ಬಡವರಿಗಾಗಿ ಆಯುಷ್ಮಾನ್ ಗರೀಬ್ ಆಸ್ಪತ್ರೆ, ಬಡ ಕ್ಯಾನ್ಸರ್ ರೋಗಿಗಳಿಗೊಂದು ಆಶಾಕಿರಣ!

ಕ್ಯಾನ್ಸರ್ ಒಂದು ಮಾರಕ ರೋಗ. ಆರಂಭದಲ್ಲಿ ಇದು ಪತ್ತೆ ಆಗಿಲ್ಲ ಅಂದ್ರೆ ಅದರ ವಿರುದ್ಧ ಗೆಲ್ಲೋದು ಕಷ್ಟ. ಈಗಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಏರಿಕೆ ಆಗ್ತಿದೆ. ಹೊಸ ಹೊಸ ಕ್ಯಾನ್ಸರ್ ಹೆಸರು ಕೇಳಲು ಸಿಗ್ತಿದೆ.
 

Shocking The Number Of Cancer Patients Is Increasing In India roo

ಭಾರತದಲ್ಲಿ ಚಿಕ್ಕವರು ದೊಡ್ಡವರು ಎನ್ನದೇ ಎಲ್ಲರಿಗೂ ಈಗ ಹೃದಯಾಘಾತದ ಸಮಸ್ಯೆ ಕಾಣಿಸಿಕೊಳ್ತಿದೆ. ಹೃದಯ ಸಂಬಂಧಿ ಖಾಯಿಲೆ ಜೊತೆಗೆ ಭಾರತದಲ್ಲಿ ಅನೇಕರು ಮಾರಣಾಂತಿಕ ಖಾಯಿಲೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಮೊದಲು ಅಲ್ಲೊಂದು ಇಲ್ಲೊಂದು ಕಾಣಿಸಿಕೊಳ್ತಿದ್ದ ಕ್ಯಾನ್ಸರ್ ಈಗ ಏರಿಕೆಯಾಗ್ತನೆ ಇದೆ. ಮುಂದಿನ ವರ್ಷ ಅಂದ್ರೆ , 2025 ರ ವೇಳೆಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆ 16 ಲಕ್ಷ ದಾಟಲಿದೆ ಎಂಬ ಆಘಾತಕಾರಿ ಸುದ್ದಿಯನ್ನು ಭಾರತ ಸರ್ಕಾರ ನೀಡಿದೆ.

ಖಾಯಿಲೆ ಬಡವವರಿಗೆ ಬರ್ಬಾರದು ಎನ್ನುವ ಮಾತೊಂದಿದೆ. ಆದ್ರೆ ಖಾಯಿಲೆಗೆ ಕಣ್ಣಿಲ್ಲ. ಅದಕ್ಕೆ ಬಡವ – ಶ್ರೀಮಂತ ಎನ್ನುವ ಬೇಧವಿಲ್ಲ. ಹಾಗಾಗಿ ಎಲ್ಲರನ್ನೂ ರೋಗ ಕಾಡುತ್ತದೆ. ಕ್ಯಾನ್ಸರ್ ಕೂಡ ಇದ್ರಲ್ಲಿ ಒಂದು. ಕ್ಯಾನ್ಸರ್ ಪೀಡಿತ ಬಡವರು ಚಿಕಿತ್ಸೆ ದುಬಾರಿ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆಯದೆ ಪರಿತಪಿಸಬಾರದು. ಬಡವರಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರ್ತಿದೆ. ದೇಶದಲ್ಲಿ ಸುಮಾರು 30 ಹೊಸ ಕ್ಯಾನ್ಸರ್ ಆಸ್ಪತ್ರೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅದೇ ಸಮಯದಲ್ಲಿ, 10 ಹೊಸ ಕ್ಯಾನ್ಸರ್ ಆಸ್ಪತ್ರೆಗಳ ಕೆಲಸ ನಡೆಯುತ್ತಿದೆ. ಆಯುಷ್ಮಾನ್ ಗರೀಬ್ ಯೋಜನೆಯನ್ನು ಭಾರತ (India) ದಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 6 ಕೋಟಿ ಜನರು ಪ್ರಯೋಜನ ಪಡೆದಿದ್ದಾರೆ. ಸರ್ಕಾರ 10 ಸಾವಿರ ಜನೌಷಧಿ ಕೇಂದ್ರಗಳನ್ನೂ ತೆರೆದಿದೆ. 80 ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯವಿವೆ. ಈ ಮಧ್ಯೆ ಕೆಲ ಪ್ರಸಿದ್ಧ ಕ್ಯಾನ್ಸರ್ (Cancer) ಆಸ್ಪತ್ರೆಗಳು ನಮ್ಮಲ್ಲಿವೆ. 

ತಡವಾಗಿ ಗರ್ಭಧರಿಸೋದರಿಂದ ಸ್ತನ ಕ್ಯಾನ್ಸರ್ ಅಪಾಯವಿದ್ಯಾ?

ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆ : 
ಮುಂಬೈ ಟಾಟಾ ಮೆಮೋರಿಯಲ್ ಆಸ್ಪತ್ರೆ :
ಹೋಮಿ ಭಾಭಾ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಸಂಯೋಜಿತವಾಗಿರುವ ಟಾಟಾ ಮೆಮೋರಿಯಲ್ ಆಸ್ಪತ್ರೆಯು ಭಾರತದ ಅತ್ಯಂತ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇದು ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳು ಸೇರಿದಂತೆ ಸಮಗ್ರ ಕ್ಯಾನ್ಸರ್ ಆರೈಕೆ ಸೇವೆಗಳನ್ನು ಒದಗಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಂಕೊಲಾಜಿಸ್ಟ್‌ಗಳ ತಂಡದೊಂದಿಗೆ ಟಾಟಾ ಮೆಮೋರಿಯಲ್ ಆಸ್ಪತ್ರೆ ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನೆಯಲ್ಲಿ ಮುಂದಿದೆ.

ದೆಹಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್  : ಇದು ಭಾರತದ ಪ್ರಧಾನ ವೈದ್ಯಕೀಯ ಸಂಸ್ಥೆಯಾಗಿದೆ. ಇದು ಸುಧಾರಿತ ಕ್ಯಾನ್ಸರ್ ಚಿಕಿತ್ಸೆಯ ಆಯ್ಕೆಗಳನ್ನು ನೀಡುತ್ತದೆ. ಆಂಕೊಲಾಜಿಸ್ಟ್‌ಗಳ  ನುರಿತ ತಂಡ ಇಲ್ಲಿದೆ. 

ಚೆನ್ನೈ ಅಪೊಲೊ ಕ್ಯಾನ್ಸರ್ ಸಂಸ್ಥೆ : ಅಪೊಲೊ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ತನ್ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕ್ಯಾನ್ಸರ್ ಆರೈಕೆಗೆ ಹೆಸರುವಾಸಿಯಾಗಿದೆ. ಆಂಕೊಲಾಜಿಸ್ಟ್‌ಗಳು, ಶಸ್ತ್ರಚಿಕಿತ್ಸಕರು ಮತ್ತು ಸಹಾಯಕ ಸಿಬ್ಬಂದಿಯ ತಂಡ ಇಲ್ಲಿದ್ದು, ಆಧುನಿಕ ಚಿಕಿತ್ಸಾ ವಿಧಾನವನ್ನು ಈ ಆಸ್ಪತ್ರೆ ಹೊಂದಿದೆ. 

ಬೆಂಗಳೂರು ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆ : ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಬೆಂಗಳೂರಿನಲ್ಲಿದೆ. ಇದು ಕ್ಯಾನ್ಸರ್ ಕೇಂದ್ರವಾಗಿದ್ದು, ವಿಕಿರಣ ಚಿಕಿತ್ಸೆ, ಕೀಮೋಥೆರಪಿ  ಸೇರಿದಂತೆ ಉತ್ತಮ ಶ್ರೇಣಿಯ ಚಿಕಿತ್ಸೆಯನ್ನು ನೀಡುತ್ತದೆ. ಕಿದ್ವಾಯಿ ಸ್ಮಾರಕ ಸಂಸ್ಥೆಯು ಕ್ಯಾನ್ಸರ್ ಸಂಶೋಧನೆ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಕೋಲ್ಕತ್ತಾ ಟಾಟಾ ಮೆಮೋರಿಯಲ್ ಸೆಂಟರ್ : ಕೋಲ್ಕತ್ತಾದಲ್ಲಿರುವ ಟಾಟಾ ಮೆಮೋರಿಯಲ್ ಸೆಂಟರ್ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಅಂಗಸಂಸ್ಥೆಯಾಗಿದೆ. ಅಸಾಧಾರಣವಾದ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ಇದು ಒದಗಿಸುತ್ತದೆ.

30 ವರ್ಷಕ್ಕಿಂತ ಮೇಲ್ಪಟ್ಟವರು ಮಧುಮೇಹದ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸ್ಬೇಡಿ

ಕ್ಯಾನ್ಸರ್ ಆಸ್ಪತ್ರೆ : ದೆಹಲಿಯಲ್ಲಿರುವ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ, ವೆಲ್ಲೂರ್ ನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ಕೋಲ್ಕತ್ತಾದ ಟಾಟಾ ಮೆಮೋರಿಯಲ್ ಸೆಂಟರ್, ಮುಂಬೈನ ಪಿ.ಡಿ. ಹಿಂದೂಜಾ ನ್ಯಾಷನಲ್ ಆಸ್ಪತ್ರೆ ಮತ್ತು ಗುರಗಾಂವ್ ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಗಳು ಕೂಡ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಉತ್ತಮ ಸೇವೆ ಹಾಗೂ ಸೌಲಭ್ಯವನ್ನು ನೀಡ್ತಿವೆ. 
 

Latest Videos
Follow Us:
Download App:
  • android
  • ios