ಭಾರತ ಹಾಕಿ ತಂಡದ ಕ್ಯಾಪ್ಟನ್ ಮನ್‌ಪ್ರೀತ್ ಸಿಂಗ್ ವಿರುದ್ಧ ಮಾಜಿ ಕೋಚ್ ಮರಿನೆ ಗಂಭೀರ ಆರೋಪ!
ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮೇಲೆ ಮಾಜಿ ಕೋಚ್ ಸೋರ್ಡ್ ಮರಿನೆ ಆರೋಪ
ಯುವ ಆಟಗಾರನೊಬ್ಬನಿಗೆ ‘ಉತ್ತಮವಾಗಿ ಆಡುವುದನ್ನು ನಿಲ್ಲಿಸು’ ಎಂದಿದ್ದರಂತೆ ಮನ್‌ಪ್ರೀತ್
ತಮ್ಮ ಮುಂಬರುವ ಪುಸ್ತಕ ‘ವಿಲ್ ಪವರ್’ ಎನ್ನುವ ಭಾರತೀಯ ಹಾಕಿ ತಂಡದ ಕುರಿತು ಮರಿನೆ ಆರೋಪ
ಬೆಂಗಳೂರು(ಸೆ.18): ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು ಮಾಜಿ ಕೋಚ್ ಸೋರ್ಡ್ ಮರಿನೆ ವಿರುದ್ಧ ಕಾನೂನು ಸಮರಕ್ಕೆ ಸಿದ್ಧಗೊಂಡಿವೆ. ನೆದರ್‌ಲೆಂಡ್ಸ್ ನ ಮರಿನೆ ತಮ್ಮ ಮುಂಬರುವ ಪುಸ್ತಕ ‘ವಿಲ್ ಪವರ್’ ಎನ್ನುವ ಭಾರತೀಯ ಹಾಕಿ ತಂಡದ ಕುರಿತಾದ ಪುಸ್ತಕದಲ್ಲಿ ಪುರುಷರ ತಂಡದ ನಾಯಕ ಮನ್‌ಪ್ರೀತ್ ಸಿಂಗ್ 2018ರ ಕಾಮನ್‌ವೆಲ್ತ್ ಗೇಮ್ಸ್ ವೇಳೆ ಯುವ ಆಟಗಾರನೊಬ್ಬನಿಗೆ ‘ಉತ್ತಮವಾಗಿ ಆಡುವುದನ್ನು ನಿಲ್ಲಿಸು’ ಎಂದು ಹೇಳಿದ್ದರು.
ಮನ್‌ಪ್ರೀತ್ ತಮ್ಮ ಸ್ನೇಹಿತನೊಬ್ಬನನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ಹಾಕಿದ್ದರು ಎಂದು ಬರೆದಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಬಳಿಕ ಸೋರ್ಡ್ ಮರಿನೆ ಅವರನ್ನು ಪುರುಷರ ತಂಡದ ಕೋಚ್ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಬಳಿಕ ಅವರು ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ತಮ್ಮ ಪುಸ್ತಕದಲ್ಲಿ ಹಾಕಿ ಇಂಡಿಯಾದ ಮಾಜಿ ಅಧ್ಯಕ್ಷ ನರೇಂದ್ರ ಬಾತ್ರಾಗೆ ನಾಯಕಿ ರಾಣಿ ರಾಂಪಾಲ್ ಬಿಟ್ಟು ಇನ್ಯಾರ ಹೆಸರೂ ಗೊತ್ತಿರಲಿಲ್ಲ ಎಂದೂ ಬರೆದಿದ್ದಾರೆ.
ಡೇವಿಸ್ ಕಪ್: ನಾರ್ವೆ ವಿರುದ್ಧ ಭಾರತಕ್ಕೆ ಸೋಲು
ಲಿಲ್ಲೆಹ್ಯಾಮರ್: ಯುಎಸ್ ಓಪನ್ ರನ್ನರ್-ಅಪ್ ಕ್ಯಾಸ್ಪರ್ ರುಡ್‌ರ ಉಪಸ್ಥಿತಿಯೊಂದಿಗೆ ಬಲಿಷ್ಠಗೊಂಡಿದ್ದ ನಾರ್ವೆ ತಂಡ ಭಾರತವನ್ನು ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವ ಗುಂಪು-1ರ ಪಂದ್ಯದಲ್ಲಿ 3-1 ಅಂತರದಲ್ಲಿ ಸುಲಭವಾಗಿ ಬಗ್ಗುಬಡಿಯಿತು. ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಭಾರತದ ಯೂಕಿ ಭಾಂಬ್ರಿ ಹಾಗೂ ಸಾಕೇತ್ ಮೈನೇನಿ ಜೋಡಿ ಕ್ಯಾಸ್ಪರ್ ಹಾಗೂ ವಿಕ್ಟರ್ ದುರಾಸೊವಿಚ್ ವಿರುದ್ಧ 3-6, 6-3, 3-6 ಸೆಟ್‌ಗಳಲ್ಲಿ ಸೋಲುಂಡಿತು.
