ನೀರು ಕುಡಿಯಲು ಕಣಿ ಕೇಳಿ; ಯಾವ ಸಂದರ್ಭದಲ್ಲಿ ನೀರು ಕುಡೀಬೇಕು?
ನೀರು ಜೀವಜಲ. ನೀರು ಕುಡಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು.ಆದ್ರೆ ಯಾವ ಸಂದರ್ಭಗಳಲ್ಲಿ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿಮ್ಗೆ ಗೊತ್ತಾ?
ಆಹಾರವಿಲ್ಲದೆ ಒಂದು ದಿನವಿರಬಹುದು,ಆದ್ರೆ ನೀರಿಲ್ಲದೆ ಇರಲು ಸಾಧ್ಯವಿಲ್ಲ. ಬಾಯಾರಿದ ತಕ್ಷಣ ನೀರು ಕುಡಿದರಷ್ಟೇ ದೇಹ ಮತ್ತು ಮನಸ್ಸು ಎರಡೂ ನಮ್ಮ ನಿಯಂತ್ರಣದಲ್ಲಿರುತ್ತದೆ. ನೀರು ಕುಡಿದು ಸದಾ ಹೈಡ್ರೇಟ್ ಆಗಿದ್ರೆ ಆರೋಗ್ಯ ಉತ್ತಮವಾಗಿರುತ್ತೆ.ದೇಹದ ಕಾರ್ಯಗಳು ಸರಾಗವಾಗಿ ನಡೆಯಲು ಹಾಗೂ ಅಪಾಯಕಾರಿ ಕಾಯಿಲೆಗಳಿಂದ ರಕ್ಷಣೆ ಒದಗಿಸುವಲ್ಲಿ ನೀರು ಮಹತ್ವದ ಪಾತ್ರ ವಹಿಸುತ್ತದೆ.ಇದೇ ಕಾರಣಕ್ಕೆ ಸರ್ವ ರೋಗಕ್ಕೂ ನೀರೇ ಮದ್ದು ಎಂದು ಹೇಳಿರೋದು. ಹಾಗಾಗಿ ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯೋದನ್ನು ಅಭ್ಯಾಸ ಮಾಡಿಕೊಳ್ಳಬೇಕು.ಇದರ ಜೊತೆ ನೀರನ್ನುಯಾವ ಸಮಯಗಳಲ್ಲಿಸೇವಿಸಿದ್ರೆ ದೇಹಕ್ಕೆ ಒಳ್ಳೆಯದು ಎಂಬ ಮಾಹಿತಿ ಹೊಂದಿರೋದು ಕೂಡ ಮುಖ್ಯ.ಹಾಗಾದ್ರೆ ಯಾವಾಗ ನೀರು ಕುಡಿದ್ರೆ ಒಳ್ಳೆಯದು?
ಖಿನ್ನತೆಯಿಂದ ಹೊರಬರಬೇಕೇ? ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ
ಬೆಳಗ್ಗೆಎದ್ದತಕ್ಷಣ
ಬೆಳಗ್ಗೆಎದ್ದ ತಕ್ಷಣ ಒಂದು ಲೋಟ ನೀರು ಕುಡಿಯೋದು ಆರೋಗ್ಯಕರ ಅಭ್ಯಾಸ. ಇದ್ರಿಂದ ನಿಮ್ಮ ಶರೀರದ ಅಂಗಗಳು ಹಾಗೂ ರಕ್ತಪರಿಚಲನ ವ್ಯವಸ್ಥೆ ಸಕ್ರಿಯಗೊಳ್ಳುವ ಜೊತೆ ನಿದ್ರೆ ಅವಧಿಯಲ್ಲಿ ನಿಮ್ಮ ಶರೀರ ಕಳೆದುಕೊಂಡ ನೀರಿನಂಶವನ್ನು ಮರುಪೂರೈಕೆ ಮಾಡುತ್ತದೆ ಕೂಡ.
ವರ್ಕ್‌ಔಟ್ ಬಳಿಕ
ವರ್ಕ್‌ಔಟ್ ಮಾಡಿದ ಬಳಿಕ ಸುಸ್ತು, ಆಯಾಸ, ಬಾಯಾರಿಕೆ ಸಾಮಾನ್ಯ. ಹಾಗಾಗಿ ವರ್ಕ್‌ಔಟ್ ಬಳಿಕ ನೀರು ಕುಡಿಯೋದು ಒಳ್ಳೆಯದು. ಇದ್ರಿಂದ ನಿಮ್ಮ ದೇಹ ಮರಳಿ ಚೈತನ್ಯ ಪಡೆಯುತ್ತದೆ. ನಿಮ್ಮ ಹೃದಯ ಬಡಿತ ಕೂಡ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ.
ಊಟಕ್ಕಿಂತ ಅರ್ಧಗಂಟೆ ಮೊದಲು
ಊಟಕ್ಕಿಂತ ಮೊದಲು ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ,ತೂಕ ಇಳಿಕೆಗೂ ನೆರವು ನೀಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಪಡಿಸೋ ಜೊತೆ ನಿಮಗೆ ಸಂತೃಪ್ತ ಭಾವನೆ ಮೂಡಿಸಿ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೋರಿ ಆಹಾರ ಸೇವಿಸದಂತೆ ತಡೆಯುತ್ತದೆ.
ಸ್ನಾನಕ್ಕಿಂತ ಮುನ್ನ
ಸ್ನಾನಕ್ಕೂ ಮುನ್ನ ಒಂದು ಗ್ಲಾಸ್ ನೀರು ಕುಡಿಯೋದ್ರಿಂದ ನಿಮ್ಮ ರಕ್ತದೊತ್ತಡ ತಗ್ಗುತ್ತದೆ. ಬಿಸಿ ನೀರಿನಲ್ಲಿ ಸ್ನಾನ ಮಾಡಿದಾಗ ರಕ್ತನಾಳಗಳು ಹಿಗ್ಗುತ್ತವೆ, ಇದ್ರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.
ನಿದ್ರೆಗೆ ಜಾರೋ ಮೊದಲು
ನಿದ್ರಿಸುವ ಮುನ್ನ ನೀರು ಕುಡಿಯೋದ್ರಿಂದ ಆಗಾಗ ಟಾಯ್ಲೆಟ್‌ಗೆ ಹೋಗಬೇಕಾದ ಪ್ರಮೇಯ ಎದುರಾಗುತ್ತದೆ ಎಂಬುದು ಸತ್ಯ. ಮಲಗೋ ಮೊದಲು ನೀರು ಕುಡಿಯೋದ್ರಿಂದ ರಾತ್ರಿಯಿಡೀ ದೇಹ ಹೈಡ್ರೇಟ್ ಆಗಿರುತ್ತದೆ. ಅಲ್ಲದೆ, ದೇಹದಲ್ಲಿರೋ ಹಾನಿಕಾರಕ ಅಂಶಗಳನ್ನು ಸ್ವಚ್ಛಗೊಳಿಸಲು ನೆರವು ನೀಡುತ್ತದೆ. ಅಷ್ಟೇ ಅಲ್ಲ, ಒಂದು ವೇಳೆ ನೀವು ಮಲಗೋ ಸಮಯದಲ್ಲಿ ಹೊಟ್ಟೆನೋವಿದ್ದರೆ, ನೀರು ಕುಡಿಯೋದ್ರಿಂದ ಅದು ಶಮನವಾಗುತ್ತದೆ.
ಮೆಟ್ಟಿಲೇರುವಾಗ ಉಸಿರುಗಟ್ಟಿದಂತಾಗುತ್ತಿದೆಯೇ?
ಸುಸ್ತು ಹಾಗೂ ಆಯಾಸವಾದಾಗ
ದೈಹಿಕ ಶ್ರಮದ ಕೆಲಸ ಮಾಡಿದ ಬಳಿಕ ಸುಸ್ತು, ಆಯಾಸ ಕಾಡುತ್ತದೆ. ಈ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯೋದ್ರಿಂದ ದೇಹ ಕಳೆದುಕೊಂಡಿರೋ ನೀರಿನಂಶವನ್ನು ಮರಳಿ ಪಡೆಯುತ್ತದೆ. ಅಲ್ಲದೆ, ಆಯಾಸ ದೂರವಾಗಿ ದೇಹಕ್ಕೆ ಚೈತನ್ಯ ದೊರೆಯುತ್ತದೆ.
ಅನಾರೋಗ್ಯಕ್ಕೆ ತುತ್ತಾದಾಗ
ಅನಾರೋಗ್ಯದ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯೋದ್ರಿಂದ ದೇಹ ಹೈಡ್ರೇಟ್ ಆಗಿರೋ ಜೊತೆ ಬೇಗ ಗುಣಮುಖರಾಗಲು ನೆರವು ನೀಡುತ್ತದೆ. ಹೀಗಾಗಿ ರೋಗ ಬಂದಾಗ ನೀರಿನಿಂದ ದೂರವಿರೋ ಬದಲು ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು.
ನೀರು ಕುಡಿಯೋದ್ರಿಂದ ಆರೋಗ್ಯವೃದ್ಧಿ
ನೀರು ಕುರಿಯೋದ್ರಿಂದ ಅನೇಕ ಕಾಯಿಲೆಗಳಿಂದ ದೂರವಿರಬಹುದು. ಹಾಗೆಯೇ ರೋಗವನ್ನು ಬೇಗ ಗುಣಪಡಿಸಲು ಕೂಡ ಸಾಧ್ಯವಿದೆ.
-ಮೂತ್ರಪಿಂಡದ ಸಮರ್ಪಕ ಕಾರ್ಯನಿರ್ವಹಣೆಗೆ ನೀರು ಅತ್ಯಗತ್ಯ. ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯೋದ್ರಿಂದ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕಶ್ಮಲಗಳೆಲ್ಲ ಹೊರಹೋಗೋ ಕಾರಣ ಕಿಡ್ನಿ ಕಲ್ಲುಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.
-ಮೂತ್ರನಾಳದ ಸೋಂಕಿಗೆ ಕಡಿಮೆ ನೀರು ಕುಡಿಯೋದು ಕೂಡ ಕಾರಣ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯೋದ್ರಿಂದ ಸೋಂಕಿಗೆ ಕಾರಣವಾಗೋ ಬ್ಯಾಕ್ಟೀರಿಯಾಗಳು ದೇಹದಿಂದ ಹೊರಕ್ಕೆ ಹೋಗುತ್ತವೆ.
ಸರ್ವ ರೋಗಕ್ಕೂ ಮದ್ದಾಗಬಲ್ಲದು ಸಾಂಬಾರ್ ಪದಾರ್ಥದ ಅರಿಶಿನ
-ಕಡಿಮೆ ನೀರು ಕುಡಿಯೋದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬಾಧಿಸುತ್ತದೆ. ಹಾಗಾಗಿ ಆಗಾಗ ನೀರು ಕುಡಿಯೋದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು.
-ಚರ್ಮದ ಆರೋಗ್ಯಕ್ಕೂ ನೀರು ಹಿತಕಾರಿ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕೋ ಮೂಲಕ ನೀರು ಚರ್ಮಕ್ಕೆ ಹೊಳಪು ನೀಡುತ್ತದೆ. ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯೋದ್ರಿಂದ ಮೊಡವೆ ಸೇರಿದಂತೆ ಕೆಲವು ಚರ್ಮ ಸಮಸ್ಯೆಗಳನ್ನು ಕೂಡ ದೂರ ಮಾಡಬಹುದು.
-ನೀರು ಕುಡಿಯೋದ್ರಿಂದ ಮಿದುಳಿಗೆ ಆಮ್ಲಜನಕ ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗಿ ಏಕಾಗ್ರತೆ ಹೆಚ್ಚುತ್ತದೆ ಎಂದೂ ಹೇಳಲಾಗುತ್ತದೆ.