Asianet Suvarna News Asianet Suvarna News

ಚಳಿಗಾಲದಲ್ಲಿ ಹರಡುವ ರೋಗಗಳಿಗೆ ಮನೆಮದ್ದು ಇಲ್ಲಿವೆ

ಚಳಿಗಾಲ ಬರುವಾಗ ಒಂದು ಬಂಡಲ್ ಅಷ್ಟು ರೋಗಗಳ(Diseases) ಸಮಸ್ಯೆಯನ್ನು ಹೊತ್ತುಕೊಂಡು ಬರುತ್ತವೆ. ಶೀತ, ಕೆಮ್ಮು, ಕಟ್ಟಿದ ಮೂಗು, ಗಂಟಲು ನೋವು, ಉಸಿರಾಟದ ತೊಂದರೆಯಿAದ(Respiration Problem) ಮತ್ತು ನೋವಿನಿಂದ ಹಲವು ಕಾಯಿಲೆಗಳು ಕಾಡುತ್ತವೆ. ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಮಾಡಬಹುದಾದ ಮದ್ದುಗಳು ಹೌಗೂ ಅದನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

Winter viral diseases and Home remedies
Author
First Published Dec 2, 2022, 5:41 PM IST

ಚಳಿಗಾಲದಲ್ಲಿ(Winter) ರೋಗಗಳು, ಹರಡುವ ಕಾಯಿಲೆಗಳು ಹೆಚ್ಚು. ಚಳಿಯನ್ನು ಆನಂದಿಸಲು ಹಾಗೂ ಅನುಭವಿಸಲು ಬಿಡುವುದೇ ಇಲ್ಲ. ಅದರಲ್ಲೂ ಶೀತ, ಜ್ವರ, ಕೆಮ್ಮುಗಂತಹ ಸಮಸ್ಯೆಗಳು ಮನೆಯೊಳಗೆ ಇದ್ದು ಬೆಡ್‌ಶಿಟ್ ಹೊದ್ದುಕೊಂಡು ಮಲಗುವಂತೆ ಮಾಡುತ್ತದೆ. ಈ ಸಮಯದಲ್ಲಿ ನೀರು ಸಹ ಬಿಸಿ ಮಾಡಿಕೊಂಡೇ ಕುಡಿಯಬೇಕಾಗುತ್ತದೆ. ಶುಷ್ಕ ಚಳಿಗಾಲದ ಗಾಳಿಯು ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಕಷ್ಟವಾಗುವುದರಿಂದ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಗೆ ಹೆಚ್ಚುವರಿ ವರ್ಧಕಗಳ ಅಗತ್ಯವಿರಬಹುದು. 

ಚಳಿಗಾಲದಲ್ಲಿ ಮನುಷ್ಯ ಹೆಚ್ಚು ಆಲಸಿಯಾಗಿಯೂ, ನಿಷ್ಕಿçಯವಾಗಿಯೂ(Lazy) ಇರುತ್ತಾನೆ. ಏಕೆಂದರೆ ವಿಪರೀತ ಹವಾಮಾನವು ಕೆಲವೊಮ್ಮೆ ಹೊರಗೆ ಹೆಜ್ಜೆ ಹಾಕಲೂ ಬಿಡುವುದಿಲ್ಲ. ಅಲ್ಲದೆ ಜನರು ಒಟ್ಟೊಟ್ಟಿಗೆ ಅಥವಾ ಹತ್ತಿರವಿದ್ದಾಗ ವೈರಸ್‌ಗಳು(Virus) ತ್ವರಿತವಾಗಿ ಹರಡಬಹುದು. ಈ ಎಲ್ಲಾ ಚಳಿಗಾಲದ ತೊಂದರೆಗಳನ್ನು ಎದುರಿಸಲು ಆಹಾರಕ್ರಮಕ್ಕೆ ಸರಿಯಾದ ಸೇರ್ಪಡೆಗಳನ್ನು ಮಾಡುವುದು ಮುಖ್ಯ. ಮಸಾಲೆಗಳನ್ನು ಚಳಿಗಾಲದಲ್ಲಿ ಸೇವಿಸುವುದು ಒಳ್ಳೆಯದು ಅಲ್ಲದೆ ಸೂಪರ್‌ಫುಡ್‌ಗಳಾಗಿವೆ. ನಮ್ಮ ಊಟ ಮತ್ತು ಪಾನೀಯಗಳಲ್ಲಿ ಈ ಮಸಾಲೆಗಳನ್ನು ಖಂಡಿತವಾಗಿಯೂ ಪರಿಗಣಿಸಲೇಬೇಕು. ಇಲ್ಲಿ ಹೇಳಲಾಗಿರುವ ಮಸಾಲೆ ಪದಾರ್ಥಗಳನ್ನು(Spicy) ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು(Immunity Power) ಹೆಚ್ಚಿಸುವುದಲ್ಲದೆ ರುಚಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಶೀತ ಮತ್ತು ಜ್ವರವನ್ನು ಅನುಭವಿಸುವುದು ಚಳಿಗಾಲದಲ್ಲಿ ವಿಪರೀತ ಕಷ್ಟ. ಅದನ್ನು ಹೋಗಲಾಡಿಸಲು ಸಾಕಷ್ಟು ಮಾರ್ಗಗಳಿವೆ. ಮನೆಯಲ್ಲೇ ಮಾಡಬಹುದಾದ ಕೆಲ ಮದ್ದುಗಳು ಇಲ್ಲಿವೆ. 

ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದ್ನೋಡಿ .. ಇದೆ ಇಷ್ಟೊಂದು ಲಾಭ

1. ಶುಂಠಿ (Ginger)
ಆಯುರ್ವೇದದಲ್ಲಿ ಶುಂಠಿ ಬಹಳ ಮಹತ್ವ ಪಡೆದಿದೆ. ಗಿಡಮೂಲಿಕೆ(Herbal) ಶೀತ ಚಿಕಿತ್ಸೆಯಾಗಿ, ಶುಂಠಿಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಈ ಬೇರು ತರಕಾರಿಯು  ದೇಹದ ಮೇಲೆ ಬಲವಾದ ತಾಪಮಾನದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಈ ಚಳಿಗಾಲದಲ್ಲಿ  ಶುಂಠಿ ಚಹಾವು ಅತ್ಯುತ್ತಮ ಪಾನೀಯವಾಗಿದೆ.
ಹೇಗೆ ಸೇವಿಸುವುದು: ಕುದಿಯುವ ಬಿಸಿ ನೀರಿಗೆ ತುರಿದ ಶುಂಠಿ ಹಾಕಿ 2 ನಿಮಿಷ ಕುದಿಸಿ. ನಂತರ ಅದನ್ನು ಸೋಸಿ. ಸೋಸಿದ ನೀರಿಗೆ ಜೇನುತುಪ್ಪ ಹಾಕಿ ಸೇವಿಸು. ಇದು ಕಟ್ಟಿದ ಮೂಗನ್ನು(Blocked Nose) ಸಡಿಲವಾಗಿಸುವುದರ ಜೊತೆಗೆ ನೋಯುತ್ತಿರುವ ಗಂಟಲಿಗೆ ಉತ್ತಮ ಪಾನೀಯವಾಗಿದೆ.

2. ದಾಲ್ಚಿನ್ನಿ(Cinnamon) 
ದಾಲ್ಚಿನ್ನಿ ವಾಸನೆಯು ಯಾರಿಗಾದರೂ ಉತ್ತಮ ಭಾವನೆಯನ್ನುಂಟುಮಾಡುತ್ತದೆ. ಆದರೆ ದಾಲ್ಚಿನ್ನಿಯು ಕೇವಲ ವಾಸನೆಯಷ್ಟೇ ಅಲ್ಲದೆ, ಹೆಚ್ಚು ಶಕ್ತಿಯುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದಾಲ್ಚಿನ್ನಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅದು ಸೋಂಕು ಮತ್ತು ಉರಿಯೂತದ(Inflammation) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಶೀತ ಮತ್ತು ಜ್ವರದ ಸಮಯದಲ್ಲಿ ದಾಲ್ಚಿನ್ನಿ ನೀರು ಸೇವಿಸಿದರೆ ಆರೋಗ್ಯವಾಗಿಡುತ್ತದೆ.
ಹೇಗೆ ಸೇವಿಸಬೇಕು: ಒಂದು ಕಪ್ ಬೆಚ್ಚಗಿನ ನೀರಿನಲ್ಲಿ 1/2 ಚಮಚ ದಾಲ್ಚಿನ್ನಿ ಮತ್ತು ತುರಿದ ಶುಂಠಿಯನ್ನು ಸೇರಿಸಿ ಮತ್ತು ಜೇನುತುಪ್ಪದೊಂದಿಗೆ(Honey) ಬೆರೆಸಿ. ನೀವು ದಿನಕ್ಕೆ ಎರಡು ಬಾರಿ ಸೇವಿಸಬಹುದು.

3. ಕರಿಮೆಣಸು(Black Pepper) 
ಕರಿಮೆಣಸಿನಲ್ಲಿ ಬ್ಯಾಕ್ಟೀರಿಯಾ(Bacteria) ವಿರೋಧಿ ಗುಣಲಕ್ಷಣಗಳಿವೆ.  ಈ ಮಸಾಲೆ ಶೀತ ಮತ್ತು ಜ್ವರ(Fever) ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು(Immunity Power) ಬಲಪಡಿಸಲು ಮತ್ತು ಉಸಿರಾಟದ ಸೋಂಕುಗಳು ಮತ್ತು ಎದೆಯ ದಟ್ಟಣೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. 
ಹೇಗೆ ಸೇವಿಸುವುದು: ಒಂದು ಲೋಟ ಹಾಲಿಗೆ ಅರಿಶಿಣ ಹಾಗೂ ಪುಡಿ ಮಾಡಿದ ಕರಿಮೆಣಸಿನ ಪುಡಿ ಸೇರಿಸಿ. ಒಂದು ವೇಳೆ ಹಾಲನ್ನು ಬಳಸಲು ಇಷ್ಟವಿಲ್ಲದಿದ್ದರೆ, ನೀವು ಹೊಸದಾಗಿ ಪುಡಿ ಮಾಡಿದ ಕರಿಮೆಣಸು ಮತ್ತು ಕಪ್ಪು ಟೀಯನ್ನು ಸೇರಿಸಿ ಹರಳುಪ್ಪನ್ನು ಹಾಕಿ ಸೇವಿಸಬಹುದು.

