ಕೆಲವು ವಸ್ತುಗಳನ್ನು ದಿನಾಲೂ ವಿಧವಿಧವಾಗಿ ಬಳಸುತ್ತೇವೆ. ಅಲ್ಲದೇ ನಮಗೆ ಗೊತ್ತಿಲ್ಲದೇ ಅದರಲ್ಲಿ ವಿಪರೀತ ಕೊಳೆಯೂ ಸೇರಿರುತ್ತದೆ. ಇದನ್ನು ಆಗಾಗ ಕ್ಲೀನ್ ಮಾಡುವುದು ಅತ್ಯಗತ್ಯ. ಯಾವ ವಸ್ತುಗಳಿವು?

ದಾಂಪತ್ಯ ಸುಖವಾಗಿರಬೇಕೆ? ನಿಮ್ಮ ಸಂಗಾತಿಯಿಂದ ಇದನ್ನೆಲ್ಲಾ ನಿರೀಕ್ಷಿಸಬೇಡಿ!

ಮನೆ ಕ್ಲೀನ್ ಮಾಡುವಾಗ ಕೆಲವೊಂದು ವಸ್ತುಗಳನ್ನು ನಾವು ಕ್ಲೀನ್ ಮಾಡೋದೇ ಇಲ್ಲ. ಅವುಗಳನ್ನು ಕ್ಲೀನ್ ಮಾಡಬೇಕೆಂದೂ ಅನಿಸೋದಿಲ್ಲ. ಯಾಕೆಂದರೆ ಅವುಗಳನ್ನು ಕ್ಲೀನ್ ಮಾಡುವ ವಸ್ತುಗಳೇ ಅಲ್ಲವೆಂದು ಅಂದುಕೊಳ್ಳುತ್ತೇವೆ. ಆದರೆ ಈ ವಸ್ತುಗಳನ್ನು ನೀವು ಕ್ಲೀನ್ ಮಾಡಲೇಬೇಕು. ಯಾಕೆಂದರೆ ಇವು ಟಾಯ್ಲೆಟ್ ಸೀಟಿಗಿಂತಲೂ ಜಾಸ್ತಿ ಗಲೀಜಾಗಿರುತ್ತದೆ. 

ಬೇಸಿಗೆ ರೋಗಗಳ ಬಗ್ಗೆ ಇರಲಿ ಎಚ್ಚರ!

ರಿಮೋಟ್ ಕಂಟ್ರೋಲ್: ಮನೆಯಲ್ಲಿ ಹೆಚ್ಚಾಗಿ ಬಳಸುವ ವಸ್ತುವೆಂದರೆ ರಿಮೋಟ್ ಕಂಟ್ರೋಲ್. ಆದರೆ ಇದರಲ್ಲಿ ಎಷ್ಟೊಂದು ಧೂಳು ಕೂಡಿರುತ್ತದೆ ಎಂದರೆ ಇದರಿಂದ ರೋಗ ಬರುವ ಸಾಧ್ಯತೆ ಇದೆ. ಆದುದರಿಂದ ಅದನ್ನು ಕ್ಲೀನ್ ಮಾಡುತ್ತಿರಬೇಕು.

ಸೆಲ್ ಫೋನ್: ಹಲವು ಅಧ್ಯಯನಗಳ ಪ್ರಕಾರ ಮೊಬೈಲ್ ಫೋನ್‌ ತುಂಬಾ ಗಲೀಜಾಗಿರುವ ವಸ್ತು. ಇದರ ಮೇಲೆ ಟಾಯ್ಲೆಟ್ ಸೀಟಿಗಿಂತ ಹೆಚ್ಚು ಕೊಳೆ ಇರುತ್ತದೆ. ಇದನ್ನು ಕ್ಲೀನ್ ಮಾಡದಿದ್ದರೆ ಇನ್ಫೆಕ್ಷನ್ ಗ್ಯಾರಂಟಿ. 

ಕಿಚನ್ ಸಿಂಕ್: ಅಡುಗೆ ಮಾಡಿದ, ತಿಂದ ಪಾತ್ರೆಗಳನ್ನೆಲ್ಲಾ ಸಿಂಕಿನಲ್ಲಿ ಹಾಕುತ್ತೇವೆ. ಅದನ್ನು ಯಾವುದೊ ಹೊತ್ತಿಗೆ ತೊಳೆಯುತ್ತೇವೆ. ಇದರಿಂದ ಆ ಜಾಗ ತುಂಬಾ ಗಲೀಜಾಗಿರುತ್ತದೆ. ಕೀಟಾಣುಗಳು ಬೇಗ ಹರಡುತ್ತವೆ, ಉತ್ಪತ್ತಿಯಾಗುತ್ತವೆ. ಇದನ್ನು ಎರಡು ದಿನಕ್ಕೊಮ್ಮೆ ಕ್ಲೀನ್ ಮಾಡಿ. 

ತ್ವಚೆಯಲ್ಲಿ ಹೊಳಪಿಗೆ ಜಾಯಿಕಾಯಿ

ಮೇಕಪ್ ಬ್ರಷ್ : ಹೌದು ಇದರಲ್ಲೂ ಬ್ಯಾಕ್ಟೀರಿಯಾ ಹೆಚ್ಚಾಗಿರುತ್ತದೆ. ಇದನ್ನು ರೆಗ್ಯುಲರ್ ಆಗಿ ಕ್ಲೀನ್ ಮಾಡಲೇ ಬೇಕು. ಇಲ್ಲಾಂದ್ರೆ ನಿಮ್ಮ ಮುಖದ ಮೇಲೆ ಪರಿಣಾಮ ಬೀರುತ್ತದೆ.