ಗಣಪತಿ ಹ್ಯಾಟ್ರಿಕ್ ಗೋಲು: ಅಪ್ಪುಮಣಿರಯಂಡಕ್ಕೆ ಜಯ
ಭರ್ಜರಿಯಾಗಿ ಸಾಗುತ್ತಿದೆ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ
ಅಪ್ಪಮಣಿಯಂಡ, ಮನೆಯಪಂಡ, ಬಿದ್ದಾಟಂಡ, ಕುಪ್ಪಂಡ ಸೇರಿ ಹಲವು ತಂಡಗಳು ಜಯಭೇರಿ
ಅಪ್ಪುಮಣಿಯಂಡ ತಂಡವು ಆಪಾಡಂಡ ತಂಡದ ವಿರುದ್ಧ ಜಯಭೇರಿ
- ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಮಾ.28): ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಸೋಮವಾರದ ಪಂದ್ಯಗಳಲ್ಲಿ ಅಪ್ಪಮಣಿಯಂಡ, ಮನೆಯಪಂಡ, ಬಿದ್ದಾಟಂಡ, ಕುಪ್ಪಂಡ (ಕೈಕೇರಿ) ಸೇರಿದಂತೆ ವಿವಿಧ ತಂಡಗಳು ಜಯಸಾಧಿಸಿದವು.
ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಪ್ಪುಮಣಿಯಂಡ ತಂಡವು ಆಪಾಡಂಡ ತಂಡದ ವಿರುದ್ಧ 3-0 ಗೆಲುವು ಸಾಧಿಸಿತು. ಅಪ್ಪುಮಣಿರಯಂಡ ಗಣಪತಿ ಹ್ಯಾಟ್ರಿಕ್ ಗೋಲು ಗಳಿಸುವುದರೊಂದಿಗೆ ತಂಡದ ಗೆಲುವಿಗೆ ಕಾರಣರಾದರು. ಮನೆಯಪಂಡ ಮತ್ತು ತೆಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮನೆಯಪಂಡ 2-1 ಅಂತರದ ಮುನ್ನಡೆ ಸಾಧಿಸಿತು. ಬಿದ್ದಾಟಂಡ ಮತ್ತು ಚಿಂದಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಿದ್ದಾಟಂಡ 1-0 ಅಂತರದ ಗೆಲುವು ಸಾಧಿಸಿತು. ಕುಪ್ಪಂಡ ಮೂಡೇರ ತಂಡದ ವಿರುದ್ಧ 4-2 ಅಂತರದ ಜಯಗಳಿಸಿತು. ಮೇಕೆರಿರ ಮತ್ತು ಪುಚ್ಚಿ ಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಕೇರಿರ 5-4 ಅಂತರದ ಜಯ ಪಡೆಯಿತು.
ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಪ್ಪನೆರವಂಡ ತಂಡ ಕಂಜಿತಂಡ ವಿರುದ್ಧ 3-1 ಅಂತರದ ಗೆಲುವು ಕಂಡಿತು. ಕೋನಿಯಂಡ ಚೋಳಂಡ ತಂಡದ ವಿರುದ್ಧ ಜಯ ಸಾಧಿಸಿದರೆ, ಕಲಿಯಂಡ, ಮಲ್ಲಜ್ಜಿರ ವಿರುದ್ಧ 2-1 ರ ಮುನ್ನಡೆ ಸಾಧಿಸಿತು. ಅರೆಯಡ ಮತ್ತು ಚೀಯಂಡೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರೆಯಡ ತಂಡ ಚೀಯಂಡೀರ ತಂಡದ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತ್ತು. ಪಟ್ಟಡ ತಂಡವು 2-1 ಅಂತರದಿಂದ ಮುಂಡ್ಯೋಳಂಡ ತಂಡದ ವಿರುದ್ಧ ಗೆಲವು ಸಾಧಿಸಿತು. ಐಚೆಟ್ಟಿರ ತಂಡವು ಬಲ್ಲಂಡ ತಂಡದ ವಿರುದ್ಧ 5-0 ಅಂತರದ ಜಯ ಸಾಧಿಸಿತು.
