Asianet Suvarna News Asianet Suvarna News

World Aids Day: ಈ ಅಭ್ಯಾಸಗಳೇ ಏಡ್ಸ್‌ಗೆ ಕಾರಣ: ತಪ್ಪದೇ ತಿಳ್ಕೊಳಿ

ಏಡ್ಸ್ ಹೆಸರು ಕೇಳಿದ್ರೆ ಜನರು ಭಯಗೊಳ್ತಾರೆ. ಆದ್ರೆ ವಿಶ್ವದಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಕಡಿಮೆಯೇನಿಲ್ಲ. ಏಡ್ಸ್ ನಂತಹ ಅಪಾಯಕಾರಿ ರೋಗ ನಮ್ಮಿಂದ ದೂರವಿರಬೇಕೆಂದ್ರೆ ನಾವು ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. 
 

Aids Symptoms On World Aids Day 2022
Author
First Published Dec 1, 2022, 12:12 PM IST

ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.  ಎಚ್‌ಐವಿ/ಏಡ್ಸ್‌ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ರೋಗಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಾಗೂ ಏಡ್ಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಮತ್ತು ಎಲ್ಲ ಜನರಿಗೆ ಸಮಾನವಾಗಿ ಅಗತ್ಯ ಎಚ್‌ಐವಿ ಸೇವೆಗಳನ್ನು ಒದಗಿಸುವ ಮೂಲಕ ಏಡ್ಸ್ ನಿರ್ಮೂಲನೆ ಮಾಡುವುದು 2022ರ ವಿಶ್ವ ಏಡ್ಸ್ ದಿನದ ಥೀಮ್ ಆಗಿದೆ. ನಾವಿಂದು ಏಡ್ಸ್ ಗೆ ಸಂಬಂಧಿಸಿದ ಕೆಲ ಮಾಹಿತಿಯನ್ನು ನಿಮಗೆ ನೀಡ್ತೆವೆ.

ಮೊದಲನೇಯದಾಗಿ ಏಡ್ಸ್ (AIDS)  ಪೀಡಿತ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು : ಎಚ್ ಐವಿ (HIV) ಸೋಂಕಿನ ಕೊನೆಯ ಹಂತವನ್ನು ಏಡ್ಸ್ ಎಂದು ಕರೆಯಲಾಗುತ್ತದೆ. ಜ್ವರ, ದುಗ್ಧರಸ ಗ್ರಂಥಿಗಳ ಊತ, ಅತಿಯಾದ ಆಯಾಸ, ರಾತ್ರಿ ಅತಿಯಾದ ಬೆವರು, ಬಾಯಿ ಮತ್ತು ನಾಲಿಗೆ ಅಥವಾ ಗುದದ್ವಾರದಲ್ಲಿ ಹುಣ್ಣುಗಳು, ಚರ್ಮದ ಸೋಂಕಿನಂತಹ ಲಕ್ಷಣಗಳು ಕಂಡು ಬರುತ್ತವೆ. 

ಏಡ್ಸ್ ರೋಗಿಯ ಜೀವಿತಾವಧಿ ಎಷ್ಟು ವರ್ಷ?: ನಿಮಗೆ ತಿಳಿದಿರುವಂತೆ ಎಚ್ ಐವಿಗೆ ಯಾವುದೇ ಸೂಕ್ತ ಔಷಧಿ (Medicine) ಹಾಗೂ ಖಚಿತವಾದ ಚಿಕಿತ್ಸೆ ಇಲ್ಲ. ಒಮ್ಮೆ ಏಡ್ಸ್ ಪತ್ತೆಯಾದರೆ ಆ ರೋಗಿಯ ಜೀವಿತಾವಧಿ ಕೇವಲ 3 ವರ್ಷ ಇರುತ್ತದೆ. ಅಂದ್ರೆ ಏಡ್ಸ್ ಕಾಣಿಸಿಕೊಂಡ ನಂತ್ರ ರೋಗಿ ಹೆಚ್ಚೆಂದ್ರೆ ಮೂರು ವರ್ಷ ಬದುಕುವ ಸಾಧ್ಯತೆಯಿರುತ್ತದೆ.  

ಏಡ್ಸ್ ಗೆ ಕಾರಣವಾಗುತ್ತೆ ಈ ಎಲ್ಲ ಅಭ್ಯಾಸ: ಅಸುರಕ್ಷಿತ ಲೈಂಗಿಕತೆ: ಏಡ್ಸ್ ಬಂದ ವ್ಯಕ್ತಿಯನ್ನು ಎಲ್ಲರೂ ಕೀಳಾಗಿ ನೋಡ್ತಾರೆ. ಏಡ್ಸ್ ಬರದಂತೆ ಕೆಲ ಮುನ್ನೆಚ್ಚರಿಕೆ ತೆಗೆದುಕೊಂಡ್ರೆ ಒಳ್ಳೆಯದು. ಏಡ್ಸ್ ಬರಲು ಮುಖ್ಯ ಕಾರಣವೆಂದ್ರೆ ಅಸುರಕ್ಷಿತ ಲೈಂಗಿಕತೆ.  ಕೇವಲ ಬಹು ಪಾಲುದಾರರನ್ನು ಹೊಂದಿರುವ ಜನರು ಮಾತ್ರವಲ್ಲ ಒಂದೇ ಸಂಗಾತಿ ಜೊತೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವ ವ್ಯಕ್ತಿ ಕೂಡ ಏಡ್ಸ್ ಅಪಾಯಕ್ಕೆ ಒಳಗಾಗಬಹುದು. ಯೋನಿ-ಗುದ ಸಂಭೋಗ ಅಥವಾ ಮೌಖಿಕ ಸಂಭೋಗದ ಸಮಯದಲ್ಲಿ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಎಚ್ ಐವಿ ಪಾಸಿಟಿವ್ ವ್ಯಕ್ತಿಯೊಂದಿಗೆ ಪದೇ ಪದೇ ಅಸುರಕ್ಷಿತ ಲೈಂಗಿಕತೆ ಜೀವನ ನಡೆಸಿದ್ರೆ ನಿಮಗೆ ಸೋಂಕು ತಗಲುವುದನ್ನು ತಪ್ಪಿಸಲು ಸಾಧ್ಯವಿಲ್ಲ.

