Asianet Suvarna News Asianet Suvarna News

Cancer Risk: ಮಹಿಳೆಯರಿಗಿಂತ ಪುರುಷರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು ಯಾಕೆ ?

ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್‌ನಿಂದ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಇಡೀ ವಿಶ್ವದಲ್ಲಿಯೇ ಸಂಭವಿಸುತ್ತಿರುವ ಸಾವುಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾರಣವಾಗಿದೆ. ಹಾಗಿದ್ರೆ ಪುರುಷ ಹಾಗೂ ಮಹಿಳೆಯರಲ್ಲಿ ಯಾರಿಗೆ ಕ್ಯಾನ್ಸರ್ ಅಪಾಯ ಹೆಚ್ಚು ?

Why Men Get Cancer More Than Women, How They Can Manage Their Risk Vin
Author
First Published Sep 4, 2022, 9:07 AM IST

ಕ್ಯಾನ್ಸರ್‌ ಮನುಷ್ಯರನ್ನು ಕಾಡುತ್ತಿರುವ ದೊಡ್ಡ ಕಾಯಿಲೆಯಾಗಿದೆ. ಜೀವಕೋಶಗಳು ಹಾನಿಗೊಳಗಾದಾಗ ಅವು ಸಾಯುತ್ತವೆ. ಮತ್ತು ಹೊಸ ಜೀವಕೋಶಗಳು ಅವುಗಳ ಸ್ಥಾನ ಪಡೆಯುತ್ತವೆ. ಕೆಲವೊಮ್ಮೆ ಈ ವ್ಯವಸ್ಥಿತ ಪ್ರಕ್ರಿಯೆಯು ಸರಿಯಾಗಿ ನಡೆಯುವುದಿಲ್ಲ. ಅಸಹಜ ಅಥವಾ ಹಾನಿಗೊಳಗಾದ ಜೀವಕೋಶಗಳು ನಾಶವಾಗುವ ಬದಲು ವೇಗವಾಗಿ ಬೆಳೆಯುತ್ತವೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಂದ್ರೆ ಪ್ರತಿ 6 ಸಾವುಗಳಲ್ಲಿ ಒಂದು ಸಾವು ಕ್ಯಾನ್ಸರ್ ನಿಂದ ಸಂಭವಿಸಿದೆ ಎಂದು ಹೇಳಬಹುದು. ಲಂಗ್ಸ್, ಆನಲ್, ಪ್ರಾಸ್ಟೇಟ್ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಗಳು ಹೆಚ್ಚು ಮಾರಣಾಂತಿಕವಾಗಿ ಪರಿಣಮಿಸಿವೆ. 

ಇತ್ತೀಚಿನ ಅಧ್ಯಯನದ ಪ್ರಕಾರ ಕ್ಯಾನ್ಸರ್ ಯಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ? ನಿಮ್ಮ ಜೀವನಶೈಲಿಯು (Lifestyle) ನಿಮ್ಮ ಕ್ಯಾನ್ಸರ್ ಅಪಾಯ (Danger)ವನ್ನು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ. ಜೊತೆಗೆ ಯಾವ ರೋಗ ಲಕ್ಷಣ (Symptoms)ಗಳಿಂದ ನೀವು ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸಬಹುದು ತಿಳಿಯೋಣ.

Cervical Cancer Vaccine: ಸ್ವದೇಶಿ ನಿರ್ಮಿತ ಗರ್ಭಕಂಠ ಕ್ಯಾನ್ಸರ್ ಲಸಿಕೆ ಬಿಡುಗಡೆ,ಕೇವಲ 200-400 ರೂ.ಗೆ ಲಭ್ಯ

ಪುರುಷರು ಮತ್ತು ಮಹಿಳೆಯರಲ್ಲಿ ಯಾರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು
ಅಮೇರಿಕನ್ ಕ್ಯಾನ್ಸರ್ ಸೊಸೈಟಿ, ಪುರುಷರು (Men) ಮತ್ತು ಮಹಿಳೆ (Woman)ಯರಲ್ಲಿ ಯಾರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂಬುದರ ಕುರಿತು ಅಧ್ಯಯನ ನಡೆಸಿದರು. ಇದಕ್ಕಾಗಿ 294,100 ರೋಗಿಗಳನ್ನು (Patients) ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಮಹಿಳೆಯರಿಗಿಂತ ಪುರುಷರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಯಾಕೆಂದರೆ ಪುರುಷರು ಮದ್ಯ (Alcohol), ಸಿಗರೇಟ್, ಬೀಡಿ, ಗುಟ್ಖಾ ಮುಂತಾದವುಗಳನ್ನು ಹೆಚ್ಚು ಸೇವಿಸುತ್ತಾರೆ. ಅಂಕಿ ಅಂಶಗಳ ಪ್ರಕಾರ ಪ್ರತಿ ಇಬ್ಬರಲ್ಲಿ ಒಬ್ಬರಿಗೆ ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಬರುತ್ತದೆ. ಅನೇಕ ಅಪಾಯಕಾರಿ ಅಂಶಗಳು ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಲಾಗಿದೆ. 

