ದಾಂಪತ್ಯ ಸುಖವಾಗಿರಬೇಕೆ? ನಿಮ್ಮ ಸಂಗಾತಿಯಿಂದ ಇದನ್ನೆಲ್ಲಾ ನಿರೀಕ್ಷಿಸಬೇಡಿ!
ದಾಂಪತ್ಯದಲ್ಲಿ ಮಾತ್ರವಲ್ಲ, ಎಲ್ಲೆಡೆ ಪ್ರೀತಿಗೆ ತನ್ನದೇ ಆದ ಸ್ಥಾನವಿದೆ. ಪ್ರೀತಿ ಇದೆ ಎಂದ ಮಾತ್ರಕ್ಕೆ ಎಲ್ಲವೂ ಬೇಕೆಂದು ನಿರೀಕ್ಷಿಸುವುದು ತಪ್ಪು. ಕೆಲವೊಂದು ನಿರೀಕ್ಷೆಗಳಿಂದ ದೂರವಿದ್ದರೇ ಪ್ರೀತಿಯಲ್ಲಿ ಸುಖ ಹೆಚ್ಚು...!
ದಾಂಪತ್ಯದಲ್ಲಿ ಮಾತ್ರವಲ್ಲ, ಎಲ್ಲೆಡೆ ಪ್ರೀತಿಗೆ ತನ್ನದೇ ಆದ ಸ್ಥಾನವಿದೆ. ಪ್ರೀತಿ ಇದೆ ಎಂದ ಮಾತ್ರಕ್ಕೆ ಎಲ್ಲವೂ ಬೇಕೆಂದು ನಿರೀಕ್ಷಿಸುವುದು ತಪ್ಪು. ಕೆಲವೊಂದು ನಿರೀಕ್ಷೆಗಳಿಂದ ದೂರವಿದ್ದರೇ ಪ್ರೀತಿಯಲ್ಲಿ ಸುಖ ಹೆಚ್ಚು...!
ಪ್ರಯೊಬ್ಬರೂ ತಮ್ಮ ಸಂಗಾತಿಯಿಂದ ಏನನ್ನಾದರೂ ಬಯಸುತ್ತಾರೆ. ಕೆಲವೊಂದು ವಿಷಯಗಳನ್ನು ಅವರಿಂದ ಬಯಸೋದು ಸರಿ. ಆದರೆ ಅದಕ್ಕೂ ಒಂದು ಲಿಮಿಟ್ ಇದೆ. ಆ ಲಿಮಿಟ್ ಮೀರಿದ್ದನ್ನೂ ಬಯಸಿದರೆ, ಸಂಬಂಧ ಮುರಿದು ಬೀಳಬಹುದು. ಸಂಗಾತಿಯಿಂದ ಏನೆಲ್ಲಾ ಬಯಸಬಾರದು? ಇಲ್ಲಿದೆ ನೋಡಿ.
- ನಿಮಗೇನು ಬೇಕು? ನಿಮ್ಮ ಮನಸ್ಸಿನಲ್ಲಿ ಏನಿದೆ ಅನ್ನೋದು ಅವರಿಗೆ ತಿಳಿಯಬೇಕು ಎಂದು ಬಯಸಲೇಬಾರದು. ಅವರು ಖಂಡಿತವಾಗಿಯೂ ಮೈಂಡ್ ರೀಡರ್ ಆಗಿರೋಲ್ಲ. ನೀವು ಹೇಳಿದರೇ ಮಾತ್ರ ಎಲ್ಲವನ್ನೂ ಮತ್ತೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ.
- ಸಂಗಾತಿ ದಿನಪೂರ್ತಿ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸೋದು ತಪ್ಪು. ಅವರಿಗೆ ಆರಾಮ ಆಗುವಂಥ ಡ್ರೆಸ್ ಧರಿಸುವ ಹಕ್ಕು ಅವರಿಗಿದೆ. ಒಬ್ಬರಿಗೊಬ್ಬರು ಕೆಟ್ಟದಾಗಿ ಕಂಡರೂ ಅಲ್ಲಿ ಪ್ರೀತಿ ಮೂಡಬೇಕು. ಕೇವಲ ಚೆನ್ನಾಗಿ ಕಂಡರೆ ಮಾತ್ರವಲ್ಲ.
- ಇಬ್ಬರು ವ್ಯಕ್ತಿಗಳು ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ಅವರು ನೋಡುವ ದೃಷ್ಟಿಯೇ ಬೇರೆ ಇರಬಹುದು. ಆದುದರಿಂದ ಯಾವತ್ತೂ ನಿಮಗೆ ಒಂದು ವಿಷಯದ ಮೇಲಿರುವ ಅಭಿಪ್ರಾಯವೇ ನಿಮ್ಮ ಸಂಗಾತಿಗೂ ಇರಬೇಕು ಎಂದು ನೀವು ಬಯಸಬಾರದು.
- ಸಮಯದ ಜೊತೆ ಜನರು ಬದಲಾಗುತ್ತಾರೆ. ಕೆಲವೊಮ್ಮೆ ನಮ್ಮ ಬಯಕೆಗಳು ಬದಲಾಗುತ್ತವೆ. ನಿಮ್ಮ ಸಂಗಾತಿ ಮೊದಲಿದ್ದಂತೆ ಈಗ ಇರದಿರಬಹುದು. ಹಾಗಂತ ಅವರು ಮೊದಲಿನಂತೆಯೇ ಇರಬೇಕೆಂದು ಬಯಸೋದು ತಪ್ಪು.
- ಸಂಗಾತಿಗೆ ಸೆಕ್ಸ್ ಮಾಡಲು ಮನಸು ಇದ್ದಾಗ ಮಾತ್ರ ಅವರನ್ನು ಆಹ್ವಾನಿಸಿ. ಕೇವಲ ನಿಮಗೆ ಮಾತ್ರ ಆ ಆಸೆ ಇದ್ದು, ಸಂಗಾತಿಗೆ ಬಲವಂತ ಮಾಡಿದರೆ ಅದರಿಂದ ತೃಪ್ತಿ ಸಿಗಲು ಸಾಧ್ಯವಿಲ್ಲ.