ರೋಗಿಯ ಎದುರೇ ಚಿಕಿತ್ಸೆ ಕೊಡೋದು ಹೇಗೆಂದು ಯೂಟ್ಯೂಬ್‌ನಲ್ಲಿ ನೋಡ್ತಿದ್ದ ಡಾಕ್ಟರ್‌ !

ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ನೀವು ಆಸ್ಪತ್ರೆಗೆ ಹೋಗಿದ್ದೀರಿ ಅಂದುಕೊಳ್ಳಿ. ಈ ಸಂದರ್ಭದಲ್ಲಿ ವೈದ್ಯರು ನಿಮ್ಮನ್ನು ಮಲಗಳು ಹೇಳಿ ಯೂಟ್ಯೂಬ್‌ (YouTube) ನಲ್ಲಿ ಚಿಕಿತ್ಸೆ ನೀಡುವುದು ಹೇಗೆಂದು ನೋಡಿದರೆ ಹೇಗಿರುತ್ತದೆ. ಇಲ್ಲಾಗಿದ್ದು ಅದೇ. 

Woman Records Doctor Watching A YouTube Video On How To Treat Her Cyst Vin

ವೈದ್ಯೋ ನಾರಾಯಣೋ ಹರಿ ಅಂತಾರೆ. ರೋಗಿಗಳ ಜೀವವನ್ನು ಉಳಿಸುವ ವೈದ್ಯರನ್ನು (Doctor) ಸಾಕ್ಷಾತ್ ದೇವರೆಂದೇ ಜನಸಾಮಾನ್ಯರು ನೋಡುತ್ತಾರೆ. ಹೀಗಿದ್ದೂ ವೈದ್ಯರಿಂದಲೂ ಕೆಲವೊಂದು ಬಾರಿ ತಪ್ಪಾಗುತ್ತದೆ. ಆಪರೇಷನ್‌ಗಳಲ್ಲಿ ಎಡವಟ್ಟುಗಳಾಗಿ ರೋಗಿ ಸಾಯುವಂತಾಗುತ್ತದೆ. ಕೆಲವೊಮ್ಮೆ ಕಿರಿಯ ವೈದ್ಯರು ಅನುಭವದ ಕೊರತೆ ಇದ್ದಾಗ ಚಿಕಿತ್ಸೆ ನೀಡಲು ಹಿರಿಯ ವೈದ್ಯರ ಸಹಾಯ ಪಡೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಡಾಕ್ಟರ್‌ ರೋಗಿಯನ್ನು ಮಲಗಿಸಿ ಯೂಟ್ಯೂಬ್‌ (Youtube)ನಲ್ಲಿ ಚಿಕಿತ್ಸೆ ನೀಡುವುದು ಹೇಗೆಂಬ ವೀಡಿಯೋ ನೋಡಿದ್ದು ಎಲ್ಲೆಡೆ ವೈರಲ್ (Viral) ಅಗಿದೆ.

ಸಾಮಾನ್ಯ ಜನರು ತಮಗೆ ಗೊತ್ತಿಲ್ಲದ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಯೂಟ್ಯೂಬ್ ಮೊರೆ ಹೋಗುತ್ತಾರೆ. ಗಾಡಿ ರಿಪೇರಿ ಮಾಡುವುದು ಹೇಗೆ, ಮಿಕ್ಸರ್ ಕೆಟ್ಟರೆ ಸರಿ ಮಾಡುವುದು ಹೇಗೆ ಮೊದಲಾದ ವಿಷಯಗಳನ್ನು ತಿಳಿದುಕೊಳಳ್ಳುತ್ತಾರೆ. ಆದ್ರೆ ಇಲ್ಲಿ ಯೂಟ್ಯೂಬ್ ನೋಡಿ ವೈದ್ಯರು ರೋಗಿಗೆ ಚಿಕಿತ್ಸೆಯನ್ನೇ ನೋಡಲು ಹೊರಟಿದ್ದಾರೆ. ಜನಸಾಮಾನ್ಯರು ಮಾಡುವ ಕೆಲಸವನ್ನು ವೈದ್ಯರು ಮಾಡುತ್ತಿರುವುದು ಅನೇಕ ಜನರಿಗೆ ಸಾಕಷ್ಟು ಆಘಾತವನ್ನುಂಟು ಮಾಡಿದೆ. ಟಿಕ್‌ ಟಾಕ್ ಬಳಕೆದಾರರೊಬ್ಬರು ಚಿಕಿತ್ಸೆ ಪಡೆಯಲು ಬಂದ ತನ್ನನ್ನು ಮಲಗಿಸಿ ಡಾಕ್ಟರ್ ಯೂಟ್ಯೂಬ್ ವೀಡಿಯೋ ನೋಡುವ ದೃಶ್ಯವನ್ನು ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ಫ್ರಿಡ್ಜ್‌ನಲ್ಲಿದ್ದ ಆಹಾರ ಸೇವಿಸಿ ಹದಗೆಟ್ಟ ಆರೋಗ್ಯ: ಕಾಲು, ಬೆರಳೇ ತೆಗೆದ ವೈದ್ಯರು!

