Asianet Suvarna News Asianet Suvarna News

ಡ್ರಿಂಕ್ಸ್ ಮಾಡಿ, ಬಹುಮಾನ ಗೆಲ್ಲಿ, ಯುವಕರು ಹೆಚ್ಚು ಮದ್ಯ ಸೇವಿಸಲು ಜಪಾನ್ ಮನವಿ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಹೆಚ್ಚು ಕುಡಿಬೇಡಿ ಎಂದೇ ಎಲ್ಲರೂ ಸಲಹೆ ಕೊಡ್ತಾರೆ. ಆದ್ರೆ ಜಪಾನ್ ಸರ್ಕಾರ ಮಾತ್ರ ತನ್ನ ದೇಶದಲ್ಲಿ ಯುವಕರು ಹೆಚ್ಚು ಡ್ರಿಂಕ್ಸ್ ಮಾಡುವಂತೆ ಅಭಿಯಾನ ನಡೆಸ್ತಿದೆ. ಅದ್ಯಾಕೆ ? ಇಲ್ಲಿದೆ ಮಾಹಿತಿ. 

Why Is Japan Asking Its Youth To Drink More Vin
Author
Bengaluru, First Published Aug 21, 2022, 11:38 AM IST

ಟೋಕಿಯೋ: ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟ, ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಜಪಾನ್ ಸರ್ಕಾರ ತನ್ನ ಆದಾಯ ಹೆಚ್ಚಿಸಲು ಹೆಚ್ಚು ಮದ್ಯ ಕುಡಿಯುವ ಹೊಸ ಅಭಿಯಾನ ಆರಂಭಿಸಿದೆ. ಯುವ ವಯಸ್ಕರಿಗೆ ಹೆಚ್ಚು ಮದ್ಯಪಾನ ಮಾಡಲು ಕರೆ ಕೊಟ್ಟಿದ್ದು, 'ಸೇಕ್ ವಿವಾ' ಎನ್ನುವ ಸ್ಪರ್ಧೆಯನ್ನು ನಡೆಸುತ್ತಿದೆ. ದೇಶದ ಕಿರಿಯ ಜನಸಂಖ್ಯೆಯಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಈ ಅಭಿಯಾನ ಪ್ರೋತ್ಸಾಹಿಸುತ್ತದೆ.  ಆದಾಯ ಸಂಗ್ರಹ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ತನ್ನ ಪ್ರೌಢ ವಯಸ್ಕರಿಗೆ ಹೆಚ್ಚೆಚ್ಚು ಮದ್ಯ ಸೇವನೆ ಮಾಡುವಂತೆ ಜಪಾನ್ ಮನವಿ ಮಾಡಿದೆ. ಆರ್ಥಿಕತೆಯನ್ನು ವೃದ್ಧಿಸಲು ಮತ್ತು ಕೋವಿಡ್ ಸಾಂಕ್ರಾಮಿಕದ ಕಾರಣ ಉಲ್ಬಣಗೊಂಡಿರುವ ಜನಸಂಖ್ಯಾ ಬಿಕ್ಕಟ್ಟನ್ನು ತಗ್ಗಿಸಲು ಜಪಾನ್ ಸರ್ಕಾರ, ಆಲ್ಕೋಹಾಲ್ ಮಾರಾಟ ಹೆಚ್ಚಳದ ಪ್ರಯತ್ನಕ್ಕೆ ಮುಂದಾಗಿದೆ. 

ಲಿಕ್ಕರ್ ಉದ್ಯಮ ಪುನಶ್ಚೇತನಗೊಳಿಸುವ ಪ್ರಯತ್ನ
ಲಿಕ್ಕರ್ ಉದ್ಯಮವನ್ನು ಪುನಶ್ಚೇತನಗೊಳಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕೊಡುಗೆ ಸಲ್ಲಿಸುವುದು ತನ್ನ ಉದ್ದೇಶವಾಗಿದೆ ಎಂದು ಜಪಾನ್ ತೆರಿಗೆ ಸಂಸ್ಥೆ ತಿಳಿಸಿದೆ. ಅಲ್ಕೋಹಾಲಿಕ್ ಪಾನೀಯಗಳ ಬಳಕೆಯನ್ನು ಪುನಶ್ಚೇತನಗೊಳಿಸಲು 20 ರಿಂದ 39ರ ವಯೋಮಾನದ ಜನರಿಂದ ವಿನೂತನ ಬಗೆಯ ಉಪಾಯಗಳನ್ನು 'ಸೇಕ್ ವೈವಾ' ಆಂದೋಲನದ ಮೂಲಕ ಆಹ್ವಾನಿಸಲಾಗಿದೆ.

ಕಳೆದ ಏಳು ವರ್ಷದಿಂದ ಭಾರತದಲ್ಲಿ ಕಡಿಮೆಯಾಗ್ತಿದೆ ಕುಡುಕರ ಸಂಖ್ಯೆ

ಹೊಸ ವ್ಯಾಪಾರ ಕಲ್ಪನೆಗಳೊಂದಿಗೆ ಬರುವುದು, ಸೇಕ್, ಶೋಚು, ಅವಮೊರಿ, ಬಿಯರ್, ವಿಸ್ಕಿ ಮತ್ತು ವೈನ್ ನಂತಹ ಜಪಾನಿನ ಆಲ್ಕೊಹಾಲ್‌ಯುಕ್ತ ಪಾನೀಯಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಅಭಿಯಾನ ಸಹಾಯ ಮಾಡಲಿದೆ. 'ಸೇಕ್ ವಿವಾ' ಅಲ್ಕೊಹಾಲ್‌ಯುಕ್ತ ಪಾನೀಯಗಳ ಆಕರ್ಷಣೆಯನ್ನು ಪುನರುಜ್ಜೀವನಗೊಳಿಸಲಿದ್ದು, ಅಭಿಯಾನ (Campaign)ದಲ್ಲಿ ಪಾಲ್ಗೊಳ್ಳಲು 20 ಮತ್ತು 39ರ ನಡುವಿನ ವಯಸ್ಸಿನ ಜನರನ್ನು ಆಹ್ವಾನಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸರಣಿ ಲಾಕ್‌ಡೌನ್‌ಗಳು ಮತ್ತು ಕೋವಿಡ್ ನಿಯಂತ್ರಣ ನಿರ್ಬಂಧಗಳಿಂದ ಬದಲಾಗಿರುವ ಜನರ ಜೀವನ ಕ್ರಮ ಹಾಗೂ ವಿಭಿನ್ನ ಅಭಿರುಚಿಗಳಿಗೆ ಅನುಗುಣವಾಗಿ ಉತ್ಪನ್ನಗಳು ಮತ್ತು ವಿನ್ಯಾಸಗಳಿಗೆ ಹೊಸ ಪ್ರಸ್ತಾವನೆಗಳನ್ನು ಜನರು ಸಲ್ಲಿಸಬಹುದಾಗಿದೆ.

ಹೆಚ್ಚು ಡ್ರಿಂಕ್ಸ್ ಮಾಡಿ, ಬಹುಮಾನ ಗೆಲ್ಲಿ
ಸ್ಪರ್ಧೆ (Competition)ಯಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿಲ್ಲ, ಇದು ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಭೌಗೋಳಿಕ ಸೂಚನೆಗಳನ್ನು ಬಳಸುವ ಹೊಸ ಮಾರಾಟ ವಿಧಾನಗಳನ್ನು ಸೂಚಿಸಲು ಜನರನ್ನು ಕೇಳುತ್ತದೆ. ಇದಕ್ಕೆ ಸ್ಪರ್ಧಿಗಳು ಹೊಸ ಯೋಚನೆಗಳನ್ನು ನೀಡಬೇಕು.

ಸ್ಪರ್ಧೆಯ ಅಂತಿಮ ಸ್ಪರ್ಧಿಗಳನ್ನು ಸೆಪ್ಟೆಂಬರ್ 27 ರೊಳಗೆ ಆಯ್ಕೆ ಮಾಡಲಾಗುತ್ತದೆ. ನಂತರ ಅಕ್ಟೋಬರ್‌ನಲ್ಲಿ ಮತ್ತೊಂದು ಸುತ್ತು ನಡೆಯಲಿದೆ. ಈ ಸ್ಪರ್ಧೆಯ ಫಲಿತಾಂಶಗಳನ್ನು ನವೆಂಬರ್ 10 ರಂದು ಟೋಕಿಯೊದಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನನ ಪ್ರಮಾಣ ಕಡಿಮೆಯಾಗುವುದು, ವೃದ್ಧರ ಜನಸಂಖ್ಯೆಯ ಹೆಚ್ಚಳ ಮತ್ತು ಕೋವಿಡ್ -19 ಹರಡುವಿಕೆಯಿಂದಾಗಿ ಜೀವನಶೈಲಿಯಲ್ಲಿನ ಬದಲಾವಣೆಗಳು ದೇಶೀಯ ಮದ್ಯದ ಮಾರುಕಟ್ಟೆಯನ್ನು ತೀವ್ರವಾಗಿ ಪರಿಣಾಮ ಬೀರಿವೆ.

ಯಾರಾಯ್ತೋ ಅವರೆಲ್ಲಾ ಆಲ್ಕೋಹಾಲ್ ಕುಡಿಯೋ ಹಂಗಿಲ್ಲ, ಅನಾರೋಗ್ಯಕ್ಕೆ ಕುತ್ತು!

ಅಭಿಯಾನವು ಮದ್ಯ (Alcohol) ಉದ್ಯಮವನ್ನು ಪುನರುಜ್ಜೀವನಗೊಳಿಸಲು ಯುವ ಪೀಳಿಗೆಗೆ ಮನವಿ ಮಾಡುವ ಗುರಿಯನ್ನು ಹೊಂದಿದೆ. 1995 ಕ್ಕೆ ಹೋಲಿಸಿದರೆ 2020 ರಲ್ಲಿ ದೇಶದಲ್ಲಿ ಅಲ್ಕೊಹಾಲ್ ಸೇವನೆಯು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ರಾಷ್ಟ್ರೀಯ ತೆರಿಗೆ ಸಂಸ್ಥೆ ಹೇಳಿದೆ. 1995ರಲ್ಲಿ, ವಾರ್ಷಿಕವಾಗಿ 100 ಲೀಟರ್ (22 ಗ್ಯಾಲನ್) ಮದ್ಯವನ್ನು ಸೇವಿಸಲಾಯಿತು. ಆದರೆ ಅದನ್ನು 75 ಲೀಟರ್ (16 ಗ್ಯಾಲನ್) ಗೆ ಇಳಿಸಲಾಯಿತು.

Follow Us:
Download App:
  • android
  • ios