Asianet Suvarna News Asianet Suvarna News

29 ನಿಮಿಷ ವೃಶ್ಚಿಕಾಸನದಲ್ಲಿ ನಿಂತು ವಿಶ್ವ ದಾಖಲೆ ನಿರ್ಮಿಸಿದ ತರುಣ

ಯೋಗ ಮಾಡುವುದು ಹೇಳಿದಷ್ಟು ಸುಲಭವಲ್ಲ. ಹಲವು ಆಸನಗಳು ಮಾಡುವುದಕ್ಕೆ ಬಲು ಕಷ್ಟ. ಆದರೆ ನಿರಂತರ ಪರಿಶ್ರಮದಿಂದ ಸಾಧಿಸಲಾಗದ್ದು ಯಾವುದು ಇಲ್ಲ. ಹಾಗೆಯೇ 21 ವರ್ಷದ ಯೋಗ ಗುರುವೊಬ್ಬರು ಕಠಿಣವಾದ ವೃಶ್ಚಿಕಾಸನದಲ್ಲಿ ಬರೋಬರಿ 29 ನಿಮಿಷಗಳ ಕಾಲ ನಿಂತಿದ್ದಾರೆ. 

yoga teacher did scorpion pose for 29 minutes, breaks world record akb
Author
Bangalore, First Published Jun 23, 2022, 9:41 AM IST

ಯೋಗ ಮಾಡುವುದು ಹೇಳಿದಷ್ಟು ಸುಲಭವಲ್ಲ. ಹಲವು ಆಸನಗಳು ಮಾಡುವುದಕ್ಕೆ ಬಲು ಕಷ್ಟ. ಆದರೆ ನಿರಂತರ ಪರಿಶ್ರಮದಿಂದ ಸಾಧಿಸಲಾಗದ್ದು ಯಾವುದು ಇಲ್ಲ. ಹಾಗೆಯೇ 21 ವರ್ಷದ ಯೋಗ ಗುರುವೊಬ್ಬರು ಕಠಿಣವಾದ ವೃಶ್ಚಿಕಾಸನದಲ್ಲಿ ಬರೋಬರಿ 29 ನಿಮಿಷಗಳ ಕಾಲ ನಿಂತಿದ್ದಾರೆ. ವೃಶ್ಚಿಕಾಸನವನ್ನು ಯೋಗಾಸನದಲ್ಲಿಯೇ ಒಂದು ಕಠಿಣವಾದ ಆಸನ ಎಂದು ಹೇಳಲಾಗುತ್ತದೆ.   

ಮೊಣಕೈವರೆಗೆ ತೋಳುಗಳನ್ನು ನೆಲದ ಮೇಲೆ ಊರಿ ಕೇವಲ ಇವುಗಳ ಮೇಲೆ ದೇಹದ ಭಾರವನ್ನು ಹಾಕಿ ದೇಹವನ್ನು ಕಮಾನಿನಂತೆ ಹಿಂಭಾಗಕ್ಕೆ ಬಗ್ಗಿಸುವುದಾಗಿದೆ. ಈ ಆಸನವನ್ನು ಮಾಡಲು ಕನಿಷ್ಠ ವರ್ಷಗಳವರೆಗಾದರೂ ನಿರಂತರ ಅಭ್ಯಾಸ ಬೇಕು. ಹೆಚ್ಚಿನ ಯೋಗಪಟುಗಳು ಕೆಲವು ಸೆಕೆಂಡುಗಳ ಕಾಲ ಈ ಆಸನವನ್ನು ಮಾಡುತ್ತಾರೆ. 

 

ಆದರೆ ದುಬೈ ಮೂಲದ ಯೋಗ ಬೋಧಕರಾದ (yoga instructor) ಯಶ್ ಮನ್ಸುಖ್ಭಾಯ್ ಮೊರಾಡಿಯಾ (Yash Mansukhbhai Moradiya) ಅವರು 29 ನಿಮಿಷಗಳು ಮತ್ತು ನಾಲ್ಕು ಸೆಕೆಂಡುಗಳ ಕಾಲ ಈ ಆಸನದಲ್ಲಿ ಧೃಡವಾಗಿ ನಿಂತಿದ್ದರು. ಈ ಮೂಲಕ ಅತಿ ಹೆಚ್ಚು ಕಾಲ ವೃಶ್ಚಿಕಾಸಾನದಲ್ಲಿ ನಿಂತ ವ್ಯಕ್ತಿ ಎಂಬ ಸಾಧನೆ ಮಾಡಿ ಗಿನ್ನೆಸ್‌ ವಿಶ್ವ ದಾಖಲೆ ಪುಟ ಸೇರಿದ್ದಾರೆ. 