ಟಿಕ್‌ಟಾಕ್‌ ಬಳಕೆದಾರರಾದ @isi_lynott ಅವರು ತಮ್ಮ ಕಾಯಿಲೆಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಯೂಟ್ಯೂಬ್ ವೀಡಿಯೋಗಳನ್ನು ತಮ್ಮ ವೈದ್ಯರು ನೋಡಿದ್ದಾರೆ ಎಂದು ಹೇಳಿದರು.ಯೂಟ್ಯೂಬ್‌ನಲ್ಲಿ ಹೇಗೆ ಚಿಕಿತ್ಸೆ ನೀಡಬೇಕೆಂದು ಆಕೆಯ ವೈದ್ಯರು ಹುಡುಕುತ್ತಿರುವ ಕ್ಷಣವನ್ನು ಬಳಕೆದಾರರು ಚಿತ್ರೀಕರಿಸಿದ್ದಾರೆ. ವರದಿಗಳ ಪ್ರಕಾರ, ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು 5 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವೀಡಿಯೊದಲ್ಲಿ, ರೋಗಿಯು ವೈದ್ಯರ ಕಡೆಗೆ ಕ್ಯಾಮೆರಾವನ್ನು ತಿರುಗಿಸುತ್ತಾರೆ. ಅವರು ಕುಳಿತುಕೊಂಡು ಯೂಟ್ಯೂಬ್ ವೀಡಿಯೊವನ್ನು ನೋಡುತ್ತಿರುವುದನ್ನು ಕಾಣಬಹುದು.

ಈ ವೀಡಿಯೋಗೆ ಸಾಮಾಜಿಕ ಜಾಲತಾಣದ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೋಗಿಯನ್ನು ಪರೀಕ್ಷಿಸುವ ಮೊದಲು ವೈದ್ಯರು ವಿಷಯಗಳನ್ನು ಎರಡು ಬಾರಿ ಪರಿಶೀಲಿಸುತ್ತಿದ್ದಾರೆ ಅಥವಾ ಕೆಲವು ಪ್ರಮುಖ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ ಎಂದು ಕೆಲವರು ವಾದಿಸಿದರು.ಕೆಲವೊಬ್ಬರು ಚಿಕಿತ್ಸೆ ನೀಡಲು ವೈದ್ಯರು  ಯೂಟ್ಯೂಬ್ ವೀಡಿಯೋವನ್ನು ಉಲ್ಲೇಖಿಸುವುದನ್ನು ನೋಡಿ ಶಾಕ್ ಆಗಿದ್ದಾರೆ.

ಹಲ್ಲುಜ್ಜುತ್ತಿದ್ದ ವೇಳೆ ಬಿದ್ದು ಬಾಯಲ್ಲಿ ಸಿಲುಕಿಕೊಂಡ ಬ್ರಶ್‌... ವೈದ್ಯರಿಂದ ಶಸ್ತ್ರಚಿಕಿತ್ಸೆ

ಇನ್ನೊಬ್ಬ ಬಳಕೆದಾರರು, ವೈದ್ಯರು ರೋಗಿಗಳ ಆರೋಗ್ಯದೊಂದಿಗೆ ಹೇಗೆ ಆಟವಾಡುತ್ತಾರೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವೈದ್ಯರು ಈ ರೀತಿ ವೀಡಿಯೋ ನೋಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಟ್ಯುಟೋರಿಯಲ್ ಅನ್ನು ವೀಕ್ಷಿಸುವ ವೈದ್ಯರು ಮತ್ತು ನಮ್ಮ ನಡುವೆ ಇರುವ ವ್ಯತ್ಯಾಸವೆಂದರೆ ವೈದ್ಯರು ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳುತ್ತಾರೆ. ನಮ್ಮಿಂದ ಅದು ಸಾಧ್ಯವಿಲ್ಲ. ತರಬೇತಿ ಪಡೆದ ಬಳಿಕವೂ ಸ್ಪಷ್ಟತೆಯನ್ನು ಪಡೆಯಲು ಬಯಸುವವರು ಈ ರೀತಿ ವೀಡಿಯೋ ನೋಡುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. 

ವೀಡಿಯೊವನ್ನು ಚಿತ್ರೀಕರಿಸಿದ ಮಹಿಳೆ ಪೋಸ್ಟ್‌ನ್ನು ಯಾವುದೇ ಕೆಟ್ಟ ಉದ್ದೇಶದಿಂದ ಮಾಡಿಲ್ಲ, ಕೇವಲ ತಮಾಷೆಗಾಗಿ ಮಾಡಿದೆ ಎಂದಿದ್ದಾರೆ. ನಾನು ಎಲ್ಲಾ ವೈದ್ಯರನ್ನೂ ಮೆಚ್ಚುತ್ತೇನೆ ಮತ್ತು ಅವರು ವಾಕಿಂಗ್ ಎನ್ಸೈಕ್ಲೋಪೀಡಿಯಾಗಳಲ್ಲ ಎಂದು ಅರ್ಥಮಾಡಿಕೊಳ್ಳುತ್ತೇನೆ ಎಂದಿದ್ದಾರೆ.  ವೈದ್ಯರು ತನ್ನ ನೆನಪುಗಳನ್ನು ರಿಫ್ರೆಶ್ ಮಾಡಲು ಮತ್ತು ಪ್ರಕ್ರಿಯೆಯ ಉದ್ದಕ್ಕೂ ಅವರಿಗೆ ಸಹಾಯ ಮಾಡಲು ಸಾಧ್ಯವಾಗಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios