ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಶುಭಾರಂಭಸತತ 3 ಗೋಲು ಬಾರಿಸಿ ಮುನ್ನಡೆಯಲ್ಲಿದ್ದ ಕಿವೀಸ್‌ಗೆ ಶಾಕ್ ನೀಡಿದ ಭಾರತಭಾರತ ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಸ್ಪೇನ್ ಸವಾಲು

ಭುವನೇಶ್ವರ್‌(ಅ.29): 2022​-23ರ ಪ್ರೊ ಲೀಗ್‌ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ 4-3 ಗೋಲುಗಳಿಂದ ರೋಚಕ ಗೆಲುವು ಸಾಧಿಸಿತು. ಮಂದೀಪ್‌ 13ನೇ ನಿಮಿಷದಲ್ಲಿ ಭಾರತ ಪರ ಮೊದಲ ಗೋಲು ಬಾರಿಸಿದರು. ಆದರೆ ನ್ಯೂಜಿಲೆಂಡ್‌ ಸತತ 3 ಗೋಲು ಬಾರಿಸಿ ಮುನ್ನಡೆ ಪಡೆಯಿತು. ಬಳಿಕ 41ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌, 51 ಹಾಗೂ 56ನೇ ನಿಮಿಷದಲ್ಲಿ ಮನ್‌ಪ್ರೀತ್‌ ಗೋಲು ಬಾರಿಸಿ ಜಯಕ್ಕೆ ಕಾರಣರಾದರು.

ಅರಂಭದಲ್ಲಿ 1-3 ಗೋಲುಗಳಿಂದ ಹಿನ್ನೆಡೆ ಅನುಭವಿಸಿದ್ದ ಭಾರತ ಹಾಕಿ ತಂಡವು, ಮೂರನೇ ಕ್ವಾರ್ಟರ್ ಅಂತ್ಯದ ವೇಳಗೆ 2-3 ಗೋಲುಗಳ ಹಿನ್ನೆಡೆ ಅನುಭವಿಸಿತ್ತು. ಆದರೆ ಮನ್‌ದೀಪ್ ಸಿಂಗ್ ಕೊನೆಯ 10 ನಿಮಿಷದಲ್ಲಿ ಎರಡು ಗೋಲುಗಳನ್ನು ಬಾರಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇನ್ನು ಕೊನೆಯ 34 ಸೆಕೆಂಡ್‌ಗಳಲ್ಲಿ ಭಾರತ ಮೂರು ಪೆನಾಲ್ಟಿಕಾರ್ನರ್ ರಕ್ಷಿಸಿಕೊಳ್ಳುವಲ್ಲಿಯೂ ಯಶಸ್ವಿಯಾಯಿತು. ಈ ಮೂಲಕ ಭಾರತ ರೋಚಕವಾಗಿಯೇ ಶುಭಾರಂಭ ಮಾಡಿದೆ. ಭಾರತ ಭಾನುವಾರ ತನ್ನ 2ನೇ ಪಂದ್ಯವನ್ನು ಸ್ಪೇನ್‌ ವಿರುದ್ಧ ಆಡಲಿದೆ.

Scroll to load tweet…

ಜೋಹರ್‌ ಕಪ್‌: ಭಾರತ 7ನೇ ಬಾರಿ ಫೈನಲ್‌ಗೆ

ಜೋಹರ್‌ ಬಹ್ರು(ಮಲೇಷ್ಯಾ): ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ ಸತತ 3ನೇ ಹಾಗೂ ಒಟ್ಟಾರೆ 7ನೆ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಶನಿವಾರ ಆಸ್ಪ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಶುಕ್ರವಾರ ಗ್ರೇಟ್‌ ಬ್ರಿಟನ್‌ ವಿರುದ್ಧದ ಪಂದ್ಯದಲ್ಲಿ ಭಾರತ 5-5 ಗೋಲುಗಳ ಡ್ರಾ ಸಾಧಿಸಿತು. ಮಲೇಷ್ಯಾ-ಜಪಾನ್‌ ಪಂದ್ಯ ಡ್ರಾ ಹಾಗೂ ದ.ಆಫ್ರಿಕಾ ವಿರುದ್ಧ ಆಸ್ಪ್ರೇಲಿಯಾ ಗೆದ್ದಿದ್ದು ಭಾರತ ಫೈನಲ್‌ಗೇರಲು ನೆರವಾಯಿತು.

