Asianet Suvarna News Asianet Suvarna News

ಕೊಡವ ಹಾಕಿ ಕಪ್‌ಗೆ ದಾಖಲೆಯ 336 ತಂಡಗಳು ಭಾಗಿ: ಆಯೋಜಕರು

4 ವರ್ಷಗಳ ಬಳಿಕ ಕೊಡವ ಕಪ್ ಹಾಕಿ ಟೂರ್ನಿ ಆಯೋಜನೆಗೆ ಭರ್ಜರಿ ಸಿದ್ದತೆ
ಈ ಬಾರಿ ಕೂಟದಲ್ಲಿ ಬರೋಬ್ಬರಿ 336 ಹಾಕಿ ತಂಡಗಳು ಭಾಗಿ
2018ರಲ್ಲಿ 329 ಹಾಕಿ ತಂಡಗಳು ಪಾಲ್ಗೊಂಡಿದ್ದವು

336 team participate in Kodava Hockey Festival Confirms tournament organizers kvn
Author
First Published Mar 10, 2023, 8:29 AM IST

ಮಡಿಕೇರಿ(ಮಾ.10) ಪ್ರತಿ​ಷ್ಠಿತ ಕೊಡವ ಕಪ್‌ ಹಾಕಿ ಟೂರ್ನಿ 4 ವರ್ಷ​ಗಳ ಬಳಿಕ ಮತ್ತೆ ಆರಂಭ​ಗೊ​ಳ್ಳು​ತ್ತಿದ್ದು, ಅಪ್ಪಚೆಟ್ಟೋಳಂಡ ಕುಟುಂಬ ಆಯೋ​ಜಿ​ಸಲಿರುವ ಟೂರ್ನಿ​ಯಲ್ಲಿ ಈ ಬಾರಿ ದಾಖ​ಲೆಯ 336 ತಂಡ​ಗಳು ಪಾಲ್ಗೊ​ಳ್ಳ​ಲಿವೆ. 2018ರಲ್ಲಿ 329 ತಂಡಗಳು ಆಡಿದ್ದವು ಎಂದು ಟೂರ್ನಿಯ ಸಂಚಾಲಕ ಮನು ಮುತ್ತಪ್ಪ ತಿಳಿ​ಸಿ​ದ್ದಾ​ರೆ.

ನಗ​ರ​ದಲ್ಲಿ ಗುರುವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, 23ನೇ ಆವೃತ್ತಿಯ ‘ಹಾಕಿ ನಮ್ಮೆ’ ಮಾರ್ಚ್‌ 18ರಿಂದ ಏಪ್ರಿಲ್ 9ರ ವರೆಗೂ ನಾಪೋ​ಕ್ಲು​ವಿನ 3 ಕ್ರೀಡಾಂಗ​ಣ​ಗ​ಳಲ್ಲಿ ನಡೆ​ಯ​ಲಿದೆ. 5,376 ಆಟ​ಗಾ​ರರು ಪಾಲ್ಗೊ​ಳ್ಳ​ಲಿ​ದ್ದಾ​ರೆ. ಭಾರತ ಕಿರಿ​ಯರು ಹಾಗೂ ಕರ್ನಾ​ಟಕ ತಂಡದ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗ​ಲಿದೆ ಎಂದರು. 

ಕೊಡಗಿನಲ್ಲಿ ಹಾಕಿ ಅಭಿವೃದ್ಧಿಗೆ 30 ಶಾಲೆಗಳಲ್ಲಿ ಹುಲ್ಲಿನ ಮೈದಾನ ಸಿದ್ಧಪಡಿಸುವ ಗುರಿ ಇದೆ. ಟೂರ್ನಿಯ ಮೂಲಕ ಸಂಗ್ರ​ಹ​ವಾದ ನಿಧಿ​ಯಲ್ಲಿ ವೃದ್ಧರ ಆರೈಕೆ ಕೇಂದ್ರ, ಅನಾ​ಥಾ​ಶ್ರ​ಮ​ಗ​ಳಿಗೆ ನೆರವು ನೀಡ​ಲಾ​ಗು​ತ್ತದೆ. ಟೂರ್ನಿ​ಯಲ್ಲಿ 24 ಉದ​ಯೋ​ನ್ಮುಖ ಆಟ​ಗಾ​ರ​ರನ್ನು ಗುರು​ತಿ​ಸಿ ಅವ​ರಿಗೆ ವಿಶೇಷ ತರ​ಬೇತಿ ಕೂಡಾ ನೀಡ​ಲಿ​ದ್ದೇವೆ ಎಂದು ತಿಳಿ​ಸಿ​ದರು.

