ಫ್ರಿಡ್ಜ್‌ನಲ್ಲಿದ್ದ ಆಹಾರ ಸೇವಿಸಿ ಹದಗೆಟ್ಟ ಆರೋಗ್ಯ: ಕಾಲು, ಬೆರಳೇ ತೆಗೆದ ವೈದ್ಯರು!

* ಯಾವುದೇ ಆಹಾರ ತಿನ್ನೋ ಮುನ್ನ ಎಚ್ಚರದಿಂದಿರಿ

* ಫ್ರಿಡ್ಜ್‌ನಲ್ಲಿದ್ದ ಆಹಾರ ತಿ<ದು ವ್ಯಕ್ತಿ ಅಸ್ವಸ್ಥ

* ಯುವಕನ ಪರಿಶೀಶೀಲಿಸಿದ ವೈದ್ಯರಿಗೇ ಶಾಕ್

The student had developed life threatening sepsis and gangrene caused by bacteria in the leftover Chinese takeout food.

ವಾಷಿಂಗ್ಟನ್(ಫೆ 27): ಹಳಸಿದ ಆಹಾರ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಪ್ರತಿ ದಿನ ಮನೆಗಳಲ್ಲಿ ಎಷ್ಟೊಂದು ಆಹಾರ ತಯಾರಾಗುತ್ತದೆ ಎಂದರೆ ಜನ ಅದನ್ನು ಫ್ರಿಡ್ಜ್ ನಲ್ಲಿಟ್ಟು ಹಲವು ದಿನ ಬಳಸುತ್ತಾರೆ. ಆದರೀಗ ಹೀಗೆ ಆಹಾರ ಸಂರಕ್ಚಿಸಿಟ್ಟು ಬಳಸುವವರಿಗೊದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ವಾಸ್ತವವಾಗಿ ಹಿಂದಿನ ರಾತ್ರಿ ಫ್ರಿಡ್ಜ್‌ನಲ್ಲಿದ್ದ ಆಹಾರವನ್ನು ವಿದ್ಯಾರ್ಥಿಯೊಬ್ಬ ಸೇವಿಸಿದ್ದ. ಆ ನಂತರ ಅವರ ಆರೋಗ್ಯ ಎಷ್ಟರ ಮಟ್ಟಿಗೆ ಹದಗೆಟ್ಟಿತು ಎಂದರೆ ಅವರ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು.

ಡೈಲಿಮೇಲ್ ವರದಿಯ ಪ್ರಕಾರ, ಆಹಾರವನ್ನು ತಿಂದ ನಂತರ ಬಾಲಕನ ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದರಿಂದಾಗಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಅವರ ಸ್ಥಿತಿಯನ್ನು ಸುಧಾರಿಸಲು, ವೈದ್ಯರು ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು. ಅಷ್ಟೇ ಅಲ್ಲ ಆ ಹುಡುಗನ ಬೆರಳುಗಳನ್ನೂ ಕತ್ತರಿಸಬೇಕಿತ್ತು. ವೈದ್ಯರ ಪ್ರಕಾರ ಈ ಹಿಂದೆ ಹಳಸಿದ ನೂಡಲ್ಸ್, ಚಿಕನ್ ಮತ್ತು ಅನ್ನವನ್ನು ಸೇವಿಸಿದ್ದರಿಂದ ಈ ವ್ಯಕ್ತಿಯ ಆರೋಗ್ಯವು ಹದಗೆಟ್ಟಿತ್ತೆನ್ನಲಾಗಿದೆ.

Drinking Flavored Water: ಪರಿಮಳವಿದೆ ನಿಜ, ಆದ್ರೆ ಆರೋಗ್ಯಕ್ಕೆ ಒಳ್ಳೇದಾ ?

ಆಹಾರ ಸೇವಿಸಿದ ಬಳಿಕ ಬಾಲಕನಿಗೆ ಮೊದಲು ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹುಡುಗ ತಿಂದ ಆಹಾರವನ್ನು ಹಿಂದಿನ ರಾತ್ರಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು. ಬಾಲಕನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹುಡುಗ ಹೃದಯ ಬಡಿತದಿಂದ ಮೂರ್ಛೆ ಹೋಗಿದ್ದ. ಅವರ ಸ್ಥಿತಿ ನೋಡಿ ವೈದ್ಯರೂ ಆಶ್ಚರ್ಯಚಕಿತರಾದರು. ಇಂತಹ ಪರಿಸ್ಥಿತಿಯಲ್ಲಿ ಆತನ ರಕ್ತವನ್ನು ಪರೀಕ್ಷಿಸಿದಾಗ ಅದರಲ್ಲಿ ಮಾರಣಾಂತಿಕ ಕಾಯಿಲೆಯ ಲಕ್ಷಣಗಳು ಕಂಡು ಬಂದವು.

