World Cancer Day 2023: ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಚಿಕಿತ್ಸೆ ಜೊತೆ ನೆರವಾಗಲಿದೆ ಈ ಥೆರಪಿ
ಕ್ಯಾನ್ಸರ್..ಹೆಸರು ಕೇಳ್ತಿದ್ದಂತೆ ಮೈ ಬೆವರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗ್ತಿದೆ. ಕ್ಯಾನ್ಸರ್ ರೋಗಿಗಳು ವೈದ್ಯಕೀಯ ಚಿಕಿತ್ಸೆ ಜೊತೆ ದ್ಯಾನ, ಯೋಗ, ಮಂತ್ರದ ನೆರವು ಪಡೆಯಬೇಕು.
ಕ್ಯಾನ್ಸರ್ ಒಂದು ಮಾರಣಾಂತಿಕ ಖಾಯಿಲೆಯಾಗಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಏರಿಕೆಯಾಗ್ತನೆ ಇದೆ. ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ಕ್ಯಾನ್ಸರ್‌ನಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಜನರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಕ್ಯಾನ್ಸರ್ (Cancer) ಹೆಸರು ಕೇಳ್ತಿದ್ದಂತೆ ಜನರು ಕಂಗಾಲಾಗ್ತಾರೆ. ಕ್ಯಾನ್ಸರ್ ಬಂದಿದೆ ಎಂದ ತಕ್ಷಣ ಬದುಕುವ ಇಚ್ಛೆ ಬಿಡ್ತಾರೆ. ಧೈರ್ಯ ಕಳೆದುಕೊಳ್ತಾರೆ. ಕ್ಯಾನ್ಸರ್ ದೇಹವನ್ನು ಮಾತ್ರವಲ್ಲ ದೊಡ್ಡ ಪ್ರಮಾಣದಲ್ಲಿ ಮನಸ್ಸನ್ನು ಘಾಸಿಗೊಳಿಸುತ್ತದೆ. ಮನಸ್ಸು (Mind) ಗಟ್ಟಿಯಾಗಿಲ್ಲ, ಭಯ (Fear), ಆತಂಕ ಮನೆ ಮಾಡಿದೆ ಎಂದಾಗ ಕ್ಯಾನ್ಸರ್ ಗುಣವಾಗೋದು ತುಂಬಾ ಕಷ್ಟವಾಗುತ್ತದೆ. ಕ್ಯಾನ್ಸರ್ ನಿಂದ ಹೊರಗೆ ಬರಬೇಕೆಂದ್ರೆ ಸೂಕ್ತ ಚಿಕಿತ್ಸೆ ಜೊತೆಗೆ ಮನಸ್ಸನ್ನು ಗಟ್ಟಿಗೊಳಿಸಬೇಕು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಚಿಕಿತ್ಸೆಯೊಂದಿಗೆ ಸಮಗ್ರ ಚಿಕಿತ್ಸೆಗೂ ಗಮನ ನೀಡಬೇಕು. ಮನಸ್ಸು ಎಂದಿಗೂ ದುರ್ಬಲವಾಗಿರಲು ಬಿಡಬಾರದು. ಯಾವಾಗಲೂ ಧನಾತ್ಮಕ ಚಿಂತನೆಯನ್ನು ಇಟ್ಟುಕೊಳ್ಳಬೇಕು. ನಾವಿಂದು ಸಮಗ್ರ ಚಿಕಿತ್ಸೆ (Treatment) ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
ಸಮಗ್ರ ಚಿಕಿತ್ಸೆ ಅಂದ್ರೇನು? : ಸಮಗ್ರ ಚಿಕಿತ್ಸೆಯು ಸಾಂಪ್ರದಾಯಿಕ ಔಷಧದ ಒಂದು ವಿಧವಾಗಿದೆ. ಇದನ್ನು ಆಧ್ಯಾತ್ಮಿಕತೆಯೊಂದಿಗೆ ಸೇರಿಸಲಾಗುತ್ತದೆ. ವ್ಯಕ್ತಿಯ ದೇಹವನ್ನು ರೋಗಗಳಿಂದ ಮುಕ್ತಗೊಳಿಸಲು ಇದು ನೆರವಾಗುತ್ತದೆ. ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಅನೇಕ ವಿಧಾನವಿದೆ. ಕಿಮೊಥೆರಪಿ, ಔಷಧಿ, ಶಸ್ತ್ರಚಿಕಿತ್ಸೆ ಜೊತೆಗೆ ಈ ಸಾಂಪ್ರದಾಯಿಕ ಚಿಕಿತ್ಸೆಯ ಸಹಾಯಪಡೆದು ನೀವು ಕ್ಯಾನ್ಸರ್ ಗೆಲ್ಲಬಹುದು.
