Asianet Suvarna News Asianet Suvarna News

Health Tips: ಕೋಟ್ಯಂತರ ಮಂದಿ ಪ್ರತಿ ದಿನ ಈ 'ವಿಷ' ಸೇವಿಸಿ ಹೃದಯ ಹಾಳ್ಮಾಡಿಕೊಳ್ತಿದ್ದಾರೆ!

ತಯಾರಿಸಿದ ಆಹಾರ ತುಂಬಾ ದಿನ ಬಾಳಿಕೆ ಬರಲಿ ಅಂತಾ ಉದ್ಯಮಿಗಳು ಅದಕ್ಕೊಂದಿಷ್ಟು ರಾಸಾಯನಿಕ ವಸ್ತು ಬಳಸ್ತಾರೆ. ಹೊಟ್ಟೆಗಾಗಿ, ಬಾಯಿ ರುಚಿಗಾಗಿ ನಾವು ಅದೇ ಆಹಾರವನ್ನು ಸೇವನೆ ಮಾಡ್ತೇವೆ. ನಮ್ಮ ಆರೋಗ್ಯ ಕಾಪಾಡುವ ಬದಲು ಸ್ಲೋ ಪಾಯಿಸನ್ ಆಗಿ ಅವು ನಮ್ಮ ಪ್ರಾಣ ತೆಗೆಯುತ್ತಿವೆ. 
 

Who Warning On Trans Fat Which Increases Heart Diseases
Author
First Published Jan 27, 2023, 2:40 PM IST

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ, ಎಣ್ಣೆ ಪದಾರ್ಥಗಳ ಸೇವನೆ ಹಾಗೂ ಫಾಸ್ಟ್ ಫುಡ್ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಜಾಸ್ತಿಯಾಗ್ತಿದೆ. ಇದ್ರಿಂದಾಗಿ ಹೃದಯಾಘಾತ,ಸ್ಟ್ರೋಕ್, ಮಧುಮೇಹ, ರಕ್ತದೊತ್ತಡ ಸೇರಿದಂತೆ ಅನೇಕ ಸಮಸ್ಯೆಗಳು ಕಾಡ್ತಿವೆ. ವಿಶ್ವ ಆರೋಗ್ಯ ಸಂಘಟನೆ ಈ ಬಗ್ಗೆ ಗಂಭೀರವಾಗಿದೆ. ಜನರಿಗೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ. ಎಷ್ಟೇ ಪ್ರಯತ್ನದ ನಂತ್ರವೂ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರಾಣ ಬಲಿಪಡೆಯುವ ಟ್ರಾನ್ಸ್ ಫ್ಯಾಟ್ ಸೇವನೆ ಮಾಡ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಟ್ರಾನ್ಸ್ ಫ್ಯಾಟ್ ಸೇವನೆ ಮಾಡೋದ್ರಿಂದ ತೈಲದಲ್ಲಿರುವ ಒಂದು ಪ್ರಕಾರದ ಕೊಬ್ಬು, ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಟ್ರಾನ್ಸ್ ಫ್ಯಾಟನ್ನು ಸ್ಲೋ ಪಾಯಿಸನ್ ಎಂದೂ ಕರೆಯಲಾಗುತ್ತದೆ. 

ಟ್ರಾನ್ಸ್ ಫ್ಯಾಟ್ (Trans Fat) ಒಂದು ರೀತಿಯ ಅನ್ ಸ್ಯಾಚುರೇಟೆಡ್ ಕೊಬ್ಬಾಗಿದೆ. ಇದು ನೈಸರ್ಗಿಕ (Natural) ಹಾಗೂ ಆರ್ಟಿಫಿಶಿಯಲ್ ಎರಡು ರೂಪದಲ್ಲಿರುತ್ತದೆ. ಪ್ಯಾಕ್ (Pack) ಮಾಡಿದ ಆಹಾರ (food), ಬೇಕ್ ಮಾಡಿದ ಆಹಾರ, ಅಡುಗೆ ಎಣ್ಣೆಯಲ್ಲಿ ಇದಿರುತ್ತದೆ. ಅನೇಕ ದೇಶಗಳು ಇದನ್ನು ಬ್ಯಾನ್ ಮಾಡುವಲ್ಲಿ ವಿಫಲವಾಗಿವೆ ಎಂದು ಡಬ್ಲ್ಯುಹೆಚ್ ಒ ಹೇಳಿದೆ. 