Health Tips: ಗಾಯದ ರಕ್ತಸ್ರಾವ ತಡೆಯುತ್ತೆ ಮನೆಯಲ್ಲಿರುವ ಈ ವಸ್ತು

4. ಅರಿಶಿಣ(Turmeric)
ಅರಿಶಿಣ ನಮ್ಮ ಆಯುರ್ವೇದದಲ್ಲಿನ(Ayurveda) ಪ್ರಾಥಮಿಕ ಚಿಕಿತ್ಸಾ(Primary Medicine) ಔಷಧಿಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ನಿವಾರಕವಾಗಿದೆ. ಇದು ಶೀತ ಮತ್ತು ಜ್ವರದ ವಿರುದ್ಧ ಹೋರಾಡುತ್ತದೆ. ಅಲ್ಲದೆ ಪ್ರತಿರಕ್ಷಣಾ ವ್ಯವಸ್ಥೆಗೆ ಉತ್ತಮವಾಗಿದೆ. 
ಹೇಗೆ ಸೇವಿಸಬೇಕು: ಶುಂಠಿ ಅರಿಶಿಣ ಮಿಶ್ರಣವು ಶೀತದ ಮೇಲೆ ನಂಬಲಾಗದ ಪ್ರಯೋಜನಗಳನ್ನು ಹೊಂದಿದೆ. ಒಂದು ಕಪ್ ಶುದ್ಧೀಕರಿಸಿದ ನೀರಿಗೆ ಒಂದು ಇಂಚು ಶುಂಠಿ, ಒಂದು ಚಮಚ ಅರಿಶಿಣ ಮತ್ತು ಅರ್ಧ ನಿಂಬೆ ರಸ(Lemon Juice) ಸೇರಿಸಿ. ಪ್ರತಿ ಎರಡು ಮೂರು ದಿನಗಳಿಗೊಮ್ಮೆ ಈ ಅದ್ಭುತ ಮಿಶ್ರಣವನ್ನು ಸೇವಿಸಿ.

5. ತುಳಸಿ (Tulsi)
ತುಳಸಿ ಎಲೆಗಳನ್ನು ಸಾಮಾನ್ಯವಾಗಿ ಪೂಜೆಗಾಗಿ ಹಾಗೂ ಮಕ್ಕಳ ಆರೋಗ್ಯವೃದ್ಧಿಗೆ ಬಳಸಲಾಗುತ್ತದೆ. ಇದರಲ್ಲಿ ಸೂಕ್ಷ್ಮಜೀವಿಯ ಕಾಯಿಲೆಗಳನ್ನು ಗುಣಪಡಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ದೇಸಿ ಪರಿಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಒಣ ಕೆಮ್ಮು(Dry Cough) ಸೇರಿದಂತೆ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಬ್ಯಾಕ್ಟೀರಿಯಾ(Bacteria) ಮತ್ತು ನೋವು ನಿವಾರಕ ಗುಣಲಕ್ಷಣಗಳಿವೆ. ತುಳಸಿ ಎಲೆಯ ಟೀ ಅಲರ್ಜಿಕ್ ಬ್ರಾಂಕೈಟಿಸ್(Allergic Bronchitis) ಮತ್ತು ಅಸ್ತಮಾವನ್ನು(Asthma) ಗುಣಪಡಿಸುತ್ತದೆ.
ಹೇಗೆ ಸೇವಿಸುವುದು: ಐದು ಲವಂಗ(Clove) ಮತ್ತು ಎಂಟು ತುಳಸಿ ಎಲೆಗಳೊಂದಿಗೆ ಒಂದು ಕಪ್ ನೀರನ್ನು ಸೇರಿಸಿ ಕುದಿಸಿ. ಸ್ವಲ್ಪ ಉಪ್ಪು ಸೇರಿಸಿದ ನಂತರ, ಚಹಾವನ್ನು ತಣ್ಣಗಾಗಲು ಬಿಡಿ. ಕೆಮ್ಮು ನಿವಾರಣೆಗೆ ದಿನಕ್ಕೆ ಹಲವು ಬಾರಿ ಕುಡಿಯಿರಿ. ನಿಮಗೆ ನೋಯುತ್ತಿರುವ ಗಂಟಲು ಇದ್ದರೆ ತುಳಸಿ ತುಂಬಿದ ನೀರಿನಿಂದ ಗಾರ್ಗ್ಲ್(Gargle) ಮಾಡಬಹುದು.

Follow Us:
Download App:
  • android
  • ios