World Asthma Day : ಮಕ್ಕಳನ್ನು ಹೈರಾಣ ಮಾಡುತ್ತೆ ಈ ಅಸ್ತಮಾ
ಈಗಿನ ಪರಿಸರ, ಜೀವನ ಶೈಲಿ, ಆಹಾರ ಮಕ್ಕಳ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಖಾಯಿಲೆ ಅಂಟಿಕೊಳ್ತಿದೆ. ಸಹಜ ಉಸಿರಾಟ ಸಾಧ್ಯವಾಗದೆ ಚಿತ್ರಹಿಂಸೆ ನೀಡುವ ಅಸ್ತಮಾ ಕೂಡ ಮಕ್ಕಳನ್ನು ಬಿಟ್ಟಿಲ್ಲ.
ಪ್ರತಿ ವರ್ಷ ಮೇ 2ನೇ ತಾರೀಕಿನಂದು ವಿಶ್ವ ಅಸ್ತಮಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಅಸ್ತಮಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಅಸ್ತಮಾ ಬರೀ ವಯಸ್ಕರಿಗೆ ಮಾತ್ರ ಕಾಡುವ ಖಾಯಿಲೆಯಲ್ಲ. ಈಗಿ ಪರಿಸರ ಮಾಲಿನ್ಯ, ಮಕ್ಕಳ ಬಾಲ್ಯವನ್ನು ಕಸಿದುಕೊಂಡಿದೆ. ಮಾಲಿನ್ಯದಿಂದಾಗಿ ಮಕ್ಕಳಲ್ಲೂ ಅಸ್ತಮಾ ಕಾಣಿಸಿಕೊಳ್ತಿದೆ. ಮಕ್ಕಳಿಗೆ ಸಾಮಾನ್ಯ ನೆಗಡಿ, ಜ್ವರ ಬಂದ್ರೆ ಅದನ್ನು ಸಹಿಸೋದು ಕಷ್ಟ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಮಕ್ಕಳು ಅಸ್ತಮಾ ವಿರುದ್ಧ ಹೋರಾಡೋದು ಕಷ್ಟವಾಗುತ್ತದೆ.
ಸಹಜವಾಗಿ ಉಸಿರಾಡಲು (Breath) ಸಾಧ್ಯವಾಗದೆ ಇರುವುದು, ಎದೆ ಬಿಗಿತ, ಕೆಮ್ಮು ಮತ್ತು ಉಬ್ಬಸ ಮಕ್ಕಳನ್ನು ಹೈರಾಣ ಮಾಡುತ್ತದೆ. ಮಕ್ಕಳಿ (Children) ಇದ್ರಿಂದಾಗಿ ಆಟವಾಡೋದು, ವ್ಯಾಯಾಮ ಮಾಡುವುದು ಇಲ್ಲವೆ ಇತರ ಚಟುವಟಿಕೆಯಲ್ಲಿ ಭಾಗಿಯಾಗೋದು ಕಷ್ಟವಾಗುತ್ತದೆ. ಮಕ್ಕಳಿಗೆ ಅಸ್ತಮಾ ಬರಬಾರದು ಅಂದ್ರೆ ಏನು ಮಾಡಬೇಕು, ಅದ್ರ ಲಕ್ಷಣ, ಚಿಕಿತ್ಸೆ ಏನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
Health Tips: ಅಧಿಕ ಪ್ರೊಟೀನ್‌ನಿಂದ ಕಿಡ್ನಿಗೆ ಹಾನಿ, ಇದು ನಿಜವೇ?
ಮಕ್ಕಳಲ್ಲಿ ಹೆಚ್ಚಾಗ್ತಿದೆ ಅಸ್ತಮಾ (Asthma) : ಈಗಿನ ದಿನಗಳಲ್ಲಿ ಅಸ್ತಮಾದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಶೇಕಡಾ 50 ಮಕ್ಕಳಿಗೆ ಅಸ್ತಮಾ ಇದೆ ಎಂದು ವರದಿಯೊಂದು ಹೇಳಿದೆ. ಆದ್ರೆ ಮಕ್ಕಳು ಪ್ರೌಢಾವಸ್ಥೆಗೆ ಬರ್ತಿದ್ದಂತೆ ಅಸ್ತಮಾದಿಂದ ಹೊರಬರ್ತಿದ್ದು, ಇದು ಖಷಿ ವಿಷ್ಯ. ಹಾಗಂತ ಅದನ್ನು ನಿರ್ಲಕ್ಷ್ಯ ಮಾಡೋದು ಸರಿಯಲ್ಲ. ಅಸ್ತಮಾಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ.
ವೈದ್ಯರು ಮಕ್ಕಳಿಗೆ ಕೆಲ ಪರೀಕ್ಷೆ ಮಾಡಿ ಅಸ್ತಮಾ ಪತ್ತೆ ಹಚ್ಚುತ್ತಾರೆ. ಶ್ವಾಸಕೋಶದ ಪರೀಕ್ಷೆ, ಇಮ್ಯುನೊಗ್ಲಾಬ್ಯುಲಿನ್ ಇ ಮತ್ತು ಇಯೊಸಿನೊಫಿಲ್ ಎಣಿಕೆ ಸೇರಿದಂತೆ ಅಲರ್ಜಿಗೆ ಸಂಬಂಧಿಸಿದ ರಕ್ತ ಪರೀಕ್ಷೆಗಳನ್ನು ಇದ್ರಲ್ಲಿ ಮಾಡಲಾಗುತ್ತದೆ.
