ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಮಿಚೆಲ್ ಸ್ಟಾರ್ಕ್ ಮಾರಾಟವಾಗಿದ್ದಾರೆ. 24.75 ಕೋಟಿ ರೂಪಾಯಿಗೆ ಕೆಕೆಆರ್ ಪಾಲಾಗಿರುವ ಸ್ಟಾರ್ಕ್ ಕುರಿತು ಮೀಮ್ಸ್ ಹರಿದಾಡುತ್ತಿದೆ. ಇತ್ತ ದುಬಾರಿ ಮೊತ್ತಕ್ಕೆ ಸ್ಟಾರ್ಕ್ ಖರೀದಿಸಿ ಕೆಕೆಆರ್ ಬಡವಾಗಿದೆ ಅನ್ನೋ ಮೀಮ್ಸ್‌ಗಳು ಭಾರಿ ವೈರಲ್ ಆಗಿದೆ. 

ದುಬೈ(ಡಿ.19) ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ಪೂಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಇದುವರೆಗಿನ ಅತ್ಯಂತ ದುಬಾರಿ ಆಟಗಾರ ಅನ್ನೋ ಹೆಗ್ಗಳಿಕೆಗೆ ಮಿಚೆಲ್ ಪಾತ್ರರಾಗಿದ್ದಾರೆ. ಮಿಚೆಲ್ ಎಲ್ಲಾ ದಾಖಲೆ ಮುರಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಮೀಮ್ಸ್ ಹರಿದಾಡುತ್ತಿದೆ.

ಮಿಚೆಲ್ ಸ್ಟಾರ್ಕ್ 8 ವರ್ಷಗಳ ಬಳಿಕ ಐಪಿಎಲ್ ಟೂರ್ನಿಗೆ ಮರಳಿದ್ದಾರೆ. 2015ರಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಮಿಚೆಲ್ ಸ್ಟಾರ್ಕ್ ಬಳಿಕ ಐಪಿಎಲ್ ಟೂರ್ನಿಯಿಂದ ದೂರ ಉಳಿದಿದ್ದರು. ಆಸ್ಟ್ರೇಲಿಯಾ ತಂಡ ಪ್ರತಿನಿಧಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದ ಸ್ಟಾರ್ಕ್, ಐಪಿಎಲ್ ಆಡಲು ಆಸಕ್ತಿ ತೋರಿರಲಿಲ್ಲ. ಇದೀಗ 8 ವರ್ಷದ ಬಳಿಕ ಮಿಚೆಲ್ ಸ್ಟಾರ್ಕ್ ರಾಜನಂತೆ ಐಪಿಎಲ್ ಟೂರ್ನಿಗೆ ಮರಳಿದ್ದಾರೆ ಅನ್ನೋ ಮೀಮ್ಸ್ ಹರಿದಾಡುತ್ತಿದೆ.

IPL ಇತಿಹಾಸದಲ್ಲಿ ಕಂಡು ಕೇಳರಿಯದ ದಾಖಲೆ, ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಗೆ ಸೇಲ್!

ಕೆಕೆಆರ ತಂಡ ತನ್ನ ಪರ್ಸ್‌ನಲ್ಲಿ ಬಹುತೇಕ ಹಣವನ್ನು ಮಿಚೆಲ್ ಸ್ಟಾರ್ಕ್ ಮೇಲೆ ಸುರಿದು ಇದೀಗ ಬಡವಾಗಿದೆ ಅನ್ನೋ ರೀತಿಯ ಮೀಮ್ಸ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇತ್ತ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿ ಹಣ ಎಣಿಸಲು ಬ್ಯಾಂಕ್ ಸಿಬ್ಬಂದಿಯನ್ನೇ ನೇಮಕ ಮಾಡಿಕೊಂಡಿದ್ದಾರೆ ಅನ್ನೋ ಮೀಮ್ಸ್ ಕೂಡ ಭಾರಿ ವೈರಲ್ ಆಗಿದೆ.

Scroll to load tweet…

ಮಿಚೆಲ್ ಸ್ಟಾರ್ಕ್ 2014ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಬಳಿಕ 2015ರಲ್ಲಿ ಅಂದರೆ ಎರಡು ಆವೃತ್ತಿಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. 27 ಪಂದ್ಯ ಆಡಿರುವ ಮಿಚೆಲ್ ಸ್ಟಾರ್ಕ್ 34 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಮಿಚೆಲ್ ಸ್ಟಾರ್ಕ್ ಖರೀದಿಸಲು ಪ್ಲಾನ್ ಮಾಡಿತ್ತು. ಇತ್ತ ಪ್ಯಾಟ್ ಕಮನಿನ್ಸ್‌ಗೂ ಬಿಡ್ಡಿಂಗ್ ನಡೆಸಿತು. ಆದರೆ ಇಬ್ಬರು ಆಟಗಾರರು ಆರ್‌ಸಿಬಿಗೆ ಕೈಗೆಟುಕಲಿಲ್ಲ.

'ದೇಶಕ್ಕಾಗಿ ಆಡಿ, ದುಡ್ಡು ಬೇಡ ಅಂದ್ರು ಬರುತ್ತೆ.. ' ಕಮ್ಮಿನ್ಸ್‌ ಬೆಸ್ಟ್‌ ಉದಾಹರಣೆ ಎಂದ ಐಪಿಎಲ್‌ ಫ್ಯಾನ್ಸ್‌!

ಮಿಚೆಲ್ ಸ್ಟಾರ್ಕ್ ಮಾರಕ ಬೌಲರ್ ಅನ್ನೋದರಲ್ಲಿ ಎರಡುಮಾತಿಲ್ಲ. ಭಾರತ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸ್ಟಾರ್ಕ್ 3 ವಿಕೆಟ್ ಕಬಳಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಗಿದ್ದರು. ಟೂರ್ನಿಯುದ್ದಕ್ಕೂ ಸ್ಟಾರ್ಕ್ ಉತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಫೈನಲ್ ಕೊಂಡೊಯ್ದಿದ್ದರು. ಒತ್ತಡದ ಸಂದರ್ಭದಲ್ಲಿ, ಡೆತ್ ಓವರ್ ಸೇರಿದಂತೆ ಪ್ರಮುಖ ಟಿ20 ಘಟ್ಟಗಳಲ್ಲಿ ಸ್ಟಾರ್ಕ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.

Scroll to load tweet…

Scroll to load tweet…