ಪ್ರೊ ಲೀಗ್‌ ಹಾಕಿ: ಇಂದು ಭಾರ​ತಕ್ಕೆ ಒಲಿಂಪಿಕ್ ಚಾಂಪಿಯನ್‌ ಬೆಲ್ಜಿಯಂ ಸವಾ​ಲು

ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ-ಬೆಲ್ಜಿಯಂ ಮುಖಾಮುಖಿ
ಕಳೆದ ವರ್ಷ 3ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊಂಡಿದ್ದ ಭಾರತ
ಬೆಲ್ಜಿಯಂಗೆ ತಾರಾ ಆಟಗಾರರ ಅನುಪಸ್ಥಿತಿ

Hockey Pro League Indian Mens team take on Olympic champions Belgium challenge kvn

ಲಂಡ​ನ್‌: 2022-23ರ ಆವೃ​ತ್ತಿಯ ಪುರು​ಷರ ಪ್ರೊ ಲೀಗ್‌ ಹಾಕಿ ಟೂರ್ನಿ​ಯಲ್ಲಿ ಶುಕ್ರ​ವಾರ ಭಾರತ ಹಾಗೂ ಬೆಲ್ಜಿಯಂ ತಂಡ​ಗಳು ಮುಖಾ​ಮುಖಿ​ಯಾ​ಗ​ಲಿವೆ. ಕಳೆದ ವರ್ಷ 3ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊಂಡಿದ್ದ ಭಾರತ ಈ ಬಾರಿ ಉತ್ತಮ ಆರಂಭ ಪಡೆ​ದಿದ್ದು, 8 ಪಂದ್ಯ​ಗ​ಳಲ್ಲಿ 5 ಗೆಲು​ವಿ​ನೊಂದಿಗೆ 19 ಅಂಕ ಸಂಪಾ​ದಿಸಿ ಅಗ್ರ​ಸ್ಥಾ​ನ​ದ​ಲ್ಲಿದೆ. ಆದರೆ ಕಳೆದ ಬಾರಿ ರನ್ನ​ರ್‌-ಅಪ್‌ ಸ್ಥಾನಿ​ಯಾ​ಗಿದ್ದ ಬೆಲ್ಜಿಯಂ ಟೂರ್ನಿ​ಯಲ್ಲಿ ಈವ​ರೆಗೆ 4 ಪಂದ್ಯ​ಗ​ಳ​ನ್ನಾ​ಡಿದ್ದು, ಕೇವಲ 6 ಅಂಕ​ದೊಂದಿಗೆ 7ನೇ ಸ್ಥಾನ​ದ​ಲ್ಲಿದೆ. ಕಳೆದ ವರ್ಷ ಉಭಯ ತಂಡ​ಗಳು 2 ಬಾರಿ ಮುಖಾ​ಮುಖಿ​ಯಾ​ಗಿದ್ದು, ಭಾರತ 1ರಲ್ಲಿ ಸೋತು, ಮತ್ತೊಂದು ಪಂದ್ಯ​ದಲ್ಲಿ ಡ್ರಾಗೆ ತೃಪ್ತಿ​ಪ​ಟ್ಟು​ಕೊಂಡಿ​ತ್ತು.

ಬೆಲ್ಜಿಯಂಗೆ ತಾರಾ ಆಟಗಾರರ ಅನುಪಸ್ಥಿತಿ: ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್‌ ಬೆಲ್ಜಿಯಂ ತಂಡವು ಈ ಬಾರಿ ತಾರ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ವಿನ್ಸೆಂಟ್‌ ವೆನಾಶ್‌, ಆರ್ಥರ್ ವ್ಯಾನ್ ಡುರೇನ್, ಅಲೆಕ್ಸಾಂಡರ್‌ ಹೆಂಡ್ರಿಕ್ಸ್‌, ಫ್ಲೋರೆಂಟ್‌ ವ್ಯಾನ್ ಆಬುಲ್, ಸೆಬಾಸ್ಟಿನ್‌ ಡೋಕಿಯರ್ ಇನ್ನೂ ಕ್ಲಬ್ ಪಂದ್ಯಗಳನ್ನು ಆಡುತ್ತಿರುವುದರಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಏಷ್ಯಾ​ಕಪ್‌ ಹಾಕಿ: ಭಾರ​ತಕ್ಕೆ 3-1 ಜಯ

ಸಲಾಲ್ಹ(ಒಮಾನ್‌): ಹಾಲಿ ಚಾಂಪಿ​ಯನ್‌ ಭಾರತ ತಂಡ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿ​ಸಿದೆ. ಮೊದಲ ಪಂದ್ಯ​ದಲ್ಲಿ ಚೈನೀಸ್‌ ತೈಪೆ​ಯನ್ನು ಬರೋ​ಬ್ಬರಿ 18-0 ಗೋಲು​ಗ​ಳಿಂದ ಮಣಿ​ಸಿದ್ದ ಭಾರತ ಗುರು​ವಾರ ‘ಬಿ’ ಗುಂಪಿನ 2ನೇ ಪಂದ್ಯ​ದಲ್ಲಿ ಜಪಾನ್‌ ವಿರುದ್ಧ 3-1ರಿಂದ ಜಯ​ಗ​ಳಿ​ಸಿತು. ಅರೈಜೀ​ತ್‌ ಸಿಂಗ್‌, ಶಾರ್ದಾನಂದ್‌ ಹಾಗೂ ಉತ್ತಮ್‌ ಸಿಂಗ್‌ ಭಾರ​ತದ ಪರ ತಲಾ 1 ಗೋಲು ಹೊಡೆ​ದರು. ಭಾರತ ಗುಂಪು ಹಂತದ ತನ್ನ 3ನೇ ಪಂದ್ಯವನ್ನು ಶನಿ​ವಾರ ಬದ್ಧ​ವೈರಿ ಪಾಕಿ​ಸ್ತಾನ ವಿರುದ್ಧ ಆಡಲಿದೆ.

