ಲೈಂಗಿಕ ನಿರಾಸಕ್ತಿಯೇ? ಆಹಾರವೇ ಸೆಕ್ಸ್ ಡ್ರೈವ್ ಕುಗ್ಗಿಸ್ತಿರಬಹುದು!

ಆಹಾರಕ್ಕೂ ಲೈಂಗಿಕ ಆಸಕ್ತಿಗೂ ಸಂಬಂಧವಿದೆ ಎಂಬುದನ್ನು ನೀವು ಕೇಳಿರಬಹುದು. ಕೆಲವು ಆಹಾರಗಳು ಲೈಂಗಿಕ ಆಸಕ್ತಿ ಹೆಚ್ಚಿಸಿದರೆ, ಮತ್ತೆ ಕೆಲವು ಸಂಪೂರ್ಣ ಕುಗ್ಗಿಸುತ್ತವೆ. ನಿಮ್ಮ ಲೈಂಗಿಕ ಬದುಕನ್ನು ಆಹಾರ ಕೆಡಿಸಲು ಬಿಡಬೇಡಿ. ಯಾವುದನ್ನೆಲ್ಲ ದೂರ ಇಟ್ಟರೆ ಒಳ್ಳೆಯದು ತಿಳಿದುಕೊಳ್ಳಿ.

Everyday foods that can kill your sex drive check it once

ಆಡುಮಾತಿನಲ್ಲಿ, ಚಲನಚಿತ್ರಗಳಲ್ಲಿ, ಕತೆಕಾದಂಬರಿಗಳಲ್ಲಿ ಕೋಪ, ಲೈಂಗಿಕಾಸಕ್ತಿ ಹೆಚ್ಚಿದೆ ಎಂಬುದನ್ನು ಉಪ್ಪು ಹುಳಿ ಖಾರ ತಿಂದ ದೇಹ ಎಂಬ ಡೈಲಾಗ್ ಮೂಲಕ ಹೇಳುವುದನ್ನು ನೀವೂ ಕೇಳಿರಬಹುದು. ಸನ್ಯಾಸಿಯಂತೆ ಬದುಕುವವರು ಈ ಎಲ್ಲ ಆಹಾರಗಳಿಂದ ದೂರವಿದ್ದು ಸಾತ್ವಿಕ ಆಹಾರ ಸೇವನೆ ಮಾಡುತ್ತಿದ್ದುದೂ ಗೊತ್ತಿರಬಹುದು. ಅಂದರೆ ಆಹಾರಕ್ಕೂ ಲೈಂಗಿಕ ಆಸಕ್ತಿಗೂ ಅವಿನಾಭಾವ ನಂಟಿದೆ ಎಂದಾಯ್ತು. ಹೌದು, ಶುಂಠಿ ಬೆಳ್ಳುಳ್ಳಿ, ಡಾರ್ಕ್ ಚಾಕೋಲೇಟ್, ಓಯ್ಸ್ಟರ್ಸ್ ಮುಂತಾದವನ್ನು ತಿಂದರೆ ಲಿಬಿಡೋ ಹೆಚ್ಚುತ್ತದೆ. ಹಾಗೆಯೇ ಮತ್ತೆ ಕೆಲವು ಆಹಾರಗಳ ಸೇವನೆ ಸೆಕ್ಸ್ ಡ್ರೈವ್ ಕಡಿಮೆ ಮಾಡುತ್ತವೆ. 

ಇತ್ತೀಚೆಗೆ ಯಾವುದರಲ್ಲೂ ಆಸಕ್ತಿ ಇಲ್ಲದೆ ಬೆಡ್‌ರೂಂನಲ್ಲಿ ಬೋರಿಂಗ್ ಆಗಿ ಬೋರಲು ಬಿದ್ದುಕೊಳ್ಳುತ್ತಿರುವುದರಿಂದ ಸಂಬಂಧದ ಆರೋಗ್ಯ ಕೆಡುತ್ತಿದೆಯೇ? ಹಾಗಿದ್ದರೆ ನಿಮ್ಮ ಆಹಾರದ ಕಡೆ ಗಮನ ಹರಿಸಿ. ಯಾವೆಲ್ಲ ಆಹಾರಗಳು ಸೆಕ್ಸ್ ಡ್ರೈವ್ ಕಡಿಮೆ ಮಾಡುತ್ತವೆ ಎಂಬುದಿಲ್ಲಿದೆ. 

