Body Temperature: ಹೆಂಗಸರಿಗಿಂತ ಗಂಡಸರಿಗೆ ಸೆಖೆ ಹೆಚ್ಚಂತೆ, ಯಾಕೆ ಗೊತ್ತಾ?

ಕೆಲವರಿಗೆ ಹೆಚ್ಚು ಸೆಖೆಯಾಗುತ್ತದೆ. ಕೆಲವರಿಗೆ ಹೆಚ್ಚು ಚಳಿಯಾಗುತ್ತದೆ. ಕೆಲವರು ಎಷ್ಟೇ ಚಳಿಯಾದರೂ ತಡೆದುಕೊಳ್ಳಬಲ್ಲರು ಆದರೆ, ಸೆಖೆಗೆ ಹೆಚ್ಚು ಕಂಗಾಲಾಗುತ್ತಾರೆ. ಇದೇಕೆ ಹೀಗೆ ಗೊತ್ತೇ? 

Why body temperature of male is high than female

ಬೇಸಿಗೆಯ (Summer) ಈ ದಿನಗಳಲ್ಲಿ ಸೆಖೆಯಾಗುವುದು, ಬೆವರುವುದು (Sweat) ಸಹಜ. ಹಗಲು, ರಾತ್ರಿಯಿಡೀ ಸೆಖೆ ಕಾಡುತ್ತದೆ. ವಿಪರೀತ ಸೆಖೆಯಾದಾಗ ದೇಹದ ತಾಪಮಾನವೂ ಸಹಜವಾಗಿ ಏರುತ್ತದೆ, ಸ್ವಲ್ಪ ಸಮಯದಲ್ಲಿ ತನ್ನಿಂತಾನೇ ನಾರ್ಮಲ್ (Normal) ಆಗುತ್ತದೆ. ಆದರೆ, ಕೆಲವರಿಗೆ ಹಾಗಲ್ಲ. ಅವರಿಗೆ ಬೇರೆಯವರಿಗಿಂತ ಹೆಚ್ಚು ಸೆಖೆಯಾಗುತ್ತದೆ. ಹೆಚ್ಚು ಬೆವರುತ್ತದೆ, ಹಾಗೂ ಅವರು ಸೆಖೆಗೆ ಹೆಚ್ಚು ಬಸವಳಿಯುತ್ತಾರೆ.

ನಿಮ್ಮ ಅನುಭವಕ್ಕೂ ಬಂದಿರಬಹುದು. ನಿಮ್ಮ ಮನೆಯಲ್ಲೇ ಅಂಥವರಿರಬಹುದು. ಅವರು ಎಷ್ಟು ಚಳಿಯನ್ನಾದರೂ ತಡೆದುಕೊಳ್ಳುತ್ತಾರೆ. ಆದರೆ, ಸೆಖೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಉಳಿದವರಿಗಿಂತ ಹೆಚ್ಚು ಸೆಖೆಯಾಗಲು ಏನಾದರೂ ಕಾರಣಗಳು ಇದ್ದೇ ಇರಬಹುದಲ್ಲವೇ? ಹೌದು, ಅದಕ್ಕೆ ಕಾರಣಗಳು ಹಲವಾರು. ಹಾಗೆಯೇ ಕೆಲವರಿಗೆ ಬೇರೆಯವರಿಗಿಂತ ಹೆಚ್ಚು ಚಳಿಯಾಗಬಹುದು. ಅದಕ್ಕೂ ಕಾರಣಗಳಿವೆ.  

ದೇಹದ ಸಾಮಾನ್ಯ ತಾಪಮಾನ (Temperature) 98.6 ಡಿಗ್ರಿ ಫ್ಯಾರನ್ ಹೀಟ್. ಆದರೆ, ಈ ಪ್ರಮಾಣ ಬೇರೆ ಬೇರೆ ಜನರಲ್ಲಿ ವಿಭಿನ್ನವಾಗಿರಬಹುದು! ಕೆಲವರಿಗೆ ದೇಹದ ತಾಪಮಾನ ಕಡಿಮೆ ಇರಬಹುದು. ದೇಹದ ಉಷ್ಣಾಂಶ ದಿನವಿಡೀ ನಾವು ಮಾಡುವ ಕೆಲಸ ಕಾರ್ಯಗಳು, ಚಟುವಟಿಕೆಗಳ ಮೇಲೆ ಕೂಡ ಆಧಾರಿತವಾಗಿರುತ್ತದೆ. ಹಾಗೆಯೇ, ಇನ್ನಿತರ ಕಾರಣಗಳೂ ಇರುತ್ತವೆ. ಅವು ಯಾವುವು ನೋಡೋಣ.

