Asianet Suvarna News Asianet Suvarna News

Asian Champions Trophy 2021: ಬಾಂಗ್ಲಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಗೆಲುವು

* ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು

* ಭಾರತ ಹಾಕಿ ತಂಡಕ್ಕೆ ಬಾಂಗ್ಲಾ ಎದುರು 9-0 ಅಂತರದ ಗೆಲುವು

* ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಭಾರತ

Asian Champions Trophy 2021 Indian Mens Hockey Team Thrash Bangladesh in 2nd Encounter kvn
Author
Bengaluru, First Published Dec 16, 2021, 10:01 AM IST
  • Facebook
  • Twitter
  • Whatsapp

ಢಾಕಾ(ಡಿ.16): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ (Asian Champions Trophy Hockey) ಟೂರ್ನಿಯ 2ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಭಾರತ, ಬಾಂಗ್ಲಾದೇಶ ವಿರುದ್ಧ 9-0 ಗೋಲುಗಳಿಂದ ಭರ್ಜರಿ ಜಯ ಗಳಿಸಿದೆ. ಬುಧವಾರದ ಪಂದ್ಯದಲ್ಲಿ ಭಾರತ ಪರ ದಿಲ್‌ಪ್ರೀತ್‌ ಹ್ಯಾಟ್ರಿಕ್‌ ಗೋಲು ಬಾರಿಸಿದರೆ, ಜರ್ಮನ್‌ಪ್ರೀತ್‌ ಸಿಂಗ್‌ 2, ಲಲಿತ್‌ ಉಪಾಧ್ಯಾಯ್‌, ಆಕಾಸ್‌ದೀಪ್‌ ಸಿಂಗ್‌, ಮಂದೀಪ್‌ ಮೋರ್‌ ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌ ತಲಾ 1 ಗೋಲು ಹೊಡೆದರು. 

ರೌಂಡ್‌ ರಾಬಿನ್‌ ಮಾದರಿಯ ಟೂರ್ನಿಯಲ್ಲಿ ಭಾರತ 2 ಪಂದ್ಯಗಳಲ್ಲಿ 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು, ಶುಕ್ರವಾರ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ. ಅಗ್ರ 4 ತಂಡಗಳು ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿವೆ. ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ಭಾರತ ಹಾಕಿ ತಂಡವು (Indian Men's Hockey Team) ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಜಯಿಸಿದ ಮೊದಲ ಗೆಲುವು ಇದಾಗಿದೆ. ಈ ಮೊದಲು ಭಾರತ ಹಾಗೂ ದ.ಕೊರಿಯಾ ನಡುವಿನ ಮೊದಲ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತ್ತು. 

ರಾಷ್ಟ್ರೀಯ ಹಾಕಿ: ರಾಜ್ಯ ತಂಡ ಕ್ವಾರ್ಟರ್‌ಗೆ ಲಗ್ಗೆ

ಪುಣೆ: 11ನೇ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಟೂರ್ನಿಯ 2ನೇ ಪಂದ್ಯದಲ್ಲಿ ಸೋಮವಾರ ಕರ್ನಾಟಕ ಸತತ 3ನೇ ಪಂದ್ಯದಲ್ಲೂ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಬುಧವಾರ ನಡೆದ ‘ಸಿ’ ಗುಂಪಿನ ಕೊನೆ ಪಂದ್ಯದಲ್ಲಿ ರಾಜ್ಯ ತಂಡ, ಅರುಣಾಚಲ ಪ್ರದೇಶದ ವಿರುದ್ಧ 14-0 ಗೋಲುಗಳಿಂದ ಜಯಗಳಿಸಿತು. 

