ವೃದ್ಧಾಪ್ಯದಲ್ಲೂ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಇವಿಷ್ಟನ್ನು ಮಾಡಿ ಸಾಕು

ವಯಸ್ಸಾದಂತೆ, ಹೆಚ್ಚಿನ ಜನರು ತಮ್ಮ ತ್ರಾಣ ಮತ್ತು ಒಟ್ಟಾರೆ ಶಕ್ತಿಯ ಮಟ್ಟದಲ್ಲಿ ಗಮನಾರ್ಹ ಬದಲಾವಣೆಯನ್ನು ಅನುಭವಿಸುತ್ತಾರೆ. 40 ವರ್ಷದಿಂದ ಪ್ರಾರಂಭಿಸಿ, ವಯಸ್ಕರು ಪ್ರತಿ ದಶಕದಲ್ಲಿ ತಮ್ಮ ಸ್ನಾಯುವಿನ ದ್ರವ್ಯರಾಶಿಯ 8 ಪ್ರತಿಶತದಷ್ಟು ಕಳೆದುಕೊಳ್ಳಬಹುದು. 70 ವರ್ಷಗಳ ನಂತರ, ಈ ಪ್ರಮಾಣವು ದ್ವಿಗುಣಗೊಳ್ಳಬಹುದು. ನಿಮ್ಮನ್ನೂ ಸ್ನಾಯುಗಳ ಆರೋಗ್ಯದ ಚಿಂತೆ ಕಾಡುತ್ತಿದ್ಯಾ ? ಹಾಗಿದ್ರೆ ಸಮತೋಲಿತ ಪೋಷಣೆಯೊಂದಿಗೆ ಆರೋಗ್ಯದಿಂದ ವೃದ್ಧರಾಗಲು ಏನು ಮಾಡ್ಬೇಕು ?

Worried About Muscle Health, Grow Old Healthily With Balanced Nutrition Vin

ಬರಹ: ಡಾ.ಇರ್ಫಾನ್ ಶೇಖ್, ವಯಸ್ಕರ ಪೋಷಣೆ, ವೈಜ್ಞಾನಿಕ ಮತ್ತು ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥರು, ಅಬಾಟ್ಸ್ ನ್ಯುಟ್ರಿಷನ್ ಬಿಸಿನೆಸ್

ಆರೋಗ್ಯಕರ ಸ್ನಾಯುಗಳು ನಿಮ್ಮ ದೈಹಿಕ ಶಕ್ತಿ, ಅಂಗಗಳ ಕಾರ್ಯ ನಿರ್ವಹಣೆ, ಚರ್ಮದ ಸಮಗ್ರತೆ, ರೋಗನಿರೋಧಕ ಶಕ್ತಿ ಮತ್ತು ಗಾಯಗಳ ಗುಣಪಡಿಸುವಿಕೆಗಳಿಗೆ ಅತಿ ಅವಶ್ಯಕ. ಆದ್ದರಿಂದ ವಯಸ್ಸಾದಂತೆ ಸ್ನಾಯುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಸ್ನಾಯುವಿನ ಬಲವನ್ನು ವರ್ಧಿಸಲು ಮತ್ತು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕೆಲವೊಂದು ಮಾರ್ಗಗಳು ಇಲ್ಲಿವೆ. 

1. ದೈಹಿಕ ಚಟುವಟಿಕೆಗಳು: ವಯಸ್ಕರು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ (Exercise) ಮಾಡಬೇಕು, ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರು ವಾರಕ್ಕೆ 150 ನಿಮಿಷಗಳಷ್ಟು ವ್ಯಾಯಾಮ ಮಾಡುವುದು ಒಳ್ಳೆಯದು. ತಮ್ಮ ಚಲನಶೀಲತೆ ಮತ್ತು ಶಕ್ತಿಯನ್ನು ಹಾಗೇ ಇರಿಸಿಕೊಳ್ಳಲು. ಯಾವ ರೀತಿಯ ವ್ಯಾಯಾಮಗಳು ಮತ್ತು ಫಿಟ್‍ನೆಸ್ ದಿನಚರಿ ನಿಮಗೆ ಸೂಕ್ತವಾಗಿರುತ್ತದೆ ಎಂಬುದರ ಕುರಿತು ನಿಮ್ಮ ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸಿ.

