Spain Masters: ಇಂದಿನಿಂದ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಆರಂಭ
ಇಂದಿನಿಂದ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಆರಂಭ
ಎಲ್ಲರ ಚಿತ್ತ ಭಾರತದ ಪುರುಷ ಜೋಡಿಯಾದ ಸಾತ್ವಿಕ್-ಚಿರಾಗ್ ಶೆಟ್ಟಿಯತ್ತ
2023ರ ಪದಕ ಬರ ನೀಗಿಸಲು ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಹೋರಾಟ
ಮ್ಯಾಡ್ರಿಡ್(ಮಾ.28): ದಿನಗಳ ಹಿಂದಷ್ಟೇ ಸ್ವಿಸ್ ಓಪನ್ ಪ್ರಶಸ್ತಿ ಗೆದ್ದ ಭಾರತದ ತಾರಾ ಪುರುಷ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ ಅಭೂತಪೂರ್ವ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದ್ದು, ಮಂಗಳವಾರ ಆರಂಭವಾಗಲಿರುವ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಇದೇ ವೇಳೆ ಸಿಂಗಲ್ಸ್ನಲ್ಲಿ ಭಾರತದ 2023ರ ಪದಕ ಬರ ನೀಗಿಸಲು ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಹೋರಾಡಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಜೊತೆಗೆ ಸಾಯಿ ಪ್ರಣೀತ್, ಹಾಲಿ ರಾಷ್ಟ್ರೀಯ ಚಾಂಪಿಯನ್, ಕರ್ನಾಟದಕ ಮಿಥುನ್ ಮಂಜುನಾಥ್ ಹಾಗೂ ಸಮೀರ್ ವರ್ಮಾ ಆಡಲಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ಸೈನಾ ನೆಹ್ವಾಲ್, ಮಾಳವಿಕಾ ಬನ್ಸೋದ್ ಹಾಗೂ ಆಕರ್ಷಿ ಕಶ್ಯಪ್ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಅರ್ಜುನ್-ಧ್ರುವ್ ಕಪಿಲಾ ಕೂಡಾ ಆಡಲಿದ್ದು, ಪದಕ ನಿರೀಕ್ಷೆಯಲ್ಲಿದ್ದಾರೆ.
ಮೈಸೂರು ಟೆನಿಸ್: ಪ್ರಧಾನ ಸುತ್ತಿಗೆ ಸಿದ್ಧಾರ್ಥ್, ಫೈಸಲ್
ಮೈಸೂರು: ಐಟಿಎಫ್ ಮೈಸೂರು ಓಪನ್ 2023ರ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಆರು ಆಟಗಾರರು ಪ್ರಧಾನ ಸುತ್ತಿಗೇರಿದ್ದಾರೆ. ಅರ್ಹತಾ ಸುತ್ತಿನಲ್ಲಿಅಗ್ರ ಶ್ರೆಯಾಂಕಿತ ಸಿದ್ಧಾರ್ಥ್ ವಿಶ್ವಕರ್ಮ 6-1, 6-2 ಅಂತರದಲ್ಲಿ ದೀಪಕ್ ಅನಂತರಾಮು ವಿರುದ್ಧ ಗೆದ್ದರೆ, ಯಶ್ ಚೌರಾಸಿಯಾ ವಿರುದ್ಧ ವಿಷ್ಣುವರ್ಧನ್ 6-1, 6-1 ಸೆಟ್‌ಗಳಿಂದ ಗೆಲುವು ಸಾಧಿಸಿದರು.
ನಾನು ನೇಯ್ಮಾರ್ ಫ್ಯಾನ್, ಮೆಸ್ಸಿ ಬಗ್ಗೆ ಪ್ರಶ್ನೆಗೆ ಉತ್ತರಿಸಲ್ಲ ಎಂದ ಕೇರಳ ಬಾಲಕಿ: ಪ್ರಶ್ನೆ ಪತ್ರಿಕೆ ವೈರಲ್!
ಫೈಸಲ್ ಖಮರ್ ಅವರು ಲಕ್ಷಿತ್ ಸೂದ್ ವಿರುದ್ಧ ಜಯಿಸಿದರೆ, ಫರ್ದೀನ್ ಖಮರ್ ಥಾಯ್ಲೆಂಡ್‌ನ ಪ್ರುಚ್ಯಾ ಇಸಾರೊ ಅವರನು ಸೋಲಿಸಿ ಪ್ರಧಾನ ಸುತ್ತಿಗೇರಿದರು. ಇದೇ ವೇಳೆ ಎದುರಾಳಿಗಳು ಗಾಯದ ಸಮಸ್ಯೆಯಿಂದಾಗಿ ಹಿಂದೆ ಸರಿದ ಕಾರಣ ಇಸಾಕ್ ಇಕ್ಬಾಲ್ ಮತ್ತು ರಂಜೀತ್ ವಿರಾಲಿ ಮುರುಗೇಶನ್ ಮುಖ್ಯ ಸುತ್ತು ಪ್ರವೇಶಿಸಿದರು.
ವೇಟ್ಲಿಫ್ಟಿಂಗ್: ಮೀಟಿಗೆ ಬೆಳ್ಳಿ, ಆಕಾಂಕ್ಷಗೆ ಕಂಚು
ನವದೆಹಲಿ: ಆಲ್ಬೇನಿಯಾದ ಡರ್ರೆಸ್‌ನಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ವೇಟ್‌ಲಿಫ್ಟಿಂಗ್‌ನ 2ನೇ ದಿನವೂ ಭಾರತ ಪದಕ ಬೇಟೆ ಮುಂದುವರಿಸಿದೆ. ಬಾಲಕರ 55 ಕೆ.ಜಿ. ವಿಭಾಗದಲ್ಲಿ ತೊಮ್ಚೊ ಮೀಟಿ ಒಟ್ಟು 234 ಕೆ.ಜಿ. ಭಾರ ಎತ್ತಿ ಬೆಳ್ಳಿ ಜಯಿಸಿದರು.
ಇದೇ ವೇಳೆ 61 ಕೆ.ಜಿ. ವಿಭಾಗದ ಸ್ನ್ಯಾಚ್ನಲ್ಲಿ 112 ಕೆ.ಜಿ. ಭಾರ ಎತ್ತಿದ ಗೊಲೊಮ್ ಟಿಂಕು ಕಂಚಿನ ಪದಕ ಗೆದ್ದರು. ಬಾಲಕಿಯರ 68 ಕೆ.ಜಿ. ವಿಭಾಗದಲ್ಲಿ ಆಕಾಂಕ್ಷ ಒಟ್ಟು 150 ಕೆ.ಜಿ. ಭಾರ ಎತ್ತಿ 3ನೇ ಸ್ಥಾನ ಪಡೆದರೆ, ಅಶ್ಮಿತಾ ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 83 ಕೆ.ಜಿ. ಭಾರ ಎತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.