ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿ ಪಡೆದಿದ್ದಾರೆ. ಇದು ಸವಿತಾಗೆ ಸತತ ಮೂರನೇ ಪ್ರಶಸ್ತಿ. ಇದೇ ವೇಳೆ ಹಾರ್ದಿಕ್ ಸಿಂಗ್ ಪುರುಷರ ವಿಭಾಗದಲ್ಲಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಲುಸಾನ್(ಡಿ.20): ಭಾರತದ ತಾರಾ ಹಾಕಿ ಪಟುಗಳಾದ ಹಾರ್ದಿಕ್ ಸಿಂಗ್ ಹಾಗೂ ಸವಿತಾ ಪೂನಿಯಾ ಎಫ್‌ಐಎಚ್‌ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿ ಪಡೆದಿದ್ದಾರೆ. ಇದು ಸವಿತಾಗೆ ಸತತ ಮೂರನೇ ಪ್ರಶಸ್ತಿ. ಇದೇ ವೇಳೆ ಹಾರ್ದಿಕ್ ಸಿಂಗ್ ಪುರುಷರ ವಿಭಾಗದಲ್ಲಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ

ಹಾಕಿ: ಭಾರತ ಪುರುಷರ ತಂಡಕ್ಕೆ ಹ್ಯಾಟ್ರಿಕ್‌ ಸೋಲು

ವೆಲೆನ್ಸಿಯಾ: ಭಾರತ ಪುರುಷರ ಹಾಕಿ ತಂಡ 5 ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲನುಭವಿಸಿದೆ. ಆರಂಭಿಕ ಪಂದ್ಯಗಳಳ್ಲೊ ಸ್ಪೇನ್‌ ಹಾಗೂ ಬೆಲ್ಜಿಯಂ ವಿರುದ್ಧ ಪರಾಭವಗೊಂಡಿದ್ದ ಭಾರತಕ್ಕೆ ಮಂಗಳವಾರ ಜರ್ಮನಿ ವಿರುದ್ಧ 2-3 ಗೋಲುಗಳಿಂದ ಸೋಲು ಎದುರಾಯಿತು. 

ಭಾರತದ ಪರ ಅಭಿಷೇಕ್‌(9ನೇ ನಿಮಿಷ), ಶಮ್ಸೇರ್‌ ಸಿಂಗ್‌(14ನೇ ನಿಮಿಷ) ಗೋಲು ಬಾರಿಸಿದರು. ಆರಂಭಿಕ ಕ್ಟಾರ್ಟರ್‌ನಲ್ಲೇ 2-0 ಮುನ್ನಡೆ ಸಾಧಿಸಿದ್ದರೂ ಬಳಿಕ ಪುಟಿದೆದ್ದ ಜರ್ಮನಿ 3 ಗೋಲು ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಭಾರತ ತಂಡ ಮುಂದಿನ ಪಂದ್ಯದಲ್ಲಿ ಬುಧವಾರವಫ್ರಾನ್ಸ್‌ ವಿರುದ್ಧ ಸೆಣಸಾಡಲಿದೆ.

ದುಬೈ ಪ್ಯಾರಾ ಬ್ಯಾಡ್ಮಿಂಟನ್‌: ಮಾನಸಿ-ತುಳಸಿಮತಿಗೆ ಸ್ವರ್ಣ

ನಹದೆಹಲಿ: ದುಬೈ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಭಾರತ ಮಾನಸಿ ಜೋಶಿ ಹಾಗೂ ತುಳಸಿಮತಿ ಮುರುಗೇಸನ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ವಿಶ್ವ ನಂ.2 ಜೋಡಿ ಮಾನಸಿ-ತುಳಸಿಮತಿ ಎಸ್‌ಎಲ್‌3-ಎಸ್‌ಯು5 ವಿಭಾಗದ ಫೈನಲ್‌ನಲ್ಲಿ ಇಂಡೋನಷ್ಯಾದ ಜೋಡಿ ಲೀನಿ ರಾಟ್ರಿ ಒಕ್ಟಿಲಾ- ಖಲಿಮಟುಸ್‌ ಸಾದಿಯಾ ವಿರುದ್ಧ 15-21, 21-14, 21-6 ರಿಂದ ಜಯಗಳಿಸಿತು. 

8 ವರ್ಷದ ಬಳಿಕ ಐಪಿಎಲ್‌ಗೆ ಸ್ಟಾರ್ಕ್‌ನ ಕರೆತಂದು ಬಡವಾಯಿತು ಕೆಕೆಆರ್, ಹರಿದಾಡುತ್ತಿದೆ ಮೀಮ್ಸ್!

ಇನ್ನು, ಎಸ್‌ಎಲ್‌3 ವಿಭಾಗದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್ ಚಾಂಪಿಯನ್‌ ಪ್ರಮೋದ್‌ ಭಗತ್‌ ಬೆಳ್ಳಿ ಪದಕ ಗೆದ್ದರು. ಅವರು ಮಿಶ್ರ ಡಬಲ್ಸ್‌ನ ಎಸ್‌ಎಲ್‌3-ಎಸ್‌ಯು5 ವಿಭಾಗದಲ್ಲಿ ಮನಿಶಾ ಜೊತೆಗೂಡಿ ಬೆಳ್ಳಿ ಪಡೆದರು. ಇದೇ ವಿಭಾಗದಲ್ಲಿ ನಿತೇಶ್‌-ತುಳಸಿಮತಿಗೆ ಕಂಚು ಲಭಿಸಿತು.

ಕೋಲ್ಕತಾ ಕ್ರೀಡಾಂಗಣದಲ್ಲೇ ಯುವಕ ಆತ್ಯಹತ್ಯೆಗೆ ಶರಣು!

ಕೋಲ್ಕತಾ: ಐತಿಹಾಸಿಕ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ ಗ್ಯಾಲರಿಯೊಂದರಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು ಸೋಮವಾರ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಕ್ರೀಡಾಂಗಣದ ಸಿಬ್ಬಂದಿಯ ಮಗ. 21 ವರ್ಷದ ಧನಂಜಯ ಬಾರಿಕ್‌ ಎಂದು ಗುರುತಿಸಲಾಗಿದೆ. ಧನಂಜಯ ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದು, ಸೋಮವಾರ ಕ್ರೀಡಾಂಗಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಯುವಕ ಕ್ರೀಡಾಂಗಣದಲ್ಲೇ ಕೆಲಸಕ್ಕಾಗಿ ತುಂಬಾ ಸಮಯದಿಂದ ಪ್ರಯತ್ನಿಸುತ್ತಿದ್ದ. ಆದರೆ ಕೆಲಸ ಸಿಗದಿದ್ದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.