ಒತ್ತಡದ ಜೀವನಶೈಲಿ ಕ್ಯಾನ್ಸರ್‌ಗೆ ಕಾರಣವಾಗುತ್ತೆ
ನ್ಯಾಶನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಡಾ. ಸಾರಾ ಜಾಕ್ಸನ್ ಅವರ ಜೀವನಶೈಲಿಯು ಕ್ಯಾನ್ಸರ್ ಅಪಾಯದ ಶೇಕಡಾ 20 ರಷ್ಟು ಮಾತ್ರ ಕೊಡುಗೆ ನೀಡುತ್ತದೆ. ಜೀವನಶೈಲಿಯ ಅಂಶಗಳು ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುತ್ತದೆ. ತಜ್ಞರು ಪುರುಷರು ಮತ್ತು ಮಹಿಳೆಯರಿಗೆ ಆರೋಗ್ಯಕರ ಆಹಾರ ಕಾಪಾಡಿಕೊಳ್ಳಲು, ನಿಯಮಿತ ವ್ಯಾಯಾಮ (Exercise), ತಂಬಾಕು ಮತ್ತು ಆಲ್ಕೋಹಾಲ್ ಬಳಕೆ ತಪ್ಪಿಸಲು ಸಲಹೆ ನೀಡುತ್ತಾರೆ.

ಈ ಮಹಿಳೆಯರನ್ನು ಹೆಚ್ಚು ಕಾಡುತ್ತೆ ಗರ್ಭಾಶಯದ ಕ್ಯಾನ್ಸರ್

ಕ್ಯಾನ್ಸರ್ ರೋಗ ಲಕ್ಷಣಗಳು: ಕ್ಯಾನ್ಸರ್ ಮುಖ್ಯ ಲಕ್ಷಣಗಳು ವ್ಯಕ್ತಿಯು ಯಾವ ರೀತಿಯ ಕ್ಯಾನ್ಸರ್ ಅಭಿವೃದ್ಧಿಪಡಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಕರುಳಿನ ಅಭ್ಯಾಸದಲ್ಲಿ ಬದಲಾವಣೆಗಳು, ಉಬ್ಬುವುದು, ಎದೆ ನೋವು, ಉಸಿರಾಟದ ತೊಂದರೆ, ಗಡ್ಡೆಗಳು ಮತ್ತು ಹೊಸ ಮೋಲ್‌, ತೂಕ ನಷ್ಟ, ಹೊಟ್ಟೆ ಅಥವಾ ಬೆನ್ನು ನೋವು, ಅಜೀರ್ಣ ಮತ್ತು ವೇಗದ ಅಥವಾ ನಿಧಾನವಾದ ಹೃದಯ ಬಡಿತ ಹೆಚ್ಚಳ ಹೊಂದಿದೆ. ಹೊಸ ಅಥವಾ ಆತಂಕಕಾರಿ ರೋಗಲಕ್ಷಣಗಳನ್ನು ಗಮನಿಸುವುದು ಮುಖ್ಯ. ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?
ನಿಮ್ಮ ವೈದ್ಯರು ಶಿಫಾರಸು ಮಾಡಿದಂತೆ ಪರೀಕ್ಷಿಸಿ. ನೀವು ಸ್ಕ್ರೀನಿಂಗ್ ಪ್ರಾರಂಭಿಸಬೇಕಾದ ವಯಸ್ಸು ಮತ್ತು ನಿಮ್ಮ ಸ್ಕ್ರೀನಿಂಗ್‌ಗಳ ಆವರ್ತನವು ವಿಭಿನ್ನವಾಗಿರಬಹುದು. ನಿಮ್ಮ ಕುಟುಂಬದ ಇತಿಹಾಸವನ್ನು ತಿಳಿದುಕೊಳ್ಳಿ. ಪ್ರಾಸ್ಟೇಟ್ ಕ್ಯಾನ್ಸರ್ ಹೊಂದಿರುವ ಸಹೋದರ ಅಥವಾ ತಂದೆಯನ್ನು ಹೊಂದಿರುವುದು ನಿಮ್ಮ ಅಪಾಯವನ್ನು ದ್ವಿಗುಣಗೊಳಿಸುತ್ತದೆ. ಅಲ್ಲದೆ, ಆನುವಂಶಿಕ ಜೀನ್‌ಗಳು (ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗೆ ಸಂಬಂಧಿಸಿದ BRCA1 ಅಥವಾ BRCA2 ಜೀನ್‌ಗಳು ಮತ್ತು ಲಿಂಚ್ ಸಿಂಡ್ರೋಮ್‌ಗೆ ಸಂಬಂಧಿಸಿದ ಜೀನ್‌ಗಳು ಸೇರಿದಂತೆ) ನಿಮ್ಮ ಅಪಾಯವನ್ನು ಹೆಚ್ಚಿಸಬಹುದು ಮತ್ತು ನಿಮ್ಮ ಸ್ಕ್ರೀನಿಂಗ್ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಬಹುದು.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. ಅಮೇರಿಕನ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್ (AICR) ಪ್ರಕಾರ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಮುಂದುವರಿದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಸಂಬಂಧಿಸಿದೆ. ಪ್ರತಿ ವಾರ 150 ರಿಂದ 300 ನಿಮಿಷಗಳ ಮಧ್ಯಮ ದೈಹಿಕ ಚಟುವಟಿಕೆ ಅಥವಾ 75 ರಿಂದ 150 ನಿಮಿಷಗಳ ಹುರುಪಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ನೃತ್ಯ ಮಾಡಿ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿ. ಎಲ್ಲಾ ರೀತಿಯ ದೈಹಿಕ ಚಟುವಟಿಕೆಯು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅತಿಯಾದ ತೂಕ ಅಥವಾ ಬೊಜ್ಜು ಕ್ಯಾನ್ಸರ್ ಕೋಶಗಳಿಗೆ ಸುಲಭವಾಗಿಸುತ್ತದೆ

Follow Us:
Download App:
  • android
  • ios