ಹಾಕಿ: ಭಾರತಕ್ಕೆ ಇಂದು ಜರ್ಮನಿ ಎದುರಾಳಿ

ರೂರ್ಕೆ​ಲಾ: 2022-23ರ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿ​ಯಲ್ಲಿ ಆತಿ​ಥೇಯ ಭಾರತ ಶುಕ್ರ​ವಾರ ವಿಶ್ವ ಚಾಂಪಿ​ಯನ್‌ ಜರ್ಮನಿ ವಿರುದ್ಧ ಸೆಣ​ಸಾ​ಡ​ಲಿದೆ. ಭಾರತ ಲೀಗ್‌​ನಲ್ಲಿ ಆಡಿ​ರುವ 4 ಪಂದ್ಯ​ಗ​ಳ​ಲ್ಲಿ 2 ಜಯ 1 ಡ್ರಾ, 1 ಸೋಲಿ​ನೊಂದಿಗೆ 8 ಅಂಕ ಪಡೆದು 4ನೇ ಸ್ಥಾನ​ದ​ಲ್ಲಿದ್ದು, ಅಷ್ಟೇ ಅಂಕ ಹೊಂದಿ​ರು​ವ ಜರ್ಮನಿ 5ನೇ ಸ್ಥಾನ​ದ​ಲ್ಲಿದೆ. 

ಕಳೆದ ಆವೃ​ತ್ತಿ​ಯಲ್ಲಿ 3ನೇ ಸ್ಥಾನ ಪಡೆ​ದಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿದ್ದು, ಮಾ.13ರಂದು ಜರ್ಮನಿ ವಿರು​ದ್ಧವೇ ಮತ್ತೊಂದು ಪಂದ್ಯ​ವ​ನ್ನಾ​ಡ​ಲಿದೆ. ಬಳಿಕ ಆಸ್ಪ್ರೇ​ಲಿಯಾ ವಿರುದ್ಧ (ಮಾ.12 ಮತ್ತು 15) ಸೆಣ​ಸಾ​ಡ​ಲಿದೆ. ಈ ಎಲ್ಲಾ ಪಂದ್ಯ​ಗಳು ರೂರ್ಕೆಲಾದಲ್ಲಿ ನಡೆಯಲಿದೆ.

ಮಹಿಳಾ ಟೆನಿಸ್‌: ಕ್ವಾರ್ಟ​ರ್‌ ತಲು​ಪಿದ ರೈನಾ, ಋುತು​ಜಾ

ಬೆಂಗ​ಳೂ​ರು: ಐಟಿಎಫ್‌ ಬೆಂಗಳೂರು ಮಹಿಳಾ ಟೆನಿಸ್‌ ಟೂರ್ನಿ​ಯಲ್ಲಿ ಭಾರ​ತದ ತಾರಾ ಟೆನಿ​ಸಿ​ಗ​ರಾದ ಅಂಕಿತಾ ರೈನಾ, ಋುತುಜಾ ಭೋಸಲೆ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ನಗ​ರದ ಕೆಎ​ಸ್‌​ಎ​ಲ್‌​ಟಿಎ ಕ್ರೀಡಾಂಗ​ಣ​ದಲ್ಲಿ ನಡೆ​ಯು​ತ್ತಿರುವ ಟೂರ್ನಿಯ ಮಹಿಳಾ ಸಿಂಗ​ಲ್ಸ್‌​ನಲ್ಲಿ ಗುರು​ವಾರ 4ನೇ ಶ್ರೇಯಾಂಕಿತ ಅಂಕಿತಾ, ಥಾಯ್ಲೆಂಡ್‌ನ ಲಾನ್‌​ಲನಾ ವಿರುದ್ಧ 6-2, 6-1 ನೇರ ಸೆಟ್‌​ಗ​ಳಲ್ಲಿ ಸೋಲಿಸಿ ಅಂತಿಮ 8ರ ಘಟ್ಟಪ್ರವೇ​ಶಿ​ಸಿ​ದರು. 

