ಕರಿಮೆಣಸು ಆರೋಗ್ಯಕ್ಕೆ ಒಳ್ಳೆಯದಾದರೂ, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹೊಟ್ಟೆ ಹುಣ್ಣು, ಕಿಡ್ನಿ, ಲಿವರ್ ಸಮಸ್ಯೆ ಇರುವವರು, ಕರಿಮೆಣಸಿನ ಅಲರ್ಜಿ ಇರುವವರು ಮತ್ತು ಹೊಟ್ಟೆ ಸಂಬಂಧಿ ಸಮಸ್ಯೆ ಇರುವವರು ಸೇವಿಸಬಾರದು. ಇದು ಅಕಾಲಿಕ ಹೆರಿಗೆ, ಹೊಟ್ಟೆನೋವು, ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.

ಭಾರತೀಯರು ಹಿಂದಿನಿಂದಲೂ ಊಟದಲ್ಲಿ ಸೇರಿಸಿಕೊಳ್ಳುತ್ತಾ ಬಂದಿರೋ ಮುಖ್ಯವಾದ ಪದಾರ್ಥ ಅಂದ್ರೆ ಕರಿಮೆಣಸು. ಇದು ಕೆಮ್ಮು, ನೆಗಡಿಗೆ ಒಳ್ಳೆಯ ಔಷಧಿ. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಕರಿಮೆಣಸು ಎಲ್ಲರಿಗೂ ಒಳ್ಳೆಯದನ್ನ ಮಾಡಲ್ಲ ಅನ್ನೋದು ನಿಮಗೆ ಗೊತ್ತಾ?

ಔಷಧಿಯಾಗಿಯೂ, ಅಡುಗೆ ಮನೆಯ ಮುಖ್ಯ ಮಸಾಲೆ ಪದಾರ್ಥವಾಗಿಯೂ ಇರೋ ಕರಿಮೆಣಸು ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನ ಕಡಿಮೆ ಮಾಡೋದ್ರ ಜೊತೆಗೆ ವಯಸ್ಸಾದಂತೆ ಕಾಣೋದನ್ನ ಕಡಿಮೆ ಮಾಡುತ್ತೆ. ಆದ್ರೆ ಕೆಲವರು ಕರಿಮೆಣಸನ್ನ ತಿನ್ನಲೇಬಾರದು ಅಂತ ವೈದ್ಯರು ಹೇಳ್ತಾರೆ. ಯಾರೆಲ್ಲಾ ಕರಿಮೆಣಸು ತಿನ್ನಬಾರದು? ಯಾಕೆ ತಿನ್ನಬಾರದು ಅನ್ನೋದನ್ನ ತಿಳ್ಕೊಳ್ಳೋಣ ಬನ್ನಿ.

ಗರ್ಭಿಣಿಯರು : ಗರ್ಭಿಣಿಯರು ಕರಿಮೆಣಸನ್ನ ತಿನ್ನಬಾರದು. ಮಗುವಿಗೆ ಹಾಲುಣಿಸುವ ತಾಯಂದಿರೂ ಕೂಡ ಇದನ್ನ ತಿನ್ನಬಾರದು ಅಂತ ಹೇಳಲಾಗುತ್ತೆ. ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ಕರಿಮೆಣಸು ತಿಂದ್ರೆ ಅದು ಗರ್ಭಕೋಶ ಸಂಕುಚಿತಗೊಳ್ಳುವಂತೆ ಮಾಡುತ್ತೆ. ಇದು ಅಕಾಲಿಕ ಹೆರಿಗೆಗೆ ಕಾರಣವಾಗಬಹುದು. ಜೊತೆಗೆ ಹೆರಿಗೆ ಸಮಯದಲ್ಲಿ ತೊಂದರೆಗಳನ್ನೂ ಕೂಡ ಉಂಟುಮಾಡಬಹುದು.

