ನವದೆಹಲಿ(ಫೆ.23): ಟೋಕಿಯೋ ಒಲಿಂಪಿಕ್ಸ್‌ ಎದುರು ನೋಡುತ್ತಿರುವ ಭಾರತೀಯ ಮಹಿಳಾ ಹಾಕಿ ತಂಡ ಇದಕ್ಕೂ ಮೊದಲು ಜರ್ಮನಿಗೆ ಪ್ರವಾಸ ಬೆಳೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. 

ಆತಿಥೇಯ ಜರ್ಮನಿಯ ವಿರುದ್ಧ ನಾಲ್ಕು ಪಂದ್ಯಗಳನ್ನು ಆಡಲಿದೆ. ರಾಣಿ ರಾಂಪಾಲ್‌ ನೇತೃತ್ವದ 18 ಮಂದಿ ಆಟಗಾರ್ತಿಯರ ತಂಡ ಮಂಗಳವಾರ ಬೆಂಗಳೂರಿನಿಂದ ಜರ್ಮನಿಗೆ ಪ್ರಯಾಣ ಬೆಳೆಸಲಿದೆ. 

ಕಳೆದ ಕೆಲವು ದಿನಗಳಿಂದ ತಂಡದ ಸದಸ್ಯರು ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದಲ್ಲಿ ಅಭ್ಯಾಸದಲ್ಲಿ ನಿರತವಾಗಿತ್ತು. ಭಾರತ ತಂಡ ಜರ್ಮನಿ ವಿರುದ್ಧ ಫೆಬ್ರವರಿ 27, 28ರಂದು ಮೊದಲ ಎರಡು ಪಂದ್ಯಗಳನ್ನು ಆಡಲಿದೆ. ಬಳಿಕ ಮಾರ್ಚ್ 2 ಮತ್ತು 4ರಂದು ಇನ್ನೆರಡು ಪಂದ್ಯಗಳನ್ನು ಆಡಲಿದೆ.

ಇಂದು ಜರ್ಮನಿಗೆ ಭಾರತ ಹಾಕಿ ತಂಡ ಪ್ರವಾಸ; ವರ್ಷದ ಬಳಿಕ ಮೊದಲ ಟೂರ್‌

ಭಾರತ  ಮಹಿಳಾ ಹಾಕಿ ತಂಡ ಹೀಗಿದೆ ನೋಡಿ:

ರಾಣಿ ರಾಂಪಾಲ್‌, ಸವಿತಾ, ರಜನಿ ಎತಿಮಪ್ರೂ, ದೀಪ್‌ ಗ್ರೇಸ್‌ ಎಕ್ಕಾ, ಗುರ್ಜಿತ್ ಕೌರ್, ಉದಿತ್ ನಿಶಾ, ನಿಕ್ಕಿ ಪ್ರಧಾನ್‌, ಮೋನಿಕಾ, ನೇಹ, ಲಿಲಿಮಾ ಮಿಂಜ್‌, ಸುಶಿಲಾ ಚಾನು ಪುಕಾರಂಬಂ, ಸಾಲಿಮಾ ತೇಟೆ, ನವಜೋತ್ ಕೌರ್, ಲಲ್ರೇಸಿಯಾಮಿ, ನವನೀತ್ ಕೌರ್, ರಾಜ್ವಿಂದರ್‌ ಕೌರ್, ಶರ್ಮಿಲಾ ದೇವಿ.