Spain Masters: ಇಂದಿನಿಂದ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಆರಂಭ
ಮೈದಾನ ಮೂರರಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಿರುತೆರ 3 ಗೋಲು ಗಳಿಸಿದರೆ, ನೆರವಂಡ 4 ಸ್ಟೊ್ರೕಕ್ ಗಳಿಸಿತು. ಚೆರುಮಂದಂಡ, ಚಟ್ಟಂಗಡ ತಂಡದ ವಿರುದ್ಧ 3-0 ಅಂತರದ ಜಯ ಸಾಧಿಸಿತು. ಚೆರುಮಂದಂಡ ಕವನ್ ಕಾರ್ಯಪ್ಪ ಹ್ಯಾಟ್ರಿಕ್ ಗೋಲ್‌ಗಳಿಸಿದರು. ಶಿವ ಚಾಳಿಯಂಡ ಮತ್ತು ಪೇರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಶಿವಚಾಳಿಯಂಡ 2-0 ಅಂತರದ ಮುನ್ನಡೆ ಸಾಧಿಸಿತು. ಚಿರಿಯಪಂಡ ಮತ್ತು ಪಾಂಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3-0 ಅಂತರದಿಂದ ಪಾಂಡಂಡ ತಂಡದ ಸೋಲುಂಡಿತು. ತಂಬುಕುತ್ತಿರ ತಂಡಕ್ಕೆ ಚೆರಂಡ ತಂಡದ ವಿರುದ್ಧ 3-0 ಅಂತರದ ಗೆಲುವು ಲಭಿಸಿತು.
ಇಂದಿನ ಪಂದ್ಯಗಳು
ಮೈದಾನ ಒಂದು
8.30ಕ್ಕೆ ಕೊಂಗೇಟಿರ- ಐತಿಚಂಡ
9:30ಕ್ಕೆ ಚೊಟ್ಟೆಯಂಡಮಾಡ-ಮೊಳ್ಳೇರ
10.30ಕ್ಕೆ ಚೀಯಕಪೂವಂಡ-ಮುಕ್ಕಾಟಿರ (ಬೋಂದ)
11.30ಕ್ಕೆ ನೆಲಮಕ್ಕಡ-ಅಪ್ಪಟ್ಟಿರ
1.30ಕ್ಕೆ ಮಾಚಮಾಡ- ಪಟ್ಟಮಾಡ
ಮೈದಾನ 2
9:30ಕ್ಕೆ ಕಾಂಡೇರ- ಚೆಂದಿರ
10.30ಕ್ಕೆ ಮಂಡೇಪಂಡ-ಕೇಚೆಟ್ಟಿರ
11:30ಕ್ಕೆ ಉದ್ದಪಂಡ-ಕುಲ್ಲೇಟಿರ
12.30ಕ್ಕೆ ಚೌರೀರ(ಹೊದ್ದೂರು)-ಸಣ್ಣವಂಡ
1.30ಕ್ಕೆ ಕರಿನೆರವಂಡ- ಕೋಳಿರ
2:30ಕ್ಕೆ ಐಚಂಡ- ಜಮ್ಮಡ
ಮೈದಾನ 3
9:30ಕ್ಕೆ ಬೊಳ್ಳೆಪಂಡ- ಪಾಲೆಕಂಡ
10.30ಕ್ಕೆ ಅವರೇಮಾದಂಡ- ಕೋಟೆರ
12:30ಕ್ಕೆ ಮಾಚೆಟ್ಟಿರ- ಶಾಂತೆಯಂಡ
1:30ಕ್ಕೆ ನೇರ್ಪಂಡ-ಕೊಳ್ಳಿರ
2.30ಕ್ಕೆ ಪೊನ್ನೋಲತಂಡ- ಚಂದುರ