ಇಂಡಿಯನ್ ಟಾಯ್ಲೆಟ್ ಅಥವಾ ವೆಸ್ಟರ್ನ್ ಟಾಯ್ಲೆಟ್ ಎಂಬುದು ಅವರವರ ಆಯ್ಕೆ, ಅನುಕೂಲವನ್ನು ಅವಲಂಬಿಸಿದ್ದು. ಆದರೂ, ಹಲವು ಭಾರತೀಯರಲ್ಲಿ ಪಾಶ್ಚಾತ್ಯರ ಕಮೋಡ್ ಎಂದರೆ ಮಾಡರ್ನ್, ಸ್ಟೈಲಿಶ್ ಎಂಬ ಮನೋಭಾವವಿದೆ. ಇಂಡಿಯನ್ ಟಾಯ್ಲೆಟ್ ಎಂಬುದು ಗತ ಕಾಲದ್ದು ಎಂದು ನಂಬುವವರು ಹಲವರು. ಎಲ್ಲದರಲ್ಲೂ ಪಾಶ್ಚಾತ್ಯರ ಅನುಕರಣೆ ಮಾಡುವ ಚಟವಿರುವ ನಾವು ಕಮೋಡ್‌ಗಳ ವಿಷಯದಲ್ಲೂ ಅದನ್ನೇ ಮಾಡುತ್ತಿದ್ದೇವೆ. ಆದರೆ, ಇಂಡಿಯನ್ ಟಾಯ್ಲೆಟ್ ಬಳಸುತ್ತಿದ್ದ ಹಳೆಯ ತಲೆಮಾರಿನವರು ಎಷ್ಟು ಫಿಟ್ ಆ್ಯಂಡ್ ಆ್ಯಕ್ಟಿವ್ ಆಗಿದ್ದರು ಎಂಬುದನ್ನು ಗಮನಿಸಿದ್ದೀರಾ? ಕೆಲವೊಮ್ಮೆ ಕೇವಲ ಕಂಫರ್ಟ್ ಹಾಗೂ ಸ್ಟೈಲ್ ನೋಡಿದರೆ ಸಾಲುವುದಿಲ್ಲ... ಯಾವುದರಿಂದ ಹೆಚ್ಚು ಲಾಭಗಳಿವೆ ಎಂದು ನೋಡಬೇಕು. ವೈಜ್ಞಾನಿಕ ಕಾರಣಗಳನ್ನಿಟ್ಟುಕೊಂಡು ಹೋಲಿಸಿ ನೋಡಿದಾಗ ಕೂಡಾ ಇಂಡಿಯನ್ ಟಾಯ್ಲೆಟ್ ವೆಸ್ಟರ್ನ್ ಟಾಯ್ಲೆಟ್‌ಗಳಿಗಿಂತ ಹಲವು ಪಟ್ಟು ಮೇಲು ಎನಿಸಿಕೊಳ್ಳುತ್ತದೆ. ಅದು ಹೇಗೆ, ಏಕೆ ಎಂಬುದನ್ನು ನೋಡೋಣ.

