ಭುವನೇಶ್ವರ್‌(ಜ.19): ಭಾರತ ಹಾಕಿ ತಂಡ, ಶನಿವಾರದಿಂದ ಇಲ್ಲಿ ಆರಂಭವಾಗಿರುವ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

ಒಲಿಂಪಿಕ್‌ ಪೂರ್ವಭಾವಿ ಅಭ್ಯಾಸಕ್ಕಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಮನ್‌ಪ್ರೀತ್‌ ಪಡೆ, ವಿಶ್ವ ನಂ.3 ನೆದರ್‌ಲೆಂಡ್‌ ತಂಡವನ್ನು ಬಗ್ಗು ಬಡಿದಿದೆ. ಮೊದಲ ಪಂದ್ಯದಲ್ಲಿ ಭಾರತ, ನೆದರ್‌ಲೆಂಡ್‌ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ.

ಕಿವೀಸ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಭಾರತದ ಪರ ರುಪೀಂದರ್‌ ಸಿಂಗ್‌ (12, 46ನೇ ನಿ.), ಗುರ್ಜಂತ್‌ ಸಿಂಗ್‌ (1ನೇ ನಿ.), ಮನ್‌ದೀಪ್‌ ಸಿಂಗ್‌ (34ನೇ ನಿ.), ಲಲಿತ್‌ ಉಪಾಧ್ಯಾಯ (36ನೇ ನಿ.) ಗೋಲುಗಳಿಸಿದರು. ನೆದರ್‌ಲೆಂಡ್‌ ಪರ ಜಾನ್ಸನ್‌, ಜೆರೊನ್‌ ಗೋಲು ಬಾರಿಸಿದರು.