ಪ್ರೊ ಕಬಡ್ಡಿ: ತಲೈವಾಸ್‌ಗೆ 2ನೇ ಜಯ

ಪುಣೆ: 9ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 2ನೇ ಹಂತದ ಪಂದ್ಯಗಳು ಶುಕ್ರವಾರ ಪುಣೆಯಲ್ಲಿ ಆರಂಭವಾಗಿದ್ದು, ಆರಂಭಿಕ ಪಂದ್ಯದಲ್ಲಿ ಜೈಪುರ ಪಿಂಕ್‌ಪ್ಯಾಂಥ​ರ್ಸ್‌ ವಿರುದ್ಧ ತಮಿಳ್‌ ತಲೈವಾಸ್‌ 38-27 ಅಂಕಗಳಿಂದ ಗೆಲುವು ಸಾಧಿಸಿದೆ. ತಲೈವಾಸ್‌ 7 ಪಂದ್ಯಗಳಲ್ಲಿ 2ನೇ ಜಯ ಕಂಡರೆ, ಜೈಪುರಕ್ಕೆ ಇದು ಸತತ 2ನೇ ಸೋಲು.

ವಿಲ್ ಯು ಮ್ಯಾರಿ ಮಿ? ಭಾರತ ನೆದರ್ಲೆಂಡ್ ಪಂದ್ಯದ ನಡುವೆ ಗೆಳತಿಗೆ ಪ್ರೇಮ ನಿವೇದನೆ!

ಆರಂಭದಲ್ಲೇ ಜೈಪುರ ಮೇಲೆ ಸವಾರಿ ಮಾಡಿದ ತಲೈವಾಸ್‌ ಮೊದಲಾರ್ಧದಲ್ಲಿ 20-8 ಅಂಕಗಳಿಂದ ಮುನ್ನಡೆ ಗಳಿಸಿತ್ತು. ಕೊನೆ 10 ನಿಮಿಷದಲ್ಲಿ ಜೈಪುರ ತೀವ್ರ ಹೋರಾಟ ಪ್ರದರ್ಶಿಸಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ನರೇಂದ್ರ 13 ರೈಡ್‌ ಅಂಕದೊಂದಿಗೆ ತಲೈವಾಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶುಕ್ರವಾರದ ಹರ್ಯಾಣ ಸ್ಟೀಲರ್ಸ್‌-ಪುಣೇರಿ ಪಲ್ಟನ್‌ ಪಂದ್ಯ 27-27 ಅಂಕಗಳಿಂದ ಟೈ ಆಯಿತು.

ಇಂದಿನ ಪಂದ್ಯಗಳು: 
ಬೆಂಗಳೂರು ಬುಲ್ಸ್‌-ದಬಾಂಗ್‌ ಡೆಲ್ಲಿ, ಸಂಜೆ 7.30ಕ್ಕೆ
ತೆಲುಗು ಟೈಟಾನ್ಸ್‌-ಗುಜರಾತ್‌, ರಾತ್ರಿ 8.30ಕ್ಕೆ
ಯು ಮುಂಬಾ-ಬೆಂಗಾಲ್‌, ರಾತ್ರಿ 9.30ಕ್ಕೆ

ಇಂದು ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್‌ ಟೂರ್ನಿ

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಬಿಎ)ಯು ಸ್ಟೇಟ್‌ ಅಸೋಸಿಯೇಷನ್‌ ಕಪ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಅನ್ನು ಅ.29ರಿಂದ ನ.5ರ ವರೆಗೆ ಆಯೋಜಿಸುತ್ತಿದೆ. ಪಂದ್ಯಗಳು ನಗರದ ಕಂಠೀರವ ಕ್ರೀಡಾಂಗಣದದಲ್ಲಿ ನಡೆಯಲಿದ್ದು, ಪುರುಷರ ವಿಭಾಗದಲ್ಲಿ 72, ಮಹಿಳಾ ವಿಭಾಗದಲ್ಲಿ 36 ತಂಡಗಳು ಪಾಲ್ಗೊಳ್ಳಲಿವೆ ಎಂದು ಕೆಎಸ್‌ಬಿಬಿಎ ತಿಳಿಸಿದೆ.