Asianet Suvarna News Asianet Suvarna News

Grey Hair ಕಂಡಾಕ್ಷಣ ಕೀಳಬೇಡಿ, ಏನು ಮಾಡಬೇಕು ನಾವು ಹೇಳ್ತೇವೆ ಇಲ್ ಕೇಳಿ

ಮೊನ್ನೆ ತಲೆ ಬಾಚುವಾಗ ಸಣ್ಣ ಬೆಳ್ಳಿಯ ಎಳೆ ತಲೆಯಲ್ಲಿ ಕಾಣಿಸಿಕೊಂಡಿತು. ಅದನ್ನು ತೆಗೆಯಲು ಮುಂದಾದಾಗ ಕಣ್ಮರೆಯಾಯಿತು. ಹುಡುಕಿ ಸಾಕಾಯಿತು. ಆದರೆ ಆ ಬಿಳಿ ಕೂದಲಿರುವ ಜಾಗದಲ್ಲಿ ತುಂಬಾ ತುರಿಕೆಯೂ ಬರುತ್ತದೆ. ಪದೇ ಪದೇ ಕಾಣಿಸಿಕೊಳ್ಳುವ ಆ ಬಿಳಿ ಕೂದಲು ಕೀಳುವ ಮುನ್ನ ಹಲವು ಬಾರಿ ಯೋಚಿಸಬೇಕು. ಏಕೆ? ಇಲ್ಲಿದೆ ಮಾಹಿತಿ.

Why should one not Pluck White Hair! Here are the Fact!
Author
First Published Sep 2, 2022, 3:17 PM IST

ಇತ್ತೀಚಿನ ದಿನಗಳಲ್ಲಿ, ಪುರುಷರು ಮತ್ತು ಮಹಿಳೆಯರಲ್ಲಿ ಅಕಾಲಿಕ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ. ಸ್ಕೂಲಿಗೆ ಹೋಗುವ ಮಕ್ಕಳಲ್ಲೂ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅನೇಕರು ಈ  ಬಿಳಿ ಕೂದಲನ್ನು ಪ್ರಾರಂಭದಲ್ಲೇ ಚಿವುಟಲು ಪ್ರಯತ್ನಿಸುತ್ತಾರೆ ಅಥವಾ ಬಿಳಿ ಕೂದಲು ಹುಟ್ಟಲು ಆರಂಭಿಸಿದೆ ಎಂದು ಬಣ್ಣ ಅಥವಾ ಡೈ ಮಾಡಲು ಆರಂಭಿಸುತ್ತಾರೆ. ಹೀಗೆ ಮಾಡುವುದರಿಂದ ಕೆಟ್ಟದಾಗಿ ಕಾಣಿಸಿಕೊಳ್ಳುವ ಬಿಳಿ ಕೂದಲನ್ನು ತೆಗೆದುಹಾಕಬಹುದು ಎಂಬ ಕಲ್ಪನೆ ಹಲವರಲ್ಲಿದೆ. ಹೀಗೆ ಮಾಡುವುದರಿಂದ ಸಮಸ್ಯೆಯು ಇನ್ನಷ್ಟು ಉಲ್ಭಣಿಸುತ್ತದೆ ಎಂಬುದು ಸತ್ಯ. ಬಿಳಿ ಕೂದಲು ಕಾಣಿಸಿಕೊಂಡಾಕ್ಷಣ ಅದನ್ನು ಕಿತ್ತು ಹಾಕುವುದು ಉತ್ತಮ ಕ್ರಮವಲ್ಲ. ಡಿಎನ್‌ಎ ಸ್ಕಿನ್ ಕ್ಲಿನಿಕ್‌ನ ಸಂಸ್ಥಾಪಕಿ ಮತ್ತು ವೈದ್ಯಕೀಯ ನಿರ್ದೇಶಕಿ ಡಾ.ಪ್ರಿಯಾಂಕಾ ರೆಡ್ಡಿ ಅವರ ಪ್ರಕಾರ, ನಮ್ಮ ಚರ್ಮ ಮತ್ತು ಕೂದಲಿಗೆ ಬಣ್ಣವನ್ನು ನೀಡುವ ವರ್ಣದ್ರವ್ಯವಾದ ಮೆಲನಿನ್ ಕಡಿಮೆಯಾಗುವುದರಿಂದ ಕೂದಲು ಬಿಳಿಯಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.

ಬಿಳಿ ಕೂದಲು ಕಾಣಿಸಿಕೊಳ್ಳುವುದು ಇದೊಂದು ನೈಸರ್ಗಿಕ ಕ್ರಿಯೆಯಾಗಿದೆ. ವಯಸ್ಸಾದಂತೆ ಸಂಭವಿಸುವ ಅನಿವಾರ್ಯವಾಗಿದೆ. ಆದರೆ ಕೆಲವರಲ್ಲಿ ಇದು ವಂಶವಾಹಿಯಾಗಿರಬಹುದು. ವಂಶವಾಹಿಗಳಲ್ಲಿ ಮೆಲನಿನ್ ಉತ್ಪಾದನೆಯ ಮೇಲೆ ಪ್ರಭಾವ ಬೀರುವುದರಿಂದ ಅನೇಕ ಯುವಜನರು ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದ್ದರೆ, ಆರಂಭಿಕ ಹಂತದಲ್ಲೇ ಕೂದಲು ಬೂದುಬಣ್ಣವಾಗುತ್ತದೆ. ಇದೊಂದೇ ಕಾರಣದಿಂದ ಕೂದಲು ಬಿಳಿಯಾಗುವುದಿಲ್ಲ. ಇದಕ್ಕೆ ಕಾರಣಗಳು ಹಲವು ಎಂದು ಅವರು ಹೇಳುತ್ತಾರೆ.

