ಇವತ್ತಿಂದಲೇ ಪ್ರತಿದಿನ 20 ನಿಮಿಷ ಸೈಕಲ್ ತುಳಿಯೋ ಸಂಕಲ್ಪ ಮಾಡಿ; ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ!
ನಾವು ಆರೋಗ್ಯವಾಗಿರಬೇಕೆಂದರೆ ಪ್ರತಿದಿನ ಪೌಷ್ಟಿಕ ಆಹಾರ ಸೇವಿಸಬೇಕು. ಅಷ್ಟೇ ಅಲ್ಲ. ಅದರ ಜೊತೆಗೆ ವ್ಯಾಯಾಮ ಮಾಡಬೇಕು. ಹಿಂದಿನ ಜನರು ಸಾಮಾನ್ಯವಾಗಿ ಸೈಕಲ್ ಬಳಸುತ್ತಿದ್ದರು. ಪ್ರತಿನಿತ್ಯ ಹತ್ತಾರು ಕಿಮೀ ಸೈಕಲ್ ತುಳಿಯುತ್ತಿದ್ದರಿಂದ ಸಹಜವಾಗಿ ಆರೋಗ್ಯವಾಗಿರುತ್ತಿದ್ದರು. ಆದರೆ ಇತ್ತೀಚೆಗೆ ದೈಹಿಕ ಶ್ರಮವಿಲ್ಲದೆ ಕಾರು ಬೈಕ್ ಗಳು ಬಂದಿವೆ. ದೈಹಿಕ ಶ್ರಮವಿಲ್ಲದೆ ಹಲವು ಕಾಯಿಲೆ, ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ದಿನಕ್ಕೆ ಕನಿಷ್ಟ 20 ನಿಮಿಷ ಸೈಕಲ್ ತುಳಿಯುವದರಿಂದ ಎಷ್ಟೆಲ್ಲ ಆರೋಗ್ಯಕರ ಪ್ರಯೋಜನ ಸಿಗುತ್ತದೆ ಎಂಬುದುನ್ನು ಇಲ್ಲಿ ತಿಳಿಯೋಣ.
ಸೈಕ್ಲಿಂಗ್
ಪ್ರತಿ ದಿನ ಕನಿಷ್ಟ 20 ನಿಮಿಷಗಳ ಕಾಲ ಸೈಕಲ್ ತುಳಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಸೈಕ್ಲಿಂಗ್ ನಮ್ಮನ್ನು ಆರೋಗ್ಯವಾಗಿಡಲು ಉತ್ತಮ ವ್ಯಾಯಾಮ. ಏಕೆಂದರೆ ಸೈಕಲ್ ತುಳಿಯುವುದಲ್ಲಿ ಇಡೀ ದೇಹ ಕೆಲಸ ಮಾಡುತ್ತದೆ.
ಸೈಕ್ಲಿಂಗ್
ಸೈಕ್ಲಿಂಗ್‌ನಿಂದ ಸ್ನಾಯುಗಳು ಬಲಿಷ್ಠಗೊಳ್ಳುವುದಲ್ಲದೆ ದೇಹದ ಎಲ್ಲ ಭಾಗಗಳು ಬಲಗೊಳ್ಳುತ್ತವೆ. ದಿನನಿತ್ಯದ ಸೈಕ್ಲಿಂಗ್ ಶ್ವಾಸಕೋಶವನ್ನು ಆರೋಗ್ಯಕರವಾಗಿರಿಸುತ್ತದೆ. ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಆಮ್ಲಜನಕವನ್ನು ಹೀರಿಕೊಳ್ಳುವ ಶ್ವಾಸಕೋಶದ ಸಾಮರ್ಥ್ಯವು ಹೆಚ್ಚಾಗುತ್ತದೆ.
ಕೀಲು ಮೊಣಕಾಲು ನೋವು ನಿವಾರಣೆ:
ಇಂದು ಬಹುತೇಕರನ್ನು ಅದರಲ್ಲೂ ಹಿರಿಯರನ್ನು ಕಾಡುವ ಸಮಸ್ಯೆ ಕೀಲು ನೋವು, ಮಂಡಿ ನೋವು. ಮೊಣಕಾಲು ನೋವಿನಿಂದ ಅನೇಕರು ನಡೆದಾಡುವುದನ್ನ ಬಿಟ್ಟಿದ್ದಾರೆ. ಪ್ರತಿದಿನ ಸೈಕಲ್ ತುಳಿಯುವುದರಿಂದ ಇಂಥ ಸಮಸ್ಯೆ, ನೋವುಗಳಿಂದ ಮುಕ್ತಿ ಪಡೆಯಬಹುದು.
ಸೈಕ್ಲಿಂಗ್
ನಿಮಗೆ ವಿಪರೀತ ಕೀಲು, ಮಂಡಿ ನೋವುಗಳಿದ್ದಲ್ಲಿ ವೈದ್ಯರ ಸಲಹೆ ಪಡೆದು ಅದರಂತೆ ಸೈಕ್ಲಿಂಗ್ ಮಾಡಬಹುದು. ಹೊರಗಡೆ ಸೈಕ್ಲಿಂಗ್ ಮಾಡುವ ಬದಲು ಮನೆಯಲ್ಲಿ, ಅಥವಾ ಜಿಮ್‌ಗಳಲ್ಲಿ ಸೈಕ್ಲಿಂಗ್ ಮಾಡಬಹುದು. ಸೈಕ್ಲಿಂಗ್ ಒಂದು ಉತ್ತಮ ಕಾರ್ಡಿಯೊ ವ್ಯಾಯಾಮವಾಗಿದೆ ಇದರಿಂದ ಹೃದಯದ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.
ತೂಕ ಇಳಿಸಿಕೊಳ್ಳುವುದು ಸುಲಭ:
ನೀವು ಅಧಿಕ ತೂಕ ಹೊಂದಿದ್ದರೆ ದಿನಕ್ಕೆ 20ನಿಮಿಷಗಳ ಸೈಕ್ಲಿಂಗ್ ಮಾಡುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಪ್ರತಿದಿನ ಸೈಕಲ್ ತುಳಿಯುವುದರಿಂದ ದೇಹದಲ್ಲಿ ಶೇಖರಣೆಗೊಂಡಿರುವ ಕೊಬ್ಬು ಕರಗುತ್ತದೆ. ಕೆಲವೇ ದಿನಗಳಲ್ಲಿ ದೇಹಕ್ಕೆ ಸುಂದರ ಆಕರ ದೊರೆತು ಸುಂದರವಾಗಿ ಕಾಣುತ್ತೀರಿ.