WPL 2023: ಒಂದು ಅವಕಾಶಕ್ಕಾಗಿ ತುದಿಗಾಲಲ್ಲಿ ನಿಂತ ಕನ್ನಡತಿ ದಿವ್ಯಾ ಜ್ಞಾನಾನಂದ..!

ಶ್ರೇಯಾಂಕ ರಹಿತ ಋುತುಜಾ ಲಾತ್ವಿ​ಯಾದ ಡಿಯಾನ ಮಾರ್ಕಿ​ನ್‌​ಕೆ​ವಿಕಾ ವಿರುದ್ಧ 4-6, 6-3, 6-2 ಸೆಟ್‌​ಗ​ಳಲ್ಲಿ ಗೆಲುವು ಸಾಧಿ​ಸಿ​ದರು. ಆದರೆ ಝೀಲ್‌ ದೇಸಾಯಿ ಇಂಡೋ​ನೇ​ಷ್ಯಾದ ನುಗ್ರೊಹೊ ವಿರುದ್ಧ 7-5, 3-6, 5-7 ಅಂತ​ರ​ದಲ್ಲಿ ಸೋತು ಹೊರ​ಬಿ​ದ್ದ​ರು. ಇದೇ ವೇಳೆ ಡಬ​ಲ್ಸ್‌​ನಲ್ಲಿ ಋುತು​ಜಾ-ಸ್ವೀಡ​ನ್‌ನ ಜ್ಯಾಕ್ವೆ​ಲಿನ್‌ ಅವಾಡ್‌ ಜೋಡಿ ಕ್ವಾರ್ಟರ್‌ ಫೈನ​ಲ್‌​ಗೇ​ರಿ​ತು.

ಏಪ್ರಿಲ್ 29ಕ್ಕೆ ಜಿಬಿಪಿಎಲ್‌ ಆಟಗಾರರ ಹರಾಜು

ಬೆಂಗಳೂರು: 2ನೇ ಆವೃತ್ತಿಯ ಗ್ರ್ಯಾನ್‌ ಪ್ರೀ ಬ್ಯಾಡ್ಮಿಂಟನ್‌ ಲೀಗ್‌(ಜಿಬಿಪಿಎಲ್‌)ನ ಆಟಗಾರರರ ಹರಾಜು ಪ್ರಕ್ರಿಯೆ ಏ.29ರಂದು ನಡೆಯಲಿದೆ. ಪಂದ್ಯಾವಳಿಯು ಆಗಸ್ಟ್‌ನಲ್ಲಿ ನಿಗದಿಯಾಗಿದೆ. ಕಳೆದ ಬಾರಿ ಸ್ಪರ್ಧಿಸಿದ್ದ 8 ತಂಡಗಳ ಜೊತೆ ಈ ಬಾರಿ ಇನ್ನೂ 2 ತಂಡಗಳು ಸೇರ್ಪಡೆಗೊಳ್ಳಲಿದ್ದು, ತಂಡಗಳ ಆಯ್ಕೆಗೆ ಹರಾಜು ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯಲಿದೆ. 50 ಅಂತಾರಾಷ್ಟ್ರೀಯ ಆಟಗಾರರು ಸೇರಿ 250ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಅಗ್ರ ಶಟ್ಲರ್‌ಗಳು ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ.

Follow Us:
Download App:
  • android
  • ios