ಸೆಕ್ಸ್ ಮಾಡಿದಾಗ ವೀರ್ಯ ಹೊರ ಚೆಲ್ಲೋದು ಏಕೆ?

ಸಕ್ಕರೆ
ಸಕ್ಕರೆಯು ಹಾರ್ಮೋನ್‌ಗಳನ್ನು ಏರುಪೇರಾಗಿಸುವುದರಲ್ಲೇ ಒಂದನೇ ನಂಬರ್. ಇದು ಆರೋಗ್ಯಕ್ಕೆ ಕೂಡಾ ಒಳ್ಳೆಯದಲ್ಲ. ಸಕ್ಕರೆಯು ದೇಹದಲ್ಲಿ ಇನ್ಸುಲಿನ್ ಹೆಚ್ಚಿಸುತ್ತದೆ. ಇದರಿಂದ ಲೈಂಗಿಕಾಸಕ್ತಿ ಕುಗ್ಗುವ ಜೊತೆಗೆ ಎರೆಕ್ಟೈಲ್ ಡಿಸ್‌ಫಂಕ್ಷನ್, ಹೊಟ್ಟೆಯ ಬೊಜ್ಜು, ಬಿಗಿಯಿಲ್ಲದ ಸ್ನಾಯುಗಳಿಗೆ ಕಾರಣವಾಗುತ್ತದೆ. ಅಲ್ಲದೆ, ಟೆಸ್ಟೆೊಸ್ಟೆರೋನ್ ಮಟ್ಟ ಕೂಡಾ ಕುಗ್ಗುತ್ತದೆ. ಸಕ್ಕರೆಯಿಂದ ದೂರವಿದ್ದಷ್ಟೂ ಲೈಂಗಿಕ ಬದುಕಲ್ಲಿ ಸಿಹಿ ಹೆಚ್ಚುತ್ತದೆ. 

Everyday foods that can kill your sex drive check it once

ಸೋಡಾ
ಸೋಡಾದಲ್ಲಿ ಆರ್ಟಿಫಿಶಿಯಲ್ ಆಗಿ ಸಿಹಿ ಹೆಚ್ಚಿಸುವ ಆಸ್ಪರ್ಟೇಮ್ ಇರುತ್ತದೆ. ಇದು ಸೆರೋಟೋನಿನ್ ಹಾರ್ಮೋನ್‌ ಮೇಲೆ ನೇರ ದಾಳಿ ಮಾಡುತ್ತದೆ. ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಬೆಳೆಸುವಲ್ಲಿ ಈ ಹಾರ್ಮೋನ್ ಕೆಲಸವೇ ಪ್ರಮುಖವಾದುದು. 

ಪುದೀನಾ
ಪುದೀನಾ ಉತ್ತಮ ಔಷಧೀಯ ಸಸ್ಯವಾಗಿದ್ದು, ಆ್ಯಂಟಿಸೆಪ್ಟಿಕ್ ಗುಣವನ್ನು ಹೊಂದಿದೆ. ಇವೆಲ್ಲ ಒಳ್ಳೆಯದೇ. ಆದರೆ, ಇದರಲ್ಲಿರುವ ಮೆಂಥಾಲ್ ಎಂಬ ರಾಸಾಯನಿಕವು ಟೆಸ್ಟೋಸ್ಟೆರೋನ್ ಮಟ್ಟವನ್ನು ತಗ್ಗಿಸಿ, ನಿಮ್ಮ ರಾತ್ರಿಗಳನ್ನು ವರ್ಣರಹಿತವಾಗಿಸಬಹುದು. 

