ಈ ಜೀವಿಯ ರಕ್ತವೇ ಚಿನ್ನ! ಒಂದು ಲೀಟರ್ ರಕ್ತದ ಬೆಲೆ 12,58,221 ರೂಪಾಯಿ!
ಈ ಜೀವಿಯ ರಕ್ತವು ಜಗತ್ತಿನಲ್ಲಿಯೇ ಅತ್ಯಮೂಲ್ಯವಾದದ್ದು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ನಿಜ. ಇದು ಯಾಕೆ ಇಷ್ಟೊಂದು ಬೆಲೆ ಬಾಳುವಂಥದು ಎಂಬ ವಿವರ ಇಲ್ಲಿದೆ.
ನಮ್ಮ ಭೂಗ್ರಹದಲ್ಲಿ ನಮ್ಮೊಂದಿಗೆ ಬೆಲೆಬಾಳುವಂಥ ಎಷ್ಟೊಂದು ಜೀವಿಗಳಿವೆ ಎಂದು ನೋಡಿ. ಕೆಲವು ಜೀವಿಗಳು ಮನುಷ್ಯನಿಗೆ ಅತಿ ಹೆಚ್ಚು ವಿಶಿಷ್ಟ ಮತ್ತು ಉಪಯುಕ್ತವಾಗಿವೆ. ಅನೇಕ ಬಾರಿ ಮಾನವನ ಜೀವನವೇ ಈ ಪ್ರಾಣಿಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಭೂಗ್ರಹದಲ್ಲಿ ಅತ್ಯಂತ ದುಬಾರಿ ಬೆಲೆಯ ರಕ್ತವನ್ನು ಹೊಂದಿರುವ ಜೀವಿ ಯಾವುದು ಅಂತ ನಿಮಗೆ ತಿಳಿದಿದೆಯಾ? ಇಲ್ಲಿದೆ ಅದರ ವಿವರ.
ಇದು ಹಾರ್ಸ್‌ಶೂ ಏಡಿ. ಇದು ಎಷ್ಟು ಬೆಲೆಬಾಳುವ ಪ್ರಾಣಿ ಎಂದರೆ, ಇದನ್ನು ಕಷ್ಟಪಟ್ಟು ಸಂಗ್ರಹಿಸಿ ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹಾರ್ಸ್‌ಶೂ ಏಡಿಯ ರಕ್ತ ವೈದ್ಯಕೀಯ ಬ್ಯುಸಿನೆಸ್‌ಗೆ ಅತ್ಯಗತ್ಯ ಸಂಪನ್ಮೂಲ. ಇದರ ನೀಲಿ ಬಣ್ಣದ ರಕ್ತ ಮತ್ತು ಅದರಲ್ಲಿರುವ ಒಂದು ವಿಶೇಷ ಗುಣ ಅದನ್ನು ಅಮೂಲ್ಯವಾಗಿಸಿದೆ. ಇದರ ರಕ್ತದಲ್ಲಿ ಸೂಕ್ಷ್ಮ ಪ್ರಮಾಣದ ಬ್ಯಾಕ್ಟೀರಿಯಾದ ಸೋಂಕನ್ನು ಪತ್ತೆಹಚ್ಚುವ ಸಾಮರ್ಥ್ಯವಿದೆ. ಹಾರ್ಸ್‌ಶೂ ಏಡಿ ರಕ್ತದಲ್ಲಿ ಕಂಡುಬರುವ ವಿಶಿಷ್ಟವಾದ ಅಮೆಬೋಸೈಟ್, ಈ ಸಾಮರ್ಥ್ಯದ ಮೂಲ. ಇದನ್ನು ಎಫ್‌ಡಿಎ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗುತ್ತದೆ.
