Asianet Suvarna News Asianet Suvarna News

ಚೀನಾದಲ್ಲಿ ಚಳಿಗಾಲದ ಫೇವರೇಟ್ ಫುಡ್ ಸ್ನೇಕ್ ಸೂಪ್, ಇದನ್ಯಾಕೆ ತಿನ್ನಲು ಇಷ್ಟಪಡ್ತಾರೆ?

ನಿದ್ರೆಯಲ್ಲಿ ಹಾವು ಕಂಡ್ರು ನಮಗೆ ಬೆವರು ಬರುತ್ತೆ. ಇನ್ನು ಹಾವನ್ನು ತಿನ್ನೋದು ಕನಸಿನ ಮಾತು. ಆದ್ರೆ ಈ ಚೀನಿ ಜನ ಹಾಗಲ್ಲ. ಅವರು ಎಲ್ಲವನ್ನೂ ತಿನ್ನುತ್ತಾರೆ. ಹಾವಿನ ಸೂಪ್ ಕೂಡ ಬಿಡೋದಿಲ್ಲ. 
 

China Peoples Takes Snake Soup In Winter season which they feel has vitamins and proteins roo
Author
First Published Dec 5, 2023, 2:36 PM IST

ಸೂಪ್ ಎಂದಾಕ್ಷಣ ಬಾಯಲ್ಲಿ ನೀರು ಬರೋದು ಸಹಜ. ಚಳಿಗಾಲ ಹಾಗೂ ಮಳೆಗಾಲಗಳಲ್ಲಿ ಬಿಸಿ ಬಿಸಿ ಸೂಫ್ ಕುಡಿಯುವ ಮಜಾನೇ ಬೇರೆ. ಸೂಪ್ ಎಂದಾಕ್ಷಣ ನಮಗೆ ಟೊಮೇಟೋ ಸೂಪ್, ಕಾರ್ನ್ ಸೂಪ್, ವೆಜಿಟೇಬಲ್ ಸೂಪ್ ಮುಂತಾದವು ನೆನಪಿಗೆ ಬರುತ್ತವೆ. ಭಾರತದಲ್ಲಿ ಈ ಸೂಪ್‌ಗಳನ್ನೇ ಹೆಚ್ಚು ಮಂದಿ ಇಷ್ಟಪಡುತ್ತಾರೆ.

ಭಾರತ (India) ದಲ್ಲಿ ಇಂತಹ ಅನೇಕ ಬಗೆಯ ಸೂಪ್ (Soup) ಗಳಿವೆ. ಆದರೆ ಇಲ್ಲಿನ ಜನ ಸ್ನೇಕ್ (Snake) ಸೂಪ್ ಕುಡಿದಿರಲಿಕ್ಕಿಲ್ಲ. ಸ್ನೇಕ್ ಸೂಪ್ ಎಂದಾಕ್ಷಣ ಎಲ್ಲರೂ ಗಲಿಬಿಲಿ ಆಗೋದು ಸಹಜ. ಆದರೆ ಇಂತಹ ಒಂದು ಸೂಪ್ ಇರೋದು ಅಕ್ಷರಶಃ ನಿಜ. ಈ ಸೂಪ್ ಇರೋದು ಭಾರತದಲ್ಲಲ್ಲ. ಈ ಸೂಪ್ ಸೇವಿಸುವ ಆಸೆ ಇರುವವರು ಚೀನಾಕ್ಕೆ ಹೋಗಬೇಕು.

ಎದ್ದ ಕೂಡಲೇ ಬ್ರಶ್ ಮಾಡದೇ ಈ ಹಣ್ಣು ತಿಂದ್ರೆ ಸಿಕ್ಕಾಪಟ್ಟೆ ಹೆಲ್ದೀ!

