ಅಂತರ್ಮುಖಿಗಳು ಯಾರು? ಇಂದೇ ಯಾಕೆ ಅಂತರ್ಮುಖಿ ದಿನ ಆಚರಿಸಲಾಗುತ್ತೆ ಗೊತ್ತಾ?

ಹೊಸ ವರ್ಷ ಶುರುವಾಗಿ ಒಂದು ದಿನ ಕಳೆದಿದೆ. ಎರಡನೇ ದಿನವನ್ನು ವಿಶ್ವ ಅಂತರ್ಮುಖಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತರ್ಮುಖಿ ಯಾರು, ಅವರ ಸ್ವಭಾವ ಏನು ಎಂಬುದರ ವಿವರ ಇಲ್ಲಿದೆ. 
 

World introvert day 2025 history roo

ವರ್ಷಾಂತ್ಯ, ಹೊಸ ವರ್ಷಾಚರಣೆ (New Year)ಯ ಅಬ್ಬರ ಈಗ ತಣ್ಣಗಾಗಿದೆ.  ಬಿರುಗಾಳಿ ಸಮೇತ ಆರ್ಭಟಿಸಿ ಮಹಾ ಮಳೆಯೊಂದು ನಿಂತ ಅನುಭವ. ಈ ಪ್ರಶಾಂತತೆಯ ದಿನವನ್ನೇ ಅಂತರ್ಮುಖಿ ದಿನ (Introverts Day) ಎಂದು ಆಚರಿಸಲಾಗುತ್ತದೆ. ಜನವರಿ 2ರಂದು ವಿಶ್ವದಾದ್ಯಂತ ಅಂತರ್ಮುಖಿ ದಿನವನ್ನಾಗಿ ಆಚರಿಸ್ತಾ ಬರಲಾಗಿದೆ. ಅಂತರ್ಮುಖಿಗಳಿಗೆ ಸ್ಥಾನ ನೀಡಲು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಈ ದಿನ ಮೀಸಲಿದೆ.

ಅಂತರ್ಮುಖಿ ಯಾರು? : ಶಾಂತ, ಕಡಿಮೆ ಉತ್ಸಾಹಿ ವಾತಾವರಣಕ್ಕೆ ಆದ್ಯತೆ ನೀಡುವ ವ್ಯಕ್ತಿಯನ್ನು ಅಂತರ್ಮುಖಿ. ಎಂದು ಕರೆಯಲಾಗುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನಂತರ, ಅಂತರ್ಮುಖಿಗಳು ಸಾಮಾನ್ಯವಾಗಿ ದಣಿಯುತ್ತಾರೆ. ತಮ್ಮನ್ನು ತಾವು ರೀಚಾರ್ಜ್ ಮಾಡಲು ಅವರಿಗೆ ಸಮಯದ ಅಗತ್ಯವಿರುತ್ತದೆ. ಅಂತರ್ಮುಖಿಗಳು ಮತ್ತು ಬಹಿರ್ಮುಖಿಗಳ (Extrovert) ಮಿದುಳುಗಳು ಡೋಪಮೈನ್‌ (Dopamine)ಗೆ ಪ್ರತಿಕ್ರಿಯಿಸುವ ರೀತಿ ವಿಭಿನ್ನವಾಗಿರುತ್ತದೆ. ಹಾಗಾಗಿ ಅಂತರ್ಮುಖಿಗಳಿಗೆ ಗಲಾಟೆ ನಂತ್ರ ಶಾಂತ ವಾತಾವರಣದಲ್ಲಿ ಸಮಯ ಕಳೆಯುವುದು ಅನಿವಾರ್ಯ. 

ಇವತ್ತಿಂದಲೇ ಪ್ರತಿದಿನ 20 ನಿಮಿಷ ಸೈಕಲ್ ತುಳಿಯೋ ಸಂಕಲ್ಪ ಮಾಡಿ; ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ!

ಮಾನಸಿಕ ಸ್ಥಿತಿಯಲ್ಲಿ ಅಂತರ್ಮುಖಿಯನ್ನು ಒಂದು ಪರಿಕಲ್ಪನೆ ಎಂದು ವ್ಯಾಖ್ಯಾನಿಸಿದವರಲ್ಲಿ ಸ್ವಿಸ್ ಮನೋವೈದ್ಯ ಕಾರ್ಲ್ ಗುಸ್ತಾವ್ ಜಂಗ್ ಮೊದಲಿಗರಾಗಿದ್ದರು. ಅವರು 1921 ರ ಪುಸ್ತಕ,  ಸೈಕಲಾಜಿಕಲ್ ಟೈಪ್ಸ್ ನಲ್ಲಿ, ಪ್ರತಿಯೊಬ್ಬ ಮನುಷ್ಯನು ಅಂತರ್ಮುಖಿ ಅಥವಾ ಬಹಿರ್ಮುಖಿ ಸ್ವಭಾವವನ್ನು ಹೊಂದಿರುತ್ತಾನೆ ಎಂದು ಬರೆದಿದ್ದರು. ಅಂತರ್ಮುಖಿಗಳನ್ನು ಪ್ರಾಚೀನ ಗ್ರೀಕ್ ದೇವರು ಅಪೊಲೊಗೆ ಹೋಲಿಸಿದ್ದರು.  ಅಂತರ್ಮುಖಿಗಳು ಕನಸು ಮತ್ತು ದೃಷ್ಟಿಯನ್ನು ಆಂತರಿಕ ಪ್ರಪಂಚದ ಮೇಲೆ ಕೇಂದ್ರೀಕರಿಸುತ್ತಾರೆ. ಇದು ಇತರರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಆಸಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಕಾರ್ಲ್ ಹೇಳಿದ್ದರು. ಆ ನಂತ್ರ ಅನೇಕ ತಜ್ಞರು, ಅಂತರ್ಮುಖಿ ವಿಷ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ.

ವಿಶ್ವ ಅಂತರ್ಮುಖಿ ದಿನದ ಇತಿಹಾಸ : ಪ್ರಖ್ಯಾತ ಜರ್ಮನ್ ಮನಶ್ಶಾಸ್ತ್ರಜ್ಞ ಮತ್ತು ಹ್ಯಾಪಿಲಿ ಇಂಟ್ರೊವರ್ಟೆಡ್ ಎವರ್ ಆಫ್ಟರ್ ಎಂಬ ಉಚಿತ ಇ-ಪುಸ್ತಕದ ಸೃಷ್ಟಿಕರ್ತ ಫೆಲಿಸಿಟಾಸ್ ಹೈನ್, ವಿಶ್ವ ಅಂತರ್ಮುಖಿ ದಿನದ ಆಚರಣೆಗೆ ಅಡಿಪಾಯ ಹಾಕಿದ್ರು.  ಹೇನ್ ಸೆಪ್ಟೆಂಬರ್ 20, 2011 ರಂದು ತಮ್ಮ ವೆಬ್‌ಸೈಟ್  iPersonic ನಲ್ಲಿ, ನಮಗೆ ವಿಶ್ವ ಅಂತರ್ಮುಖಿ ದಿನ ಏಕೆ ಬೇಕು ಎಂಬ ಶೀರ್ಷಿಕೆಯ ಬ್ಲಾಗ್ ಬರೆದಿದ್ದರು. ಕ್ರಿಸ್‌ಮಸ್‌ನಿಂದ ಪ್ರಾರಂಭವಾಗುವ ರಜೆ, ಹೊಸ ವರ್ಷದ ಮೊದಲ ದಿನ ಕೊನೆಗೊಳ್ಳುತ್ತದೆ. ಇಷ್ಟು ದಿನ ರಜೆ, ಸಂಭ್ರಮಾಚರಣೆಯಲ್ಲಿದ್ದ ಅಂತರ್ಮುಖಿ ಜನರಿಗೆ ಕೆಲಸಕ್ಕೆ ಮರಳುವ ಮುನ್ನ ಆಳವಾದ ಉಸಿರನ್ನು ತೆಗೆದುಕೊಳ್ಳಲು ಒಂದು ದಿನ ಮೀಸಲಿರಬೇಕು. ಜನವರಿ 2 ಅನ್ನು ವಿಶ್ವ ಅಂತರ್ಮುಖಿ ದಿನವೆಂದು ಘೋಷಿಸಿ ಎಂದು ಹೆನ್ ಪ್ರಸ್ತಾಪಿಸಿದ್ದರು. 

ಅಂತರ್ಮುಖಿಯರ ಸ್ವಭಾವ :  ಅಂತರ್ಮುಖಿಗಳನ್ನು ಸೊಕ್ಕಿನ, ಅಸಡ್ಡೆ, ಅಂಜುಬುರುಕರೆಂದು ಭಾವಿಸ್ತಾರೆ. ಆದ್ರೆ ಅದು ಸತ್ಯವಲ್ಲ. ಅಂತರ್ಮುಖಿಗಳು ಏಕಾಂಗಿಯಾಗಿರಲು ಬಯಸುತ್ತಾರೆ, ಎಲ್ಲಾ ಸಮಯದಲ್ಲೂ ಏಕಾಂಗಿಯಾಗಿರಲು ಬಯಸುತ್ತಾರೆ ಎಂಬುದು ಇದರ ಅರ್ಥವಲ್ಲ. ಅಂತರ್ಮುಖಿಗಳು ಸಾಮಾನ್ಯವಾಗಿ ಶಾಂತವಾಗಿರುತ್ತಾರೆ. ಸಾಮಾಜಿಕ ಸಂವಹನಗಳ ಸಮಯದಲ್ಲಿ ವಿಚಿತ್ರವಾಗಿ ವರ್ತಿಸಬಹುದು. ಆದರೆ ಅವರು ಅಸಭ್ಯವಾಗಿ ವರ್ತಿಸುತ್ತಾರೆಂದಲ್ಲ. ಅವರು ಕೆಲವೊಮ್ಮೆ ಬಹಿರ್ಮುಖಿಯಾಗುತ್ತಾರೆ. ಆರಾಮವೆನ್ನಿಸುವ ವ್ಯಕ್ತಿ ಜೊತೆ ಅವರಿ ಬಹುರ್ಮುಖಿಯಾಗಿರುತ್ತಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಸಾರ್ವಜನಿಕ ಭಾಷಣಕಾರರಲ್ಲಿ ಕೆಲವು ಅಂತರ್ಮುಖಿಗಳು. ಹಾಗಾಗಿ ನೀವು ಅಂತರ್ಮುಖಿಯಾಗಿದ್ದರೆ ನಾಚಿಕೆಪಡುವ ಅಗತ್ಯವಿಲ್ಲ.  

ಮಕ್ಕಳು ಪದೇ ಪದೇ ಉಗುರು ಕಚ್ಚಿದರೆ ಅಪಾಯ ಯಾರಿಗೆ?

ವಿಶ್ವ ಅಂತರ್ಮುಖಿ ದಿನ ಹೀಗೆ ಮಾಡಿ:
•     ಈ ದಿನ ನಿಮ್ಮ ಮನೆಯಲ್ಲಿಯೇ ಇದೆ. ಪಾರ್ಟಿಗಳಿಗೆ ಬೈ ಹೇಳಿ ನಿಮ್ಮಿಷ್ಟದ ಕೆಲಸ ಮಾಡಿ. ಹೊರಗಿನ ಶಬ್ಧದಿಂದ ದೂರವಿರಿ. 
•     ಶಾಂತವಾದ ರಸ್ತೆಯಲ್ಲಿ ವಾಕಿಂಗ್ ಮಾಡಿ. ಸಾಕುಪ್ರಾಣಿಗಳ ಜೊತೆ ಸಮಯ ಕಳೆಯಿರಿ. ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ.
•    ಈ ದಿನ ಏಕಾಂಗಿಯಾಗಿರಿ. ಕಥೆ, ಕವನ ಬರೆಯಿರಿ. ಇಡೀ ದಿನವನ್ನು ಸಂತೋಷದಿಂದ ಕಳೆಯಿರಿ.

Latest Videos
Follow Us:
Download App:
  • android
  • ios