Asianet Suvarna News Asianet Suvarna News

ಕೊಡವ ಕೌಟುಂಬಿಕ ಹಾಕಿ: ಚೋಕಿರ, ಅಜ್ಜಮಾಡ ತಂಡಗಳಿಗೆ ಗೆಲುವು

ಜನರಲ್‌ ಕೆ.ಎಸ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ
ತೀತಮಾಡ, ಪಳಂಗಂಡ, ಮುಕ್ಕಾಟಿರ ತಂಡಗಳ ಜಯಭೇರಿ
ಮುಂದಿನ ಹಂತಕ್ಕೆ 20 ತಂಡಗಳು ಮುಂದಿನ ಸುತ್ತಿಗೆ ಲಗ್ಗೆ

Appachettolanda Hockey Festival Chokira Ajjamada Team Wins enters next round kvn
Author
First Published Mar 30, 2023, 9:54 AM IST

- ದುಗ್ಗಳ ಸದಾನಂದ, ಕನ್ನಡಪ್ರಭ

ನಾಪೋಕ್ಲು(ಮಾ.30): ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್‌ ಕೆ.ಎಸ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಬುಧವಾರದ ಪಂದ್ಯಗಳಲ್ಲಿ ತೀತಮಾಡ, ಪಳಂಗಂಡ, ಮುಕ್ಕಾಟಿರ(ಕಡಗದಾಳು), ಕುಂಡ್ಯೋಳಂಡ, ಅಮ್ಮಣಿಚಂಡ, ಚೋಕಿರ, ಮುಕ್ಕಾಟಿರ (ಹರಿಹರ), ಕೊಕ್ಕಂಡ, ಅಂಜಪರವಂಡ,ಪೆಮ್ಮಂಡ, ಚೊಟ್ಟೆಯಂಡಮಾಡ, ಅಜ್ಜಮಾಡ, ಕೂತಂಡ, ಬೋವೇರಿಯಂಡ, ಮಾತ್ರಂಡ, ಮಾಚಿಮಾಡ, ಚೆರುಮಂದಂಡ, ಬೊಳ್ಳೆಪಂಡ, ಕರವಟ್ಟಿರ, ಪಾಲೆಯಡ ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದವು.

ಮೈದಾನ ಒಂದರಲ್ಲಿ ನಡೆದ ಪಂದ್ಯದಲ್ಲಿ ತೀತಿಮಾಡ ತಂಡವು ಮಾಚಂಗಡ ತಂಡದ ವಿರುದ್ಧ 1- 0 ಅಂತರದ ಜಯ ಸಾಧಿಸಿತು. ಪಳಂಗಂಡ ತಂಡವು ಅಪ್ಪುಮಣಿಯಂಡ ತಂಡದ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರೆ, ಅಮ್ಮಣಿಚಂಡ ತಂಡ ನಂಬುಡಮಂಡ ತಂಡದ ವಿರುದ್ಧ 3-0 ಅಂತರದ ಜಯ ಸಾಧಿಸಿತು. ಮುಕ್ಕಾಟಿರ (ಕಡಗದಾಳು) ತಂಡವು ಚೆಪ್ಪುಡಿರ ತಂಡದ ವಿರುದ್ಧ 1- 0 ಅಂತರದಿಂದ, ಕುಂಡ್ಯೋಳಂಡ ತಂಡ ಪೆಬ್ಬೆಟ್ಟಿರ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿ ಮುನ್ನಡೆ ಪಡೆದವು. ಚೋಕಿರ ತಂಡ ತಾತಂಡ ತಂಡದ ವಿರುದ್ಧ 4- 3 ಅಂತರದಿಂದ ಗೆಲುವು ಸಾಧಿಸಿದರೆ, ಮುಕ್ಕಾಟಿರ( ಹರಿಹರ) ತಂಡವು ಮಂಡೇಟಿರ ವಿರುದ್ಧ 5-3 ಅಂತರದ ಗೆಲುವು ಸಾಧಿಸಿತು.

ಮೈದಾನ ಎರಡರಲ್ಲಿ ಕೊಕ್ಕಂಡ ತಂಡವು ಬೊಳ್ಳಚೆಟ್ಟಿರ ತಂಡದ ವಿರುದ್ಧ 1- 0 ಅಂತರದಿಂದ, ಅಂಜಪರವಂಡ ತಂಡವು ಪುಲಿಯಂಡ ತಂಡದ ವಿರುದ್ಧ 3- 0 ಅಂತರದಿಂದ, ಪೆಮ್ಮಂಡ ತಂಡವು ಕನ್ನಡ ತಂಡದ ವಿರುದ್ಧ 4- 0 ಅಂತರದಿಂದ ಹಾಗೂ ಚೊಟ್ಟೆಯಂಡಮಾಡ ತಂಡವು ಸೋಮೆಯಂಡ ತಂಡದ ವಿರುದ್ಧ 1- 0 ಗೋಲುಗಳ ಅಂತರದಿಂದ, ಅಜ್ಜಮಾಡ ನುಚ್ಚುಮಣಿಯಂಡ ತಂಡದ ವಿರುದ್ಧ 3-1 ಅಂತರದ ಜಯ ಸಾಧಿಸಿತು. ಕೂತಂಡ ತಂಡವು ಕಾಂಗೀರ ತಂಡದ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿತು.

ಗಣಪತಿ ಹ್ಯಾಟ್ರಿಕ್‌ ಗೋಲು: ಅಪ್ಪುಮಣಿರಯಂಡಕ್ಕೆ ಜಯ

ಬೋವೇರಿಯಂಡ ತಂಡವು ಐಚಂಡ ತಂಡದ ವಿರುದ್ಧ 4- 2 ಅಂತರದಿಂದ, ಮಾತ್ರಂಡ ತಂಡವು ಅಪ್ಪಚ್ಚಿರ ತಂಡದ ವಿರುದ್ಧ 3- 2 ಅಂತರದಿಂದ, ಮಾಚಿಮಂಡ ತಂಡವು ಅಳಮೇಂಗಡ ತಂಡದ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿ ಮುನ್ನಡೆ ಪಡೆದವು. ಕಾಳಂಗಡ ತಂಡದ ವಿರುದ್ಧ ಚೆರುಮಂದಂಡ ತಂಡವು 2-1 ಅಂತರದಿಂದ ಜಯ ಸಾಧಿಸಿದರೆ ಬೊಳ್ಳೆ ಪಂಡ ತಂಡವು ಕೋಟೆರ ತಂಡದ ವಿರುದ್ಧ 5-0 ಅಂತರದಿಂದ ಜಯಸಾಧಿಸಿತು.ಕರವಟ್ಟಿರ ತಂಡಕ್ಕೆ ಕಂಬೇಯಂಡ ತಂಡದ ವಿರುದ್ದ 4-3 ಅಂತರದ ಜಯ ಲಭಿಸಿದರೆ ಪಾಲಯೆಡ ತಂಡವು ಬಡ್ಡಿದ ತಂಡದ ವಿರುದ್ಧ 1- 0 ಅಂತರದ ಜಯ ಸಾಧಿಸಿತು.

ರಾಷ್ಟ್ರೀಯ ಮಾರ್ಷಲ್‌ ಆರ್ಚ್‌ ಚಾಂಪಿಯನ್‌ ಮಂಡೇಟಿರ ಭುವನ್‌ ಭೋಜಣ್ಣ ತಮ್ಮ ತಂಡದ ಪರವಾಗಿ ಗೋಲ್‌ ಕೀಪರ್‌ ಆಗಿ ಆಟವಾಡಿ ಗಮನ ಸೆಳೆದರು.

ಇಂದಿನ ಪಂದ್ಯಗಳು

ಮೈದಾನ ಒಂದು

8.30ಕ್ಕೆ ಮಾತಂಡ - ಚೇನಂಡ

10:30ಕ್ಕೆ ಮಂಡೇಪಂಡ - ಕಡೇಮಾಡ

11.30ಕ್ಕೆ ಕುಪ್ಪಂಡ (ಕೈಕೇರಿ) - ಬಿದ್ದಾಟಂಡ

12.30ಕ್ಕೆ ಪುಟ್ಟಿಚಂಡ - ಕಾವಡಿಚಂಡ

1.30ಕ್ಕೆ ಬಲ್ಲಚಂಡ - ಪಟ್ಟಡ

2.30ಕ್ಕೆ ಕಲ್ಯಾಟಂಡ - ಕೋಣಿಯಂಡ

3.30ಕ್ಕೆ ನಾಪಂಡ - ಚೆಂದಂಡ

ಮೈದಾನ 2

8:30ಕ್ಕೆ ಅದೇಂಗಡ - ಪುಲ್ಲಂಗಡ

9.30ಕ್ಕೆ ಕಂಬೀರಂಡ-ಮಚ್ಚಾರಂಡ

10.30ಕ್ಕೆ ಕಳ್ಳಿಚಂಡ-ಕಂಗಂಡ

11.30ಕ್ಕೆ ಕರವಂಡ-ಕರಿನೆರವೆಂಡ

12.30ಕ್ಕೆ ಬೊಳ್ಳಂಡ-ಅಪ್ಪಡೇರಂಡ

1.30ಕ್ಕೆ ಮನೆಯಪಂಡ-ಚೀಯಕಪೂವಂಡ

2:30ಕ್ಕೆ ಕುಲ್ಲಚಂಡ-ಬೊಟ್ಟೋಳಂಡ

3.30ಕ್ಕೆ ಚಪ್ಪಂಡ-ನಾಳಿಯಂಡ

ಮೈದಾನ 3

8:30ಕ್ಕೆ ಬಿದ್ದಂಡ -ಅರೆಯಡ

9.30ಕ್ಕೆ ಪಟ್ಟಮಾಡ-ಮಣವಟ್ಟೀರ

10:30 ಕ್ಕೆ ಕೊಂಗೇಟಿರ-ಬೇರೆರ

11:30ಕ್ಕೆ ಮೇರಿಯಂಡ-ಕುಮ್ಮಂಡ

12..30ಕ್ಕೆ ಕೋಡೀರ-ವಾಟೇರಿರ

1.30ಕ್ಕೆ ಎಳ್ತಂಡ-ಮುಂಡಚಾಡಿರ

2.30ಕ್ಕೆ ಬೊಳಕಾರಂಡ-ಕೇಲೆಟೀರ

3.30ಕ್ಕೆ ಅಲ್ಲುಮಾಡ-ಅಚ್ಚಪಂಡ
 

Follow Us:
Download App:
  • android
  • ios