ್‌ ಸಿಂಗ್‌ ಪಾಲ್‌ ಪುರುಷರ ತಂಡಕ್ಕೆ ಮರಳಿದ್ದಾರೆ. 

ನ.1 ಹಾಗೂ 2ರಂದು ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ನಡೆಯುವ ಒಲಿಂಪಿಕ್‌ ಕ್ವಾಲಿಫೈಯ​ರ್’ನಲ್ಲಿ, ವನಿತೆಯರು ಅಮೆರಿಕ ಹಾಗೂ ಪುರುಷರ ರಷ್ಯಾ ತಂಡ​ವ​ನ್ನು ಎದುರಿಸಲಿದ್ದಾರೆ.

ತಂಡ ಹೀಗಿದೆ:

Scroll to load tweet…
Scroll to load tweet…

ಹಾಕಿ: ಬ್ರಿಟನ್‌-ಭಾರತ ಪಂದ್ಯ 3-3ರಲ್ಲಿ ಡ್ರಾ

ಜೋಹರ್‌ ಬಹ್ರು (ಮಲೇಷ್ಯಾ): 9ನೇ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಹಾಕಿ ಫೈನಲ್‌ ಪಂದ್ಯ​ಕ್ಕೂ ಮುನ್ನ ಶುಕ್ರ​ವಾರ ನಡೆದ ಅಂತಿಮ ಲೀಗ್‌ ಪಂದ್ಯ​ದಲ್ಲಿ ಭಾರತ, ಗ್ರೇಟ್‌ ಬ್ರಿಟನ್‌ ವಿರುದ್ಧ 3-3ರಲ್ಲಿ ಡ್ರಾ ಸಾಧಿ​ಸಿತು. 

ಭಾರತ ಪರ ಶಿಲಾ​ನಂದ ಲಾಕ್ರಾ (48ನೇ ನಿ.), ಮನ್‌ದೀಪ್‌ ಮೋರ್‌ (51ನೇ ನಿ.) ಹಾಗೂ ಶಾರ​ದಾ​ನಂದ್‌ ತಿವಾರಿ (57ನೇ ನಿ.) ಗೋಲು ಬಾರಿ​ಸಿ​ದರು. ಬ್ರಿಟನ್‌ ಪರ 27, 32 ಹಾಗೂ 59ನೇ ನಿಮಿಷಗಳಲ್ಲಿ ಗೋಲು​ಗಳು ದಾಖಲಾದವು. ಶನಿ​ವಾರ ಭಾರ​ತ ಹಾಗೂ ಬ್ರಿಟನ್‌ ತಂಡ​ಗಳೇ ಫೈನಲ್‌ನಲ್ಲಿ ಪ್ರಶ​ಸ್ತಿ​ಗಾಗಿ ಸೆಣ​ಸ​ಲಿವೆ.