ಹಾಕಿ: ಭಾರ​ತ ಮಹಿ​ಳಾ ತಂಡಕ್ಕೆ ಮತ್ತೆ ಸೋಲು

ಅಡಿಲೇಡ್‌: ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಮಹಿಳಾ ಹಾಕಿ ಸತತ ಸೋಲು​ಗಳಿಂದ ಕಂಗೆ​ಟ್ಟಿದೆ. ಆಸ್ಪ್ರೇ​ಲಿಯಾ ತಂಡದ ವಿರುದ್ಧ 3 ಪಂದ್ಯ​ಗಳ ಸರ​ಣಿ​ಯನ್ನು 0-2 ಅಂತ​ರ​ದಲ್ಲಿ ಕಳೆ​ದು​ಕೊಂಡಿದ್ದ ಭಾರತ, ಗುರು​ವಾರ ಆಸೀಸ್‌ ‘ಎ’ ತಂಡದ ವಿರುದ್ಧ 2-3 ಅಂತ​ರ​ದಲ್ಲಿ ಪರಾ​ಭ​ವ​ಗೊಂಡಿತು. 

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಮೋದಿ ಚಾಲನೆ; 10 ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟ

ನಾಲ್ಕನೇ ಕ್ವಾರ್ಟ​ರ್‌ಗೂ ಮುನ್ನ ಭಾರತ 0-3 ಅಂತ​ರ​ದಲ್ಲಿ ಹಿನ್ನಡೆ ಅನು​ಭ​ವಿ​ಸಿತ್ತು. ಆದರೆ ಸಲೀಮಾ ಟೇಟೆ​(40ನೇ ನಿಮಿ​ಷ) ಹಾಗೂ ಸಂಗೀತಾ ಕುಮಾ​ರಿ​(54ನೇ ನಿಮಿ​ಷ) ಗೋಲು ಬಾರಿಸಿ ಪ್ರತಿ​ರೋಧ ತೋರಿ​ದರೂ ಸೋಲು ತಪ್ಪಿ​ಸಲು ಸಾಧ್ಯ​ವಾ​ಗ​ಲಿಲ್ಲ. ‘ಎ’ ತಂಡದ ವಿರುದ್ಧ ಕೊನೆ ಪಂದ್ಯ​ವನ್ನು ಭಾರತ ಶನಿ​ವಾರ ಆಡ​ಲಿದೆ.

25 ವರ್ಷದಲ್ಲೇ ಮೊದ​ಲ ಬಾರಿ ರಾಫಾ, ಫೆಡ​ರ​ರ್‌ ಇಲ್ಲದೆ ಫ್ರೆಂಚ್‌ ಓಪ​ನ್‌​!

ಪ್ಯಾರಿ​ಸ್‌: 1998ರ ಬಳಿಕ ಅಂದರೆ 25 ವರ್ಷ​ಗ​ಳಲ್ಲೇ ಮೊದಲ ಬಾರಿ ಟೆನಿಸ್‌ ದಿಗ್ಗ​ಜ​ರಾದ ಸ್ವಿಜ​ರ್‌​ಲೆಂಡ್‌ನ ರೋಜರ್‌ ಫೆಡ​ರರ್‌ ಹಾಗೂ ಫ್ರಾನ್ಸ್‌ನ ರಾಫೆಲ್‌ ನಡಾಲ್‌ ಇಲ್ಲದೆ ಈ ಬಾರಿ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿ ನಡೆ​ಯ​ಲಿದೆ. 

ರೋಜರ್ ಫೆಡ​ರರ್‌ 1998ರಲ್ಲಿ ಫ್ರೆಂಚ್‌ ಓಪ​ನ್‌ ಪಾದಾ​ರ್ಪಣೆ ಮಾಡಿದ್ದು, ಕಳೆದ ವರ್ಷ ವೃತ್ತಿ​ಪರ ಟೆನಿ​ಸ್‌ಗೆ ನಿವೃತ್ತಿ ಘೋಷಿ​ಸಿ​ದ್ದಾರೆ. ಇನ್ನು 2005ರಿಂದ ಫ್ರೆಂಚ್‌ ಓಪನ್‌ ಆಡು​ತ್ತಿ​ರುವ ರಾಫೆಲ್‌ ನಡಾಲ್‌ ಗಾಯ​ದಿಂದಾಗಿ ಈ ಬಾರಿ ಕಣ​ಕ್ಕಿ​ಳಿ​ಯು​ತ್ತಿಲ್ಲ. 20 ಗ್ರ್ಯಾನ್‌​ಸ್ಲಾಂಗಳ ಒಡೆಯ ಫೆಡ​ರರ್‌ 2009ರಲ್ಲಿ ಏಕೈಕ ಬಾರಿ ಫ್ರೆಂಚ್‌ ಓಪನ್‌ ಗೆದ್ದಿದ್ದು, 22 ಗ್ರ್ಯಾನ್‌ಸ್ಲಾಂ ಜಯಿ​ಸಿ​ರುವ ನಡಾಲ್‌ ಫ್ರೆಂಚ್‌ ಓಪ​ನ್‌​ನಲ್ಲಿ ದಾಖ​ಲೆಯ 14 ಬಾರಿ ಚಾಂಪಿ​ಯನ್‌ ಆಗಿ​ದ್ದಾರೆ.

Latest Videos
Follow Us:
Download App:
  • android
  • ios