ಅಲ್ಸರ್ ಇರೋರು : ಅಲ್ಸರ್ ಅಥವಾ ಹೊಟ್ಟೆ ಹುಣ್ಣಿನ ಸಮಸ್ಯೆ ಇರೋರು ಕರಿಮೆಣಸು ತಿನ್ನೋದನ್ನ ತಪ್ಪಿಸಬೇಕು. ಹೊಟ್ಟೆ ಹುಣ್ಣಿನಿಂದ ಹೊಟ್ಟೆನೋವು, ವಾಕರಿಕೆ ಇತ್ಯಾದಿ ಸಮಸ್ಯೆಗಳು ಉಂಟಾಗುತ್ತೆ. ಈಗಾಗಲೇ ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಕರಿಮೆಣಸು ತಿಂದ್ರೆ ಅದು ಇನ್ನೂ ಹೆಚ್ಚಾಗುತ್ತೆ. ಕರಿಮೆಣಸಲ್ಲಿ ಹೊಟ್ಟೆ ಹುಣ್ಣು ಮತ್ತು ಆಸಿಡ್ ರಿಫ್ಲಕ್ಸ್ ಸಮಸ್ಯೆಗಳನ್ನ ಹೆಚ್ಚಿಸುವ ಅಂಶಗಳಿವೆ.

ಶುಂಠಿ ಜೊತೆ ಎರಡೇ ಎರಡು ಕಾಳುಮೆಣಸು ಹಾಕಿ ಚುಮು ಚುಮು ಚಳಿಗೆ ಮಾಡ್ಕೊಳ್ಳಿ ಖಾರ ಖಾರವಾದ ಸೂಪ್

ಕಿಡ್ನಿ ಸಮಸ್ಯೆ ಇರೋರು : ಕಿಡ್ನಿ ಅಥವಾ ಲಿವರ್ ಸಮಸ್ಯೆ ಇರೋರು ಕರಿಮೆಣಸು ತಿನ್ನಬಾರದು. ಕಿಡ್ನಿ, ಲಿವರ್ ಸರಿಯಾಗಿ ಕೆಲಸ ಮಾಡದೇ ಇರೋರು ಕರಿಮೆಣಸು ತಿಂದ್ರೆ ಅವುಗಳ ಮೇಲೆ ಒತ್ತಡ ಹೆಚ್ಚಾಗುತ್ತೆ. ಜೀರ್ಣಕ್ರಿಯೆಯನ್ನ ಹೆಚ್ಚಿಸುವ ಗುಣ ಕರಿಮೆಣಸಿಗಿದೆ. ಹಾಗಾಗಿ ಅದು ಅವರ ಆರೋಗ್ಯ ಸಮಸ್ಯೆಯನ್ನ ಇನ್ನಷ್ಟು ಹೆಚ್ಚಿಸುತ್ತೆ.

ಅಲರ್ಜಿ ಇರೋರು : ಕರಿಮೆಣಸು ತಿಂದ್ರೆ ಸೀನು, ತುರಿಕೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಬಂದ್ರೆ ಅದನ್ನ ತಿನ್ನೋದನ್ನ ಬಿಟ್ಟುಬಿಡಬೇಕು. ಕರಿಮೆಣಸು ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿದ್ರೂ ಕೆಲವರಿಗೆ ಅದು ನೆಗೆಟಿವ್ ಪರಿಣಾಮ ಬೀರುತ್ತೆ. ಅಂಥವರು ಕರಿಮೆಣಸನ್ನ ತಿನ್ನಬಾರದು.

4 ಕಾಳುಮೆಣಸು, 1 ಟೊಮೆಟೋ ಹಾಕಿ ತಯಾರಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನೋ ಹುಳಿ ರಸಂ

ಹೊಟ್ಟೆ ಸಂಬಂಧಿ ಸಮಸ್ಯೆ ಇರೋರು : ಕರುಳಿನ ಸಮಸ್ಯೆ, ಹೊಟ್ಟೆ ಉರಿ, ಅನ್ನನಾಳದ ಸಮಸ್ಯೆ ಇರೋರು ಕರಿಮೆಣಸನ್ನ ತಿನ್ನಬಾರದು. ಇಲ್ಲಾಂದ್ರೆ ಸಮಸ್ಯೆ ಇನ್ನೂ ಹೆಚ್ಚಾಗುತ್ತೆ. ಚರ್ಮದ ತುರಿಕೆ, ಅಲರ್ಜಿ ಇರೋರೂ ಕೂಡ ಕರಿಮೆಣಸು ತಿನ್ನೋದನ್ನ ತಪ್ಪಿಸಬೇಕು.