2. ಜಡ ಜೀವನಶೈಲಿ (Lifestyle)ಯನ್ನು ಹೊಂದಿರುವ ಹಿರಿಯ ನಾಗರಿಕರು ದಿನವನ್ನು ಕೆಲವು ನಿಮಿಷಗಳ ವ್ಯಾಯಾಮದಿಂದ ಪ್ರಾರಂಭಿಸಬೇಕು ಮತ್ತು ನಂತರ ಕ್ರಮೇಣವಾಗಿ ತೀವ್ರತೆ ಮತ್ತು ಅವಧಿಯನ್ನು ಹೆಚ್ಚಿಸಬೇಕು.

ಸ್ನಾಯು ಸೆಳೆತ… ಸಹಿಸಲಾರದ ಈ ನೋವನ್ನು ನಿವಾರಿಸಲು ಹೀಗ್ ಮಾಡಿ

3. ಇದು 10-20 ವರ್ಷಗಳ ಪುನರ್ಯೌವನಗೊಳಿಸುವಿಕೆಗೆ ಸಮಾನವಾಗಿರುವುದರಿಂದ  ಸಾಮರ್ಥ್ಯ ತರಬೇತಿಯನ್ನು ಅಳವಡಿಸಿಕೊಳ್ಳಿ.

4. ನಮ್ಯತೆ, ಶಕ್ತಿ ಮತ್ತು ಸಮತೋಲನವನ್ನು ಹೆಚ್ಚಿಸಲು ವಾಕಿಂಗ್, ಈಜು (Swimming), ಸೈಕ್ಲಿಂಗ್ ಮತ್ತು ಯೋಗವನ್ನು ಪರಿಗಣಿಸಿ. ಜೊತೆಗೆ, ಪೌಷ್ಟಿಕಾಂಶದಲ್ಲಿನ ಅಸಮತೋಲನ, ವ್ಯಾಯಾಮದ ಕೊರತೆ ಮತ್ತು ಜಡ ಜೀವನಶೈಲಿಯು ವಯಸ್ಸಾಗುವಿಕೆಯ ಆಕ್ರಮಣವನ್ನು ವೇಗಗೊಳಿಸುತ್ತದೆ, ಇದು ನಿಮ್ಮ ಸ್ನಾಯುಗಳನ್ನು (Muscle) ಮತ್ತಷ್ಟು ದುರ್ಬಲಗೊಳಿಸುತ್ತದೆ.

ಫಿಟ್ನೆಸ್ ಮತ್ತು ಪೋಷಣೆಯ ಮಹತ್ವ

ಆರೋಗ್ಯ ಮತ್ತು ಪೋಷಣೆಯ ಕುರಿತಾದ ಸಂಶೋಧನೆಗಳು ಮತ್ತು ವರದಿಗಳು ಆರೋಗ್ಯಕರ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮವನ್ನು ಅಳವಡಿಸಿಕೊಳ್ಳುವ ಜನರು, ದೀರ್ಘ ಕಾಲ ಆರೋಗ್ಯವಾಗಿರುತ್ತಾರೆ ಮತ್ತು ಬಲವಾದ ಸ್ನಾಯುಗಳನ್ನು ಹೊಂದಿರುತ್ತಾರೆ ಎಂದು ಖಚಿತಪಡಿಸುತ್ತದೆ.

ವಯಸ್ಕರ ಪೋಷಣೆ: ವಯಸ್ಸಾದಂತೆ ಚಯಾಪಚಯವು ಕಡಿಮೆಯಾಗುತ್ತದೆ ಮತ್ತು ಶಕ್ತಿಯ ಅಗತ್ಯವೂ ಕಡಿಮೆಯಾಗುತ್ತದೆ. ಆದರೆ, ವಯಸ್ಕರ ಪೌಷ್ಟಿಕಾಂಶದ ಅಗತ್ಯತೆಯ ಕುರಿತು ನಡೆಸಿದ ಸಂಶೋಧನೆಯು ನಿಮಗೆ ವಯಸ್ಸಾದಂತೆ ಪೋಷಕಾಂಶಗಳನ್ನು ಹೀರಿಕೊಳ್ಳುವ ಮತ್ತು ಬಳಸಿಕೊಳ್ಳುವ ದೇಹದ ಸಾಮರ್ಥ್ಯವು ಕಡಿಮೆಯಾಗಿದ್ದರೂ, ಪೌಷ್ಟಿಕಾಂಶದ ಅಗತ್ಯವು ಹೆಚ್ಚಾಗುತ್ತದೆ ಎಂದು ಸೂಚಿಸುತ್ತದೆ. ಇದರ ಅರ್ಥವೇನೆಂದರೆ, ವಯಸ್ಸಾದ ವ್ಯಕ್ತಿಯು ಕಡಿಮೆ ತಿಂದರೂ ಗರಿಷ್ಠ ಮಟ್ಟದ ಪೌಷ್ಠಿಕಾಂಶದ ಸೇವನೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ನಿಮ್ಮ ಸ್ನಾಯುಗಳ ಆರೋಗ್ಯಕ್ಕಾಗಿ ಸಾಕಷ್ಟು ಪೋಷಣೆ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ ಮಾರ್ಗಗಳಾಗಿವೆ. 

