ಪುರುಷರಿಗಿಂತ ಮಹಿಳೆಯನ್ನು ಮೂತ್ರ ಸೋಂಕು ಹೆಚ್ಚು ಕಾಡೋದೇಕೆ?
ಮೂತ್ರನಾಳದ ಸೋಂಕು… ಭಾರತದ ಬಹುತೇಕ ಮಹಿಳೆಯರನ್ನು ಕಾಡುತ್ತದೆ. ಇದಕ್ಕೆ ನಾನಾ ಕಾರಣವಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದ್ರೆ ಅನಾಹುತವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಮೂತ್ರನಾಳದ ಸೋಂಕು ಬರಲು ಕಾರಣವೇನು ಎಂಬುದನ್ನು ಮೊದಲು ತಿಳಿಯಬೇಕು.

ಮೂತ್ರನಾಳದ ಸೋಂಕು ಅಂದ್ರೆ ಮೂತ್ರ ವ್ಯವಸ್ಥೆಯ ಭಾಗದಲ್ಲಿ ಕಾಣಿಸುಕೊಳ್ಳುವ ಸೋಂಕಾಗಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಎರಡನೇಯ ಸೋಂಕು ಇದಾಗಿದೆ. ತಜ್ಞರ ಪ್ರಕಾರ, 24 ವರ್ಷದೊಳಗಿನ ಮೂವರಲ್ಲಿ ಒಬ್ಬರು ಮೂತ್ರನಾಳದ ಸೋಂಕನ್ನು (UTI) ಅನುಭವಿಸುತ್ತಾರೆ. ಸುಮಾರು ಶೇಕಡಾ 50 ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಸೋಂಕನ್ನು ಅನುಭವಿಸುತ್ತಾರೆಂದು ತಜ್ಞರು ಹೇಳ್ತಾರೆ. ಪುರುಷರಿಗಿಂತ ಮಹಿಳೆಯರೇ ಏಕೆ ಮೂತ್ರನಾಳದ ಸೋಂಕಿಗೆ ಹೆಚ್ಚು ಒಳಗಾಗ್ತಾರೆ ಎಂಬ ಪ್ರಶ್ನೆ ಕಾಡುವುದು ಸಾಮಾನ್ಯ. ನಾವಿಂದು ಮಹಿಳೆಯಿಗೆ ಹೆಚ್ಚಾಗಿ ಮೂತ್ರನಾಳದ ಸೋಂಕು ಕಾಡಲು ಕಾರಣವೇನು ಎಂಬುದನ್ನು ಹೇಳ್ತೇವೆ. ಮಹಿಳೆಯರ ಮೂತ್ರನಾಳ ಪುರುಷರ ಮೂತ್ರನಾಳಕ್ಕಿಂತ ಭಿನ್ನವಾಗಿದೆ. ಮಹಿಳೆಯರ ಮೂತ್ರನಾಳವನ್ನು ಬ್ಯಾಕ್ಟೀರಿಯಾಗಳು ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ. ಹಾಗಾಗಿ ಅವರಿಗೆ ಮೂತ್ರನಾಳದ ಸೋಂಕು ಹೆಚ್ಚಾಗಿ ಕಾಡುತ್ತದೆ ಎಂದು ತಜ್ಞರು ಹೇಳ್ತಾರೆ.
ಮೂತ್ರನಾಳ (Urethra)ದ ಸೋಂಕಿ (Infection) ಗೆ ಕಾರಣ :
ಮೂತ್ರಪಿಂಡದ ಕಲ್ಲು : ಮೂತ್ರಪಿಂಡದ ಕಲ್ಲು (Stone) ಮೂತ್ರನಾಳದ ಸೋಂಕಿಗೆ ಸಾಮಾನ್ಯ ಕಾರಣವಾಗಿದೆ. ಮೂತ್ರಪಿಂಡದ ಕಲ್ಲುಗಳು ಮೂತ್ರನಾಳವನ್ನು ನಿರ್ಬಂಧಿಸುತ್ತದೆ. ಇದ್ರಿಂದ ಪೂರ್ಣ ಮೂತ್ರವನ್ನು ದೇಹದಿಂದ ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ಇದ್ರಿಂದಾಗಿ ಬ್ಯಾಕ್ಟೀರಿಯಾ (Bacteria) ಬೆಳೆಯುವುದು ಸುಲಭವಾಗುತ್ತದೆ. ಮೂತ್ರ ಪಿಂಡದ ಕಲ್ಲುಗಳು ಅನುವಂಶಿಕವಾಗಿರಲೂಬಹುದು. ಆದ್ರೆ ಹೆಚ್ಚು ನೀರು ಸೇವನೆ ಮಾಡುವುದ್ರಿಂದ ಸಮಸ್ಯೆ ತಪ್ಪಿಸಬಹುದು. ಹಾಗೆ ಸೋಡಿಯಂ ಸೇವನೆಯನ್ನು ಮಿತಿಗೊಳಿಸಬೇಕು.
