Fitness Tips: ಇವರು ಚಕ್ರಾಸನ ಅಭ್ಯಾಸ ಮಾಡಿದ್ರೆ ಲಾಭಕ್ಕಿಂತ ನಷ್ಟ ಜಾಸ್ತಿ
ಯೋಗ ಆರೋಗ್ಯಕ್ಕೆ ಒಳ್ಳೆಯದು. ಮನಸ್ಸು ಹಾಗೂ ದೇಹ ಎರಡನ್ನೂ ಫಿಟ್ ಆಗಿರುವ ಕೆಲಸವನ್ನು ಯೋಗ ಮಾಡುತ್ತದೆ. ಯೋಗದಿಂದಲೂ ಕೆಲ ಅನಾನುಕೂಲತೆಯಿದೆ. ಕೆಲ ಆಸನಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ನಿಯಮ ಮೀರಿದ್ರೆ ಅನಾರೋಗ್ಯ ಕಾಡುತ್ತದೆ.
ಕೊರೊನಾ ನಂತ್ರ ಜನರು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ಆರೋಗ್ಯ ವೃದ್ಧಿಗೆ ಯೋಗದ ಮೊರೆ ಹೋಗ್ತಿದ್ದಾರೆ. ಯೋಗ ನಮ್ಮ ದೇಹವನ್ನು ಮಾತ್ರವಲ್ಲದೆ ಮನಸ್ಸನ್ನು ಕೂಡ ಸದೃಢಗೊಳಿಸುತ್ತದೆ. ಯೋಗ ನಿಮ್ಮ ಬದ್ಧಿಯನ್ನು ಚುರುಕುಗೊಳಿಸುವ ಜೊತೆಗೆ ಫಿಟ್ ಆಗಿರಲು ಸಹಾಯ ಮಾಡುತ್ತದೆ.
ನಿಮ್ಮ ಆರೋಗ್ಯ (Health) ವೃದ್ಧಿ ಮಾಡಲು ನೆರವಾಗುವ ಆಸನಗಳು ಅನೇಕ. ಅದ್ರಲ್ಲಿ ಚಕ್ರಾಸನ (Chakrasana) ಕೂಡ ಒಂದು. ಮಕ್ಕಳಿಂದ ಹಿಡಿದು ಹಿರಿಯರಿಗೆ ಎಲ್ಲರೂ ಈ ಚಕ್ರಾಸನದ ಪ್ರಯೋಜನ ಪಡೆಯಬಹುದು. ಚಕ್ರಾಸನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಒತ್ತಡ ಮತ್ತು ಖಿನ್ನತೆ (Depression) ಯನ್ನು ಹೋಗಲಾಡಿಸಬಹುದು. ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಸಂತಾನೋತ್ಪತ್ತಿಗೆ ಇದು ನೆರವಾಗುತ್ತದೆ.
ಯೋಗದ ಎಲ್ಲ ಆಸನಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಕೆಲ ಆಸನಗಳನ್ನು ಕೆಲವರು ಮಾಡದಂತೆ ಸಲಹೆ ನೀಡಲಾಗುತ್ತದೆ. ಚಕ್ರಾಸನವನ್ನು ಕೂಡ ಎಲ್ಲರೂ ಮಾಡಬಾರದು. ನಾವಿಂದು ಯಾರು ಚಕ್ರಾಸನ ಮಾಡಬಾರದು ಎಂಬುದನ್ನು ಹೇಳ್ತೆವೆ.
ಚಕ್ರಾಸನ ಅಭ್ಯಾಸ ಮಾಡುವ ಮುನ್ನ :
ಚಕ್ರಾಸನ ಮಾಡಿದ್ರೆ ಹೆಚ್ಚಾಗುತ್ತೆ ಬೆನ್ನು ನೋವು : ಈಗಾಗಲೇ ಬೆನ್ನು ನೋವಿನಿಂದ ಬಳಲುತ್ತಿರುವವರು ಚಕ್ರಾಸನವನ್ನು ಮಾಡಬಾರದು. ಸೊಂಟದಲ್ಲಿ ಯಾವುದೇ ಗಾಯವಾಗಿದ್ದರೆ ಕೂಡ ನೀವು ಚಕ್ರಾಸನ ಮಾಡಬಾರದು. ಈ ಸಂದರ್ಭದಲ್ಲಿ ಚಕ್ರಾಸನ ಅಭ್ಯಾಸ ಮಾಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಈ ಆಸನದಲ್ಲಿ ಸೊಂಟವನ್ನು ಸಂಪೂರ್ಣವಾಗಿ ಹಿಂದೆ ಬಗ್ಗಿಸಬೇಕಾಗುತ್ತದೆ. ಇದ್ರಿಂದ ಬೆನ್ನುನೋವು ಇನ್ನಷ್ಟು ಹೆಚ್ಚಾಗಬಹುದು.
ರಕ್ತದೊತ್ತಡ ಸಮಸ್ಯೆ ಇದ್ದವರು ಮಾಡ್ಬೇಡಿ : ರಕ್ತದೊತ್ತಡ ಸಮಸ್ಯೆ ಹೊಂದಿರುವವು ಯಾವುದೇ ಕಾರಣಕ್ಕೂ ಚಕ್ರಾಸನ ಮಾಡಬಾರದು. ಕಡಿಮೆ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡ ಈ ಎರಡೂ ಸಮಸ್ಯೆಯುಳ್ಳವರು ಚಕ್ರಾಸನ ಅಭ್ಯಾಸ ಮಾಡಬಾರದು.