ಹಾರ್ಟ್ ಆಟ್ಯಾಕ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು

ಹೆಚ್ಚು ಸ್ವಚ್ಛ
ವಯಸ್ಸಾದವರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ವೆಸ್ಟರ್ನ್ ಟಾಯ್ಲೆಟ್ ಹೆಚ್ಚು ಕಂಫರ್ಟೇಬಲ್ ನಿಜ. ಆದರೆ, ಉಳಿದಂತೆ ಎಲ್ಲರಿಗೂ ಇಂಡಿಯನ್ ಟಾಯ್ಲೆಟ್ ಬಳಕೆಯೇ ಸೂಕ್ತ. ಸ್ವಚ್ಛತೆ ಹಾಗೂ ಸುರಕ್ಷತೆ ವಿಷಯಕ್ಕೆ ಬಂದರೆ ಭಾರತೀಯ ಶೌಚಾಲಯಗಳು ಒಂದು ಹೆಜ್ಜೆ ಮುಂದೆಯೇ. ಇಲ್ಲಿ ಅಂಗಾಲಿನ ಹೊರತಾಗಿ ದೇಹ ಟಾಯ್ಲೆಟ್ ಸೀಟ್ ಮೇಲೆ ನೇರ ಕಾಂಟ್ಯಾಕ್ಟ್ ಇರುವುದಿಲ್ಲ. ಇದರಿಂದ ಮೂತ್ರನಾಳದ ಸೋಂಕು ಸೇರಿದಂತೆ ಇತರೆ ಇನ್ಫೆಕ್ಷನ್‌ಗಳು ಹರಡುವುದನ್ನು ತಡೆಯಬಹುದು.  ಆದರೆ ಕಮೋಡ್ ಬಳಸುವವರು ಟಾಯ್ಲೆಟ್ ಸೀಟ್ ಮೇಲೆಯೇ ಕೂರುತ್ತಾರೆ. ಇದರಿಂದ ಇನ್ಫೆಕ್ಷನ್ ಹರಡುವ ಸಾಧ್ಯತೆ ಹೆಚ್ಚು. ಜೊತೆಗೆ, ಕಮೋಡ್ ಬಳಸುವವರು ಪೇಪರ್ ರೋಲ್ ಆಯ್ಕೆ ಮಾಡುತ್ತಾರೆ. ಆದರೆ, ಇಂಡಿಯನ್ ಟಾಯ್ಲೆಟ್ ಬಳಸುವವರು ನೀರನ್ನು ಬಳಸುತ್ತಾರೆ. ಹಾಗಾಗಿ, ಇಂಡಿಯನ್ ಟಾಯ್ಲೆಟ್ ಹೆಚ್ಚು ಸ್ವಚ್ಛ. 

ದೇಹ ಫಿಟ್
ಭಾರತೀಯ ಶೌಚಾಲಯಗಳ ಬಳಕೆಯು ಒಂದು ರೀತಿಯಲ್ಲಿ ಸ್ಕ್ವಾಟ್ ವ್ಯಾಯಾಮವಿದ್ದಂತೆ. ಈ ಪೊಸಿಶನ್‌ನಲ್ಲಿ ದಿನಕ್ಕೆ ಹಲವು ಬಾರಿ ಕುಳಿತು ಏಳುವುದರಿಂದ ನಮ್ಮ ಕಾಲುಗಳು ಬಲವಾಗುತ್ತವೆ. ಜೊತೆಗೆ, ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ  ಆಗುತ್ತದೆ. ಬೇರೇನೂ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಾಗಲೂ ಇದರಿಂದ ದೇಹಕ್ಕೆ ಸ್ವಲ್ಪ ಮಟ್ಟಿನ ವ್ಯಾಯಾಮ ಸಿಗುತ್ತದೆ. ಆದರೆ, ಪಾಶ್ಚಾತ್ಯ ಕಮೋಡ್‌ನಲ್ಲಿ ಈ ವ್ಯಾಯಾಮದ ಲಾಭ ದಕ್ಕುವುದಿಲ್ಲ. 

ಗರ್ಭಿಣಿಯರಿಗೆ ಉತ್ತಮ
ಗರ್ಭಿಣಿ ಮಹಿಳೆಯರು ಭಾರತೀಯ ಟಾಯ್ಲೆಟ್ ಬಳಕೆ ಮಾಡುವುದರಿಂದ ಅವರ ದೇಹ ನಾರ್ಮಲ್ ಡೆಲಿವರಿಗೆ ಹೆಚ್ಚು ಚೆನ್ನಾಗಿ ಸಿದ್ಧವಾಗುತ್ತದೆ ಎನ್ನಲಾಗುತ್ತದೆ. ಜೊತೆಗೆ, ಗರ್ಭಿಣಿಯರಲ್ಲಿ ಕಾಡುವ ಮಲಬದ್ಧತೆ ಸಮಸ್ಯೆಗೆ ಇದು ಪರಿಹಾರವಾಗಗಬಲ್ಲದು. ಈ ಸಮಯದಲ್ಲಿ ಮೂತ್ರನಾಳದ ಸೋಂಕಾದರೆ ಭ್ರೂಣಕ್ಕೆ ಕೂಡಾ ಅದು ಅಪಾಯಕಾರಿಯಾಗಬಹುದು. ಹಾಗಾಗಿ, ಕಮೋಡ್ ಬಳಕೆ ದೂರವಿಟ್ಟು ಇಂಡಿಯನ್ ಟಾಯ್ಲೆಟ್ ಬಳಸುವುದು ಉತ್ತಮ.

