ಸ್ನಾಯು ಸೆಳೆತ… ಸಹಿಸಲಾರದ ಈ ನೋವನ್ನು ನಿವಾರಿಸಲು ಹೀಗ್ ಮಾಡಿ
ಅನೇಕ ಬಾರಿ ನಾವು ಒಂದೇ ಭಂಗಿಯಲ್ಲಿ ದೀರ್ಘಕಾಲದವರೆಗೆ ಕುಳಿತಾಗ, ವ್ಯಾಯಾಮ ಅಥವಾ ಇತರ ಯಾವುದೇ ದೈಹಿಕ ಚಟುವಟಿಕೆ ಮಾಡದೇ ಇದ್ದಾಗ ಏನಾಗುತ್ತೆ?, ಸ್ವಲ್ಪ ಸಮಯದ ನಂತರ ಸ್ನಾಯು ನೋವು ಮತ್ತು ಬಿಗಿತದ ಸಮಸ್ಯೆ ಉಂಟಾಗುತ್ತೆ ಅಲ್ವಾ?. ಈ ಕಾರಣದಿಂದಾಗಿ ಜನರು ಸಾಕಷ್ಟು ಸಮಸ್ಯೆ ಹೊಂದುತ್ತಾರೆ. ಇದರಿಂದ ದೇಹದಲ್ಲಿ ನೋವು ಕೂಡ ಉಂಟಾಗುವ ಸಾಧ್ಯತೆ ಇದೆ. ಹಾಗಿದ್ರೆ ಸ್ನಾಯುಗಳಲ್ಲಿ ನೋವು ಕಡಿಮೆ ಮಾಡಲು ನೀವೇನು ಮಾಡಬೇಕು?
ಕೆಲವೊಮ್ಮೆ ರಕ್ತ ಪರಿಚಲನೆಯ ಕೊರತೆ ಅಂದ್ರೆ ಸರಿಯಾಗಿ ರಕ್ತ ಸಂಚಾರ(Blood circulation) ಆಗದೇ ಇರೋದು, ಸ್ನಾಯುಗಳಲ್ಲಿ ಊತ, ರಕ್ತದ ಪೂರೈಕೆಯ ಕೊರತೆ ಮತ್ತು ಅಪಧಮನಿಗಳ ಕಿರಿದಾಗುವಿಕೆಯಿಂದ ಸ್ನಾಯು ಸೆಳೆತ ಉಂಟಾಗಬಹುದು. ಇದು ಜನರಿಗೆ ತುಂಬಾನೆ ತೊಂದರೆ ಉಂಟುಮಾಡುತ್ತೆ ಮತ್ತು ಅದನ್ನು ನಿವಾರಿಸಲು ಜನ ಏನೇನೋ ಔಷಧಿಗಳನ್ನು ಸಹ ಸೇವಿಸುತ್ತಾರೆ, ಇನ್ನೇನೋ ಮಾಡುತ್ತಾರೆ..
ಹಾಗಿದ್ರೆ ಸ್ನಾಯು ಬಿಗಿತ ಸಮಸ್ಯೆ ನಿವಾರಿಸಲು ಔಷಧಿಗಳಿಂದ ಮಾತ್ರ ಸಾಧ್ಯವೇ? ಅಲ್ಲ…. ಕೆಲವು ಮನೆಮದ್ದುಗಳು ಸ್ನಾಯು ಬಿಗಿತವನ್ನು ಸರಿಪಡಿಸಲು ತುಂಬಾ ಸಹಾಯಕಾರಿ ಎಂದು ತಿಳಿದಿದೆಯೇ? ಅಲ್ಲದೆ, ಇವುಗಳ ಸಹಾಯದಿಂದ, ನೀವು ಸ್ನಾಯು ಸೆಳೆತದ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಹ ಪಡೆಯಬಹುದು. ಸ್ನಾಯುಗಳ ಬಿಗಿತಕ್ಕೆ ಇಲ್ಲಿದೆ ನೋಡಿ ಮನೆಮದ್ದುಗಳು(Home remedies).
