ನಿಮ್ಮ ಬ್ಲಡ್‌ ಗ್ರೂಪ್‌ಗೆ ತಕ್ಕ ಆಹಾರ ಯಾವುದು ನಿಮಗೆ ಗೊತ್ತಾ?

ನಮ್ಮಲ್ಲಿ ಎಲ್ಲರ ರಕ್ತವೂ ಒಂದಲ್ಲ ಒಂಧು ಗ್ರೂಪ್‌ಗೆ ಸೇರಿರುವುದು ನಿಮಗೆ ಗೊತ್ತಿರೋ ವಿಚಾರ. ಈ ಬ್ಲಡ್‌ ಗ್ರೂಪ್‌ಗೆ ತಕ್ಕಂತೆ ನಾವು ಸೇವಿಸುವ ಆಹಾರಗಳಲ್ಲೂ ಬದಲಾವಣೆ ಮಾಡಿಕೊಂಡರೆ ನಾವು ಹೆಚ್ಚು ಆರೋಗ್ಯವಾಗಿ ಇರ್ತೀವಿ.

 

Your blood group and foods to consume according to it

ನಮ್ಮಲ್ಲಿ ಸಾಮಾನ್ಯವಾಗಿ ನಾಲ್ಕು ಬ್ಲಡ್‌ ಗ್ರೂಪ್‌ಗಳಿವೆ- ಎ, ಬಿ, ಎಬಿ ಹಾಗೂ ಒ. ಇದರಲ್ಲಿ ಪಾಸಿಟಿವ್‌ ಹಾಗೂ ನೆಗೆಟಿವ್‌ ಗ್ರೂಪ್‌ಗಳಿವೆ. ಅಂದರೆ ಒಟ್ಟು ಎಂಟು ಬ್ಲಡ್‌ ಗ್ರೂಪ್‌ಗಳು. ನಾವೆಲ್ಲರೂ ಇದರಲ್ಲಿ ಒಂದಲ್ಲ ಒಂದು ಗುಂಪಿಗೆ ಸೇರಿದವರೇ ಆಗಿರುತ್ತೇವೆ. ನಮ್ಮ ರಕ್ತದ ಗುಂಪಿಗೆ ತಕ್ಕಂತೆ ನಮ್ಮ ದೇಹದ ಸ್ವಭಾವವೂ ಇರುತ್ತದೆ, ಹೀಗಾಗಿ ನಾವು ಸೇವಿಸುವ ಆಹಾರವೂ ಅದಕ್ಕೆ ತಕ್ಕಂತೆ ಇರಬೇಕಾದ್ದು ಸಹಜ ತಾನೆ? ದೇಹಕ್ಕೆ ಯಾವ ರೀತಿಯ ಪೌಷ್ಟಿಕಾಂಶ ಎಷ್ಟು ಪ್ರಮಾಣದಲ್ಲಿ ಬೇಕೆಂಬುದನ್ನು ಕೂಡ ರಕ್ತದ ಗುಂಪು ನಿರ್ಧರಿಸುತ್ತದೆ. ವ್ಯಕ್ತಿಯಲ್ಲಿ ಡಯಾಬಿಟಿಸ್, ಕಿಡ್ನಿ ಸಮಸ್ಯೆ, ಜಿಐಟಿ, ಸ್ಥೂಲತೆ, ಅಧಿಕ ರಕ್ತದೊತ್ತಡವನ್ನು ರಕ್ತದ ಗುಂಪಿನ ಡಯಟ್ ನಿರ್ಧರಿಸುತ್ತದೆ. ಕೆಂಪು ರಕ್ತ ಕೋಶದ ಮೇಲ್ಭಾಗದಲ್ಲಿ ಸಿಗುವ ಪ್ರೊಟೀನನ್ನು ಆರ್‌ಎಚ್‌ ಫ್ಯಾಕ್ಟರ್ ಎನ್ನುತ್ತಾರೆ. ನಿಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ನಿಮ್ಮ ಶರೀರಕ್ಕೆ ಸೇರುವ ಚೆನ್ನಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳಲು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಇಲ್ಲದಿದ್ದರೆ ರಕ್ತದ ಗುಂಪು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ. ಬನ್ನಿ ಯಾವ ಗ್ರೂಪಿಗೆ ಯಾವ ಫುಡ್‌ ಹೆಚ್ಚು ಆರೋಗ್ಯಕರ ಅಂತ ತಿಳಿಯೋಣ.

ಒ ಬ್ಲಡ್‌ ಗ್ರೂಪ್‌
ಒ ಗುಂಪಿನ ರಕ್ತ ಹೊಂದಿರುವವರು ಮಾಂಸ, ಮೀನು, ಮೊಟ್ಟೆ, ಕ್ಯಾಬೇಜ್‌, ಈರುಳ್ಳಿ, ಕುಂಬಳಕಾಯಿ, ಸೌತೆಕಾಯಿ, ಹೀರೆಕಾಯಿ, ಕೆಂಪು ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ, ಚೆರ್ರಿಗಳು, ಅಂಜೂರದ ಹಣ್ಣುಗಳನ್ನು ತಿನ್ನಬಹುದು. ಪ್ರಾಣಿಜನ್ಯ ಆಹಾರಗಳು ಈ ಗುಂಪಿನ ರಕ್ತ ಹೊಂದಿರುವವರಿಗೆ ಉತ್ತಮ. ಪಾಲಕ್, ಎಲೆಕೋಸು, ಕಾರ್ನ್, ಹೂಕೋಸು, ಬಿಳಿಬದನೆ, ಅಣಬೆಗಳು, ಕಿತ್ತಳೆ, ಕಿವಿ, ಸ್ಟ್ರಾಬೆರಿ, ಬ್ಲಾಕ್ಬೆರ್ರಿ, ತೆಂಗಿನಕಾಯಿ, ಹಸಿರು ಬಟಾಣಿ, ಕಡಲೆಕಾಯಿ ಬೆಣ್ಣೆ. ಹೆಚ್ಚಿನ ಗೋಧಿ ಪಿಷ್ಟಗಳು ಉತ್ತಮವಲ್ಲ.