ಮಕ್ಕಳನ್ನು ಕಾಡುವ ಅಸ್ತಮಾಕ್ಕೆ ಕಾರಣ : ಮಕ್ಕಳಿಗೆ ಅಸ್ತಮಾ ಬರಲು ಅನೇಕ ಕಾರಣವಿರುತ್ತದೆ. ಅನುವಂಶಿಕ, ಪರಿಸರದ ಅಂಶಗಳು, ಅಲರ್ಜಿ, ಉಸಿರಾಟದ ಸೋಂಕು, ಬೊಜ್ಜು, ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆ ಅಸ್ತಮಾ ಉಂಟಾಗಬಹುದು.
ನೀವು ಎಷ್ಟು ಟೈಮ್ ಬದುಕುವಿರಿ? ಈ ರೀತಿ ಟೆಸ್ಟ್ ಮಾಡಿ
ಅಸ್ತಮಾದಿಂದ ಮಕ್ಕಳ ರಕ್ಷಣೆ ಹೇಗೆ? : ಖಾಯಿಲೆ ಬರದಂತೆ ಮಕ್ಕಳನ್ನು ರಕ್ಷಣೆ ಮಾಡಿದ್ರೆ ಒಳ್ಳೆಯದು. ಪಾಲಕರಾದವರು ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅಸ್ತಮಾ ಪ್ರಚೋದಕಗಳಿಂದ ಮಕ್ಕಳನ್ನು ರಕ್ಷಿಸುವುದು ಮುಖ್ಯವಾಗಿದೆ. ಹೊಗೆ ಮತ್ತು ಪರಿಸರ ಮಾಲಿನ್ಯ ಹೆಚ್ಚಿರುವ ಜಾಗಕ್ಕೆ ಮಕ್ಕಳು ಹೆಚ್ಚು ಹೋಗದಂತೆ ನೋಡಿಕೊಳ್ಳುವುದು ಮುಖ್ಯ. ಮಗುವಿಗೆ ದೈಹಿಕ ವ್ಯಾಯಾಮ ಮುಖ್ಯವಾಗುತ್ತದೆ. ಮಕ್ಕಳು ಪ್ರತಿ ದಿನ ವ್ಯಾಯಾಮ, ಯೋಗ, ಪ್ರಾಣಾಯಾಮದಂತಹ ಆರೋಗ್ಯಕರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಮಕ್ಕಳ ಜೀವನಶೈಲಿ ಬಗ್ಗೆ ನಿಗಾ ಇಡಬೇಕು. ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಮಕ್ಕಳು ಸ್ಥೂಲಕಾಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಮಕ್ಕಳನ್ನು ಕಾಡುವ ಅಸ್ತಮಾಕ್ಕೆ ಚಿಕಿತ್ಸೆ : ಮಕ್ಕಳಿಗೆ ಕಾಡುವ ಅಸ್ತಮಾವನ್ನು ಹಲವು ಮಾರ್ಗಗಳಿಂದ ತಡೆಯಬಹುದು. ಮಕ್ಕಳಲ್ಲಿ ಸಮಸ್ಯೆ ಹೆಚ್ಚಾಗ್ತಿದ್ದಂತೆ ವೈದ್ಯರನ್ನು ಭೇಟಿಯಾಗಿ, ಸೂಕ್ತ ಚಿಕಿತ್ಸೆ ಕೊಡಿಸಬೇಕು. ಮಕ್ಕಳ ಸುತ್ತಮುತ್ತ ಧೂಮಪಾನಿಗಳು ಇರದಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಅಸ್ತಮಾ ಚಿಕಿತ್ಸೆಗೆ ಇನ್ಹೇಲರ್ ಬಳಕೆ ಮಾಡಲಾಗುತ್ತದೆ. ಅಸ್ತಮಾ ಚಿಕಿತ್ಸೆ ಮತ್ತು ತಡೆಗಟ್ಟುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಒಮ್ಮೆ ಇದನ್ನು ತೆಗೆದುಕೊಳ್ಳಲು ಶುರು ಮಾಡಿದ್ರೆ ಜೀವನ ಪರ್ಯಂತ ತೆಗೆದುಕೊಳ್ಳಬೇಕೆಂದು ಭಾವಿಸುವವರಿದ್ದಾರೆ. ಆದ್ರೆ ಇದು ತಪ್ಪು ಕಲ್ಪನೆ. ಅಸ್ತಮಾ ಯಾವ ಹಂತದಲ್ಲಿದೆ, ಅದ್ರ ಲಕ್ಷಣವೇನು ಎನ್ನುವುದ್ರ ಆಧಾರದ ಮೇಲೆ ಇನ್ಹೇಲರ್ ಬಳಕೆ ಮಾಡಬೇಕಾಗುತ್ತದೆ. ಕೆಲವೊಬ್ಬರಿಗೆ ಅಸ್ತಮಾ ಋತು ಬದಲಾವಣೆಯಿಂದ ಬರುತ್ತದೆ. ಮತ್ತೆ ಕೆಲವರಿಗೆ ವರ್ಷಪೂರ್ತಿ ಸಮಸ್ಯೆ ಇರುತ್ತದೆ.