ಸ್ನಾಯು ಬಿಗಿತವನ್ನು ತೆಗೆದುಹಾಕಲು ಪರಿಹಾರಗಳು-
1. ಪೌಷ್ಟಿಕಾಂಶ ಭರಿತ ಆಹಾರ(Nutritious food) ಸೇವಿಸಿ
ಸ್ನಾಯುಗಳ ಬಿಗಿತ ಮತ್ತು ಸೆಳೆತಗಳು ಕೆಲವೊಮ್ಮೆ ದೇಹದಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮುಂತಾದ ಅಗತ್ಯ ಪೋಷಕಾಂಶಗಳ ಕೊರತೆಯ ಸಂಕೇತವಾಗಿರಬಹುದು. ಈ ಕಾರಣದಿಂದಾಗಿ ಕಾಲಿನ ಸ್ನಾಯುಗಳಲ್ಲಿ ಸೆಳೆತದ ಸಮಸ್ಯೆ ಕಂಡುಬರುತ್ತೆ. ಆದ್ದರಿಂದ ಸಮತೋಲಿತ ಮತ್ತು ಪೌಷ್ಟಿಕಾಂಶಭರಿತ ಆಹಾರ ಸೇವಿಸಿ.
2. ಸ್ಟ್ರೆಚಿಂಗ್(Stretching) ಮಾಡಿ
ಹೆಚ್ಚಾಗಿ ಸ್ನಾಯು ಬಿಗಿತದ ಸಮಸ್ಯೆಯು ಒಂದೇ ಭಂಗಿಯಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳೋದರಿಂದ ಉಂಟಾಗುತ್ತೆ. ಇದನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಸ್ಟ್ರೆಚಿಂಗ್ ಮಾಡೋದು. 10-15 ನಿಮಿಷಗಳ ಕಾಲ ಸ್ಟ್ರೆಚಿಂಗ್ ಮಾಡಿ, ಅದು ಬಿಗಿತ, ಸೆಳೆತದಿಂದ ಶೀಘ್ರ ಪರಿಹಾರ ನೀಡುತ್ತೆ.
3. ಹೀಟ್ / ಕೋಲ್ಡ್ ಥೆರಪಿ(Heat/cold therapy)
ಹೀಟ್ ಅಥವಾ ಕೋಲ್ಡ್ ಥೆರಪಿ ಸ್ನಾಯುಗಳ ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತೆ. ನೀವು ಬಿಸಿ ಅಥವಾ ತಂಪಾದ ನೀರಿನ ಥೆರಪಿಗಳಲ್ಲಿ, ಎರಡನ್ನೂ ಮಾಡಬಹುದು. ಇದು ಸ್ನಾಯು ನೋವು ಮತ್ತು ಬಿಗಿತವನ್ನು ನಿವಾರಿಸುತ್ತೆ.
4. ಮಸಾಜ್
ಸ್ನಾಯುಗಳನ್ನು ಬಿಸಿ ಎಣ್ಣೆ ಅಥವಾ ತುಪ್ಪದಿಂದ ಮಸಾಜ್(Oil massage) ಮಾಡುವುದು ಸಹ ಬಿಗಿತವನ್ನು ತೆಗೆದುಹಾಕಲು ತುಂಬಾ ಪ್ರಯೋಜನಕಾರಿ. ಇದು ಸ್ನಾಯುಗಳಲ್ಲಿ ರಕ್ತ ಪರಿಚಲನೆ ಮತ್ತು ಹರಿವನ್ನು ಸುಧಾರಿಸುತ್ತೆ. ಮಸಾಜ್ ಮಾಡಲು ನೀವು ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಬಳಸಿರಿ.
5. ಬಿಸಿ ನೀರಿನಿಂದ ಸ್ನಾನ (Hot water bath)ಮಾಡಿ
ಬಿಸಿ ನೀರಿನಿಂದ ಸ್ನಾನ ಮಾಡೋದರಿಂದ ಸ್ನಾಯುಗಳ ಆಯಾಸವನ್ನು ತೆಗೆದುಹಾಕುತ್ತೆ ಮತ್ತು ಊತವನ್ನು ಕಡಿಮೆ ಮಾಡುತ್ತೆ . ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತೆ. ಆದ್ದರಿಂದ ಸ್ನಾಯು ಸೆಳೆತ ಮತ್ತು ಬಿಗಿತವನ್ನು ನಿವಾರಿಸಲು ಹಾಟ್ ಶವರ್ ತೆಗೆದುಕೊಳ್ಳೋದು ರಾಮಬಾಣವಾಗಿದೆ.