ಚೀನಾದಲ್ಲಿ ತಯಾರಾಗುತ್ತೆ ಸ್ನೇಕ್ ಸೂಪ್ : 
ಚೀನಾದ ಜನರು ಯಾವಾಗಲೂ ತಮ್ಮ ಚಿತ್ರ ವಿಚಿತ್ರ ಆಹಾರಗಳಿಂದ ಸುದ್ದಿಯಲ್ಲಿರುತ್ತಾರೆ. ಅವರ ಆಹಾರ ಶೈಲಿ (Food System) ಜನರನ್ನು ತಬ್ಬಿಬ್ಬುಗೊಳಿಸುತ್ತದೆ. ಈಗ ಅವರು ಹಾವಿನ ಸೂಪ್ ತಯಾರಿಸುವ ಮೂಲಕ ಮತ್ತೊಂದು ಹೊಸ ರೆಸಿಪಿಯನ್ನು ಕಂಡುಹಿಡಿದಿದ್ದಾರೆ. ಅನೇಕ ಮಂದಿ ಹಾವು ಎಂದರೆ ಮಾರು ದೂರ ಓಡುತ್ತಾರೆ. ಹಾವಿಗೆ ಹೆದರದೇ ಇರುವವರು ತೀರ ವಿರಳ. ಅಷ್ಟೇ ಅಲ್ಲದೇ ಹಾವು ಅತ್ಯಂತ ವಿಷಕಾರಿ ಜೀವಿ ಕೂಡ ಹೌದು. ಸ್ವಲ್ಪ ಹಾವಿನ ವಿಷ ಮೈಯೇರಿದರೂ ಸಾಕು ಮನುಷ್ಯನ ಪ್ರಾಣ ಪಕ್ಷಿ ಹಾರಿಹೋಗುತ್ತದೆ. ಅದೆಷ್ಟೋ ಮಂದಿ ಹಾವಿನ ವಿಷದಿಂದಲೇ ಸಾವನ್ನಪ್ಪಿದ್ದಾರೆ. ಆದರೆ ಚೀನಾದವರು ಮಾತ್ರ ಇದ್ಯಾವುದಕ್ಕೂ ಹೆದರದೇ ಹಾವಿನ ಸೂಪ್ ಅನ್ನು ಕುಡಿಯುತ್ತಾರೆ. ಹೀಗೆ ವಿಷಕಾರಿ ಹಾವಿನ ಸೂಪ್ ಕುಡಿಯಲು ಗುಂಡಿಗೆ ಗಟ್ಟಿಯಾಗಿರಬೇಕು. 

ಜೇನು ತುಪ್ಪದಲ್ಲಿ ಸಕ್ಕರೆ ಕಲಬೆರಕೆ ಆಗಿದ್ಯಾ? ಹೀಗೆ ಪರೀಕ್ಷೆ ಮಾಡಿ

ಕೆಲವು ವರದಿಗಳ ಪ್ರಕಾರ ಚೀನಾದ ಹೆಸರಾಂತ ರೆಸ್ಟೋರೆಂಟ್ ಒಂದರಲ್ಲಿ ಸ್ನೇಕ್ – ಸೂಫ್ ಪಿಜ್ಜಾವನ್ನು ಪ್ರಾರಂಭಿಸಲಾಯಿತು. ಮೊದ ಮೊದಲು ಜನರಿಗೆ ಇದು ತಿನ್ನಲು ಸುರಕ್ಷಿತವೇ, ಇದರ ರುಚಿ ಹೇಗಿರಬಹುದೆಂದು ಅನುಮಾನವಿತ್ತು. ಆದರೆ ನಂತರ ಇದನ್ನು ಕ್ಯಾಂಟೋನೀಸ್ ಆಹಾರವೆಂದು ನಂಬಲಾಯಿತು. ಈ ಸ್ನೇಕ್ ಸೂಪ್ ಚಳಿಗಾಲದಲ್ಲಿ ಚೀನಾದ ಜನಪ್ರಿಯ ಆಹಾರ. ಸ್ನೇಕ್ ಸೂಪ್ ಅನ್ನು ಸರಿಯಾದ ವಿಧಾನದಲ್ಲಿ ತಯಾರಿಸಿದರೆ ಇದು ಬಹಳ ರುಚಿಯೆನಿಸುತ್ತದೆ ಎಂದು ಚೀನೀಯರು ಹೇಳುತ್ತಾರೆ.

ಸ್ನೇಕ್ ಸೂಪ್ ಆರೋಗ್ಯಕ್ಕೆ ಉತ್ತಮವಂತೆ  : ಕಿಂಗ್ ರಾಜವಂಶದ ಕೊನೆಯ ಸಾಮ್ರಾಜ್ಯಶಾಹಿ ವಿದ್ವಾಂಸರಾಗಿದ್ದರು. ಗುವಾಂಗ್ ಝೌ ಮೂಲದ ಜಿಯಾಂಗ್ ಕೊಂಗ್ಯಿನ್ ಸ್ನೇಕ್ ಸೂಪ್ ಬಗ್ಗೆ ಚರ್ಚೆ ಮಾಡಿದ್ದ. ಆ ಸಮಯದಲ್ಲಿ ಗುವಾಂಗ್ ಡಾಂಗ್ ಪ್ರಾಂತ್ಯದಲ್ಲಿ ಹಾವಿನ ಸೂಪ್ ಅತ್ಯಂತ ರುಚಿಕರವಾದ ಭಕ್ಷ್ಯವಾಗಿತ್ತು. ಇದು ಆರೋಗ್ಯ ದೃಷ್ಟಿಯಿಂದಲೂ ಬಹಳ ಪ್ರಯೋಜನಕಾರಿ ಎಂದು ಚೀನೀಯರು ನಂಬುತ್ತಾರೆ. ಹಾನ್ ರಾಜವಂಶದಿಂದಲೂ ಹಾವು ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಏಕೆಂದರೆ ಇದನ್ನು ಅನೇಕ ಪ್ರಮುಖ ಚೀನೀ ವೈದ್ಯಕೀಯ ಸೂತ್ರಗಳಲ್ಲಿ ಬಳಸಲಾಗಿದೆ. ಸ್ನೇಕ್ ಸೂಪ್ ಅನೇಕ ರೀತಿಯ ಜೀವಸತ್ವಗಳು (Vitamins) ಮತ್ತು ಪ್ರೋಟೀನ್ (Protein)ಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯಿಂದ ನಿದ್ರೆಯಲ್ಲಿ ಸುಧಾರಣೆ ಆಗುತ್ತದೆ. ಹಾವಿನ ಸೂಪ್ ಗೆ ಕ್ಯಾನ್ಸರ್ ಅನ್ನು ತಡೆಗಟ್ಟುವ ಶಕ್ತಿಯಿದೆ ಎನ್ನಲಾಗುತ್ತದೆ.

ಚೀನಾ ಯಾವಾಗಲೂ ತನ್ನ ವಿಲಕ್ಷಣ ಆಹಾರ ಪದ್ಧತಿಯಿಂದಲೇ ಜಾಗತಿಕ ಮಟ್ಟದಲ್ಲಿ (Global Level) ಹೆಸರುವಾಸಿ. ಅವರ ಒಂದೊಂದು ಆಹಾರವನ್ನು ನೋಡಿದರೇನೆ ತಲೆ ಸುತ್ತಿ ಬೀಳೋದು ಗ್ಯಾರೆಂಟಿ. ಈಗ ಅವರ ವಿಶಿಷ್ಟ ಆಹಾರಗಳ ಪಟ್ಟಿಯಲ್ಲಿ ಸ್ನೇಕ್ ಸೂಪ್ ಸೇರಿಕೊಂಡಿದೆ. ಆರೋಗ್ಯಕ್ಕೆ ತುಂಬ ಒಳ್ಳೆಯದು ಎಷ್ಟೇ ಹೇಳಿದರೂ ಜೀವದ ಬಗ್ಗೆ ಆಸೆ ಇರುವವರು ಬಹುಶಃ ಇದನ್ನು ಕುಡಿಯುವ ಸಾಹಸ ಮಾಡೋದಿಲ್ಲ.
 

Follow Us:
Download App:
  • android
  • ios