ನಾಯಕ ಮೊಹಮದ್‌ ರಹೀಲ್‌ ಹ್ಯಾಟ್ರಿಕ್‌ ಗೋಲು ಬಾರಿಸಿದರೆ, ಹರೀಶ್‌, ಮಣಿಕಾಂತ್‌ ಹಾಗೂ ಪವನ್‌ ತಲಾ 2 ಗೋಲು ಬಾರಿಸಿದರು. ಶಮಂತ್‌, ಕುಮಾರ್‌ ಯತೀಶ್‌, ಲಿಖಿತ್‌, ಸೋಮಣ್ಣ ಹಾಗೂ ಭರತ್‌ ತಲಾ 1 ಗೋಲು ಹೊಡದರು. ಕರ್ನಾಟಕ ಮೊದಲೆರಡು ಪಂದ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ವಿರುದ್ಧ ಗೆಲುವು ಸಾಧಿಸಿತ್ತು.

ಐಎಸ್‌ಎಲ್‌: ಎಟಿಕೆ ವಿರುದ್ಧ ಬಿಎಫ್‌ಸಿಗೆ ಗೆಲುವಿನ ಗುರಿ

ಬಾಂಬೊಲಿಮ್‌: 8ನೇ ಆವೃತ್ತಿಯ ಐಎಸ್‌ಎಲ್‌ (Indian Super League) ಫುಟ್ಬಾಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) (Bengaluru FC) ತಂಡ ಗುರುವಾರ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಸೆಣಸಾಡಲಿದೆ. 

Pro Kabaddi League 2021: ಬೆಂಗಳೂರು ಬುಲ್ಸ್‌ಗೆ ಪವನ್‌ ಶೆರಾವತ್ ನಾಯಕ

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದರೂ ಬಳಿಕ ಸುನಿಲ್‌ ಚೆಟ್ರಿ (Sunil Chhetri) ಪಡೆ 5 ಪಂದ್ಯಗಳಲ್ಲಿ ಗೆಲುವಿನ ಮುಖವನ್ನೇ ಕಂಡಿಲ್ಲ. 4 ಪಂದ್ಯಗಳಲ್ಲಿ ಸೋತು, 1 ಪಂದ್ಯ ಡ್ರಾ ಮಾಡಿಕೊಂಡಿರುವ ಬಿಎಫ್‌ಸಿ (BFC) ಸದ್ಯ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಎಟಿಕೆ ಸವಾಲನ್ನು ಮೆಟ್ಟಿನಿಂತು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಇನ್ನು, 2 ಗೆಲುವು, 2 ಸೋಲಿನೊಂದಿಗೆ 6ನೇ ಸ್ಥಾನದಲ್ಲಿರುವ ಎಟಿಕೆ ಕೂಡಾ ಗೆಲುವಿನ ನಿರೀಕ್ಷೆಯಲ್ಲಿದೆ.

ವಿಶ್ವ ಬ್ಯಾಡ್ಮಿಂಟನ್‌: ಪ್ರಿ ಕ್ವಾರ್ಟರ್‌ಗೆ ಪ್ರಣಯ್‌

ಹುಯೆಲ್ವಾ(ಸ್ಪೇನ್‌): ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Badminton World Championship) ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಪ್ರಿ ಕ್ವಾರ್ಟರ್‌ ಪೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪುರುಷರ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್‌, ಮಲೇಷ್ಯಾದ ಡ್ಯಾರೆನ್‌ ಲೀವ್‌ ವಿರುದ್ಧ 21-7, 21-17 ಗೇಮ್‌ಗಳಿಂದ ಗೆಲುವು ಸಾಧಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಅವರು, ಡೆನ್ಮಾರ್ಕ್ನ ರಾಸ್ಮಸ್‌ ವಿರುದ್ಧ ಸೆಣಸಲಿದ್ದಾರೆ. 

ಇನ್ನು, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಚೀನಾದ ಲಿಯು ಕ್ಸಾನ್‌-ಕ್ಸಿಯ ಯು ಜೋಡಿ ವಿರುದ್ಧ ಗೆದ್ದು ಪ್ರಿ ಕ್ವಾರ್ಟರ್‌ ತಲುಪಿದರೆ, ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ ಜೋಡಿ ರಷ್ಯಾದ ವ್ಲಾದಿಮಿರ್‌-ಇವಾನ್‌ ಜೋಡಿಗೆ ಶರಣಾಗಿ ಕೂಟದಿಂದ ಹೊರಬಿತ್ತು.

Follow Us:
Download App:
  • android
  • ios