ಭಾರತದ ಪುರುಷರ ಹಾಕಿ ತಂಡ ಗ್ರೇಟ್‌ ಬ್ರಿಟನ್‌ ವಿರುದ್ದ ರೋಚಕ ಗೆಲುವು ದಾಖಲಿಸುವುದರೊಂದಿಗೆ ಯೂರೋಪ್‌ ಪ್ರವಾಸವನ್ನು ಅಜೇಯವಾಗಿ ಮುಗಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಆಂಟ್ವೆಪ್‌ರ್‍(ಬೆಲ್ಜಿಯಂ)(ಮಾ.09): ಯುರೋಪ್‌ ಪ್ರವಾಸವನ್ನು ಭಾರತ ಪುರುಷರ ಹಾಕಿ ತಂಡ ಅಜೇಯವಾಗಿ ಮುಕ್ತಾಯಗೊಳಿಸಿದೆ. ಸೋಮವಾರ ನಡೆದ ಪ್ರವಾಸದ 4ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ, ಗ್ರೇಟ್‌ ಬ್ರಿಟನ್‌ ವಿರುದ್ಧ 3-2 ಗೋಲುಗಳ ಗೆಲುವು ಸಾಧಿಸಿತು. 

ಪಂದ್ಯದ ಮೊದಲ ನಿಮಿಷದಲ್ಲೇ ಹರ್ಮನ್‌ಪ್ರೀತ್ ಸಿಂಗ್‌ ಭಾರತ ಪರ ಗೋಲಿನ ಖಾತೆ ತೆರೆದರು. ಇದಾದ ಬಳಿಕ ಮನ್ದೀಪ್‌ ಸಿಂಗ್‌ ಪಂದ್ಯದ 28ನೇ ಹಾಗೂ 59ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಗ್ರೇಟ್ ಬ್ರಿಟನ್ ಪರ ಜೇಮ್ಸ್‌ ಗಲ್‌(20ನೇ) ಹಾಗೂ ಆಡಂ ಫರ್ಸೆತ್‌ 55ನೇ ನಿಮಿಷದಲ್ಲಿ ಗೋಲು ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಮೊದಲೆರಡು ಪಂದ್ಯಗಳಲ್ಲಿ ಜರ್ಮನಿ ವಿರುದ್ಧ ಆಡಿದ್ದ ಭಾರತ, ಕೊನೆಯೆರಡು ಪಂದ್ಯಗಳನ್ನು ಬ್ರಿಟನ್‌ ವಿರುದ್ಧ ಆಡಿತು. ಈ ಮೊದಲಿನ ಗ್ರೇಟ್‌ ಬ್ರಿಟನ್‌ ವಿರುದ್ದ ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಅಂತ್ಯವಾಗಿತ್ತು. ಇದಕ್ಕೂ ಮೊದಲು ಜರ್ಮನಿ ವಿರುದ್ದ ನಡೆದ ಮೊದಲ ಪಂದ್ಯದಲ್ಲಿ ಭಾರತ 6-1 ಅಂತರದ ಗೆಲುವನ್ನು ದಾಖಲಿಸಿದ್ದರೆ, ಎರಡನೇ ಪಂದ್ಯ 1-1 ಡ್ರಾನಲ್ಲಿ ಅಂತ್ಯವಾಗಿತ್ತು.

Scroll to load tweet…

ಇಂದು ಜರ್ಮನಿಗೆ ಭಾರತ ಹಾಕಿ ತಂಡ ಪ್ರವಾಸ; ವರ್ಷದ ಬಳಿಕ ಮೊದಲ ಟೂರ್

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವ ಭಾರತ ಹಾಕಿ ತಂಡವು ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 24ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ.