Asianet Suvarna News Asianet Suvarna News

ಭಾರತೀಯ ಕಂಪನಿಯ ಕೆಮ್ಮಿನ ಔಷಧಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೈ ಅಲರ್ಟ್‌, ನಿಮ್ಮಲ್ಲಿದ್ದರೆ ಎಚ್ಚರ ವಹಿಸಿ!

ವಿಶ್ವ ಆರೋಗ್ಯ ಸಂಸ್ಥೆ ಭಾರತೀಯ ಮೂಲಕ ನಾಲ್ಕು ಕೆಮ್ಮಿನ ಸಿರಪ್‌ ಬಗ್ಗೆ ದೊಡ್ಡ ಮಟ್ಟದ ಎಚ್ಚರಿಕೆ ನೀಡಿದೆ. ಈ ಸಂಸ್ಥೆ ತಯಾರಿಸಿದ ಕೆಮ್ಮಿನ ಔಷಧಿಯಿಂದ ಆಫ್ರಿಕಾ ದೇಶ ಗಾಂಬಿಯಾದಲ್ಲಿ 66 ಮಕ್ಕಳು ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ.

WHO alert on 4 cough syrups of Indian company these syrups may be the cause of death of 66 children in Gambia san
Author
First Published Oct 6, 2022, 11:10 AM IST

ನವದೆಹಲಿ (ಅ.6): ಭಾರತೀಯ ಮೂಲದ ಕಂಪನಿ ತಯಾರಿಸಿರುವ ನಾಲ್ಕು ವಿವಿಧ ಮಾದರಿಯ ಕೆಮ್ಮಿನ ಔಷಧಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೈ ಅಲರ್ಟ್‌ ಘೋಷಣೆ ಮಾಡಿದೆ. ಆಫ್ರಿಕಾ ದೇಶ ಗಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಈ ಸಿರಪ್‌ಗಳು ಕಾರಣವಾಗಿರಬಹುದು ಎಂದು ಡಬ್ಲ್ಯುಎಚ್‌ಓ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಅಲರ್ಟ್‌ ಘೋಷಣೆ ಮಾಡಿದ ಬಳಿಕ, ಕೇಂದ್ರ ಸರ್ಕಾರ ಕೂಡ ಹರಿಯಾಣ ಮೂಲದ ಫಾರ್ಮಾಸುಟಿಕಲ್‌ ಕಂಪನಿಯ ಕುರಿತಾಗಿ ತನಿಖೆ ಆರಂಭಿಸಿದೆ. ಈ ನಾಲ್ಕೂ ಔಷಧಿಗಳು ಹರಿಯಾಣದಲ್ಲಿಯೇ ತಯಾರಿಕೆ ಆಗುತ್ತಿದ್ದವು ಎನ್ನಲಾಗಿದೆ. ಇದರ ಬೆನ್ನಲ್ಲಿಯೇ ಹರಿಯಾಣ ಔಷಧ ಪ್ರಾಧಿಕಾರದಿಂದ ಪೂರ್ಣ ಪ್ರಮಾಣದ ವರದಿ ನೀಡುವಂತೆ ಡಿಜಿಸಿಐ ಹೇಳಿದೆ. ವರದಿ ಸ್ವೀಕರಿಸಿದ ಬಳಿಕ ಹೆಚ್ಚಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಸೋನೆಪತ್‌ ಮೂಲದ ಮೈಡೆನ್‌ ಫಾರ್ಮಾಸುಟಿಕಲ್‌ ಲಿಮಿಟೆಡ್‌ ಕಂಪನಿಯ ಈ ನಾಲ್ಕು ಕೆಮ್ಮಿನ ಔಷಧಿಯನ್ನು ಗಾಂಬಿಯಾಕ್ಕೆ ಕಳಿಸುತ್ತಿತ್ತು. ಆದರೆ, ಈವರೆಗೂ ಕಂಪನಿ ಯಾವುದೇ ಪ್ರಕಟಣೆಯನ್ನು ಈ ಕುರುತಾಗಿ ನೀಡಿಲ್ಲ. ಇದು ತಾನು ತಯಾರಿಸುವ ಔಷಧಿ ಅಲ್ಲ ಎನ್ನುವುದಾಗಲಿ, ಅದರಲ್ಲಿ ಹಾನಿಕಾರಕ ಅಂಶ ಇಲ್ಲ ಎನ್ನುವುದಾಗಲಿ ಯಾವುದೇ ಮಾಹಿತಿ ನೀಡಿಲ್ಲ.

ಗಾಂಬಿಯಾ ಹೊರತಾಗಿ ಬೇರೆ ಯಾವ ದೇಶಕ್ಕೂ ಕಳಿಸಿಲ್ಲ ಏಕೆ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ, ಗಾಂಬಿಯಾದೊಂದಿಗೆ ಆಫ್ರಿಕಾದ ಇತರ ದೇಶಗಳಿಗಿಗೂ ಈ ಸಿರಪ್‌ ಸಾಗಣೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಆಯಾ ಸರ್ಕಾರಗಳು ತುರ್ತಾಗಿ ಈ ಔಷಧಿಗಳನ್ನು ಕಂಡುಹಿಡಿದು ನಿಷೇಧಿಸುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಅಪಾಯ ಏರುವ ಸಾಧ್ಯತೆ  ಇದೆ ಎಂದಿದೆ.