15 ವರ್ಷದ ಬೆಂಗಳೂರು ಬಾಲಕ ಪ್ರಣವ್ ಆನಂದ್ ಈಗ ಚೆಸ್ ಗ್ರ್ಯಾಂಡ್ ಮಾಸ್ಟರ್..!
ಶುಕ್ರವಾರ ನಡೆದಿದ್ದ ಸಿಂಗಲ್ಸ್ ಪಂದ್ಯಗಳಲ್ಲೂ ಭಾರತ ಪರಭಾವಗೊಂಡಿತ್ತು. ಮೊದಲ ಪಂದ್ಯದಲ್ಲಿ ಪ್ರಜ್ನೇಶ್ ಗುಣೇಶ್ವರ್ 1-6, 4-6 ಸೆಟ್‌ಗಳಲ್ಲಿ ವಿಶ್ವ ನಂ.2 ಕ್ಯಾಸ್ಪರ್ ರುಡ್ ವಿರುದ್ಧ ಸೋತರೆ, 2ನೇ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್ 1-6, 4-6ರಲ್ಲಿ ದುರಾಸೊವಿಚ್‌ಗೆ ಶರಣಾದರು. ರಿವರ್ಸ್ ಸಿಂಗಲ್ಸ್ ಪಂದ್ಯಗಳು ಔಪಚಾರಿಕವೆನಿಸಿದವು. ಶನಿವಾರ ನಡೆದ ಪಂದ್ಯದಲ್ಲಿ ಸುಮಿತ್ ನಗಾಲ್ 6-2, 6-1ರಲ್ಲಿ ಲುಕಾಸ್ ಹೆಲುಮ್ ವಿರುದ್ಧ ಜಯಗಳಿಸಿದರು. ಈ ಸೋಲಿನಿಂದಾಗಿ 2023ರ ಡೇವಿಸ್ ಕಪ್‌ನಲ್ಲಿ ಭಾರತ ವಿಶ್ವ ಗುಂಪು-1ರ ಪ್ಲೇ-ಆಫ್‌್ಸನಲ್ಲಿ ಆಡಬೇಕಿದೆ.
ಡುರಾಂಡ್ ಕಪ್: ಪ್ರಶಸ್ತಿ ನಿರೀಕ್ಷೆಯಲ್ಲಿ ಬಿಎಫ್‌ಸಿ
ಕೋಲ್ಕತಾ: ಏಷ್ಯಾದ ಅತಿ ಹಳೆಯ ಫುಟ್ಬಾಲ್ ಟೂರ್ನಿ ಡುರಾಂಡ್ ಕಪ್‌ನ ಫೈನಲ್ ಭಾನುವಾರ ನಡೆಯಲಿದ್ದು, ಬೆಂಗಳೂರು ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ಪ್ರಶಸ್ತಿಗೆ ಸೆಣಸಲಿವೆ. ಭಾರತದ ಬಹುತೇಕ ಟೂರ್ನಿಗಳಲ್ಲಿ ಚಾಂಪಿಯನ್ ಆಗಿರುವ ಬಿಎಫ್‌ಸಿ ಚೊಚ್ಚಲ ಬಾರಿಗೆ ಡುರಾಂಡ್ ಕಪ್ ಗೆಲ್ಲಲು ಕಾತರಿಸುತ್ತಿದೆ. ಐಎಸ್‌ಎಲ್ ಸೇರಿ 6 ಟ್ರೋಫಿಗಳನ್ನು ಗೆದ್ದಿರುವ ಬಿಎಫ್‌ಸಿ, 7ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಪಂದ್ಯ: ಸಂಜೆ 6ಕ್ಕೆ
ವಿಶ್ವ ಕುಸ್ತಿ: ಭಜರಂಗ್‌ಗೆ ಕ್ವಾರ್ಟರ್‌ನಲ್ಲಿ ಸೋಲು
ಬೆಲ್ಗೆ್ರೕಡ್: ಒಲಿಂಪಿಕ್ಸ್ ಕಂಚಿ ವಿಜೇತ ಭಾರತದ ಭಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ 65 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದರು. 2 ಬಾರಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಭಜರಂಗ್, ಅಮೆರಿಕದ 23 ವರ್ಷದ ಯಿಯಾನಿ ಡಿಯಾಕೊಮಿಹಾಲಿಸ್ ವಿರುದ್ಧ 0-10ರಲ್ಲಿ ಸೋಲು ಕಂಡರು. ಪ್ರಿ ಕ್ವಾರ್ಟರ್‌ನಲ್ಲಿ ಭಜರಂಗ್ ಕ್ಯೂಬಾದ ಆಲಿಯಾಂಡ್ರೊ ವಿರುದ್ಧ 5-4ರಲ್ಲಿ ಗೆದ್ದಿದ್ದರು.