Asianet Suvarna News Asianet Suvarna News

ಶಂಕಿತ ಡೆಂಗ್ಯೂ ಜ್ವರಕ್ಕೆ ರಾಜ್ಯದಲ್ಲಿ ಮೆಗ್ಗಾನ್ ಆಸ್ಪತ್ರೆ ನರ್ಸ್ ಬಲಿ!

ರಾಜ್ಯದಲ್ಲಿ  ಶಂಕಿತ ಡೆಂಗ್ಯೂ ಜ್ವರಕ್ಕೆ ನರ್ಸ್ ಒಬ್ಬರು ಬಲಿಯಾಗಿದ್ದಾರೆ.

bhadravati based Nurse dies of dengue in shivamogga gow
Author
First Published Jul 24, 2024, 4:40 PM IST | Last Updated Jul 24, 2024, 4:48 PM IST

ಶಿವಮೊಗ್ಗ (ಜು.24): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಘೀ ಪ್ರಕರಣಗಳ ಸಂಖ್ಯೆ 15 ಸಾವಿರ ದಾಟಿದೆ. ಈ ನಡುವೆ  ರಾಜ್ಯದಲ್ಲಿ  ಶಂಕಿತ ಡೆಂಗ್ಯೂ ಜ್ವರಕ್ಕೆ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ನರ್ಸಿಂಗ್ ಆಫೀಸರ್ ಹೇಮಾ(45) ಅವರು ಮಾರಕ ಡೆಂಗ್ಯೂಗೆ ಬಲಿಯಾದ ದುದೈವಿಯಾಗಿದ್ದಾರೆ.

ಭದ್ರಾವತಿ ಮೂಲದ ಹೇಮಾ ಅವರಿಗೆ ಕಳೆದ 25 ದಿನಗಳಿಂದ ಡೆಂಗ್ಯೂ ಬಾಧಿಸಿದೆ. ಆಗಾಗ ಅವರಿಗೆ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು. ಹಲವು ಬಾರಿ ಚಿಕಿತ್ಸೆ ಪಡೆದು ಹೇಮಾ ಗುಣಮುಖರಾಗಿದ್ದರು. ಆದರೆ ಮಂಗಳವಾರ ಇದ್ದಕ್ಕಿದ್ದಂತೆಯೇ ಜ್ವರ ಹೆಚ್ಚಾಗಿ ಕೋಮಾಗೆ ತೆರಳಿದ್ದ ಹೇಮಾ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಕೊನೆ ಉಸಿರೆಳೆದಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅವನು ರೀಲ್​ ಹೀರೋ ರಿಯಲ್​ ವಿಲನ್ ಪೊಲೀಸರಿಗೆ ಹೆದರಿ ರಾತ್ರೋ ರಾತ್ರಿ ಮದುವೆ 2 ತಿಂಗಳಿಗೆ ಮತ್ತೊಬ್ಬಳ ನಂಟು!

ಬೆಂಗಳೂರಿನಲ್ಲಿ ದಿನವೊಂದಕ್ಕೆ 150 ಕ್ಕೂ ಹೊಸ ಡೆಂಘಿ ಪ್ರಕರಣ: ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ 150 ಹೊಸ ಪ್ರಕರಣಗಳು ವರದಿಯಾಗುತ್ತಿವೆ, ಇದು ಅಧಿಕಾರಿಗಳು ಮತ್ತು ನಿವಾಸಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ವೈರಾಣು ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಆಯಾ ಪ್ರದೇಶಗಳಲ್ಲಿ ತ್ವರಿತವಾಗಿ ಜಾರಿಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಲಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು, ಇಲ್ಲಿದೆ ವೇಳಾಪಟ್ಟಿ ಮಾಹಿತಿ

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯುಎಂಸಿ)ಜತೆ  ಬೆಂಗಳೂರಿನಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ, ನಗರದಲ್ಲಿ ಜುಲೈ 1 ರಿಂದ ಜುಲೈ 22 ರವರೆಗೆ ಒಟ್ಟು 3,304 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಉಲ್ಲೇಖಿಸಲಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿಯ ಸ್ಥಳಗಳನ್ನು ತೊಡೆದು ಹಾಕಲು ಫಾಗಿಂಗ್ ಮತ್ತು ಕೀಟನಾಶಕ ಸಿಂಪರಣೆಯಂತಹ ಚಟುವಟಿಕೆಗಳನ್ನು ಹೆಚ್ಚಿಸಲು ಸಂಬಂಸಿದ ಇಲಾಖೆಗೆ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios