Asianet Suvarna News Asianet Suvarna News

ಕೋವಿಡ್ ನಂತರ ಹೃದಯಾಘಾತ ಪ್ರಕರಣ ಹೆಚ್ಚಿದ್ದೇಕೆ? ಯಾರಿಗೆಲ್ಲ ಇದೆ ಅಪಾಯ?

ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಿವೆ. ಮೊದಲು ಕೇವಲ ಹಿರಿ ವಯಸ್ಸಿನವರಿಗೆ ಸಂಭವಿಸುತ್ತಿದ್ದ ಹೃದಯಾಘಾತ ಇಂದು ಮಕ್ಕಳು, ಯುವಕರೆನ್ನದೆ ಎದುರಾಗುತ್ತಿದ್ದು,ಎಲ್ಲರ ಪಾಲಿಗೂ ದುಃಸ್ವಪ್ನವಾಗಿದೆ. 

Why have heart attack cases increased since Covid Who are in danger skr
Author
First Published Jan 4, 2024, 12:28 PM IST

ಮೊದಲೆಲ್ಲ ಹೃದಯಾಘಾತ ಎಂದರೆ ವಯಸ್ಸಾದವರಿಗೆ ಬರುವುದು ಎಂಬ ನಿಲುವಿತ್ತು. ಆದರೆ ಇತ್ತೀಚೆಗೆ, ಅದರಲ್ಲೂ ಕೋವಿಡ್ 19 ಬಂದು ಹೋದ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 5-6 ಲಕ್ಷ ಜನರು ಹೃದಯಾಘಾತದಿಂದ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು! 

ಹೌದು, ಹೃದಯಾಘಾತವು ಕೇವಲ ವೃದ್ಧರೆನ್ನದೆ ಶಾಲಾ ಮಕ್ಕಳು, ಯುವಜನರಿಗೂ ಮಾರಕವಾಗಿ ಪರಿಣಮಿಸಿವೆ. ಸಾಕಷ್ಟು ಸಣ್ಣ ವಯಸ್ಸಿನವರು ನಿಂತು ನಿಂತಲ್ಲೇ ಬಿದ್ದು ಸಾವನ್ನಪ್ಪುವ ಪ್ರಕರಣಗಳು ಎಲ್ಲರಲ್ಲಿ ದಿಗಿಲು ಹುಟ್ಟಿಸುತ್ತಿವೆ. ಫಿಟ್ನೆಸ್, ಆಹಾರ ಎಂದೇನೇನೋ ಸರ್ಕಸ್ ಮಾಡುತ್ತಿರುವವರಿಗೂ ಬಿಡದೆ ಈ ಹೃದಯಾಘಾತಗಳು ಸಂಭವಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಈ ಅಪಾಯ ಹೆಚ್ಚುತ್ತಿದೆ.

ಅಷ್ಟಕ್ಕೂ, ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಏಕೆ ಹೆಚ್ಚಾದವು?
ನಮ್ಮ ಕಾಲದ ದೊಡ್ಡ ಸವಾಲು ಎಂದರೆ ಕೊರೊನಾ ವೈರಸ್. ಮೂರು ವರ್ಷಗಳ ನಂತರವೂ, ಕೋವಿಡ್ -19 ಸಾಂಕ್ರಾಮಿಕದ ದುಷ್ಪರಿಣಾಮಗಳೊಂದಿಗೆ ಜಗತ್ತು ಹೋರಾಡುತ್ತಿದೆ. ಕೊರೋನಾ ಸಾಂಕ್ರಾಮಿಕದ ನಂತರ, ವಯಸ್ಸಾದವರು ಅಥವಾ ಕಿರಿಯರು ಎಂದು ಬೇಧವಿಲ್ಲದೆ ಯಾವುದೇ ವಯಸ್ಸಿನ ಜನರಲ್ಲಿ ಹೃದಯಾಘಾತದ ಹೆಚ್ಚಿನ ಅಪಾಯವಿದೆ ಎಂದು ಅನೇಕ ವರದಿಗಳಲ್ಲಿ ಕಂಡುಬಂದಿದೆ.

