Health tips : ಬರ್ತ್ ಡೇ ಪಾರ್ಟಿ ಇರ್ಲಿ ಇಲ್ಲ ಗೆಟ್ ಟುಗೆದರ್ ಇರ್ಲಿ, ಹೊಟೇಲ್ ಗೆ ಹೋಗಿ ಊಟ ಮಾಡ್ದಾಗ, ಟೀ ಕುಡಿದಾಗ ಸೋಂಪು ಫ್ರೀಯಾಗಿ ಸಿಗುತ್ತೆ. ಅದಕ್ಕೆ ಕಾರಣ ಏನು ಗೊತ್ತಾ?
ಹೋಟೆಲ್ (Hotel) ಗೆ ಹೋಗಿ ಭರ್ಜರಿ ಊಟ ಅಥವಾ ರುಚಿ ರುಚಿ ತಿಂಡಿ ತಿಂದ್ಮೇಲೆ ಟೇಬಲ್ ಗೆ ಬಿಲ್ ಜೊತೆ ಒಂದು ಪ್ಲೇಟ್ ಬರುತ್ತೆ. ಅದ್ರಲ್ಲಿ ಪ್ಲೇನ್ ಸೋಂಪಿ (Fennel)ನ ಜೊತೆ ಸಿಹಿ ಕೋಟ್ ಆಗಿರುವ ಸೋಂಪ್ ಇಲ್ಲವೆ ಕಲ್ಲು ಸಕ್ಕರೆ ಇರುತ್ತೆ. ಅನೇಕರು ಇದನ್ನು ಸ್ವೀಟ್ ಕ್ರೇವ್ ಕಡಿಮೆ ಮಾಡಲು ತಿಂತಾರೆ. ಮತ್ತೆ ಕೆಲವರು ಫ್ರೀಯಾಗಿ ಸಿಕ್ಕಿದೆ ಅಂತ ಹಾಗೆ ತಿಂದ್ಕೊಂಡು ಬರ್ತಾರೆ. ಆದ್ರೆ ಹೋಟೆಲ್, ರೆಸ್ಟೋರೆಂಟ್ ನಲ್ಲಿ ಊಟವಾದ್ಮೇಲೆ ಈ ಸೋಂಪನ್ನು ಯಾಕೆ ನೀಡ್ತಾರೆ? ಇಲ್ಲಿದೆ ಮಾಹಿತಿ.
ಹೋಟೆಲ್ ಅಥವಾ ರೆಸ್ಟೋರೆಂಟ್ (Restaurant) ನಲ್ಲಿ ಸೋಂಪು - ಕಲ್ಲುಸಕ್ಕರೆ ಏಕೆ ನೀಡ್ತಾರೆ? : ಹೋಟೆಲ್ ಅಥವಾ ರೆಸ್ಟೋರೆಂಟ್ ನಲ್ಲಿ ಉಚಿತವಾಗಿ ಸೋಂಪ್ ನೀಡೋದು ಸಂಪ್ರದಾಯವಲ್ಲ. ಅದ್ರ ಹಿಂದೆ ವೈಜ್ಞಾನಿಕ ಕಾರಣ ಇದೆ. ಬಂದ ಗ್ರಾಹಕರು ಹೊಟ್ಟೆ ತುಂಬಾ ಊಟ ಮಾಡಿದ್ಮೇಲೆ ಅನಾರೋಗ್ಯ ಸಮಸ್ಯೆ ಎದುರಿಸದಿರಲಿ ಎನ್ನುವ ಕಾರಣಕ್ಕೆ ಸೋಂಪನ್ನು ನೀಡಲಾಗುತ್ತೆ. ಅಂದ್ರೆ ಮಾಡಿದ ಊಟ, ಸೇವಿಸಿದ ತಿಂಡಿ ಸರಿಯಾಗಿ ಜೀರ್ಣ ಆಗ್ಲಿ ಎನ್ನುವ ಕಾರಣಕ್ಕೆ ಈ ಸೋಂಪನ್ನು ನೀಡ್ತಾರೆ. ಕಲ್ಲು ಸಕ್ಕರೆ ಹಾಗೂ ಸೋಂಪು ಎರಡನ್ನೂ ಸರ್ವ್ ಮಾಡಲು ಭಿನ್ನ ಕಾರಣಗಳಿವೆ. ಕೆಲ ಹೋಟೆಲ್ ನಲ್ಲಿ ಸೋಂಪಿನ ಜೊತೆ ಸಿಹಿ ಕೋಟ್ ಆಗಿರುವ ಸೋಂಪನ್ನು ನೀಡ್ತಾರೆ. ಇವು ಜೀರ್ಣಕ್ರಿಯೆ ಸುಧಾರಿಸಿ, ಬಾಯಾರಿಕೆ ಕಡಿಮೆ ಮಾಡಲು ಸರಳ, ಸುಲಭ ಮಾರ್ಗವಾಗಿದೆ.
• ಎಣ್ಣೆಯುಕ್ತ ಆಹಾರವನ್ನು ಬೇಗ ಜೀರ್ಣಿಸಿಕೊಳ್ಳುವುದು ಕಷ್ಟ. ಸೋಂಪು, ಜೀರ್ಣಕಾರಿ ರಸಗಳು ಮತ್ತು ಕಿಣ್ವಗಳನ್ನು ಸಕ್ರಿಯಗೊಳಿಸುವ ಮೂಲಕ ಆಹಾರವನ್ನು ತ್ವರಿತವಾಗಿ ಮತ್ತು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
• ಮಸಾಲೆಯುಕ್ತ ಆಹಾರ, ವಿಶೇಷವಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿ, ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಸೋಂಪುದಲ್ಲಿರುವ ನೈಸರ್ಗಿಕ ಎಣ್ಣೆ ಉಸಿರಾಟವನ್ನು ತಾಜಾವಾಗಿರಿಸುತ್ತದೆ.
• ಕಲ್ಲು ಸಕ್ಕರೆ ಬಾಯಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯಾವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಎಂದೇ ಕರೆಯಲಾಗುತ್ತದೆ.
• ಕಲ್ಲುಸಕ್ಕರೆ ದೇಹಕ್ಕೆ ತಂಪು ಅಂಶವನ್ನುಒದಗಿಸುತ್ತದೆ.
• ಕಲ್ಲು ಸಕ್ಕರೆ ದೇಹದಲ್ಲಿ ಆಮ್ಲೀಯತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
• ಸೋಂಪು ಮತ್ತು ಕಲ್ಲು ಸಕ್ಕರೆ ಸೇವಿಸುವುದರಿಂದ ಹೊಟ್ಟೆ ಹಗುರವಾಗಿರುತ್ತದೆ.
• ಸೋಂಪು ಕರುಳಿನ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿ.
• ಕಲ್ಲು ಸಕ್ಕರೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ
ಇಷ್ಟೇ ಅಲ್ಲ, ಅನೇಕರಿಗೆ ಊಟವಾದ್ಮೇಲೆ ಸಿಹಿ ತಿನ್ನುವ ಕ್ರೇವ್ ಇರುತ್ತೆ. ಊಟವಾದ್ಮೇಲೆ ಸಿಹಿ ಪದಾರ್ಥಕ್ಕೆ ಹುಡುಕಾಟ ನಡೆಸ್ತಾರೆ. ಅಂಥವರಿಗಾಗಿ ಸೋಂಪಿನ ಜೊತೆ ಸಿಹಿ ಮಿಶ್ರಿತ ಸೋಂಪು ಅಥವಾ ಕಲ್ಲು ಸಕ್ಕರೆಯನ್ನು ಹೊಟೇಲ್ ನಲ್ಲಿ ನೀಡಲಾಗುತ್ತದೆ. ಇದು ಕ್ರೇವ್ ಕಡಿಮೆ ಮಾಡೋದಲ್ಲದೆ ಶುಗರ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದು ಸಂಪ್ರದಾಯ ಕೂಡ ಹೌದು. ಭಾರತೀಯ ಸಂಪ್ರದಾಯದಲ್ಲಿ, ಊಟದ ನಂತ್ರ ಅತಿಥಿಗಳಿಗೆ ಸಿಹಿತಿಂಡಿ ಬಡಿಸಲಾಗುತ್ತದೆ. ಇದನ್ನು ಗೌರವ ಮತ್ತು ಆತಿಥ್ಯದ ಸಂಕೇತವೆಂದು ಜನರು ನಂಬ್ತಾರೆ. ಹೋಟೆಲ್ ಗಳು, ಸೋಂಪಿನ ಜೊತೆ ಕಲ್ಲುಸಕ್ಕರೆ ನೀಡುವ ಮೂಲಕ ಗ್ರಾಹಕರನ್ನು ತೃಪ್ತಿಕರ ಹಾಗೂ ಸಂತೋಷವಾಗಿಡಲು ಪ್ರಯತ್ನಿಸ್ತಾರೆ.