ಲೈಂಗಿಕ ಕ್ರಿಯೆ (Sexual Intercourse): ಸೆಕ್ಸ್ ಕೂಡ ಮೂತ್ರನಾಳಸ ಸೋಂಕಿಗೆ ಕಾರಣವಾಗುತ್ತದೆ. ಸಂಭೋಗದ ವೇಳೆ ಬ್ಯಾಕ್ಟೀರಿಯಾಗಳು (Bacteria) ಯೋನಿಯಿಂದ ಮೂತ್ರನಾಳಕ್ಕೆ ಆರಾಮವಾಗಿ ಪ್ರವೇಶ ಮಾಡುತ್ತವೆ. ಲೈಂಗಿಕ ಕ್ರಿಯೆ ನಡೆಸುವ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು ಹೆಚ್ಚು. ಯುಟಿಐ (Urinary Track Infection) ಸೋಂಕು ತಡೆಗಟ್ಟಲು, ಸಂಭೋಗದ ನಂತ್ರ ಯೋನಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು ಎನ್ನುತ್ತಾರೆ ತಜ್ಞರು. ಯೋನಿಯನ್ನು ಸೌಮ್ಯವಾದ ಸೋಪಿನಿಂದ ಸ್ವಚ್ಛಗೊಳಿಸಬೇಕು. ಹೆಚ್ಚು ಕೆಮಿಕಲ್ ಮಿಶ್ರಿತವಾದ ಸೋಪ್ ಬಳಕೆಯಿಂದ ದೂರವಿರಬೇಕು.
ಟಾಯ್ಲೆಟ್ ಪೇಪರ್ (Toilet Paper) ಕೂಡ ಮೂತ್ರನಾಳದ ಸೋಂಕಿಗೆ ಕಾರಣ : ಟಾಯ್ಲೆಟ್ ಪೇಪರ್ ಬಳಕೆ ಮಾಡುವಾಗ ಅಥವಾ ಯೋನಿ ಹಾಗೂ ಗುದದ್ವಾರವನ್ನು ಸ್ವಚ್ಛಗೊಳಿಸುವಾಗ ಕೆಲವೊಂದು ವಿಷ್ಯವನ್ನು ಗಮನಿಸಬೇಕು. ಅನೇಕರು ಗುದದ್ವಾರ ಸ್ವಚ್ಛಗೊಳಿಸಿ ನಂತ್ರ ಯೋನಿ ಕ್ಲೀನ್ ಮಾಡ್ತಾರೆ. ಗುದದ್ವಾರದಲ್ಲಿರು ಬ್ಯಾಕ್ಟೀರಿಯಾ ಮೂತ್ರನಾಳ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಯಾವಾಗ್ಲೂ ಯೋನಿ ಸ್ವಚ್ಛಗೊಳಿಸಿದ ನಂತ್ರವೇ ಗುದದ್ವಾರ ಕ್ಲೀನ್ ಮಾಡ್ಬೇಕೆಂದು ವೈದ್ಯರು ಸಲಹೆ ನೀಡ್ತಾರೆ.
ಮೂತ್ರ ತಡೆ ಹಿಡಿಯುವುದು ಅಪಾಯ (Avoid Urination) : ಅನೇಕ ಮಹಿಳೆಯರು ಸಮಯಕ್ಕೆ ಸರಿಯಾಗಿ ಮೂತ್ರ ವಿಸರ್ಜನೆ ಮಾಡುವುದಿಲ್ಲ. ಕೆಲಸದ ನೆಪ ಹೇಳಿ ಮೂತ್ರವನ್ನು ತಡೆ ಹಿಡಿಯುತ್ತಾರೆ. ಕಾಲಕಾಲಕ್ಕೆ ಮೂತ್ರದ ಚೀಲವನ್ನು ಖಾಲಿ ಮಾಡುವುದು ಆರೋಗ್ಯಕ್ಕೆ ಬಹಳ ಮುಖ್ಯ. ಗಂಟೆಗಳಿಗೂ ಹೆಚ್ಚು ಕಾಲ ಮೂತ್ರ ವಿಸರ್ಜನೆ ಮಾಡದೆ ಹೋದ್ರೆ ಮೂತ್ರನಾಳದ ಸೋಂಕು ಕಾಡುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಪ್ರತಿ ಮೂರು ಗಂಟೆಗೊಮ್ಮೆ ಮೂತ್ರ ಚೀಲವನ್ನು ಖಾಲಿ ಮಾಡ್ಬೇಕು.
ಮಕ್ಕಳಿಗೆ GOOD EATING HABIT ಕಲಿಸೋದನ್ನು ಮರೀಬೇಡಿ
ಮಧುಮೇಹದಿಂದಲೂ ಅಪಾಯ ಹೆಚ್ಚು : ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲವೆಂದ್ರೆ ಮೂತ್ರನಾಳದ ಸೋಂಕನ್ನು ಅನುಭವಿಸಬೇಕಾಗುತ್ತದೆ. ಮಧುಮೇಹ ಇರುವವರಿಗೆ ಮೂತ್ರನಾಳದ ಸೋಂಕು ಹೆಚ್ಚಾಗಿ ಕಾಡುವ ಅಪಾಯವಿದೆ.
World Sexual Health Day: ಸೆಕ್ಸ್ ಲೈಫ್ ಬಗ್ಗೆ ಓಶೋ ಏನ್ ಹೇಳ್ತಾರೆ ?
ಒಳ ಉಡುಪು : ಒಳ ಉಡುಪು ಯಾವುದಾದ್ರೇನು ಎಂಬ ನಿರ್ಲಕ್ಷ್ಯ ಬೇಡ. ಒಳ ಉಡುಪು ತೇವಾಂಶವನ್ನುಂಟು ಮಾಡಿದ್ರೆ ಅದ್ರಿಂದ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿರುತ್ತದೆ. ಹಾಗಾಗಿ ಸದಾ ಶುಷ್ಕವಾಗಿರುವ ಹಾಗೂ ಹತ್ತಿಯ ಒಳ ಉಡುಪು ಧರಿಸುವುದು ಒಳ್ಳೆಯದು.