ರಜೆಯಿದ್ಯಾ..ದಿನಪೂರ್ತಿ ಒಂದೇ ಕೆಲ್ಸ. ಬೆಡ್‌ಲ್ಲಿ ಬಿದ್ಕೊಳ್ಳೋದು ಸೋಷಿಯಲ್ ಮೀಡಿಯಾ (Social Media) ಸ್ಕ್ರಾಲ್ ಮಾಡೋದು. ಅದೂ ಬೋರಾಯ್ತು ಅಂದ್ರೆ ಯೂಟ್ಯೂಬ್ (Youtube). ಒಟ್ನಲ್ಲಿ ದಿನಪೂರ್ತಿ ಮೊಬೈಲ್ (Mobile)ನಲ್ಲಿ ಕಳೆದುಬಿಡೋದು. ನೀವು ಹೀಗೇ ಮಾಡ್ತೀರಾ. ಹಾಗಿದ್ರೆ ನೀವಿದನ್ನು ಒದ್ಲೇಬೇಕು.
ಮೊಬೈಲ್ (Mobile) ಎಂಬುದು ಇವತ್ತಿನ ದಿನಗಳಲ್ಲಿ ಸಾರ್ವತ್ರಿಕವಾಗಿಬಿಟ್ಟಿದೆ. ಮೊಬೈಲ್ ಇಲ್ಲದೆ ಮನುಷ್ಯನ ಬದುಕೇ ಇಲ್ಲ ಎಂಬಷ್ಟು ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಬಂದ ನಂತರ ಆನ್‌ಲೈನ್ ಪೇಮೆಂಟ್, ಮೇಲ್ ಮೊದಲಾದ ಪ್ರಯೋಜನಗಳಾದರೂ ಇದು ಇದಕ್ಕಿಂತ ಹೆಚ್ಚಾಗಿ ಕೆಟ್ಟದಕ್ಕೆ ಕಾರಣವಾಗುತ್ತಿದೆ. ಇವತ್ತಿನ ಯುವಜನತೆಯಂತೂ ದಿನಪೂರ್ತಿ ಮೊಬೈಲಿನಲ್ಲೇ ಮುಳುಗಿರುತ್ತಾರೆ. ಮೊಬೈಲ್ ಫೋನ್ ಹೆಚ್ಚು ಬಳಸುವ ಬಹುತೇಕ ಯುವಕ-ಯುವತಿಯರ ಕಣ್ಣುಗಳು (Eyes) ನಿರಂತರವಾಗಿ ಒಣಗುತ್ತಿರುವುದು ಅಧ್ಯಯನದ ವೇಳೆ ಕಂಡು ಬಂದಿದೆ.
ಈ ಕಾರಣದಿಂದಾಗಿ, ರೋಗಿಗಳು ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಕಣ್ಣಿನ ತಜ್ಞರ ಪ್ರಕಾರ, ಜನರ ಕಣ್ಣುಗಳು ಗಂಟೆಗಟ್ಟಲೆ ಮೊಬೈಲ್ ಪರದೆಯ ಮೇಲೆ ನಿಂತಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವರು ಕಣ್ಣು ಮಿಟುಕಿಸುವುದನ್ನು ಸಹ ಮರೆತು ಬಿಡುತ್ತಾರೆ. ಒಣ ಕಣ್ಣುಗಳಿಗೆ ಇದು ದೊಡ್ಡ ಕಾರಣ. ಎಂಟು-ಒಂಬತ್ತು ಗಂಟೆಗಳ ಕಾಲ ನಿರಂತರವಾಗಿ ಮೊಬೈಲ್ ನೋಡುವುದರಿಂದ ಹಲವು ಆರೋಗ್ಯ ಸಮಸ್ಯೆ (Health Problem)ಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಮೊಬೈಲ್ ಬಳಕೆಯಿಂದ ಮಿದುಳು ಕ್ಯಾನ್ಸರ್ ? ಆಕ್ಸ್‌ಫರ್ಡ್ ಅಧ್ಯಯನ ಹೇಳಿದ್ದಿಷ್ಟು
ಒತ್ತಡ ಮತ್ತು ಖಿನ್ನತೆ
ಮೊಬೈಲ್ ನಿಂದ ಹೊರಬರುವ ಕಿರಣಗಳು ಒತ್ತಡ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಹೆಚ್ಚು ಸೆಲ್ ಫೋನ್ ಬಳಸುವ ಜನರು ಹೆಚ್ಚು ಆತಂಕ, ಉದ್ವೇಗಕ್ಕೆ ಒಳಗಾಗುತ್ತಾರೆ. ಆ ಖಿನ್ನತೆಯು ಹಲವಾರು ಸಮಸ್ಯೆಗಳು ಮತ್ತು ಕಾಯಿಲೆಗಳಿಗೆ ಕಾರಣವಾಗಬಹುದು. ಇದು ನಿಮ್ಮನ್ನು ಹೆಚ್ಚು ದುರ್ಬಲಗೊಳಿಸಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಮೆದುಳಿನ ಗೆಡ್ಡೆ
ಸೆಲ್‌ಫೋನ್ ವಿಕಿರಣಗಳು ಮೆದುಳಿನ ಗೆಡ್ಡೆಗೆ ಕಾರಣವಾಗಬಹುದು ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಒಂದು ಸಮಸ್ಯೆಯಾಗಿದೆ. ಕೆಲವು ಸಂಶೋಧಕರು ಇದು ಮೆದುಳಿನ ಗೆಡ್ಡೆಯನ್ನು ಉಂಟುಮಾಡುತ್ತದೆ ಎಂದು ನಂಬುತ್ತಾರೆ, ಬೆಳೆಯುತ್ತಿರುವ ವಯಸ್ಸಿನಲ್ಲಿಯೂ ಸಹ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದರೆ ಇನ್ನೂ, WHO ಇದು ಮೆದುಳಿನ ಗೆಡ್ಡೆಯನ್ನು ಉಂಟುಮಾಡುತ್ತದೆ ಎಂದು ದೃಢೀಕರಣದ ಸೂಚನೆಯನ್ನು ನೀಡಿಲ್ಲ.