ಹಾರ್ಸ್‌ಶೂ ಏಡಿ 45 ಕೋಟಿ ವರ್ಷಗಳಷ್ಟು ಹಳೆಯದಾದ ಜೀವಿ. ಇದು ಡೈನೋಸಾರ್‌ಗಳಿಗಿಂತ ಹಳೆಯದು ಎಂದು ಹೇಳಲಾಗುತ್ತದೆ. ಈ ಏಡಿಗಳ ಮಿಶ್ರ ರಕ್ತವು ಹಿಮೋಸಯಾನಿನ್ ಅನ್ನು ಹೊಂದಿರುತ್ತದೆ. ಇದು ಆ ಜೀವಿಯ ರಕ್ತಕ್ಕೆ ನೀಲಿ ಬಣ್ಣವನ್ನು ನೀಡುತ್ತದೆ. ಇದು ತಾಮ್ರದ ಅಂಶವನ್ನು ಹೊಂದಿರುವ ಉಸಿರಾಟದ ವರ್ಣದ್ರವ್ಯ. ಈ ಏಡಿಗಳು ಬಹಳ ದುಬಾರಿ. ಇವುಗಳ ರಕ್ತವನ್ನು ʼಬ್ಲೂ ಗೋಲ್ಡ್ʼ ಅಥವಾ ʼನೀಲಿ ಚಿನ್ನʼ ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ 1 ಲೀಟರ್ ರಕ್ತದ ಬೆಲೆ 15 ಸಾವಿರ ಡಾಲರ್ (ಅಂದಾಜು 1258221 ರೂ.).
1960ರ ದಶಕದಲ್ಲಿ ವಿಜ್ಞಾನಿಗಳು ಹಾರ್ಸ್‌ಶೂ ಏಡಿ ರಕ್ತವನ್ನು, ರೋಗಕಾರಕ ಬ್ಯಾಕ್ಟೀರಿಯಾದ ಸೂಕ್ಷ್ಮ ಮಟ್ಟವನ್ನು ಗುರುತಿಸಲು ಬಳಸಬಹುದು ಎಂದು ಕಂಡುಹಿಡಿದರು. ಅಂದಿನಿಂದ ಇದನ್ನು ನಮ್ಮ ಯಾವುದೇ ಚುಚ್ಚುಮದ್ದುಗಳು, ವ್ಯಾಕ್ಸಿನ್‌ಗಳು ಅಥವಾ ಶಸ್ತ್ರಚಿಕಿತ್ಸಾ ಇಂಪ್ಲಾಂಟ್‌ಗಳು ಬ್ಯಾಕ್ಟೀರಿಯಾಗಳಿಂದ ಕಲುಷಿತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಔಷಧೀಯ ವಲಯವು ಅದನ್ನು ಬಳಸುತ್ತಿದೆ.
ಮಧ್ಯಾಹ್ನ ಊಟದ ಸಮಯದಲ್ಲಿ ಮಧುಮೇಹಿಗಳು ಈ ತಪ್ಪು ಮಾಡಬಾರದು!
ಪ್ರತಿವರ್ಷ ವೈದ್ಯಕೀಯ ಬ್ಯುಸಿನೆಸ್‌ನಲ್ಲಿ ಸುಮಾರು ಅರುವತ್ತು ಲಕ್ಷ ಕುದುರೆ ಏಡಿಗಳನ್ನು ಹಿಡಿದು ಬಳಸಲಾಗುತ್ತದೆ ಎಂದು ವರದಿಯಾಗಿದೆ. ಈ ಏಡಿಗಳನ್ನು ಹಿಡಿದು ಇವುಗಳ ಮೂವತ್ತು ಪ್ರತಿಶತ ರಕ್ತ ತೆಗೆಯಲಾಗುತ್ತದೆ. ಈ ಸಂದರ್ಭದಲ್ಲಿ ಬಹಳಷ್ಟು ಏಡಿಗಳು ಸಾಯುತ್ತವೆ. ಬದುಕುಳಿದವುಗಳನ್ನು ಮತ್ತೆ ಬೆಳೆಸಲಾಗುತ್ತದೆ.
ಅಮೇರಿಕನ್ ಹಾರ್ಸ್‌ಶೂ ಏಡಿಯನ್ನು 2016 ರಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್‌ನ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನ ಜೀವಿ ಎಂದು ಪಟ್ಟಿ ಮಾಡಲಾಗಿದೆ. ಈ ಏಡಿಗಳು ಡೈನೋಸಾರ್‌ಗಳನ್ನು ದಾಟಿಕೊಂಡು ಬಂದಿವೆ. ನಮ್ಮನ್ನು ದಾಟಿಕೊಂಡು ಉಳಿದಾವೇ? ಅದೀಗ ಪ್ರಶ್ನೆ!
ಜೀವನದಲ್ಲಿ ನಿಮ್ಮ ಗುರಿ ಸಾಧಿಸೋಕೆ ಐದು ಸೆಕೆಂಡ್ ಸಾಕು! ಸಿಸ್ಟರ್ ಶಿವಾನಿ ಹೇಳಿದ 5 ಸೆಕೆಂಡ್ ಸೂತ್ರ ಇಲ್ಲಿದೆ