ಡಬ್ಲ್ಯುಹೆಚ್ ಒ ಎಚ್ಚರಿಕೆ : 2018ರಲ್ಲಿ ಫ್ಯಾಕ್ಟರಿಯಲ್ಲಿ ಸಿದ್ಧವಾಗುವ ಫ್ಯಾಟಿ ಎಸಿಡ್ ತಯಾರಿಕೆಯನ್ನು 2023ರ ಒಳಗೆ ಸಂಪೂರ್ಣವಾಗಿ ನಿಲ್ಲಿಸುವಂತೆ ಡಬ್ಲ್ಯುಹೆಚ್ ಒ ಸೂಚನೆ ನೀಡಿತ್ತು. ಈ ಫ್ಯಾಡಿ ಎಸಿಡ್ ನಿಂದ ವಿಶ್ವದಾದ್ಯಂತ ಐದು ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 2.8 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ 43 ದೇಶಗಳು ಇದನ್ನು ನಿಷೇಧಿಸಲು ಬಹಳ ಅದ್ಭುತವಾದ ನೀತಿಗಳನ್ನು ಜಾರಿಗೆ ತಂದಿವೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಹೇಳಿದೆ. ಅದ್ರಲ್ಲಿ ಯುರೋಪ್ ಮತ್ತು ಅಮೇರಿಕಾ ಮತ್ತು ಉತ್ತರ ಅಮೆರಿಕಾದ ದೇಶಗಳು ಮುಂದಿವೆ. ಇನ್ನು ಕಡಿಮೆ ಆದಾಯದ ದೇಶಗಳಲ್ಲಿ ಈ ನೀತಿಗಳನ್ನು ಇನ್ನೂ ಅಳವಡಿಸಿಕೊಳ್ಳಲಾಗಿಲ್ಲ. ಭಾರತ, ಅರ್ಜೆಂಟೀನಾ, ಬಾಂಗ್ಲಾದೇಶ, ಪರಾಗ್ವೆ, ಫಿಲಿಪೈನ್ಸ್ ಮತ್ತು ಉಕ್ರೇನ್ ಸೇರಿದಂತೆ ಅನೇಕ ಮಧ್ಯಮ ಆದಾಯದ ದೇಶಗಳುಈ ನೀತಿಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿವೆ. ಆದರೆ ಇನ್ನೂ ನಮ್ಮ ಜಗತ್ತಿನಲ್ಲಿ ಐದು ಶತಕೋಟಿಗೂ ಹೆಚ್ಚು ಜನರು ಈ ಅಪಾಯಕಾರಿ ವಿಷವನ್ನು ಸೇವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. 

ಯೋಜನೆ ಸಕ್ರಿಯಗೊಳಿಸೋದ್ರಲ್ಲಿ ಈ ದೇಶಗಳು ವಿಫಲ : ಈಜಿಪ್ಟ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾ, ಭೂತಾನ್, ಈಕ್ವೆಡಾರ್,   ಇರಾನ್, ನೇಪಾಳ, ಪಾಕಿಸ್ತಾನ ಸೇರಿವೆ ಕೆಲವು ದೇಶಗಳು ಯಾವುದೇ ನೀತಿಯನ್ನು ಜಾರಿಗೆ ತಂದಿಲ್ಲ. ಹಾಗಾಗಿ ಅಲ್ಲಿ ಟ್ರಾನ್ಸ್ ಫ್ಯಾಟ್ ನಿಂದ ಹೃದಯಾಘಾತದ ಅಪಾಯ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಚಳಿಗಾಲದಲ್ಲಿ ಮಂಡಿನೋವು, ಕೀಲುನೋವಿಂದ ಪಾರಾಗೋದು ಹೇಗೆ?

ಟ್ರಾನ್ಸ್ ಫ್ಯಾಟ್ ಅಂದ್ರೇನು? : ಟ್ರಾನ್ಸ್ ಕೊಬ್ಬು ಒಂದು ರೀತಿಯ ಅಪರ್ಯಾಪ್ತ ಕೊಬ್ಬಿನಾಮ್ಲವಾಗಿದೆ. ಇದ್ರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದ್ರೆ ಇದನ್ನು ಕಾರ್ಖಾನೆಯಲ್ಲಿ ತಯಾರಿಸಿ, ಆಹಾರದಲ್ಲಿ ಬಳಸಿದಾಗ ಅದು ನಿಧಾನವಾಗಿ ವಿಷವಾಗುತ್ತದೆ. ದ್ರವ ಸಸ್ಯಜನ್ಯ ಎಣ್ಣೆಗೆ ಹೈಡ್ರೋಜನ್ ಅನ್ನು ಸೇರಿಸುವ ಮೂಲಕ ಟ್ರಾನ್ಸ್ ಕೊಬ್ಬನ್ನು ತಯಾರಿಸಲಾಗುತ್ತದೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಇದರಿಂದ ತಯಾರಿಸಿದ ಆಹಾರ ಪದಾರ್ಥ ಹೆಚ್ಚಿನ ದಿನ ಬರಲಿ ಎನ್ನುವ ಕಾರಣಕ್ಕೆ ಹೈಡ್ರೋಜನ್ ಮಿಕ್ಸ್ ಮಾಡಲಾಗುತ್ತದೆ.

Health Tips: ನಕ್ಕರೂ ಮೂತ್ರ ಸೋರಿ ಮುಜುಗರವಾಗ್ತಿದ್ಯಾ? ಹೀಗೆ ಮಾಡಿ

ಸಸ್ಯಜನ್ಯ ಎಣ್ಣೆಯು ಅಪಾಯಕಾರಿ ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ. ಆಹಾರದಲ್ಲಿ ಬಳಸುವ ಈ ಎಣ್ಣೆಯು ಹೃದಯದ ಅಪಧಮನಿಗಳನ್ನು ಮುಚ್ಚುತ್ತದೆ. ಟ್ರಾನ್ಸ್ ಫ್ಯಾಟ್ ವಿಷಕಾರಿ ರಾಸಾಯನಿಕವಾಗಿದ್ದು, ಇದು ಮನುಷ್ಯರನ್ನು ಕೊಲ್ಲುತ್ತದೆ. ಹಾಗಾಗಿ ಇದನ್ನು ನಮ್ಮ ಆಹಾರದಲ್ಲಿ ಬಳಸಬಾರದು. ಇದನ್ನು ದೂರವಿಡುವ ಕಾಲ ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

Follow Us:
Download App:
  • android
  • ios