ವಾಸ್ತವವಾಗಿ ಮಾರಣಾಂತಿಕ ಕಾಯಿಲೆ ಸೆಪ್ಸಿಸ್ ಆತನನ್ನು ಆವರಿಸಿತ್ತು, ನಂತರ ಸೆಪ್ಸಿಸ್ ಅವನ ರಕ್ತದಲ್ಲಿ ಹರಡಲು ಪ್ರಾರಂಭಿಸಿತು. ಈ ಪರಿಸ್ಥಿತಿಯಲ್ಲಿ, ಅವರನ್ನು ಉಳಿಸಲು ವೈದ್ಯರಿಗೆ ಒಂದೇ ಮಾರ್ಗವಿತ್ತು. ಆದ್ದರಿಂದಲೇ ಈ ಮಾರಣಾಂತಿಕ ರೋಗ ಇಡೀ ದೇಹಕ್ಕೆ ಹರಡುವಷ್ಟರಲ್ಲಿ ಆ ಅಂಗಾಂಗಗಳನ್ನು ಕತ್ತರಿಸುವುದು ಉತ್ತಮ ಎಂದು ವೈದ್ಯರು ಭಾವಿಸಿದ್ದರು. ಹಲವಾರು ದಿನಗಳ ನಂತರ ಹುಡುಗನಿಗೆ ಪ್ರಜ್ಞೆ ಬಂದಾಗ, ಅವನ ಜೀವನವು ಸಂಪೂರ್ಣವಾಗಿ ಬದಲಾಗಿತ್ತು.

ಸೆಪ್ಸಿಸ್ ಎನ್ನುವುದು ದೇಹದಲ್ಲಿನ ಕೆಲವು ರೀತಿಯ ಸೋಂಕಿನಿಂದ ಉಂಟಾಗುವ ಕಾಯಿಲೆ ಎಂದು ನಾವು ನಿಮಗೆ ಹೇಳೋಣ. ಅಸ್ತಿತ್ವದಲ್ಲಿರುವ ಸೋಂಕು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದಾಗ ಸೆಪ್ಸಿಸ್ ಬೆಳವಣಿಗೆಯಾಗುತ್ತದೆ. ಈ ಕಾಯಿಲೆಯಿಂದಾಗಿ, ಜ್ವರ, ವೇಗದ ಹೃದಯ ಬಡಿತ ಮತ್ತು ಉಸಿರಾಟದ ತೊಂದರೆ ಮುಂತಾದ ಇತರ ಲಕ್ಷಣಗಳು ಕಂಡುಬರುತ್ತವೆ. ಇದಕ್ಕೆ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ. ಇಲ್ಲದಿದ್ದರೆ, ಅಂಗಾಂಗ ವೈಫಲ್ಯ, ಹೃದಯ ವೈಫಲ್ಯ, ಪಾರ್ಶ್ವವಾಯು ಮತ್ತು ಸಾವು ಸಂಭವಿಸುವ ಸಾಧ್ಯತೆಯಿದೆ.

Kitchen Tricks : ಹಸಿವಾದಾಗ ಫಟಾಫಟ್ ಅಡುಗೆಯಾಗ್ಬೇಕೆಂದ್ರೆ ಇಲ್ಲಿದೆ ಉಪಾಯ

ಆದರೆ, ಈ ಪ್ರಕರಣದಲ್ಲಿ ರೆಸ್ಟೋರೆಂಟ್‌ನ ಆಹಾರದಲ್ಲಿ ಬ್ಯಾಕ್ಟೀರಿಯಾ ಎಲ್ಲಿಂದ ಬಂದಿದೆ ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿಲ್ಲ. ಆದರೆ ಯಾವುದೇ ಆಹಾರವನ್ನು ಫ್ರಿಡ್ಜ್‌ನಲ್ಲಿ ಇರಿಸಿದಾಗ, ಯಾವಾಗಲೂ ಜಾಗರೂಕರಾಗಿರಬೇಕು. ಅದಕ್ಕಾಗಿಯೇ ಯಾವಾಗಲೂ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ವಿಶೇಷವಾಗಿ ಆಹಾರದಲ್ಲಿ ಯಾವುದೇ ರೀತಿಯ ರಾಸಾಯನಿಕ ಸಾಸ್ ಅಥವಾ ಇತರ ಉತ್ಪನ್ನಗಳನ್ನು ಬಳಸಬೇಡಿ.

Latest Videos
Follow Us:
Download App:
  • android
  • ios