ಹೃದಯಾಘಾತ ಹೇಗೆ ಸಂಭವಿಸುತ್ತದೆ?
ಹೃದಯಾಘಾತವು ಗಂಭೀರ ಕಾಯಿಲೆಯಾಗಿದೆ. ಮಾನವನ ಹೃದಯವು ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪಡೆಯದಿದ್ದಾಗ ಹೃದಯಾಘಾತ ಸಂಭವಿಸುತ್ತದೆ. ಸಾಮಾನ್ಯವಾಗಿ, ರಕ್ತನಾಳಗಳಲ್ಲಿ ಅಡಚಣೆ ಉಂಟಾದಾಗ, ಅದು ಬ್ಲಾಕ್ ಆದಾಗ ರಕ್ತವು ಹೃದಯವನ್ನು ತಲುಪಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಹಠಾತ್ ನೋವನ್ನು ಅನುಭವಿಸುತ್ತಾನೆ ಮತ್ತು ಕೆಲವೇ ನಿಮಿಷಗಳಲ್ಲಿ ಸಾಯುತ್ತಾನೆ. ಅನೇಕರಿಗೆ ಹೃದಯಾಘಾತವಾಗಿದೆ ಎಂಬುದು ವೈದ್ಯರು ಪರೀಕ್ಷಿಸಿದಾಗ ಮಾತ್ರ ಗೊತ್ತಾಗುತ್ತದೆ.

ವಿಶ್ವದ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ಫೇಮಸ್‌ ತಿನಿಸು ಕೂಡಾ ಇದೆ..!

ಹೃದಯಾಘಾತದ ಲಕ್ಷಣಗಳು
ಎದೆನೋವು, ಉಸಿರಾಟದ ತೊಂದರೆ, ಅತಿಯಾದ ಬೆವರುವಿಕೆ, ಚಡಪಡಿಕೆ, ದವಡೆ ಅಥವಾ ಹಲ್ಲುಗಳಲ್ಲಿ ನೋವು.

ಹೃದಯಾಘಾತಕ್ಕೆ ಕೋವಿಡ್ ಕಾರಣವೇ?
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಅಕ್ಟೋಬರ್ 2023 ರಲ್ಲಿ ನೀಡಿದ ಹೇಳಿಕೆಯಲ್ಲಿ, ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್‌ ಕಾರಣವಾಗಿವೆ. ಕೊರೋನಾ ವೈರಸ್ ಸೋಂಕಿಗೆ ಒಳಗಾದವರಿಗೆ ಹೃದ್ರೋಗ ಮತ್ತು ಹೃದಯ ಸ್ತಂಭನದ ಅಪಾಯವಿದೆ ಎಂದಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವರದಿಯು ಕೊರೋನಾ ವೈರಸ್‌ನಿಂದ ಗಂಭೀರವಾಗಿ ಪೀಡಿತರಾದವರಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂದು ಹೇಳಿದೆ. ಅಂತಹ ಜನರು ಹೃದಯಾಘಾತವನ್ನು ತಪ್ಪಿಸಲು ಒಂದು ಅಥವಾ ಎರಡು ವರ್ಷಗಳ ಕಾಲ ಹೆಚ್ಚು ಕಠಿಣ ಕೆಲಸ ಅಥವಾ ವ್ಯಾಯಾಮವನ್ನು ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ. ಅವರು ತಾವು ಹಿಂದೆ ಮಾಡದ ಯಾವುದೇ ಹೊಸ ವ್ಯಾಯಾಮವನ್ನು ಮಾಡಬಾರದು.

ಬೇಕಾ ಬಿಟ್ಟಿ ಸ್ವೀಟ್ಸ್ ತಿಂದ್ರೆ ಆರೋಗ್ಯಕ್ಕೆ ನೂರೆಂಟ್ ಅಪಾಯ ಗ್ಯಾರಂಟಿ!

ಕೋವಿಡ್ ನಂತರ ಇಷ್ಟೊಂದು ಹೃದಯಾಘಾತ ಪ್ರಕರಣಗಳು ಏಕೆ?
ಅಷ್ಟಕ್ಕೂ, ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಏಕೆ ಹೆಚ್ಚಾದವು? ಇದಕ್ಕೆ ಕಾರಣ ತಿಳಿಯಲು ಹೃದಯಾಘಾತದಿಂದ ಮೃತಪಟ್ಟ 100ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಲಾಯಿತು. ತನಿಖಾ ವರದಿಯ ಪ್ರಕಾರ, ಈ ಜನರು ಕೊರೋನಾ ಅವಧಿಯಲ್ಲಿ ಸೋಂಕಿಗೆ ಒಳಗಾಗಿದ್ದರು. ಕೋವಿಡ್‌ನಿಂದಾಗಿ ಹೃದಯದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದೆ. ಹೆಪ್ಪುಗಟ್ಟುವಿಕೆಯಿಂದಾಗಿ, ಅವರ ಹೃದಯವು ರಕ್ತವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ. ಇದರಿಂದಾಗಿ ಹೃದಯಾಘಾತ ಸಂಭವಿಸುತ್ತದೆ.