WHO ವೈದ್ಯಕೀಯ ವರದಿಯಲ್ಲಿ ಏನಿದೆ: 66 ಮಕ್ಕಳ ಸಾವಿನ ನಂತರ, ವಿಶ್ವ ಆರೋಗ್ಯ ಸಂಸ್ಥೆ ಈ ಔಷಧದ ಪರೀಕ್ಷೆ ಮಾಡಿದೆ. ಪ್ರಯೋಗಾಲಯ ಪರೀಕ್ಷೆಗಳ ಸಮಯದಲ್ಲಿ, ಈ ಎಲ್ಲಾ ಮಾದರಿಗಳಲ್ಲಿ ಹೆಚ್ಚಿನ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಕಂಡುಬಂದಿದೆ. ತನಿಖಾ ವರದಿ ಬಂದ ನಂತರ, ವಿಶ್ವ ಆರೋಗ್ಯ ಸಂಸ್ಥೆ ವಕ್ತಾರರು ಕೆಮ್ಮಿನ ಸಿರಪ್ ಕುಡಿಯುವುದರಿಂದ ಗಂಭೀರ ಮೂತ್ರಪಿಂಡದ ಗಾಯಗಳಿಗೆ ಮತ್ತು ಮಕ್ಕಳಲ್ಲಿ 66 ಸಾವುಗಳಿಗೆ ಸಂಭಾವ್ಯವಾಗಿ ಸಂಬಂಧವಿದೆ ಎಂದು ಹೇಳಿದೆ.

ದೆಹಲಿಯಲ್ಲಿ ಕಫದ ಸಿರಪ್‌ ಕುಡಿದು ಮೂವರು ಮಕ್ಕಳ ದಾರುಣ ಸಾವು

ಯಾವ ನಾಲ್ಕು ಸಿರಪ್‌ಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ?: ಪ್ರೋಮೆಥಾಜಿನ್ ಓರಲ್ ಸೊಲ್ಯೂಷನ್ ( Promethazine Oral Solution), ಕೋಫಾಕ್ಸ್‌ಮಾಲಿನ್ ಬೇಬಿ ಕಾಫ್‌ ಸಿರಪ್ ( Kofexmalin Baby Cough Syrup ), ಮ್ಯಾಕೋಫ್ ಬೇಬಿ ಕಾಫ್‌ ಸಿರಪ್ (Makoff Baby Cough Syrup) ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ (Magrip N Cold Syrup).

ಪತಂಜಲಿ, ಡಾಬರ್ ಸೇರಿ ಪ್ರಸಿದ್ಧ ಕಂಪನಿಗಳ ಜೇನುತುಪ್ಪ ಕಲಬೆರಕೆ!

ಗಾಂಬಿಯಾ ಎಲ್ಲಿದೆ?: ಗ್ಯಾಂಬಿಯಾ ಪಶ್ಚಿಮ ಆಫ್ರಿಕಾದ ದೇಶ. ಇದು ತನ್ನ ಉತ್ತರ, ಪೂರ್ವ ಮತ್ತು ದಕ್ಷಿಣದ ಗಡಿಗಳನ್ನು ಸೆನೆಗಲ್‌ನೊಂದಿಗೆ ಹಂಚಿಕೊಳ್ಳುತ್ತದೆ. ಇದರ ಜನಸಂಖ್ಯೆ 17 ಲಕ್ಷ. ಇದು ಬ್ರಿಟನ್‌ನಿಂದ 18 ಫೆಬ್ರವರಿ 1965 ರಂದು ಸ್ವಾತಂತ್ರ್ಯ ಪಡೆಯಿತು. ಈ ದೇಶದ ರಾಜಧಾನಿ ಬಂಜುಲ್, ಆದರೆ ದೊಡ್ಡ ನಗರ ಸೆರಿಕುಂಡ ಆಗಿದೆ.

“ನೀವು ಈ ಕೆಳದರ್ಜೆಯ ಉತ್ಪನ್ನಗಳನ್ನು ಹೊಂದಿದ್ದರೆ, ದಯವಿಟ್ಟು ಅವುಗಳನ್ನು ಬಳಸಬೇಡಿ. ನೀವು, ಅಥವಾ ನಿಮಗೆ ತಿಳಿದಿರುವ ಯಾರಾದರೂ, ಈ ಉತ್ಪನ್ನಗಳನ್ನು ಬಳಸಿದ್ದರೆ ಅಥವಾ ಬಳಕೆಯ ನಂತರ ಯಾವುದೇ ಪ್ರತಿಕೂಲ ಪ್ರತಿಕ್ರಿಯೆ/ಘಟನೆಯನ್ನು ಅನುಭವಿಸಿದರೆ, ಅರ್ಹ ಆರೋಗ್ಯ ವೃತ್ತಿಪರರಿಂದ ತಕ್ಷಣದ ವೈದ್ಯಕೀಯ ಸಲಹೆಯನ್ನು ಪಡೆಯಲು ಮತ್ತು ಘಟನೆಯನ್ನು ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರ ಅಥವಾ ರಾಷ್ಟ್ರೀಯ ಫಾರ್ಮಾಕೋವಿಜಿಲೆನ್ಸ್ ಸೆಂಟರ್‌ಗೆ ವರದಿ ಮಾಡಲು ನಿಮಗೆ ಸೂಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಹೇಳಿದೆ.
 

Follow Us:
Download App:
  • android
  • ios