ಕ್ಯಾನ್ಸರ್ ಗೆಲ್ಲಲು ಸಂಗೀತ ಚಿಕಿತ್ಸೆ : ಕ್ಯಾನ್ಸರ್ ಹೋರಾಟದಲ್ಲಿ ಸಂಗೀತ ಚಿಕಿತ್ಸೆ ಉತ್ತಮ ಆಯ್ಕೆಯಾಗಿದೆ. ಕ್ಯಾನ್ಸರ್ ವ್ಯಕ್ತಿಯನ್ನು ಭಯಭೀತಿಗೊಳಿಸುತ್ತದೆ. ಮಾನಸಿಕವಾಗಿ ಆತನನ್ನು ದುರ್ಬಲಗೊಳಿಸುತ್ತದೆ. ಮನಸ್ಸು ದೃಢವಾದ್ರೆ ಅರ್ಧ ರೋಗ ಗೆದ್ದಂತೆ. ಅನೇಕ ಬಾರಿ ರೋಗ ಕಡಿಮೆಯಾಗ್ತಿದ್ದರೂ ನಮ್ಮ ಮನಸ್ಸಿನಲ್ಲಿರುವ ಭಯ ನಮ್ಮನ್ನು ರೋಗದಿಂದ ಚೇತರಿಸಿಕೊಳ್ಳಲು ಬಿಡೋದಿಲ್ಲ. ಅದೇ ಮನಸ್ಸು ಧೈರ್ಯವಾಗಿ ಬಂದಿದ್ದನ್ನು ಎದುರಿಸಿದ್ರೆ ರೋಗ ಬೇಗ ಕಡಿಮೆಯಾಗುತ್ತದೆ. ನಿಮ್ಮ ಮನಸ್ಸಿನ ಆರೋಗ್ಯ ಸುಧಾರಿಸಲು ಸಂಗೀತ ಬೆಸ್ಟ್. ಸಂಗೀತ ಚಿಕಿತ್ಸೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾವನಾತ್ಮಕವಾಗಿ, ದೈಹಿಕವಾಗಿ, ಆಧ್ಯಾತ್ಮಿಕವಾಗಿ ನಿಮ್ಮನ್ನು ಬಲಗೊಳಿಸುತ್ತದೆ. ಕ್ಯಾನ್ಸರ್ ರೋಗಿಗಳು 285 Hz ಮತ್ತು 432 Hz ಶಬ್ದಗಳನ್ನು ಕೇಳುವುದು ತುಂಬಾ ಪ್ರಯೋಜನಕಾರಿಯಾಗಿದೆ.
ಬೊಜ್ಜು ಹೆಚ್ತಾ ಇದ್ಯಾ, ಇಗ್ನೋರ್ ಮಾಡ್ಬೇಡಿ ಅನಾರೋಗ್ಯ ಲಕ್ಷಣ ಇದಾಗಿರಬಹುದು!