Kids Care : ಬಾಲ್ಯದಲ್ಲೇ ಮಕ್ಕಳ ಕೂದಲು ಉದುರ್ತಿದ್ದರೆ ಕಾರಣ ತಿಳಿದು ಚಿಕಿತ್ಸೆ ನೀಡಿ

 ಕೂದಲು ಬಿಳಿಯಾಗಲು ಕಾರಣ
1. ವಿಟಮಿನ್ ಕೊರತೆ (vitamin deficiency): ವಿಟಮಿನ್ ಬಿ೧೨ ಮತ್ತು ವಿಟಮಿನ್ ಡಿ ಕೊರತೆಯು ಕೂದಲು ಅಕಾಲಿಕ ಬೂದು ಬಣ್ಣಕ್ಕೆ ಕಾರಣವಾಗಬಹುದು.
2. ಆಟೋ ಇಮ್ಯೂನ್ ಕಾಯಿಲೆ: ವಿಟಲಿಗೋ ರೀತಿಯ ಕಾಯಿಲೆ ಇದಾಗಿದೆ. ಇದರಲ್ಲಿ ಮೆಲನಿನ್ ಸಂಪೂರ್ಣವಾಗಿ ಇರುವುದಿಲ್ಲ. ಏಕೆಂದರೆ ಮೆಲನಿನ್ ಅನ್ನು ಉತ್ಪಾದಿಸುವ ಮೆಲನೋಸೈಟಗಳು ನಾಶವಾಗುತ್ತವೆ. ಪೀಡಿತ ಪ್ರದೇಶಗಳಲ್ಲಿ ಬೂದು ಅಥವಾ ಬಿಳಿ ಕೂದಲು ಉಂಟಾಗುತ್ತದೆ.
3. ಥೈರಾಯ್ಡ್ (Thyroid) ಸಮಸ್ಯೆ: ಈ ಸಮಸ್ಯೆಗಳು ಕೂದಲು ಅಕಾಲಿಕ ಬೂದುಬಣ್ಣಕ್ಕೆ ಕಾರಣವಾಗಬಹುದು. ಇದು ಕ್ಷಣಿಕವಾಗಿರಬಹುದು ಮತ್ತು ಥೈರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ತಡೆಯಬಹುದು. 
4.ಧೂಮಪಾನ (Smoking), ಒತ್ತಡ (Stress) ಮತ್ತು ಸಾಕಷ್ಟು ನಿದ್ರೆಯ ಕೊರತೆ: ಇದು ವಯಸ್ಸಾದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಅಕಾಲಿಕ ಬೂದುಬಣ್ಣವನ್ನು ಉಂಟುಮಾಡಬಹುದು. 

ಬಿಳಿ ಕೂದಲು ತೆಗೆಯುವ ಬಗ್ಗೆ ಪುರಾಣ ಮತ್ತು ಅದನ್ನು ಮಾಡದಿರಲು ಕಾರಣ: ಡಾ. ರೆಡ್ಡಿ ಅವರ ಪ್ರಕಾರ, ವ್ಯಕ್ತಿಯು ನಮ್ಮ ಬಿಳಿ ಕೂದಲನ್ನು ಕಿತ್ತುಕೊಳ್ಳಬಾರದು. ಏಕೆ ಒಂದು ಕಿತ್ತರೆ ಹತ್ತು ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಒಂದೇ ಒಂದು ಕೂದಲು ಇದೆ. ಆ ಒಂದು ಕೂದಲು ಒಂದು ಕೋಶಕದಿಂದ ಬೆಳೆಯಬಹುದು. ಆದ್ದರಿಂದ ಒಂದು ಬಿಳಿ ಕೂದಲನ್ನು ಕಿತ್ತಾಕುವುದರಿಂದ ಹೆಚ್ಚು ಬಿಳಿ ಕೂದಲಿನ ಬೆಳವಣಿಗೆಗೆ ಕಾರಣವಾಗುವುದಿಲ್ಲ. ಹೆಚ್ಚುವರಿಯಾಗಿ, ನಿರ್ದಿಷ್ಟ ಕೂದಲಿನಲ್ಲಿರುವ ಮೆಲನಿನ್ ಪ್ರಭಾವಿತವಾದಾಗ ಮಾತ್ರ ಬಿಳಿ ಕೂದಲಾಗುತ್ತದೆ. ತಜ್ಞರ ಪ್ರಕಾರ, ಒಂದು ಬಿಳಿ ಕೂದಲನ್ನು ಕಿತ್ತುಕೊಳ್ಳುವುದರಿಂದ ಸುತ್ತಮುತ್ತಲಿನ ಕೂದಲು ಬಿಳಿಯಾಗುವುದಿಲ್ಲ.
ಬಿಳಿ ಕೂಲದಲಿನ ಸಮಸ್ಯೆ ದೊಡ್ಡ ವಿಷಯವಲ್ಲ. ಆದರೂ, ಬಿಳಿ ಕೂದಲು ಕಂಡಾಗ ಕಿತ್ತಾಕಲು ಬಯಸಿದರೆ ಹಲವು ತೊಂದರೆಗಳಿಗೆ ಕಾರಣವಾಗಬಹುದು.

ಈ ಆಹಾರಗಳನ್ನು ಸೇವಿಸಿ ಬಿಳಿ ಕೂದಲು ಸಮಸ್ಯೆ ನಿವಾರಿಸಿ

1. ಬಿಳಿ ಕೂದಲು ತೆಗೆಯುವುದರಿಂದ ಕೋಶಕಗಳು ಸೋಂಕಿಗೆ (Infection) ಒಳಗಾಗಬಹುದು. ಇದು ಪಸ್ಟಲ್ ಬೆಳವಣಿಗೆಗೆ ಕಾರಣವಾಗಬಹುದು. 
2. ನಿರಂತರವಾಗಿ ಬಿಳಿ ಕೂದಲು ಕೀಳುವುದರಿಂದ ಚರ್ಮ, ಪೋಸ್ಟ್ ಇನ್‌ಫ್ಲಮೇಟರಿ (Inflamatory) ಪಿಗ್ಮೆಂಟೇಶನ್‌ಗೆ ಕಾರಣವಾಗಬಹುದು.
3. ಪದೇ ಪದೇ ಬಿಳಿ ಕೂದಲು ಕೀಳುವುದರಿಂದ ಶಾಶ್ವತವಾಗಿ ಕೂದಲು ಕಳೆದುಕೊಳ್ಳುವ ಸಮಸ್ಯೆಗೆ ಕಾರಣವಾಗಬಹುದು. ವ್ಯಕ್ತಿಯು ಎಷ್ಟು ಬಾರಿ ಕೂದಲನ್ನು ಕೀಳಬೇಕು ಎಂಬುದು ತಿಳಿದಿಲ್ಲದಿದ್ದರೂ ಶಾಶ್ವತ ಹಾನಿಯನ್ನು ಊಹಿಸಬಹುದು ಎಂದು ಸೂಚಿಸಲು ಸಾಕಷ್ಟು ಡೇಟಾವಿದೆ.
4. ಟ್ರೆöಕೊಟಿಲೊಮೇನಿಯಾ ಸಮಸ್ಯೆಗೆ ಒಳಗಾದವರು ಒಂದೇ ಸ್ಥಳದಿಂದ ತಮ್ಮ ಬಿಳಿ ಕೂದಲನ್ನು ಪದೇ ಪದೇ ಕಿತ್ತುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದು ಕಾಲಾನಂತರದಲ್ಲಿ ಗುರುತು ಮತ್ತು ಅಂತಿಮವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು.
5. ಟ್ರಾಕ್ಷನ್ ಅಲೋಪೆಸಿಯಾ, ಇದು ಶಾಶ್ವತ ಕೂದಲು ಉದುರುವಿಕೆಗೆ ಅಥವಾ ತೆಳುವಾಗುವಿಕೆಗೆ ಕಾರಣವಾಗುತ್ತದೆ. ಕೂದಲನ್ನು ಬಿಗಿಯಾಗಿ ಕೇಶ ವಿನ್ಯಾಸಕ್ಕೆ ಎಳೆದಾಗ ಮುಂಭಾಗದ ಕೂದಲು ಹಿಂದೆ ಜಗ್ಗುತ್ತದೆ. ಅತಿಯಾಗಿ ಕೂದಲು ಜಗ್ಗಿದರೂ ಕೂದಲಿನ ಬುಡಕ್ಕೆ ಹೆಚ್ಚು ತೊಂದರೆಯಾಗುತ್ತದೆ. 

ಪರಿಹಾರವೇನು?
ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಳ್ಳುತ್ತಿದ್ದರೆ, ಅದು ನಿಮ್ಮನ್ನು ಕೆರಳಿಸುತ್ತಿದ್ದರೆ ಅವುಗಳನ್ನು ಕಿತ್ತುಹಾಕುವ ಬದಲು ಕತ್ತರಿಗಳಿಂದ ಎಚ್ಚರಿಕೆಯಿಂದ ಟ್ರಿಮ್ ಮಾಡುವ ಬಗ್ಗೆ ಯೋಚಿಸಿ. ಬಹಳಷ್ಟು ಬಿಳಿ ಕೂದಲನ್ನು ಹೊಂದಿದ್ದರೆ ಕೂದಲಿಗೆ ಬಣ್ಣ ಹಚ್ಚುವುದು ಒಂದು ಆಯ್ಕೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ.

 

Why should one not Pluck White Hair! Here are the Fact!

 

Follow Us:
Download App:
  • android
  • ios