ಸಂಶೋಧನೆಯ ಪ್ರಕಾರ, ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಜನರು ಸಹ ಅಪಾಯದಲ್ಲಿದ್ದಾರೆ. ಎದೆನೋವು, ಚಡಪಡಿಕೆ, ಉಸಿರಾಟದ ತೊಂದರೆ, ಹೊಟ್ಟೆ, ಬೆನ್ನು, ಭುಜ ಅಥವಾ ಕುತ್ತಿಗೆಯಲ್ಲಿ ನೋವು ಕಂಡುಬಂದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಸೌಮ್ಯ ಲಕ್ಷಣಗಳು ಕಂಡುಬಂದರೂ ಮುನ್ನೆಚ್ಚರಿಕೆಯಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಯುವಕರು ಯಾವುದೇ ರೀತಿಯ ಎದೆಯ ಅಸ್ವಸ್ಥತೆ, ಉಸಿರಾಟದ ತೊಂದರೆ ಅಥವಾ ಅಸ್ಪಷ್ಟ ನೋವಿನಂತಹ ಸಣ್ಣ ಚಿಹ್ನೆಗಳನ್ನು ನಿರ್ಲಕ್ಷಿಸಬಾರದು.

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯೂ ಹದಗೆಡುತ್ತಿದೆ. ಹೊರಗಿನ ಆಹಾರ ಸೇವನೆ, ಅತಿಯಾದ ಕೆಲಸದ ಒತ್ತಡ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಧೂಮಪಾನವು ಯುವಕರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಕೆಲವರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕೂಡ ಹೃದ್ರೋಗಕ್ಕೆ ಕಾರಣವಾಗಬಹುದು. ಇದಲ್ಲದೆ, ಕುಟುಂಬದಲ್ಲಿ ಯಾರಾದರೂ ಹೃದ್ರೋಗದಿಂದ ಬಳಲುತ್ತಿದ್ದರೆ, ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಸಮಸ್ಯೆಯ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ.

ಪ್ರಗ್ನೆನ್ಸಿಯ ಕೊನೆ ತಿಂಗಳಲ್ಲಿ ಸ್ತನ ಮಸಾಜ್ ಮಾಡಿಕೊಳ್ಳಲು ವೈದ್ಯರು ಹೇಳೋದೇಕೆ?

ಬೆಳಗ್ಗೆ ಅಪಾಯ
ಸ್ಪೇನ್‌ನಲ್ಲಿ ನಡೆದ ಇತ್ತೀಚಿನ ಸಂಶೋಧನೆಯೊಂದು ಮುಂಜಾನೆ ಹೆಚ್ಚು ಹೃದಯಾಘಾತಗಳು ಸಂಭವಿಸುತ್ತವೆ ಎಂದು ತೋರಿಸಿದೆ. ಸಾಮಾನ್ಯವಾಗಿ ಹೃದಯಾಘಾತದ ಅಪಾಯವು ಬೆಳಿಗ್ಗೆ 6 ರಿಂದ ಮಧ್ಯಾಹ್ನದವರೆಗೆ ಹೆಚ್ಚಾಗಿರುತ್ತದೆ.

ಕೋವಿಡ್‌ಗಿಂತ ಮುಂಚೆಯೇ, ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಕಂಡುಬಂದಿವೆಯೇ?
ಎರಡು ಅಥವಾ ಮೂರು ದಶಕಗಳ ಹಿಂದೆ ಹೃದಯಾಘಾತ ಪ್ರಕರಣಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 10 ಪ್ರತಿಶತದಷ್ಟು ಜನರಲ್ಲಿ ಮಾತ್ರ ಕಂಡುಬಂದಿತ್ತು. ಈಗ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.

ಒಬ್ಬ ವ್ಯಕ್ತಿಯು ಹೃದಯಾಘಾತದಿಂದ ಸಾವನ್ನಪ್ಪಿದರೆ, ಅವನ ಹಿಂದಿನ ಪ್ರೊಫೈಲ್ ಏನೆಂದು ನಿರ್ಣಯಿಸಬೇಕು ಎಂದು ಡಾ ಒಪಿ ಹೇಳುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಮುಂತಾದವುಗಳಂತಹ ಯಾವುದೇ ಹಿಂದಿನ ಸಮಸ್ಯೆಗಳನ್ನು ಅವರು ಹೊಂದಿದ್ದೀರಾ?

Follow Us:
Download App:
  • android
  • ios