ಮಣಿಕಟ್ಟು ಅಥವಾ ಭುಜಕ್ಕೆ ಸಂಬಂಧಿಸಿದ ನೋವಿದ್ರೆ ನೋ ಎನ್ನಿ : ಮಣಿಕಟ್ಟಿನ ನೋವಿನ ಸಮಸ್ಯೆ ಹೊಂದಿದ್ದರೆ ಅಥವಾ ಭುಜದ ಗಾಯವನ್ನು ಹೊಂದಿದ್ದರೆ ಚಕ್ರಾಸನವನ್ನು ಅಭ್ಯಾಸ ಮಾಡುವಾಗ, ನೀವು ಗಾಯಗೊಳ್ಳುವ ಸಾಧ್ಯತೆಗಳು ಬಹಳಷ್ಟು ಹೆಚ್ಚಿರುತ್ತದೆ. ಚಕ್ರಾಸನವನ್ನು ಅಭ್ಯಾಸ ಮಾಡಿದಾಗ ಚಕ್ರದ ಭಂಗಿಗೆ ಬಂದ ನಂತರ, ದೇಹದ ಸಂಪೂರ್ಣ ತೂಕ ನಿಮ್ಮ ಕೈಗಳ ಮೇಲೆ ಬರುತ್ತದೆ. ಕೈ ಗಾಯಗೊಂಡಿದ್ದರೆ ಅಸಮತೋಲನ ತಪ್ಪುವ ಸಾಧ್ಯತೆಯೂ ಇರುತ್ತದೆ.
ಗರ್ಭಿಣಿಯರು ಇದ್ರಿಂದ ದೂರವಿರಿ : ಗರ್ಭಿಣಿಯರು ಚಕ್ರಾಸನವನ್ನು ಅಭ್ಯಾಸ ಮಾಡಬಾರದು. ಗರ್ಭಾವಸ್ಥೆಯಲ್ಲಿ ಚಕ್ರಾಸನ ಮಾಡಿದ್ರೆ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಮಗುವಿಗೆ ಇದು ಹಾನಿಯುಂಟು ಮಾಡುತ್ತದೆ. ಗರ್ಭಿಣಿಯರ ದೇಹ ಸೂಕ್ಷ್ಮವಾಗಿರುವ ಕಾರಣ ಯಾವುದೇ ಯೋಗ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗುತ್ತದೆ.
Health Tips: ಹೆಲ್ದೀಯಾಗಿರೋ ಈ ಫುಡ್ ಮಧುಮೇಹಿಗಳಿಗೆ ಡೇಂಜರಸ್!
ಮುಟ್ಟಿನ ಸಂದರ್ಭದಲ್ಲಿ ಅಭ್ಯಾಸ ಬೇಡ : ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲ ಯೋಗಗಳನ್ನು ಮಾಡಬಾರದು. ಮುಟ್ಟಿನ ಸಮಯದಲ್ಲಿ ಸೆಳೆತ ಮತ್ತು ಅಧಿಕ ರಕ್ತಸ್ರಾವ ಇದ್ದವರು ಚಕ್ರಾಸನವನ್ನು ಅಭ್ಯಾಸ ಮಾಡಬಾರದು. ಚಕ್ರಾಸನವನ್ನು ಮುಟ್ಟಿನ ಸಮಯದಲ್ಲಿ ಅಭ್ಯಾಸ ಮಾಡಿದರೆ ಬೆನ್ನು ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಹಾರ್ಮೋನುಗಳು ಏರುಪೇರಾಗುವ ಕಾರಣ ನೀವು ಇನ್ನಷ್ಟು ನೋವನ್ನು ಅನುಭವಿಸಬೇಕಾಗುತ್ತದೆ.
WORLD AIDS DAY: ಈ ಅಭ್ಯಾಸಗಳೇ ಏಡ್ಸ್‌ಗೆ ಕಾರಣ: ತಪ್ಪದೇ ತಿಳ್ಕೊಳಿ
ಕುತ್ತಿಗೆ ನೋವು ಇದ್ದವರಿಗೆ ಅಪಾಯಕಾರಿ ಚಕ್ರಾಸನ : ಕುತ್ತಿಗೆ ನೋವಿನಿಂದ ಬಳಲುತ್ತಿರುವವರು ಅಥವಾ ಗರ್ಭಕಂಠದ ನೋವಿನಿಂದ ತೊಂದರೆ ಅನುಭವಿಸುತ್ತಿದ್ದರೆ ಚಕ್ರಾಸನವನ್ನು ಅಭ್ಯಾಸ ಮಾಡದಿರುವುದು ಒಳ್ಳೆಯದು. ಚಕ್ರಾಸನವನ್ನು ಅಭ್ಯಾಸ ಮಾಡುವಾಗ ತಲೆ ಕೆಳಗೆ ಹೋಗುತ್ತದೆ. ಆಗ ಕುತ್ತಿಗೆಯ ಮೇಲೆ ಒತ್ತಡ ಬೀಳುತ್ತದೆ. ಈಗಾಗಲೇ ಕುತ್ತಿಗೆ ನೋವಿನಿಂದ ಬಳಲುತ್ತಿದ್ದವರು ಈ ಆಸನ ಮಾಡಿದಾಗ ಕುತ್ತಿಗೆಗೆ ಮತ್ತಷ್ಟು ಭಾರ ಬಿದ್ದು ನೋವು ಹೆಚ್ಚಾಗುತ್ತದೆ.