Your blood group and foods to consume according to it

ಎ ಬ್ಲಡ್‌ ಗ್ರೂಪ್‌
ಅನ್ನ, ಓಟ್ಸ್, ಪಾಸ್ತಾ, ಕುಂಬಳಕಾಯಿ, ಬೀಜಗಳು, ಪೀನಟ್ಸ್, ಅಪ್ರಿಕೊಟ್ಸ್, ನಿಂಬೆಹಣ್ಣು, ರೈಸಿನ್ಸ್, ಗೋಧಿ ಮೊದಲಾದವು ಉತ್ತಮ. ಗೋಧಿಭರಿತ ಸಸ್ಯಹಾರ ಉತ್ತಮ. ಬಾಳೆ, ತೆಂಗಿನಕಾಯಿ, ಪಪ್ಪಾಯಿ, ಗೋಡಂಬಿ, ಪಿಸ್ತಾ, ಬಿಯರ್. ಪ್ರಾಣಿಜನ್ಯ ಆಹಾರ, ಚಿಕನ್, ಮೀನು, ಮೊಟ್ಟೆ / ಓಟ್ಸ್ ಮುಂತಾದ ಆಹಾರಗಳು ಉತ್ತಮವಲ್ಲ.

ಬಿ ಬ್ಲಡ್ ಗ್ರೂಪ್‌
ಹಸಿರು ತರಕಾರಿಗಳು, ಮೊಟ್ಟೆ, ಕಡಿಮೆ ಕೊಬ್ಬಿನ ಪದಾರ್ಥಗಳು ಉತ್ತಮ, ಓಟ್ಸ್, ಹಾಲು, ಹಾಲಿನ ಉತ್ಪನ್ನಗಳು ಕೂಡ ಬಿ ಗುಂಪಿನ ರಕ್ತ ಹೊಂದಿರುವವರಿಗೆ ಒಳ್ಳೆಯದು. ಈ ಗುಂಪಿನ ರಕ್ತ ಹೊಂದಿರುವವರ ದೇಹಕ್ಕೆ ಕಾರ್ನ್, ಹುರುಳಿ, ಟೊಮ್ಯಾಟೊ, ಕಡಲೆಕಾಯಿ, ಎಳ್ಳಿನ ಬೀಜಗಳು. ಪ್ರಾಣಿಜನ್ಯ ಆಹಾರ ಚಿಕನ್, ಮೀನು, ಮೊಟ್ಟೆ ಓಟ್ಸ್ ಹೊಂದುವುದಿಲ್ಲ.

ಆರೋಗ್ಯವಾಗಿರಲು ಯಾವ ರಾಶಿಯವರು, ಯಾವ ಆಹಾರ ಸೇವಿಸಬೇಕು? 

ಮ್ಯಾಗಿ, ನ್ಯಾಚೋಸ್, ಸ್ಯಾಂಡ್ವಿಚ್... ಹೆಸರುಗಳ ಹಿಂದಿನ ಕತೆ! 

ಎಬಿ ಬ್ಲಡ್ ಗ್ರೂಪ್‌
ಸಮುದ್ರ ಆಹಾರಗಳು, ಮೊಸರು, ಮೇಕೆ ಹಾಲು, ಮೊಟ್ಟೆ, ವಾಲ್ನಟ್ಸ್, ಧಾನ್ಯಗಳು, ಓಟ್ಸ್, ಮೊಳಕೆಯೊಡೆದ ಗೋಧಿ, ಕೋಸುಗಡ್ಡೆ, ಹೂಕೋಸು, ಬೀಟ್‌ರೂಟ್‌, ಸೌತೆಕಾಯಿ, ಪ್ಲಮ್ಸ್, ಹಣ್ಣುಗಳು ಈ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೇವನೆಗೆ ಉತ್ತಮ. ಅನ್ನ-ದಾಲ್, ರೋಟಿ-ದಾಲ್, ದಲಿಯಾ, ಕಿಚಡಿ, ಕೆಂಪು ಅನ್ನ ಕೂಡ ಒಳ್ಳೆಯದು. ಕೆಫೀನ್, ಆಲ್ಕೋಹಾಲ್,  ಹಾಲು, ಹುರುಳಿ, ಕಾರ್ನ್, ತೆಂಗಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ಕಪ್ಪು ಚಹಾ ಇತ್ಯಾದಿಗಳು ಒಗ್ಗುವುದಿಲ್ಲ.

ಲೈಂಗಿಕ ನಿರಾಸಕ್ತಿಯೇ? ಆಹಾರವೇ ಸೆಕ್ಸ್ ಡ್ರೈವ್ ಕುಗ್ಗಿಸ್ತಿರಬಹುದು! 

Latest Videos
Follow Us:
Download App:
  • android
  • ios