ಇದನ್ನೂ ಓದಿ: Weight Loss Tips : ತೂಕ ಇಳಿಸೋ ಚಿಂತೆ ಬಿಡಿ, ಕಪ್ಪು ಅರಿಶಿನ ಬಳಸಿ

ವಯಸ್ಸು (Age)
ಯುವಮಂದಿಗೆ ಹೋಲಿಕೆ ಮಾಡಿದರೆ ವಯಸ್ಸಾದವರಿಗೆ ತಮ್ಮ ದೇಹದ ತಾಪಮಾನವನ್ನು ಮ್ಯಾನೇಜ್ ಮಾಡುವುದು ಕಷ್ಟವಾಗುತ್ತದೆ. ಏಕೆಂದರೆ, ವಯಸ್ಸಾಗುವುದರ ಜತೆಗೆ ದೇಹದ ಮೆಟಬಾಲಿಸಂ (Metabolism) ಸಾಕಷ್ಟು ನಿಧಾನವಾಗುತ್ತದೆ. ಸ್ಲೋ ಮೆಟಬಾಲಿಸಂನಿಂದಾಗಿ ಈ ಜನರ ದೇಹದ ತಾಪಮಾನ ಸಾಕಷ್ಟು ಕಡಿಮೆಯಾಗಿರುತ್ತದೆ. ಹೀಗಾಗಿ ಅವರಿಗೆ ಚಳಿ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. 

ಲಿಂಗ (Gender)
ಪುರುಷನಿಗೂ ಮಹಿಳೆಗೂ ದೇಹದ ತಾಪಮಾನದಲ್ಲಿ ವ್ಯತ್ಯಾಸವಿರುತ್ತದೆ. ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರಲ್ಲಿ ದೇಹದ ಮಾಸ್ ಅಂದರೆ ಸ್ನಾಯುವಿನ ದ್ರವ್ಯರಾಶಿ ಕಡಿಮೆ ಇರುತ್ತದೆ. ಇದೇ ಕಾರಣದಿಂದ ಮಹಿಳೆಯರ ತ್ವಚೆಯ ರಂಧ್ರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಉಷ್ಣತೆ ಉತ್ಪಾದನೆಯಾಗುತ್ತದೆ. ಹೀಗಾಗಿಯೇ ಅವರಿಗೆ ಸೆಖೆಯ ಅನುಭವ ಕಡಿಮೆಯಾಗುತ್ತದೆ. ಆದರೂ ಮೆನೋಪಾಸ್ ಮತ್ತು ಮಧ್ಯವಯಸ್ಸಿನಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಪ್ರಮಾಣದಲ್ಲಿ ಸೆಖೆಯ ಅನುಭವವಾಗುತ್ತದೆ. ಆ ಸಮಯದಲ್ಲಿ ಉಂಟಾಗುವ ಹಾರ್ಮೋನ್ (Harmonal Imbalance) ವ್ಯತ್ಯಾಸದಿಂದ ಹೀಗಾಗುತ್ತದೆ.

ಇದನ್ನೂ ಓದಿ: ಬೇಸಿಗೆ ಬರಲಿ, ಚಳಿ ಇರಲಿ, ನಿಮ್ಮ Skin Care Routine ಹೀಗೆಯೇ ಇರಲಿ

ದೇಹದ ಗಾತ್ರ (Body Size)
ತಜ್ಞರ ಪ್ರಕಾರ, ದೇಹದ ಆಕಾರವೂ ಹೆಚ್ಚು ಸೆಖೆಯ ಅನುಭವ ನೀಡುತ್ತದೆ. ಸಿಡ್ನಿ ವಿಶ್ವವಿದ್ಯಾಲಯದ ಫಿಸಿಯೋಲಜಿ ವಿಭಾಗದ ಸಂಶೋಧಕ ಓಲಿ ಜೆ. ಅವರ ಪ್ರಕಾರ, ದೇಹದ ಗಾತ್ರ ಹೆಚ್ಚಾದಷ್ಟೂ ಸೆಖೆಯ ಅನುಭವ ಹೆಚ್ಚಾಗುತ್ತದೆ. ಬೊಜ್ಜು ಹೆಚ್ಚಿದ್ದಾಗ ದೇಹ ಬೇಗ ತಣಿಯುವುದಿಲ್ಲ.  