Stone Man Syndrome: ಹೆಪ್ಪುಗಟ್ಟುತ್ತಿವೆ 29ರ ಯುವಕನ ಸ್ನಾಯುಗಳು: ಏನಿದು ಅಪರೂಪದ ಕಾಯಿಲೆ?

1. ಪ್ರೋಟೀನ್: ಧನಾತ್ಮಕ ಸಾರಜನಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಮಂಜಸ ಮಿತಿಯ ಪ್ರೋಟೀನ್ ಸೇವನೆಯ ಅಗತ್ಯವಿದೆ. ಪ್ರೋಟೀನ್-ಭರಿತ ಆಹಾರಗಳು ಸಮತೋಲಿತ ಆಹಾರ (Food)ವನ್ನು ರೂಪಿಸುತ್ತವೆ, ಅವು ವಯಸ್ಸಾದವರಲ್ಲಿ ಸಾಮರ್ಥ್ಯ  ಮತ್ತು ಶಕ್ತಿಯನ್ನು ಹೆಚ್ಚಿಸುತ್ತವೆ.

2.ವಿಟಮಿನ್ D: ವಿಟಮಿನ್ D ಅತ್ಯಂತ ಪ್ರಮುಖವಾದ ಸೂಕ್ಷ್ಮ ಪೋಷಕಾಂಶಗಳಲ್ಲಿ ಒಂದಾಗಿದೆ. ಏಕೆಂದರೆ ಇದು ದೇಹ (Body)ದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಸ್ನಾಯುವಿನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ, ಇಳಿವಯಸ್ಸಿನವರಲ್ಲಿ ಅಸಮತೋಲನದಿಂದಾಗಿ ಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸೂರ್ಯನ ಬೆಳಕಿಗೆ ಪ್ರತಿದಿನ ಒಡ್ಡಿಕೊಳ್ಳುವಿಕೆಯು ವಿಟಮಿನ್ D ಯ ಪ್ರಾಥಮಿಕ ಮತ್ತು ನೈಸರ್ಗಿಕವಾಗಿ ಲಭ್ಯವಿರುವ ಮೂಲವಾಗಿದೆ.

3. ವಿಟಮಿನ್ E: ವಿಟಮಿನ್ E ಒಂದು ಉತ್ಕರ್ಷಣ ನಿರೋಧಕವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಮತ್ತು ಒಣಬೀಜಗಳು, ಬೀಜಗಳು ಮತ್ತು ಹಣ್ಣುಗಳಂತಹ ವಿವಿಧ ಆಹಾರಗಳಲ್ಲಿ ಇರುತ್ತದೆ. ಬಾದಾಮಿ, ಸೂರ್ಯಕಾಂತಿ ಬೀಜಗಳು, ಕಡಲೆಬೀಜ, ಆವಕಾಡೊ, ಗೋಡಂಬಿ ಮತ್ತು ಬೆರ್ರಿಗಳಂತಹ ವಿಟಮಿನ್ E ಸಮೃದ್ಧ ಆಹಾರಗಳನ್ನು ಸೇವಿಸುವುದರಿಂದ ದೇಹದ ಈ ಸೂಕ್ಷ್ಮ ಪೋಷಕಾಂಶದ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ.

4 ಒಮೆಗಾ-3: ಕೊಬ್ಬಿನ ಆಮ್ಲಗಳು, ವಿಟಮಿನ್ C, ವಿಟಮಿನ್ B6, ಸತು ಮತ್ತು ಫೋಲೇಟ್‍ನಂತಹ ಇತರ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸಿಕೊಳ್ಳುವುದು ದೇಹದ ಆರೋಗ್ಯಕರ ವಯಸ್ಸಾಗುವಿಕೆಗೆ ಅವಶ್ಯಕವಾಗಿದೆ.

Latest Videos
Follow Us:
Download App:
  • android
  • ios