Asian Champions Trophy 2021: ಪಾಕ್‌ ಬಗ್ಗುಬಡಿದು ಭಾರತ ಹಾಕಿ ತಂಡ ಸೆಮೀಸ್‌ಗೆ ಲಗ್ಗೆ

* ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಮಿಂಚಿನ ಆಟ

* ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಗೆದ್ದು ಬೀಗಿದ ಮನ್‌ಪ್ರೀತ್ ಸಿಂಗ್ ಪಡೆ

* ಬಹುತೇಕ ಸೆಮೀಸ್ ಸ್ಥಾನ ಖಚಿತ ಪಡಿಸಿಕೊಂಡ ಭಾರತ ಹಾಕಿ ತಂಡ

Ind vs Pak Asian Champions Trophy 2021 Indian Hockey Team Thrash Pakistan virtually qualify for the semifinals kvn

ಢಾಕಾ(ಡಿ.18): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ (Asian Champions Trophy Hockey 2021) ಟೂರ್ನಿಯಲ್ಲಿ ಭಾರತ ತನ್ನ ಬದ್ಧ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ 3-1 ಗೋಲುಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಭಾರತ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 7 ಅಂಕಗಳಿಸಿದ್ದು, ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ದ.ಕೊರಿಯಾ ವಿರುದ್ಧ ಡ್ರಾ ಸಾಧಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಮನ್‌ಪ್ರೀತ್ ಸಿಂಗ್ (Manpreet Singh) ನೇತೃತ್ವದ ಭಾರತ ಹಾಕಿ ತಂಡವು (Indian Hockey Team) ಗೆಲುವಿನ ಖಾತೆ ತೆರೆದಿತ್ತು.

ಶುಕ್ರವಾರದ ಪಂದ್ಯದಲ್ಲಿ ಭಾರತದ ಪರ ಉಪನಾಯಕ ಹರ್ಮನ್‌ಪ್ರೀತ್‌ (Harmanpreet Singh) ಸಿಂಗ್‌ (8 ಮತ್ತು 53ನೇ ನಿಮಿಷ) ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಎರಡು ಗೋಲು ಬಾರಿಸುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತ ಹರ್ಮನ್‌ಪ್ರೀತ್ ಸಿಂಗ್, ಇದೀಗ ಸಾಂಪ್ರದಾಯಿಕ ಎದುರಾಳಿ ವಿರುದ್ದ ಗೆದ್ದು ಬೀಗುವಲ್ಲಿ ತಂಡಕ್ಕೆ ನೆರವಾದರು. ಇನ್ನು ಆಕಾಶ್‌ದೀಪ್‌ ಸಿಂಗ್‌ 42ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪಾಕಿಸ್ತಾನ ಪರ 45ನೇ ನಿಮಿಷದಲ್ಲಿ ಜುನೈದ್‌ ಮನ್ಜೂರ್‌ ಏಕೈಕ ಗೋಲು ಗಳಿಸಿದರು. ರೌಂಡ್‌ ರಾಬಿನ್‌ ಮಾದರಿಯ ಕೊನೆ ಪಂದ್ಯದಲ್ಲಿ ಭಾರತ, ಭಾನುವಾರ ಜಪಾನ್‌ ವಿರುದ್ಧ ಸೆಣಸಲಿದ್ದು, ಅಜೇಯ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಮಸ್ಕಟ್‌ನಲ್ಲಿ ನಡೆದ ಕಳೆದ ಆವೃತ್ತಿಯ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. ಆದರೆ ಈ ಬಾರಿ ಪಾಕಿಸ್ತಾನ ತಂಡವು ಇನ್ನು ಗೆಲುವಿನ ಖಾತೆ ತೆರೆಯಲು ಪರದಾಡುತ್ತಿದೆ. ಪಾಕಿಸ್ತಾನವು ಅಡಿದ ಎರಡು ಪಂದ್ಯಗಳಿಂದ ಕೇವಲ ಒಂದು ಅಂಕ ಗಳಿಸಿದೆ.

ಅವನಿ ಲೇಖರಾಗೆ ಪ್ಯಾರಾಲಿಂಪಿಕ್‌ ವಾರ್ಷಿಕ ಪ್ರಶಸ್ತಿ

ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಚಿನ್ನ ಗೆದ್ದಿದ್ದ ಭಾರತದ ಶೂಟರ್‌ ಅವನಿ ಲೇಖರಾ (Avani Lekhara) ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿಯ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಗುರುವಾರ ಪ್ರಶಸ್ತಿ ಪ್ರಕಟಿಸಲಾಗಿದ್ದು, ಚೊಚ್ಚಲ ಪ್ರಯತ್ನದಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದ ಮಹಿಳಾ ಕ್ರೀಡಾಪಟು ವಿಭಾಗ (ಬೆಸ್ಟ್‌ ಫೀಮೇಲ್‌ ಡೆಬ್ಯೂ)ದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 

Asian Champions Trophy 2021: ಬಾಂಗ್ಲಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಗೆಲುವು

ಪ್ಯಾರಾಲಿಂಪಿಕ್ಸ್‌ನ 10 ಮೀ. ಏರ್‌ ರೈಫಲ್‌ ಎಸ್‌ಎಚ್‌1 ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. ಜೊತೆಗೆ, 50 ಮೀ. ರೈಫಲ್‌ ತ್ರಿ ಪೊಸಿಷನ್‌ನಲ್ಲಿ ಕಂಚು ಗೆದ್ದಿದ್ದರು.

ಡೋಪಿಂಗ್‌ ವಿರೋಧಿ ಕಾಯ್ದೆ ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ಕ್ರೀಡೆಗಳಲ್ಲಿ ಡೋಪಿಂಗ್‌ (Doping) ಪ್ರಕರಣಗಳನ್ನು ನಿಯಂತ್ರಿಸುವ ರಾಷ್ಟ್ರೀಯ ಉದ್ದೀಪನ ಸೇವನೆ ನಿಗ್ರಹ ಘಟಕ(ನಾಡಾ)ಕ್ಕೆ (NADA) ಶಾಸನಬದ್ಧ ಚೌಕಟ್ಟು ಒದಗಿಸುವ ಉದ್ದೀಪನ ವಿರೋಧಿ ಕಾಯ್ದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಶುಕ್ರವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಕಾಯ್ದೆಯನ್ನು ಮಂಡಿಸಿದ್ದಾರೆ. 

ಈ ಕಾಯ್ದೆ ಜಾರಿಯಾದರೆ ನಾಡಾ, ರಾಷ್ಟ್ರೀಯ ಉದ್ದೀಪನ ಪರೀಕ್ಷಾ ಲ್ಯಾಬೋರೇಟರಿ(ಎನ್‌ಡಿಟಿಲ್‌) ಸೇರಿದಂತೆ ವಿವಿಧ ಡೋಪಿಂಗ್‌ ನಿಗ್ರಹ ಘಟಕಗಳ ಕಾರ‍್ಯನಿರ್ವಹಣೆಗೆ ಮತ್ತಷ್ಟುಬಲ ಸಿಗಲಿದ್ದು, ಕ್ರೀಡೆಗಳಲ್ಲಿ ಡೋಪಿಂಗ್‌ ಪ್ರಕರಣಗಳನ್ನು ತಡೆಗಟ್ಟಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios