Hockey World Cup: ಅಂತಿಮ 8ರ ಸುತ್ತಿಗೆ ಇಂಗ್ಲೆಂಡ್‌ ಲಗ್ಗೆ

ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಸ್ಪೇನ್ ವಿರುದ್ದ 4-0 ಅಂತರದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್
ಭಾರತವನ್ನು ಹಿಂದಿಕ್ಕಿ 'ಡಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಇಂಗ್ಲೆಂಡ್ ಹಾಕಿ ತಂಡ

Hockey World Cup England hockey team enters quarter final kvn

ಭುವನೇಶ್ವರ(ಜ.20): 15ನೇ ಆವೃತ್ತಿ ಹಾಕಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದೆ. ‘ಡಿ’ ಗುಂಪಿನ ಕೊನೆ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ 4-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್‌ 7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತು. ಸೋಲಿನ ಹೊರತಾಗಿಯೂ 3 ಅಂಕದೊಂದಿಗೆ 3ನೇ ಸ್ಥಾನ ಪಡೆದ ಸ್ಪೇನ್‌ ಕ್ರಾಸ್‌ ಓವ​ರ್ಸ್ ಹಂತಕ್ಕೆ ಪ್ರವೇಶಿಸಿತು. 
ಪಂದ್ಯಕ್ಕೂ ಮುನ್ನ ಭಾರತಕ್ಕಿಂತ 5 ಗೋಲುಗಳ ವ್ಯತ್ಯಾಸದಲ್ಲಿ ಮುಂದಿದ್ದ ಇಂಗ್ಲೆಂಡ್‌ ಮತ್ತಷ್ಟು ಗೋಲುಗಳನ್ನು ಬಾರಿಸಿ ಅಂತರವನ್ನು ಹೆಚ್ಚಿಸಿತು. ಆಡಿದ ಮೂರು ಪಂದ್ಯಗಳಲ್ಲೂ ಇಂಗ್ಲೆಂಡ್‌ ಒಂದೂ ಗೋಲು ಬಿಟ್ಟುಕೊಡಲಿಲ್ಲ ಎನ್ನುವುದು ವಿಶೇಷ. ಕ್ರಾಸ್‌ ಓವರ್‌ನಲ್ಲಿ ಸ್ಪೇನ್‌ಗೆ ಮಲೇಷ್ಯಾ ಎದುರಾಗಲಿದೆ.

14-0 ದಾಖಲೆ ಜಯ ಸಾಧಿಸಿ ಕ್ವಾರ್ಟರ್‌ಗೆ ಡಚ್‌

ಭುವನೇಶ್ವರ: ದಾಖಲೆಯ 14-0 ಗೋಲುಗಳ ಅಂತರದಲ್ಲಿ ಚಿಲಿ ವಿರುದ್ಧ ಜಯಭೇರಿ ಬಾರಿಸಿದ 3 ಬಾರಿ ಚಾಂಪಿಯನ್‌ ನೆದರ್‌ಲೆಂಡ್‌್ಸ, 15ನೇ ಆವೃತ್ತಿ ಹಾಕಿ ವಿಶ್ವಕಪ್‌ನಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲೆರಡು ಪಂದ್ಯಗಳಲ್ಲೂ ಗೆದ್ದಿದ್ದ ನೆದರ್‌ಲೆಂಡ್‌್ಸ ಇದರೊಂದಿಗೆ ‘ಸಿ’ ಗುಂಪಿನಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನಿಯಾದರೆ, ಚಿಲಿ ಕೊನೆ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತು.

23ನೇ ರ‍್ಯಾಂಕಿಂಗ್‌‌ನ ಚಿಲಿ ವಿರುದ್ಧ ಆರಂಭದಲ್ಲೇ ಪ್ರಾಬಲ್ಯ ಸಾಧಿಸಿದ ನೆದರ್‌ಲೆಂಡ್‌್ಸ ಪೆನಾಲ್ಟಿ ಕಾರ್ನರ್‌ ಮೂಲಕವೇ 6 ಗೋಲು ದಾಖಲಿಸಿತು. 6ನೇ ನಿಮಿಷದಲ್ಲೇ ಗೋಲು ಖಾತೆ ತೆರೆದಿದ್ದ ತಂಡ 2ನೇ ಕ್ವಾರ್ಟರ್‌ನಲ್ಲಿ 4, 3ನೇ ಕ್ವಾರ್ಟರ್‌ 6, ಕೊನೆ ಕ್ವಾರ್ಟರ್‌ನಲ್ಲಿ 3 ಗೋಲು ಬಾರಿಸಿತು. ಗುರುವಾರ ನ್ಯೂಜಿಲೆಂಡ್‌ ವಿರುದ್ಧ 3-2 ಗೋಲುಗಳಿಂದ ಗೆದ್ದ ಮಲೇಷ್ಯಾ ಗುಂಪಿನಲ್ಲಿ 2ನೇ ಸ್ಥಾನ ಪಡೆಯಿತು. ಈ ಎರಡೂ ತಂಡಗಳು ಕ್ರಾಸ್‌ ಓವರ್ಸ್‌ ಹಂತ ಪ್ರವೇಶಿಸಿವೆ.

Hockey World cup ವೇಲ್ಸ್ ವಿರುದ್ಧ ಭಾರತಕ್ಕೆ 4-2 ಅಂತರದ ಗೆಲುವು, ದೇಶದೆಲ್ಲೆಡೆ ಸಂಭ್ರಮ

ಆಸೀಸ್‌ ದಾಖಲೆ ಪತನ: ವಿಶ್ವಕಪ್‌ನಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ ದಾಖಲೆ ಆಸ್ಪ್ರೇಲಿಯಾ ಹೆಸರಿನಲ್ಲಿತ್ತು. 2010ರಲ್ಲಿ ಆಸ್ಪ್ರೇಲಿಯಾ, ದ.ಆಫ್ರಿಕಾ ವಿರುದ್ಧ 12-0 ಅಂತರದಲ್ಲಿ ಜಯಿಸಿತ್ತು. ಆ ದಾಖಲೆಯನ್ನು ನೆದರ್‌ಲೆಂಡ್‌್ಸ ಮುರಿದಿದೆ.

ಕ್ವಾರ್ಟರ್‌ ಚಾನ್ಸ್‌ ಕೈಚೆಲ್ಲಿದ ಭಾರತ!

ಭುವನೇಶ್ವರ: ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ ವೇಲ್ಸ್‌ ವಿರುದ್ಧ ಕನಿಷ್ಠ 8-0 ಗೋಲುಗಳ ಗೆಲುವು ಅಗತ್ಯವಿತ್ತು. ಆದರೆ 5 ಪೆನಾಲ್ಟಿಕಾರ್ನರ್‌ ಅವಕಾಶಗಳನ್ನು ವ್ಯರ್ಥ ಮಾಡಿದ್ದಲ್ಲದೇ 2 ಗೋಲು ಸಹ ಬಿಟ್ಟುಕೊಟ್ಟ ಭಾರತ, 4-2ರ ಅಂತರದಲ್ಲಷ್ಟೇ ಗೆಲುವು ಸಾಧಿಸಲು ಯಶಸ್ವಿಯಾಯಿತು. ಈ ಫಲಿತಾಂಶದ ಪರಿಣಾಮ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಕ್ರಾಸ್‌ ಓವರ್‌(ಪ್ರಿ ಕ್ವಾರ್ಟರ್‌ ಫೈನಲ್‌) ಪಂದ್ಯವನ್ನು ಆಡಬೇಕಿದೆ.

‘ಡಿ’ ಗುಂಪಿನಲ್ಲಿದ್ದ ಭಾರತ ಆಡಿದ 3 ಪಂದ್ಯಗಳಲ್ಲಿ 2 ಜಯ, 1 ಡ್ರಾನೊಂದಿಗೆ ಒಟ್ಟು 7 ಅಂಕ ಕಲೆಹಾಕಿದರೆ, ಇಂಗ್ಲೆಂಡ್‌ ಸಹ 2 ಜಯ, 1 ಡ್ರಾನೊಂದಿಗೆ 7 ಅಂಕ ಪಡೆಯಿತು. ಆದರೆ ಭಾರತದ ಗೋಲು ವ್ಯತ್ಯಾಸ +4 ಇದ್ದರೆ, ಇಂಗ್ಲೆಂಡ್‌ +9 ಗೋಲು ವ್ಯತ್ಯಾಸ ಹೊಂದಿರುವ ಕಾರಣ ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿತು. 3ನೇ ಸ್ಥಾನಿ ಸ್ಪೇನ್‌ ಸಹ ಕ್ರಾಸ್‌ ಓವರ್‌ ಹಂತಕ್ಕೇರಿತು. 3 ಸೋಲು ಕಂಡ ವೇಲ್ಸ್‌ ತನ್ನ ಅಭಿಯಾನ ಕೊನೆಗೊಳಿಸಿತು.

ಕ್ವಾರ್ಟರ್‌ಗೇರಲು ಕಿವೀಸ್‌ ಚಾಲೆಂಜ್‌ ಗೆಲ್ಲಬೇಕು ಭಾರತ

ಜ.22ರಂದು ಕ್ರಾಸ್‌ ಓವರ್‌ ಪಂದ್ಯ ನಡೆಯಲಿದ್ದು, ‘ಡಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಭಾರತ ‘ಸಿ’ ಗುಂಪಿನಲ್ಲಿ 3ನೇ ಸ್ಥಾನ ಗಳಿಸಿದ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದ್ದು, ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ಎದುರಾಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್‌ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದ್ದು, ಆಡಿರುವ 104 ಪಂದ್ಯಗಳಲ್ಲಿ 58ರಲ್ಲಿ ಗೆದ್ದಿದೆ. 29ರಲ್ಲಿ ನ್ಯೂಜಿಲೆಂಡ್‌ ಗೆದ್ದಿದ್ದು, 17 ಪಂದ್ಯ ಡ್ರಾಗೊಂಡಿದೆ.

Latest Videos
Follow Us:
Download App:
  • android
  • ios