ಆದರೆ ಮೊಬೈಲ್ ಮತ್ತು ಇತರ ಹೆಚ್ಚಿನ ಆವರ್ತನ ಹೊರಸೂಸುವ ಸಾಧನಗಳನ್ನು ನೀವು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಳಸಲು ಸೂಚಿಸುತ್ತದೆ. ನಿರ್ದಿಷ್ಟ ಸಮಯದವರೆಗೆ ಫೋನ್ ಅನ್ನು ಬಳಸುವುದು ಸೂಕ್ತವಾಗಿದೆ. ಆದರೆ ರಾತ್ರಿಯಲ್ಲಿ ಅದನ್ನು ಸಂಪೂರ್ಣವಾಗಿ ಮತ್ತು ದಿನಕ್ಕೆ 6-7 ಗಂಟೆಗಳ ಕಾಲ ನಿರಂತರವಾಗಿ ಬಳಸುವುದು ತುಂಬಾ ಹಾನಿಕಾರಕವಾಗಿದೆ.
ಮಕ್ಕಳು ಯಾವಾಗ್ಲೂ ಇಂಟರ್‌ನೆಟ್ ಯೂಸ್ ಮಾಡ್ತಾರಾ ? ಹಾಗಿದ್ರೆ ಈ ವಿಚಾರ ನಿಮ್ಗೆ ತಿಳಿದಿರ್ಲಿ
ಕಣ್ಣಿನಲ್ಲಿ ನೀರು ಬರುವ ಸಮಸ್ಯೆ
ಸಾಮಾನ್ಯವಾಗಿ ಜನರು ಫೋನ್ ಅನ್ನು ದೀರ್ಘಕಾಲ ನೋಡಿದಾಗ, ಕಣ್ಣಿನಲ್ಲಿ ನೀರು ಬರುವ ಸಮಸ್ಯೆ ಇರುತ್ತದೆ. ಕಣ್ಣುಗಳು ಕೆಂಪಾಗಿ ನೋವಾಗಲು ಶುರುವಾಗುತ್ತದೆ. ಕಣ್ಣುಗಳನ್ನು ಒಣಗಿದಂತೆ ಭಾಸವಾಗಲು ಶುರುವಾಗುತ್ತದೆ. ಹೀಗಾಗಿ ದೀರ್ಘ ಸಮಯ ಮೊಬೈಲ್‌ನ್ನು ನೋಡುವುದನ್ನು ತಪ್ಪಿಸಿ
ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು
ಸೆಲ್‌ಫೋನ್ ಕಣ್ಣಿಗೆ ಕಾಣದ ಸಾಕಷ್ಟು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಹೀಗಾಗಿ ಸೆಲ್‌ಫೋನ್ ಬಳಸುವಾಗ ಅದು ರೋಗಗಳಿಗೆ ಕಾರಣವಾಗಬಹುದು ಅಥವಾ ಅದನ್ನು ರವಾನಿಸಬಹುದು. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು ಹೀಗಾಗಿ ಆಗಿಂದಾಗೆ ಸೆಲ್‌ಫೋನ್ ಅನ್ನು ಸ್ವಚ್ಛಗೊಳಿಸಬೇಕು ಮತ್ತು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಲು ಪ್ರಯತ್ನಿಸಬೇಕು.
ಕಿವಿ, ಕುತ್ತಿಗೆ ನೋವಿನ ಸಮಸ್ಯೆ
ಅತಿಯಾಗಿ ಮೊಬೈಲ್‌ನಲ್ಲಿ ಮಾತನಾಡುವುದು, ತಲೆ ಕೆಳಗೆ ಹಾಕಿ ಸ್ಕ್ರಾಲ್ ಮಾಡ್ತಾ ಇರುವುದು ಕಿವಿ, ಕುತ್ತಿಗೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ.
ಸಾಮಾಜಿಕ ಸಂಬಂಧವನ್ನು ಕಳೆದುಕೊಳ್ಳುವಂತೆ ಮಾಡಬಹುದು
ಫೋನ್ ಬಳಸುವಾಗ, ಜನರು ತಮ್ಮ ಕುಟುಂಬ, ಅವರ ಸಂಬಂಧಿಕರು ಮತ್ತು ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮೊಬೈಲ್ ಅತಿಯಾಗಿ ಬಳಸುವುದು ಮಾದಕ ವ್ಯಸನದಂತೆಯೇ ಆಗಿದೆ. ಆ ಅಭ್ಯಾಸವನ್ನು ಸುಲಭವಾಗಿ ಬಿಟ್ಟು ಬಿಡಲು ಸಾಧ್ಯವಾಗುವುದಿಲ್ಲ. ಇದು ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ನಿಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. ಜನರು ತಮ್ಮ ಸಮಯವನ್ನು ಕುಟುಂಬದ ಜತೆ ಕಳೆಯಲು ಸಾಧ್ಯವಾಗುವುದಿಲ್ಲ. ಅದು ವ್ಯಕ್ತಿ ಮತ್ತು ಕುಟುಂಬ ಜೀವನದ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಕುಟುಂಬವು ಹೆಚ್ಚು ಮುಖ್ಯವಾಗಿದೆ.