HEALTH TIPS: ಹೆಲ್ದೀಯಾಗಿರೋ ಈ ಫುಡ್ ಮಧುಮೇಹಿಗಳಿಗೆ ಡೇಂಜರಸ್ !

ಕಳಪೆ ಗುಣಮಟ್ಟದ ಕಾಂಡೋಮ್ ಬಳಕೆ: ದೈಹಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಗುಣಮಟ್ಟವನ್ನು ಪರಿಶೀಲಿಸಬೇಕು. ಕೆಲ ಕಳಪೆ ಗುಣಮಟ್ಟದ ಕಾಂಡೋಮ್ ಗಳು ಸೋಂಕು ಹರಡಲು ಕಾರಣವಾಗುತ್ತವೆ. ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಹರಿದ್ರೆ ಇದ್ರಿಂದ ಎಚ್ ಐವಿ ಹರಡುವ ಸಾಧ್ಯತೆಯಿರುತ್ತದೆ.  

ಟ್ಯಾಟೂ ಅಭ್ಯಾಸ: ಈಗಿನ ದಿನಗಳಲ್ಲಿ ಟ್ಯಾಟೂ ಫ್ಯಾಷನ್ ಆಗಿದೆ. ಜನರು ಶಾಶ್ವತ ಟ್ಯಾಟೂ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಿಕೊಳ್ಳುವ ವೇಳೆ ಸುರಕ್ಷತೆಗೆ ಗಮನ ನೀಡಬೇಕು. ಅಸುರಕ್ಷಿತ ಸ್ಥಳಗಳಲ್ಲಿ ಹಚ್ಚೆ ಹಾಕಿಸಿಕೊಂಡಾಗ ಅವರು ಒಬ್ಬರಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸುವ ಸಾಧ್ಯತೆಯಿರುತ್ತದೆ. ಇದ್ರಿಂದ ಸೋಂಕು ಸುಲಭವಾಗಿ ಹರಡುತ್ತದೆ. ಎಚ್ ಐವಿ ಸಾಂಕ್ರಾಮಿಕ ರೋಗವಾಗಿದ್ದು ಅದು ಬಳಸಿದ ಸೂಜಿಯಿಂದಲೂ ಹರಡುತ್ತದೆ.     

ಬ್ಲಡ್ ಪಡೆಯುವ ವೇಳೆ ಇರಲಿ ಎಚ್ಚರಿಗೆ: ರಕ್ತದಾನ ಮಹಾದಾನ ನಿಜ. ಆದ್ರೆ ರಕ್ತವನ್ನು ನೀವು ಪಡೆಯುವ ಸಂದರ್ಭದಲ್ಲಿ ನೀವು ಸುರಕ್ಷತೆ ಬಗ್ಗೆ ಗಮನ ನೀಡಬೇಕು. ವಿಶ್ವಾಸಾರ್ಹ ಆಸ್ಪತ್ರೆ ಅಥವಾ ವೈದ್ಯರ ಸಹಾಯ ಪಡೆಯಬೇಕು. ಸೋಂಕಿತ ರಕ್ತ ನಿಮ್ಮ ಮೈ ಸೇರಿದ್ರೆ ನೀವು  ಸುಲಭವಾಗಿ ಎಚ್ ಐವಿ ಗೆ ತುತ್ತಾಗುತ್ತೀರಿ. ರಕ್ತ ಪಡೆಯುವ ಮುನ್ನ ಇದನ್ನು ಪರೀಕ್ಷಿಸಿ. 

World AIDS Day: ಸೋಂಕಿನ ಲಕ್ಷಣ ನಿವಾರಿಸುತ್ತೆ ಆಯುರ್ವೇದ ಚಿಕಿತ್ಸೆ

ಮದುವೆಗೆ ಮುನ್ನ ಈ ಪರೀಕ್ಷೆ: ನೀವು ಲೈಂಗಿಕ ಕ್ರಿಯೆ ನಡೆಸಿರಿ, ಬಿಡಿ, ಮದುವೆಗೆ ಮುನ್ನ ಇಬ್ಬರೂ ಎಚ್ ಐವಿ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು. ಇದು ಒಂದು ಮೂಕ ರೋಗವಾಗಿದ್ದು, ನಿಮ್ಮ ಅರಿವಿಗೆ ಬಾರದೆ ನಿಮ್ಮನ್ನು ಕೊಲ್ಲುತ್ತಿರುತ್ತದೆ. ಮದುವೆಗೆ ಮುನ್ನವೇ ಪರೀಕ್ಷೆಗೆ ಒಳಗಾದ್ರೆ ಮುಂದೆ ಬರುವ ಅಪಾಯ ತಪ್ಪಿಸಬಹುದು.   

Follow Us:
Download App:
  • android
  • ios