ದೇಹದ ಕೊಬ್ಬು (Body Fat)
ಕೆಲವು ಅಧ್ಯಯನಗಳ ಪ್ರಕಾರ, ಯಾರ ದೇಹದಲ್ಲಿ ಕೊಬ್ಬು ಹೆಚ್ಚಾಗಿರುತ್ತದೆಯೋ ಅವರಿಗೆ ಉಳಿದವರಿಗಿಂತ ಹೆಚ್ಚು ಸೆಖೆಯಾಗುತ್ತದೆ. ಕೊಬ್ಬು ದೇಹದ ತಾಪಮಾನವನ್ನು ಏರಿಸುತ್ತದೆ. ನಮಗೆ ಸೆಖೆಯಾದಾಗ ರಕ್ತನಾಳಗಳು ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ರಕ್ತನಾಳಗಳ ಮೂಲಕ ರಕ್ತಪ್ರವಾಹ ನಮ್ಮ ಚರ್ಮದ ಬುಡದವರೆಗೆ ಬರುತ್ತದೆ. ಆಗ ಚರ್ಮದ ಮೂಲಕ ಉಷ್ಣಾಂಶ ದೇಹದಿಂದ ಹೊರಗೆ ಹೋಗುತ್ತದೆ. ಆದರೆ, ಯಾರಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿರುತ್ತದೆಯೋ ಅವರಲ್ಲಿ ಈ ಸಹಜ ಕ್ರಿಯೆಗೆ ಸ್ವಲ್ಪ ಅಡ್ಡಿಯಾಗುತ್ತದೆ. ಚರ್ಮದ ಅಡಿಯಲ್ಲಿ ಶೇಖರಣೆಯಾಗಿರುವ ಕೊಬ್ಬು ಉಷ್ಣಾಂಶವನ್ನು ದೇಹದಿಂದ ಆಚೆ ಕಳಿಸಲು ಬಿಡುವುದಿಲ್ಲ. ಹೀಗಾಗಿ, ಅವರಿಗೆ ಅಧಿಕ ಸಮಯದವರೆಗೆ ಸೆಖೆಯ ಅನುಭವ ಆಗುತ್ತಲೇ ಇರುತ್ತದೆ. 

ಇದನ್ನೂ ಓದಿ: ನೈಸರ್ಗಿಕ ಉತ್ಪನ್ನ ಅಂತ ಕಿಚನ್‌ನಲ್ಲಿ ಸಿಕ್ಕಿದ್ದೆಲ್ಲಾ ಮುಖಕ್ಕೆ ಹಚ್ಬೇಡಿ, ಅಪಾಯ ತಪ್ಪಿದ್ದಲ್ಲ !

ಮೆಡಿಕಲ್ ಕಂಡಿಷನ್ (Medical Candition)
ಯಾವುದಾದರೂ ರೋಗ ಹಾಗೂ ಔಷಧಗಳಿಂದಲೂ ದೇಹದ ಉಷ್ಣಾಂಶದ ಮೇಲೆ ಪರಿಣಾಮ ಉಂಟಾಗುತ್ತದೆ. ಉದಾಹರಣೆಗೆ, ಹೈಪೋಥೈರಾಯ್ಡಿಸಂ. ಥೈರಾಯ್ಡ್ ಗ್ರಂಥಿ ಸೂಕ್ತವಾಗಿ ಕಾರ್ಯನಿರ್ವಹಿಸದೆ ಇದ್ದಾಗ ದೇಹದ ಎಲ್ಲ ಚಟುವಟಿಕೆಗಳು ನಿಯಂತ್ರಣದಲ್ಲಿರುತ್ತವೆ. ಆದರೆ, ಸರಿಯಾಗಿ ಆಗದಿದ್ದಾಗ ವ್ಯಕ್ತಿಗೆ ಶೀತದ ಅನುಭವ ಹೆಚ್ಚಾಗುತ್ತದೆ. 

Latest Videos
Follow Us:
Download App:
  • android
  • ios