ಚೀಸ್
ಚೀಸ್‌ನಂಥ ಹಾಲಿನ ಉತ್ಪನ್ನಗಳನ್ನು ಅತಿಯಾಗಿ ಬಳಸುತ್ತಿದ್ದರೆ ಅದರಿಂದ ಸೆಕ್ಸ್ ಡ್ರೈವ್ ಕುಗ್ಗುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ದೇಹ ಒದ್ದಾಡುತ್ತದೆ. ಪರಿಣಾಮವಾಗಿ ಹೊಟ್ಟೆಯಲ್ಲಿ ಕಿರಿಕಿರಿ, ಗ್ಯಾಸ್ ಕಾಣಿಸಬಹುದು. ಜೊತೆಗೆ, ಲೈಂಗಿಕ ಅಂಗಗಳಿಂದ ರಕ್ತವನ್ನು ದೂರವಿಡುತ್ತದೆ. ಈಸ್ಟ್ರೋಜನ್ ಹಾಗೂ ಟೆಸ್ಟೋಸ್ಟೆರೋನ್ ಹಾರ್ಮೋನ್‌ಗಳ ಉತ್ಪಾದನೆಯನ್ನೂ ತಗ್ಗಿಸುತ್ತದೆ. 

ಮಕ್ಕಳಾಗಲು ಸೆಕ್ಸ್ ಮಾಡಬೇಕೆಂಬುವುದೇ ಗೊತ್ತಿರಲಿಲ್ಲ ಈ ದಂಪತಿಗೆ

ಕೆಫಿನ್
ಲೈಂಗಿಕ ಬದುಕನ್ನು ಮೂರಾಬಟ್ಟೆಯಾಗಿಸುವ ಸಾಮರ್ಥ್ಯ ಕೆಫಿನ್ ಎಂಬ ಕೀಚಕನಿಗಿದೆ. ಹೆದರಬೇಡಿ, ಅಲ್ಪಸ್ವಲ್ಪ ಮಟ್ಟದಲ್ಲಿ ಕೆಫಿನ್ ಸೇವನೆಯಿಂದ ಅಂಥದ್ದೇನೂ ಆಗುವುದಿಲ್ಲ. ಆದರೆ, ಪ್ರತಿದಿನ ಸಿಕ್ಕಾಪಟ್ಟೆ ಕಾಫಿ, ಟೀ, ಕೋಲಾ ಸೇವನೆ ಮಾಡುತ್ತಿದ್ದರೆ ಅದು ಆ್ಯಡ್ರಿನಲ್ ಗ್ಲ್ಯಾಂಡ್‌ಗಳನ್ನು ಅತಿಯಾಗಿ ಸ್ಟಿಮುಲೇಟ್ ಮಾಡುತ್ತದೆ. ಆರೋಗ್ಯಕರ ಸೆಕ್ಸ್ ಲೈಫ್‌ಗಾಗಿ ಈ ಪಾನೀಯಗಳನ್ನು ದೂರವಿಡಿ. 

ಆಲ್ಕೋಹಾಲ್
ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರೆ ಅದರಿಂದ ಎರೆಕ್ಟೈಲ್ ಡಿಸ್‌ಫಂಕ್ಷನ್ ಆಗುವ ಜೊತೆಗೆ ದೇಹದ ಪ್ರಮುಖ ಅಂಗಗಳಿಗೆ ಹಾನಿಯಾಗುತ್ತದೆ. ಇವು ಸೆಕ್ಸ್ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. 

ಬಾಟಲ್ಡ್ ವಾಟರ್
ಇಲ್ಲಿ ನೀರಿನ ತಪ್ಪು ಖಂಡಿತಾ ಇಲ್ಲ. ಅಪರಾಧಿಯಾಗಿರುವುದು ಪ್ಲ್ಯಾಸ್ಟಿಕ್ ಬಾಟಲ್. ಇದರಲ್ಲಿರುವ ಬಿಸ್‌ಫಿನಾಲ್ ಎ ಎಂಬ ಕೆಮಿಕಲ್ ಪುರುಷರು ಹಾಗೂ ಮಹಿಳೆಯರ ಫಲವತ್ತತೆಯನ್ನು ಕುಗ್ಗಿಸಬಲ್ಲದು. 

ಸೈಬರ್‌ಸೆಕ್ಸ್ ಮೂಲಕ ಸಂಕಾತಿಗೆ ಮೋಸ ಮಾಡಿದನಾ?

Latest Videos
Follow Us:
Download App:
  • android
  • ios