ಉತ್ತಮ ಜೀರ್ಣಕ್ರಿಯೆ
ಭಾರತೀಯ ಟಾಯ್ಲೆಟ್‌ಗಳ ಬಳಕೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಕುಕ್ಕುರುಗಾಲಿನಲ್ಲಿ ಕೂರುವುದರಿಂದ ಆಹಾರ ಚೆನ್ನಾಗಿ ಜೀರ್ಣವಾಗಲು ಸಾಧ್ಯವಾಗುತ್ತದೆ. ಇದು ಬೊವೆಲ್ ಮೂವ್‌ಮೆಂಟ್ ಮೇಲೆ ಪ್ರೆಶರ್ ಹಾಕುವುದರಿಂದ ಶೌಚಕ್ರಿಯೆ ಸರಾಗವಾಗಿ ಆಗುತ್ತದೆ. ಆದರೆ ಕಮೋಡ್ ಬಳಕೆಯಲ್ಲಿ ದೇಹದ ಕೆಳಭಾಗಕ್ಕೆ ಈ ಒತ್ತಡ ಎಲ್ಲಿಂದ ಸಿಗುತ್ತದೆ ಹೇಳಿ? ಹಾಗಾಗಿ, ಅಲ್ಲಿ ಒಂದೇ ಬಾರಿಗೆ ಸರಿಯಾಗಿ ಶೌಚಕ್ರಿಯೆ ಆಗುವುದಿಲ್ಲ. 

ಫಿಟ್ ನಟಿ ಕರೀನಾಳ ಡಯಟ್ ಪ್ಲ್ಯಾನ್

ಮಲಬದ್ಧತೆ ತಡೆ
ಭಾರತೀಯ ಟಾಯ್ಲೆಟ್‌ಗಳನ್ನು ಬಳಸುವಾಗ ಕೂರುವ ಭಂಗಿಯಿಂದಾಗಿ ಮಲ ಸರಿಯಾಗಿ ಹೊರ ಹೋಗುತ್ತದೆ. ಈ ಒತ್ತಡದಿಂದ ಕರುಳು ಸ್ವಚ್ಛವಾಗುತ್ತದೆ. ಸಂಶೋಧನೆಗಳ ಪ್ರಕಾರ, ಕಮೋಡ್ ಬಳಸುವವರಲ್ಲಿ ಹೊಟ್ಟೆಯ ಸಮಸ್ಯೆಗಳು ಹೆಚ್ಚು. ಆದರೆ, ಭಾರತೀಯ ಶೌಚಾಲಯ ಬಳಸುವವರಲ್ಲಿ ಮಲಬದ್ಧತೆ ಸೇರಿದಂತೆ ಹೊಟ್ಟೆಯ ಸಮಸ್ಯೆಗಳು ಕಡಿಮೆ ಇರುತ್ತವೆ.

ಎಕೋ ಫ್ರೆಂಡ್ಲಿ
ಭಾರತೀಯ ಶೌಚಾಲಯಗಳನ್ನು ಬಳಸಿದ ಬಳಿಕ ಮೂರರಿಂದ ನಾಲ್ಕು ತಂಬಿಗೆ ನೀರು ಸಾಕಾಗುತ್ತದೆ. ಆದರೆ, ವೆಸ್ಟರ್ನ್ ಟಾಯ್ಲೆಟ್‌ನ ಫ್ಲಶಿಂಗ್ ವ್ಯವಸ್ಥೆಯಲ್ಲಿ ಬಕೆಟ್‌ಗಟ್ಟಲೆ ನೀರು ವೇಸ್ಟ್ ಆಗುತ್ತದೆ. ಜೊತೆಗೆ ಪೇಪರ್ ರೋಲ್‌ಗಳ ಬಳಕೆ ಬೇರೆ. ಇದರ ಅಗತ್ಯ ಇಂಡಿಯನ್ ಟಾಯ್ಲೆಟ್‌ನಲ್ಲಿ ಇಲ್ಲವಾದ್ದರಿಂದ ಮರಗಳ ರಕ್ಷಣೆಯೂ ಆಗುತ್ತದೆ.

ಈ ವೀಡಿಯೋ ನೋಡಿದ್ರೆ ಜೀವನದಲ್ಲಿ ನೀವಿನ್ನು ಸಿಗರೇಟ್ ಮುಟ್ಟೋಲ್ಲ