ನಾಲ್ಕು ನಿಮಿಷ 47 ಸೆಕೆಂಡ್‌ಗಳವರಗೆ ವೃಶ್ಚಿಕಾಸನದ ಮೇಲೆ ನಿಂತಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಮುರಿಯಲು ಯಶ್ ಮನ್ಸುಖ್ಭಾಯ್ ಮೊರಾಡಿಯಾ ಸುಮಾರು ಎರಡು ವರ್ಷಗಳ ಕಾಲ ತಯಾರಿ ನಡೆಸಿದರು. ಅಂತಿಮವಾಗಿ  ಫೆಬ್ರವರಿ 22, 2022 ರ ವಿಶೇಷ ಪಾಲಿಂಡ್ರೋಮ್ ದಿನಾಂಕದಂದು ಅದನ್ನು ಸಾಧಿಸಿದರು. ಈಗ ಗಿನ್ನೆಸ್ ಸಂಸ್ಥೆ ಅವರಿಗೆ ಪ್ರಮಾಣಪತ್ರ ನೀಡಿದೆ. ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್‌ ಪುಟದಲ್ಲಿ ಯಶ್ ಮನ್ಸುಖ್ಭಾಯ್ ಮೊರಾಡಿಯಾ  ಅವರ ವಿಡಿಯೋವನ್ನು ಶೇರ್ ಮಾಡಲಾಗಿದೆ. ವಿಶ್ವ ಯೋಗ ದಿನವಾದ ಜೂ.21ರಂದು ಗಿನ್ನೆಸ್ ಸಂಸ್ಥೆ ಮೊರಡಿಯಾ ಅವರ ಈ ಸಾಧನೆಯನ್ನು ಘೋಷಣೆ ಮಾಡಿ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದೆ. 

ಯೋಗದ ಮೂಲಕ ಫಿಟ್ನೆಸ್‌ ಸೀಕ್ರೆಟ್‌ ರಿವೀಲ್ ಮಾಡಿದ ನಟಿ ರಾಧಿಕಾ ನಾರಾಯಣ್!

ತನ್ನ ಯೋಗ ತರಬೇತಿಯ ಬಗ್ಗೆ ಗಿನ್ನೆಸ್ ವಿಶ್ವ ದಾಖಲೆ (Guinness World Records) ತಂಡದೊಂದಿಗೆ ಮಾತನಾಡಿದ ಯಶ್‌ ಮೊರಾಡಿಯಾ , ವೃಶ್ಚಿಕಾಸನವೂ ಸ್ಥಿರತೆಗೆ ಸಂಬಂಧಿಸಿದ್ದಾಗಿದೆ. ನೀವು ಈ ಭಂಗಿಯನ್ನು ಹೆಚ್ಚು ಕಾಲ ಹಿಡಿದಿಟ್ಟಲ್ಲಿ ನಿಮ್ಮ ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಸ್ಥಾಪಿಸಲು ನೀವು ಉತ್ತಮವಾಗಿ ಕಲಿಯುತ್ತೀರಿ. ನನ್ನ ಸಾಧನೆ ದೈಹಿಕ ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಮಾನಸಿಕ ಶಕ್ತಿಯೊಂದಿಗೆ ಬಹಳಷ್ಟು ಸಂಬಂಧ ಹೊಂದಿದೆ ಎಂದರು.

ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದಿದ್ದರಿಂದ ನನ್ನ ಜೀವನದ ಬಹುನಿರೀಕ್ಷಿತ ಕ್ಷಣ ಇದಾಗಿದೆ. ನಾನು ಐದು ವರ್ಷಗಳ ಹಿಂದೆ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ ಮತ್ತು ಎರಡು ವರ್ಷಗಳ ಕಾಲ ಅದಕ್ಕೆ ನನ್ನನ್ನು ಒಪ್ಪಿಸಿದೆ ಎಂದು ಯಶ್‌ ಮೊರಾಡಿಯಾ ಹೇಳಿದ್ದಾರೆ.

Kids Health : ಮಕ್ಕಳಿಗೆ ಬೆಸ್ಟ್ ಈ ಯೋಗಾಸನ, ತಪ್ಪದೇ ಮಾಡಿದರೆ ಸುಧಾರಿಸುತ್ತೆ ಆರೋಗ್ಯ


ಸೂರ್ಯ ನಮಸ್ಕಾರ (Surya Namaskara)ವನ್ನು ಯೋಗಾಸನ (Yoga Asana)ಗಳಲ್ಲೇ ಅತ್ಯಂತ ಶಕ್ತಿಶಾಲಿ ಎಂದು ಕರೆಯಲಾಗುತ್ತದೆ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಇದು ಆರೋಗ್ಯವಂತರನ್ನಾಗಿಸುತ್ತದೆ. ನೀವು ಯೋಗದಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಯೋಗಾಭ್ಯಾಸದೊಂದಿಗೆ ಪ್ರಕೃತಿಯೊಂದಿಗೆ (yoga with nature) ನಿಮ್ಮನ್ನು ಕನೆಕ್ಟ್ ಮಾಡೋ ಸ್ಥಳದಲ್ಲಿ  ಯೋಗ ಮಾಡಲು ಬಯಸಿದರೆ  ಈ ಸ್ಥಳಗಳು ನಿಮಗೆ ಯೋಗದ ಅತ್ಯುತ್ತಮ ಅನುಭವವನ್ನು ನೀಡುತ್ತವೆ, ನಂತರ ಅದೇ ಸಮಯದಲ್ಲಿ, ನೀವು ನಿಮ್ಮ ಬೇಸಿಗೆ ರಜೆಯನ್ನು ಸಹ ಮೆಮೊರೇಬಲ್ ಆಗಿಸಬಹುದು.

Follow Us:
Download App:
  • android
  • ios