ಯಂತ್ರ ವಿದ್ಯೆ : ನಿಮಗೆ ಅಚ್ಚರಿಯಾಗಬಹುದು, ಯಂತ್ರ ಕೂಡ ನಿಮ್ಮ ರೋಗವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಮಕ್ಕಳಿಗೆ ದೃಷ್ಟಿ ಬಿದ್ದಾಗ ಯಂತ್ರ ತಂದು ಕಟ್ಟೋದನ್ನು ನೀವು ಕೇಳರ್ತೀರಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಯಂತ್ರಗಳಿವೆ. ಒಂದೊಂದು ಯಂತ್ರ ಒಂದೊಂದು ಪ್ರಯೋಜನ ಹೊಂದಿದೆ. ವೈದ್ಯರ ಚಿಕಿತ್ಸೆ ಜೊತೆ ಜ್ಯೋತಿಷ್ಯಿಗಳು ನೀಡುವ ಯಂತ್ರವನ್ನು ತಂದು ಮನೆಯಲ್ಲಿಡಿ. ಸಂಜೀವಿನ ಯಂತ್ರವನ್ನು ಧರಿಸಬಹುದು ಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ.
ಮಂತ್ರದ ನೆರವು : ಅನಾದಿ ಕಾಲದಿಂದಲೂ ಮಂತ್ರಕ್ಕೆ ಮಹತ್ವ ನೀಡಲಾಗಿದೆ. ಮಂತ್ರದಲ್ಲಿ ಅದ್ಭುತ ಶಕ್ತಿಯಿದೆ ಎಂದು ನಂಬಲಾಗಿದೆ. ಶಾಂತ ಮನಸ್ಸಿನಿಂದ ಮಂತ್ರ ಜಪಿಸಿದ್ರೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಶಕ್ತಿ ಸಿಗುತ್ತದೆ. ಮಂತ್ರ ಪಠಣೆಯಿಂದ ಕೆಲ ರೋಗಗಳು ಗುಣವಾಗುತ್ತವೆ ಎಂಬುದು ಈಗಾಗಲೇ ಸಾಭೀತಾಗಿದೆ. ಕೊರೊನಾ ಸಂದರ್ಭದಲ್ಲಿ ಕೂಡ ಇದು ಹೆಚ್ಚು ಸುದ್ದಿಯಲ್ಲಿತ್ತು. ಮಹಾಮೃತ್ಯುಂಜಯ ಮಂತ್ರ ಮತ್ತು ರೋಗ ನಿವಾರಣಾ ಮಂತ್ರ ಹಾಗೂ ಗಾಯತ್ರಿ ಮಂತ್ರವನ್ನು ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ. ಕ್ಯಾನ್ಸರ್ ಯಾವುದೇ ಹಂತದಲ್ಲಿದ್ದರೂ ವ್ಯಕ್ತಿ ಮೃತ್ಯುಂಜಯ ಮಂತ್ರ ಹಾಗೂ ರೋಗ ನಿವಾರಕ ಸೂಕ್ತವನ್ನು ಜಪಿಸಬೇಕು. ರೋಗಿಗೆ ಇದನ್ನು ಜಪಿಸಲು ಸಾಧ್ಯವಿಲ್ಲವೆಂದಾದ್ರೆ ಆತನ ಸಂಬಂಧಿಕರು ಮಾಡಬಹುದು.
Future Prediction : 100 ವರ್ಷದಲ್ಲಿ ಬದಲಾಗಲಿದೆ ನಮ್ಮ ದೇಹ
ಯೋಗ : ಆರೋಗ್ಯ ತಜ್ಞರ ಪ್ರಕಾರ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ನಿಯಮಿತವಾಗಿ ಯೋಗ ಆಸನಗಳನ್ನು ಅಭ್ಯಾಸ ಮಾಡಬೇಕು. ಯೋಗ ಮತ್ತು ದೈಹಿಕ ವ್ಯಾಯಾಮಗಳಾದ ವಾಕಿಂಗ್, ಈಜು ಅಥವಾ ಸೈಕ್ಲಿಂಗ್ ಅನ್ನು ಪ್ರತಿದಿನ 30 ನಿಮಿಷಗಳ ಕಾಲ ಮಾಡಿದರೆ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಇದರೊಂದಿಗೆ, ವ್ಯಕ್ತಿಯ ಮನಸ್ಸು ಮತ್ತು ಮೆದುಳು ಸಹ ಆರೋಗ್ಯಕರವಾಗಿರುತ್ತದೆ.